»   » ಫೆಬ್ರವರಿಯಲ್ಲಿ ನಡೆಯಲಿರುವ ಸಿನಿ ಸಮರದಲ್ಲಿ ಗೆಲುವು ಯಾರಿಗೆ

ಫೆಬ್ರವರಿಯಲ್ಲಿ ನಡೆಯಲಿರುವ ಸಿನಿ ಸಮರದಲ್ಲಿ ಗೆಲುವು ಯಾರಿಗೆ

Posted By:
Subscribe to Filmibeat Kannada
ಫೆಬ್ರವರಿಯಲ್ಲಿ ನಡೆಯಲಿರುವ ಸಿನಿ ಸಮರದಲ್ಲಿ ಗೆಲುವು ಯಾರಿಗೆ | Filmibeat Kannada

ಮುಂದಿನ ತಿಂಗಳು ಅಂದರೆ ಫೆಬ್ರವರಿಯಲ್ಲಿ ಕನ್ನಡದಲ್ಲಿ ಅನೇಕ ಸಿನಿಮಾಗಳು ರಿಲೀಸ್ ಆಗಿಲಿದೆ. ಕಳೆದ ವರ್ಷದ ಬಹುನಿರೀಕ್ಷಿತ ಸಿನಿಮಾಗಳು ಈ ವರ್ಷ ತೆರೆಗೆ ಬರುತ್ತಿದೆ. ಈ ಚಿತ್ರಗಳ ಪೈಕಿ ಗೆಲುವು ಯಾವ ಚಿತ್ರಕ್ಕೆ ಎನ್ನುವ ಲೆಕ್ಕಾಚಾರ ಇದೀಗ ಶುರುವಾಗಿದೆ.

ಶಿವರಾಜ್ ಕುಮಾರ ನಟನೆಯ 'ಟಗರು', ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಅಭಿನಯದ 'ಪ್ರೇಮಬರಹ', 'ಬಿಗ್ ಬಾಸ್' ಪ್ರಥಮ್ ಅವರ 'ದೇವ್ರಂಧ ಮನುಷ್ಯ' ಹಾಗೂ '3' (ದಂಡುಪಾಳ್ಯ 3) ಈ ನಾಲ್ಕು ಸಿನಿಮಾಗಳು ಮುಂದಿನ ತಿಂಗಳು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾಗಳು ರಿಲೀಸ್ ಆಗುವುದು ಈಗಾಗಲೇ ಫೈನಲ್ ಆಗಿದೆ. ಇವುಗಳ ಜೊತೆಗೆ ಇನ್ನು ಕೆಲವು ಸಿನಿಮಾಗಳು ಫೆಬ್ರವರಿಗೆ ಬಿಡುಗಡೆಯಾಗಲಿದೆ. ಅಂದಹಾಗೆ, ಬಿಡುಗಡೆಗೆ ರೆಡಿ ಇರುವ ಈ ನಾಲ್ಕು ಸಿನಿಮಾಗಳ ಒಂದಷ್ಟು ವಿವರ ಮುಂದಿದೆ ಓದಿ...

'ಟಗರು'

ಶಿವಣ್ಣ ನಟನೆಯ 'ಟಗರು' ಸಿನಿಮಾ ಕಳೆದ ವರ್ಷವೇ ತೆರೆಗೆ ಬರಬೇಕಿತ್ತು. ಆದರೆ ಈಗ ಚಿತ್ರಕ್ಕೆ ರಿಲೀಸ್ ಭಾಗ್ಯ ಸಿಕ್ಕಿದೆ. 'ಟಗರು' ಫೆಬ್ರವರಿಗೆ ಫಿಲ್ಡ್ ಗೆ ಇಳಿಯಲಿದೆ. ಶಿವರಾಜ್ ಕುಮಾರ್ ಮತ್ತು ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಮಾನ್ವಿತಾ ಹರೀಶ್ ಮತ್ತು ಭಾವನ ಚಿತ್ರದ ನಾಯಕಿಯರಾಗಿದ್ದಾರೆ.

'ದೇವ್ರಂಥ ಮನುಷ್ಯ'

'ಬಿಗ್ ಬಾಸ್' ಖ್ಯಾತಿಯ ಪ್ರಥಮ್ ನಟನೆಯ ಪ್ರಥಮ ಸಿನಿಮಾ 'ದೇವ್ರಂಥ ಮನುಷ್ಯ' ಮುಂದಿನ ತಿಂಗಳು ತೆರೆಗೆ ಬರಲಿದೆ. ಫೆಬ್ರವರಿ 2ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಸಾಕಷ್ಟು ಸುದ್ದಿ ಮಾಡಿದೆ.

ಗಣರಾಜ್ಯೋತ್ಸವ ದಿನದ ವಿಶೇಷ 'ಪ್ರೇಮಬರಹ' ಟ್ರೈಲರ್ ಬಂತು

'ಪ್ರೇಮ ಬರಹ'

'ಪ್ರೇಮ ಬರಹ' ಸಿನಿಮಾ ಕೂಡ ಫೆಬ್ರವರಿ 9ಕ್ಕೆ ರಿಲೀಸ್ ಆಗಲಿದೆ. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಈ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. 'ಪ್ರೇಮ ಬರಹ' ಟೈಟಲ್ ಹೇಳುವಾಗೆ, ಇದೊಂದು ಲವ್ ಸ್ಟೋರಿ ಸಿನಿಮಾವಾಗಿದ್ದು, ಲವ್, ಸೆಂಟಿಮೆಂಟ್, ಆಕ್ಷನ್, ಥ್ರಿಲ್ಲಿಂಗ್, ಕಾಮಿಡಿ, ಸರ್ಪ್ರೈಸ್ ಎಲ್ಲವೂ ಚಿತ್ರದಲ್ಲಿದೆ. ಐಶ್ವರ್ಯ ಸರ್ಜಾಗೆ ಚಂದನ್ ನಾಯಕನಾಗಿದ್ದು, ಒಂದು ಹಾಡಿನಲ್ಲಿ ನಟ ದರ್ಶನ್, ಧ್ರುವಸರ್ಜಾ ಮತ್ತು ಚಿರು ಸರ್ಜಾ ಕೂಡ ಕಾಣಿಸಿಕೊಂಡಿದ್ದಾರೆ.

'ಟಗರು' ವಿರುದ್ಧ ಪೈಪೋಟಿಗೆ ನಿಲ್ಲಲ್ಲಿದ್ದಾರೆ ದಂಡುಪಾಳ್ಯ ಹಂತಕರು

'3' (ದಂಡುಪಾಳ್ಯ 3)

'2' (ದಂಡುಪಾಳ್ಯ 2) ಚಿತ್ರದ ನಂತರ '3' (ದಂಡುಪಾಳ್ಯ 3) ಸಿನಿಮಾ ರಿಲೀಸ್ ಆಗಲು ರೆಡಿ ಇದೆ. ಈ ಸಿನಿಮಾ ಫೆಬ್ರವರಿಗೆ '3' ಸಿನಿಮಾ ರಿಲೀಸ್ ಆಗುತ್ತಿದೆ. '3' ಚಿತ್ರವನ್ನು ಶ್ರೀನಿವಾಸ್ ರಾಜು ನಿರ್ದೇಶನ ಮಾಡಿದ್ದಾರೆ. ಪೂಜಾಗಾಂಧಿ, ಸಂಜನಾ, ರವಿಶಂಕರ್, ರವಿಕಾಳೆ, ಮಕರಂದ್ ದೇಶಪಾಂಡೆ ಸೇರಿದಂತೆ 'ದಂಡುಪಾಳ್ಯ'ದ ಹಳೆಯ ಸೀರಿಸ್ ನಲ್ಲಿ ನಟಿಸಿದ ಕಲಾವಿದರೆ ಇಲ್ಲಿಯೂ ನಟಿಸಿದ್ದಾರೆ.

English summary
Kannada new movies 'Dandupalya 3', 'Tagaru', 'Prema Baraha', 'Devrantha Manushya' are releasing in February 2018.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X