ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!

ಸ್ಯಾಂಡಲ್‌ವುಡ್‌ನಲ್ಲಿ ಇನ್ನೆರಡು ತಿಂಗಳು ಸಿನಿ ಜಾತ್ರೆ ಜೋರಾಗಿರಲಿದೆ. ಭಾರಿ ನಿರೀಕ್ಷೆಗಳೊಂದಿಗೆ ಕಾಯುತ್ತಿರುವ ಚಿತ್ರಗಳು ಒಂದೊಂದೆ ತೆರೆಗೆ ಬರಲು ಸಜ್ಜಾಗಿದೆ. ಲಾಕ್‌ಡೌನ್ ಜಾರಿಯಾದ ಕ್ಷಣದಿಂದ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಕ್ಕೆ ಬಂದೇ ಇಲ್ಲ. ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಸಿನಿ ಇಂಡಸ್ಟ್ರಿ ಮತ್ತೆ ಪುಟಿದೇಳಲು ಸಿದ್ಧವಾಗಿದೆ.

Recommended Video

ಧ್ರುವ ಸರ್ಜಾಗೆ ನಿಜಕ್ಕೂ ಮೈಲೇಜ್ ಕೊಡುತ್ತಾ ಪೊಗರು | Fimibeat Kannada

ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರಲು ಪಣ ತೊಟ್ಟಿದ್ದು ಸೂಕ್ತ ಯೋಜನೆಗಳೊಂದಿಗೆ ಸಿನಿಮಾಗಳು ಥಿಯೇಟರ್‌ಗೆ ಬರ್ತಿದೆ. ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ ನಿಯಮ ಜಾರಿಯಲ್ಲಿದ್ದರೂ ಗೆದ್ದೇ ಗೆಲುತ್ತೇವೆ, ಜನ ಬಂದೇ ಬರ್ತಾರೆ ಎಂಬ ನಂಬಿಕೆಯಿಂದ ರಿಲೀಸ್ ದಿನಾಂಕಗಳನ್ನು ಘೋಷಿಸಿದ್ದಾರೆ.

ದರ್ಶನ್ ರಾಬರ್ಟ್, ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ, ಧ್ರುವ ಸರ್ಜಾ ಪೊಗರು, ಸುದೀಪ್ ಕೋಟಿಗೊಬ್ಬ 3, ದುನಿಯಾ ವಿಜಯ್ ಸಲಗ ಸೇರಿದಂತೆ ಪ್ರಮುಖ ಕಲಾವಿದರ ಚಿತ್ರಗಳು ರಿಲೀಸ್ ದಿನಾಂಕ ಪ್ರಟಿಸಿದೆ. ಹಾಗಾದ್ರೆ, ಯಾವ ಚಿತ್ರ ಮೊದಲು ಬರುತ್ತೆ, ಯಾವ ಚಿತ್ರ ಕೊನೆಗೆ ಬರುತ್ತೆ ಎನ್ನುವುದರ ವಿವರ ಇಲ್ಲಿದೆ. ಮುಂದೆ ಓದಿ...

ಜನವರಿ 29ಕ್ಕೆ ರಾಮಾರ್ಜುನ

ಜನವರಿ 29ಕ್ಕೆ ರಾಮಾರ್ಜುನ

ಅನಿಶ್ ತೇಜೇಶ್ವರ್ ನಟಿಸಿ, ನಿರ್ದೇಶಿಸಿರುವ ರಾಮಾರ್ಜುನ ಚಿತ್ರ ಜನವರಿ 29 ರಂದು ತೆರೆಗೆ ಬರಲಿದೆ. ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ತೆರೆಗೆ ಬರುತ್ತಿರುವ ಮೊದಲ ಸಿನಿಮಾ ರಾಮಾರ್ಜುನ. ರಕ್ಷಿತ್ ಶೆಟ್ಟಿ ಸಹ ನಿರ್ಮಾಪಕರಾಗಿದ್ದು, ಕೆಆರ್‌ಜಿ ಸ್ಟುಡಿಯೋಸ್ ವಿತರಣೆ ಮಾಡುತ್ತಿದ್ದಾರೆ. ಜನವರಿ 29 ರಿಂದ ಸತತವಾಗಿ ಸಿನಿಮಾ ಸುಗ್ಗಿ ಶುರುವಾಗಲಿದೆ.

ಪ್ರಜ್ವಲ್ ದೇವರಾಜ್ ಸಿನಿಮಾ

ಪ್ರಜ್ವಲ್ ದೇವರಾಜ್ ಸಿನಿಮಾ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಹೊಸ ಸಿನಿಮಾ ಫೆಬ್ರವರಿ 5 ರಂದು ತೆರೆಗೆ ಬರ್ತಿದೆ. ಈ ಚಿತ್ರವೂ ರಿಲೀಸ್ ದಿನಾಂಕ ಘೋಷಿಸಿದೆ. ರಾಮಾರ್ಜುನ ತೆರೆಕಂಡ ಒಂದು ವಾರದ ಅಂತರದಲ್ಲಿ ಈ ಚಿತ್ರ ಬರ್ತಿದೆ.

ಫೆಬ್ರವರಿ 19ಕ್ಕೆ ಪೊಗರು

ಫೆಬ್ರವರಿ 19ಕ್ಕೆ ಪೊಗರು

ಎರಡು ವರ್ಷದಿಂದ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಪೊಗರು ಸಿನಿಮಾ ಫೆಬ್ರವರಿ 19 ರಂದು ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಪೊಗರು ಬಿಡುಗಡೆಯಾಗುತ್ತಿದೆ. ಧ್ರುವ ಸರ್ಜಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ನಂದಕಿಶೋರ್ ನಿರ್ದೇಶಿಸಿದ್ದಾರೆ.

ರಾಬರ್ಟ್ ಮಾರ್ಚ್ 11

ರಾಬರ್ಟ್ ಮಾರ್ಚ್ 11

ಪೊಗರು ಸಿನಿಮಾ ರಿಲೀಸ್ ಆಗಿ ಎರಡು ವಾರದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಚಿತ್ರಮಂದಿರಕ್ಕೆ ಬರ್ತಿದೆ. ತರುಣ್ ಸುಧೀರ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಆಶಾ ಭಟ್ ನಾಯಕಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಇದೆ.

ಏಪ್ರಿಲ್ 1ಕ್ಕೆ ಯುವರತ್ನ

ಏಪ್ರಿಲ್ 1ಕ್ಕೆ ಯುವರತ್ನ

ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್‌ನಲ್ಲಿ ತಯಾರಾಗಿರುವ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗುವುದಾಗಿ ಘೋಷಿಸಿದೆ. ಹೊಂಬಾಳೆ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದೆ.

ಏಪ್ರಿಲ್ 15ಕ್ಕೆ ಸಲಗ?

ಏಪ್ರಿಲ್ 15ಕ್ಕೆ ಸಲಗ?

ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ ಸಲಗ. ಕೆಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರ ಏಪ್ರಿಲ್ 15ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಆದ್ರೆ, ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಸಂಜನಾ ಆನಂದ್ ನಾಯಕಿಯಾಗಿದ್ದು, ಧನಂಜಯ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಏಪ್ರಿಲ್ 23ಕ್ಕೆ ಕೋಟಿಗೊಬ್ಬ 3?

ಏಪ್ರಿಲ್ 23ಕ್ಕೆ ಕೋಟಿಗೊಬ್ಬ 3?

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಏಪ್ರಿಲ್ 23ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಸೂರಪ್ಪ ಬಾಬು ನಿರ್ಮಾಣದಲ್ಲಿ ತಯಾರಾಗಿರುವ ಈ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಇನ್ನು ಪ್ರಕಟಿಸಿಲ್ಲ.

ಮೇ 14ಕ್ಕೆ ಭಜರಂಗಿ 2?

ಮೇ 14ಕ್ಕೆ ಭಜರಂಗಿ 2?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಹರ್ಷ ಕಾಂಬಿನೇಷನ್‌ನಲ್ಲಿ ಮೂಡಿ ಬರ್ತಿರುವ ಸಿನಿಮಾ ಭಜರಂಗಿ 2. ಸದ್ಯದ ವರದಿ ಪ್ರಕಾರ ಭಜರಂಗಿ 2 ಸಿನಿಮಾ ಮೇ 14ಕ್ಕೆ ಎನ್ನಲಾಗಿದೆ. ಹಾಗ್ನೋಡಿದ್ರೆ, ಈ ಸ್ಟಾರ್ ನಟರ ಪಟ್ಟಿಯಲ್ಲಿ ಭಜರಂಗಿ 2 ಕೊನೆಯದಾಗಿ ರಿಲೀಸ್ ಆಗುವ ಸಾಧ್ಯತೆ ಇದೆ.

More from Filmibeat

English summary
List of Kannada Movies Releasing February, March, April and may month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X