For Quick Alerts
  ALLOW NOTIFICATIONS  
  For Daily Alerts

  ನವೆಂಬರ್‌ನಲ್ಲಿ ತೆರೆಗೆ ಬರುತ್ತಿವೆ 10 ಕನ್ನಡ ಚಿತ್ರಗಳು!

  |

  ಕೊರೊನ ಬಂದ ಬಳಿಕ ಚಿತ್ರ ಮಂದಿರಗಳ ಬಾಗಿಲು ಮುಚ್ಚಿತ್ತು. ಎರಡೆರಡು ಬಾರಿ ಲಾಕ್‌ಡೌನ್‌ ಆಗಿ ಚಿತ್ರ ಮಂದಿರಗಳಿಗೆ ಹೆಚ್ಚಿನ ದಿನ ಬೀಗವೇ ಬಿದ್ದಿತ್ತು. ಲಾಡ್‌ಡೌನ್‌ನಿಂದಾಗಿ ಹೆಚ್ಚು ಕಡಿಮೆ ಎರಡು ವರ್ಷಗಳ ಕಾಲ ಚಿತ್ರಮಂದಿರಗಳು ಮುಚ್ಚುವ ಅನಿವಾರ್ಯತೆ ಎದುರಾಗಿತ್ತು. ಹಾಗಾಗಿ ಸಾಕಷ್ಟು ಸಿನಿಮಾಗಳು ರಿಲೀಸ್‌ ಆಗದೇ ಹಾಗೇಯೆ ಉಳಿದು ಬಿಟ್ಟಿವೆ.

  ಶೂಟಿಂಗ್‌ ಮುಗಿಸಿ ರಿಲೀಸ್‌ಗೆ ಕಾದಿರುವ ಸಿನಿಮಾಗಳು ಸಾಕಷ್ಟಿವೆ. ಸದ್ಯ ನಿಧಾನವಾಗಿ ಜನ ಕೊರೊನಾ ಭಯದಿಂದ ಹೊರ ಬರುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಆದರೆ ಅವಕಾಶ ಸಿಕ್ಕಿದೆ ಅಂತ ಸಿನಿಮಾಗಳನ್ನು ಸಲೀಸಾಗಿ ರಿಲೀಸ್ ಮಾಡಲು ಸಾಧ್ಯ ಆಗುತ್ತಿಲ್ಲ.

  ಇನ್ನು ಕೊರೊನಾ ಬರುವುದಕ್ಕಿಂತ ಮೊದಲು ಕನ್ನಡ ಚಿತ್ರರಂಗದಲ್ಲಿ ವಾರಕ್ಕೆ ಏನಿಲ್ಲ ಅಂದರು ಮೂರು ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿದ್ದವು. ಆದರೆ ಲಾಕ್‌ಡೌನ್‌ ಬಳಿಕ ಚಿತ್ರಣ ಬೇರೆ ಆಗಿತ್ತು. ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್‌ಗೆ ರೆಡಿ ಇದ್ದ್ ಕಾರಣ ಬೇರೆ ಸಿನಿಮಾಗಳು ಸೈಲೆಂಟ್‌ ಆಗಿದ್ದವು. ಈಗ ದೊಡ್ಡ ಸಿನಿಮಾಗಳ ಸರದಿ ಮುಗಿದ ನಂತರ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗುತ್ತಿವೆ. ದೊಡ್ಡ ಬಜೆಟ್‌ನ, ದೊಡ್ಡ ಸ್ಟಾರ್‌ಗಳ ಸಿನಿಮಾ ರಿಲೀಸ್ ಆಗುತ್ತಿರುವಾಗ ಮಾತ್ರ ಸಣ್ಣ ಸಿನಿಮಾಗಳ ರಿಲೀಸ್ ಸಂಖ್ಯೆ ಕಡಿಮೆ ಇರುತ್ತಿತ್ತು. ಅದನ್ನು ಹೊರತುಪಡಿಸಿದರೆ ಸ್ಯಾಂಡಲ್‌ವುಡ್‌ನಲ್ಲಿ ವಾರಕ್ಕೆ ಒಂಭತ್ತರಿಂದ ಹನ್ನೊಂದರ ಸಿನಿಮಾಗಳು ರಿಲೀಸ್‌ ಆಗಿರೋ ಉದಾಹರಣೆಗಳು ಕೂಡ ಉಂಟು.

  ಸದ್ಯ ಭಜರಂಗಿ2, ಕೋಟಿಗೊಬ್ಬ3, ಸಲಗ ಸಿನಿಮಾಗಳು ಈಗಾಗಲೇ ತೆರೆ ಕಂಡಿವೆ. ಹಾಗಾಗಿ ಮಿಕ್ಕ ಚಿತ್ರಗಳು ರಿಲೀಸ್‌ಗೆ ಸಾಲು ಗಟ್ಟಿ ನಿಂತಿವೆ. ಒಟ್ಟಾರೆ ಹತ್ತು ಸಿನಿಮಾಗಳು ನವೆಂಬರ್‌ನಲ್ಲಿ ತೆರೆಗೆ ಬರೋಕೆ ಸಜ್ಜಾಗಿವೆ. ಈ ತಿಂಗಳ ನಾಲ್ಕು ವಾರದೊಳಗೆ 10 ಚಿತ್ರಗಳು ಚಿತ್ರ ಮಂದಿರಕ್ಕೆ ಎಂಟ್ರಿ ಕೊಡಲು ಸಿದ್ಧವಾಗಿವೆ.

  List of Kannada Movies Releasing in November 2021

  ಲವ್ಲಿ ಸ್ಟಾರ್‌ ಪ್ರೇಮ್‌ ಅಭಿನಯದ ಪ್ರೇಮಂ ಪೂಜ್ಯಂ ಸಿನಿಮಾ ನವೆಂಬರ್‌ 12ಕ್ಕೆ ತೆರೆಗೆ ಬರುತ್ತಿದೆ. ಪ್ರೇಮಂ ಪೂಜ್ಯಂ ಹಲವು ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ. ಇದು ನಟ ಪ್ರೇಮ್‌ ಅಭಿನಯದ 25ನೇ ಸಿನಿಮಾ. ಟೀಸರ್ ಮತ್ತು ಹಾಡುಗಳಿಂದ ಪ್ರೇಮಂ ಪೂಜ್ಯಂ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

  ನವೆಂಬರ್‌ 5 ಬಿಗ್‌ ಬಾಸ್‌ ದಿವಾಕರ್‌ ಅಭಿನಯದ ಗುಲಾಲ್‌ ಡಾಟ್‌ ಕಾಮ್‌ ಚಿತ್ರ ರಿಲೀಸ್‌ ಆಗಿದೆ. ಇನ್ನು ರವಿಚಂದ್ರನ್‌ ಪುತ್ರ ಮನೋರಂಜನ್‌ ಅಭಿನಯದ ಮುಗಿಲ್‌ ಪೇಟೆ ಸಿನಿಮಾ ಇದೇ ನವೆಂಬರ್ 19ಕ್ಕೆ ತೆರೆ ಕಾಣುತ್ತಿದೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತ ಪಡಿಸಿದೆ. ಈ ಚಿತ್ರಗಳ ಜೊತೆಗೆ ಲೂಸ್‌ ಮಾದ ಯೋಗಿ ಒಂಭತ್ತನೇ ದಿಕ್ಕು ಚಿತ್ರ ಕೂಡ ಇದೇ ನವೆಂಬರ್‌ಗೆ ತೆರೆಗೆ ಬರಲು ಸಜ್ಜಾಗಿದೆ. ಅತ್ತ ನಟ ರಮೇಶ್‌ ಅರವಿಂದ್‌ ಮತ್ತು ರಚಿತಾ ರಾಮ್‌ ಅಭಿನಯದ 100 ಚಿತ್ರ ಇದೇ ತಿಂಗಳು ತೆರೆಗೆ ಬರುತ್ತಿದೆ. ಇನ್ನು ಉಳಿದಂತೆ ಇಲ್ಲಿಂದ ಆರಂಭವಾಗಿದೆ, ಹಿಟ್ಲರ್, ಬೈ 1 ಗೆಟ್ 1 ಫ್ರೀ, ಎಲ್ಲೋ ಬೋರ್ಡ್, ಗರುಡ ಗಮನ ವೃಷಭ ವಾಹನ ಮತ್ತು ಸ್ನೇಹಿತ ಸಿನಿಮಾಗಳು ಇದೇ ನವೆಂಬರ್‌ನಲ್ಲಿ ತೆರೆಗೆ ಬರುತ್ತಿದೆ.

  ಇದು ಕೂಡ ಕನ್ನಡ ಚಿತ್ರಗಳಿಗೆ ಒಂದು ರೀತಿ ಸಂಕಷ್ಟ. ಒಂದು ಕಡೆ ಚಿತ್ರಮಂದಿರದ ಸಮಸ್ಯೆ ಎದುರಾದರೆ. ಮತ್ತೊಂದು ಕಡೆ ಸಿನಿಮಾ ರಿಲೀಸ್‌ ಆಗುತ್ತಲೇ ಒಂದೇ ವಾರಕ್ಕೆ ಥಿಯೇಟರ್‌ ಬಿಡುವ ಸಮಸ್ಯೆ ಇದೆ. ಹಾಗಾಗಿ ರಿಲೀಸ್‌ ಆಗುವ ಚಿತ್ರಗಳಲ್ಲಿ ಯಾವ ಚಿತ್ರಕ್ಕೆ ಪ್ರೇಕ್ಷಕ ಮಣೆ ಹಾಕುತ್ತಾನೋ, ಯಾವ ಚಿತ್ರದ ಕೈ ಹಿಡಿಯುತ್ತಾನೋ ಎಂಬುದನ್ನು ನೋಡಬೇಕಿದೆ.

  English summary
  List of Kannada Movies Releasing in November 2021, 10 Kannada Movie Is Going To be Released This November

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X