ಒಂದಲ್ಲ ಎರಡಲ್ಲ ಬರೋಬ್ಬರಿ 11 ಕನ್ನಡ ಚಿತ್ರಗಳು ಈ ವಾರ ರಿಲೀಸ್: ಇಲ್ಲಿದೆ ಸಂಪೂರ್ಣ ಪಟ್ಟಿ
ಮತ್ತೊಂದು ಸಿನಿವಾರ ಶುಕ್ರವಾರ ಬರ್ತಿದೆ. ಸಿನಿರಸಿಕರಿಗೆ ಪ್ರಿಯವಾದ ವಾರ ಶುಕ್ರವಾರ. ಹೊಸ ಸಿನಿಮಾಗಳು ಶುಕ್ರವಾರ ಪ್ರದರ್ಶನ ಥಿಯೇಟರ್‌ಗೆ ಬರ್ತಾವೆ. ಈ ವಾರ ಕನ್ನಡದಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ 11 ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಹೊಸಬರ ವಿಭಿನ್ನ ಪ್ರಯತ್ನಗಳಿಗೆ ಈ ವಾರ ಬೆಳ್ಳಿ ಪರೆದ ವೇದಿಕೆಯಾಗುತ್ತಿದೆ.
ಈ ವಾರ ಬಿಡುಗಡೆಯಾಗುತ್ತಿರುವ 10 ಸಿನಿಮಾಗಳಲ್ಲಿ 'ಹೊಂದಿಸಿ ಬರೆಯಿರಿ' ಕೊಂಚಮಟ್ಟಿಗೆ ಭರವಸೆ ಮೂಡಿಸಿದೆ. ಇನ್ನುಳಿದಂತೆ ಬಹುತೇಕ ಸಿನಿಮಾಗಳ ಹೆಸರು ಕೂಡ ಸಿನಿರಸಿಕರಿಗೆ ಗೊತ್ತಿಲ್ಲ. ಸಿನಿಮಾ ಪ್ರಚಾರದಲ್ಲಿ ಚಿತ್ರತಂಡಗಳು ಹಿಂದಿ ಉಳಿದಿವೆ. ದೊಡ್ಡ ಸ್ಟಾರ್ ಕಾಸ್ಟ್ ಇಲ್ಲದೇ ಇರುವುದು ಕೂಡ ಅದಕ್ಕೆ ಕಾರಣ ಇರಬಹುದು. ಕಳೆದೆರಡು ವಾರಗಳಿಂದ 'ಕ್ರಾಂತಿ' ಸಿನಿಮಾ ಥಿಯೇಟರ್‌ಗಳನ್ನು ಆವರಿಸಿಕೊಂಡಿತ್ತು. ಹಾಗಾಗಿ ಈ ವಾರ ಒಮ್ಮೆಲೆ 10 ಸಿನಿಮಾಗಳು ಬಿಡುಗಡೆಯಾಗುತ್ತಿದೆ.
10 ಹೊಸ ಸಿನಿಮಾಗಳ ಜೊತೆಗೆ 'ಲೈಫು ಇಷ್ಟೇನೆ' ಸಿನಿಮಾ ರೀ ರಿಲೀಸ್ ಆಗುತ್ತಿದೆ. ಅಲ್ಲಿಗೆ ಒಟ್ಟು 11 ಸಿನಿಮಾಗಳು ಈ ವಾರ ತೆರೆಗೆ ಬರ್ತಿದ್ದು, ಪ್ರೇಕ್ಷಕರು ಯಾವುದು ನೋಡಬೇಕೋ, ಯಾವುದು ಬಿಡಬೇಕೋ ಗೊತ್ತಾಗುತ್ತಿಲ್ಲ.

ಭರವಸೆಯ 'ಹೊಂದಿಸಿ ಬರೆಯಿರಿ'
ಈ ವಾರ ತೆರೆಗೆ ಬರುತ್ತಿರುವ ಸಿನಿಮಾಗಳಲ್ಲಿ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ 'ಹೊಂದಿಸಿ ಬರೆಯಿರಿ' ಕೊಂಚ ಗಮನ ಸೆಳೆದಿದೆ. ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡ್, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹಾದೇವ್, ಅರ್ಚನಾ ಜೋಯಿಸ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇತ್ತೀಚಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಕೋರಿದ್ದರು. ಐವರು ಸ್ನೇಹಿತರ 12 ವರ್ಷ ಜರ್ನಿ ಕಥೆ ಸಿನಿಮಾದಲ್ಲಿದೆ.

ಹೊಸಬರ ವಿನೂತನ ಪ್ರಯತ್ನ
ವಿಜಯ್ ಜಗದಾಲ್, ಕೃಷಿ ತಾಪಂಡ ನಟನೆಯ 'ರೂಪಾಯಿ', ನೈಜ ಘಟನೆಗಳನ್ನಾಧಿಸಿದ 'ಪಾಲಾರ್', ಮೆಡಿಕಲ್ ರೀಸರ್ಚ್‌ಗೆ ಸಂಬಂಧಿಸಿದ 'ಡಿಸೆಂಬರ್ 24', ಬದುಕಿನ ಏಳು ಬೀಳಿನ ಕಥೆ 'ರಂಗಿನ ರಾಟೆ' ಇನ್ನು ಹೊಸಬರ 'ಅಂಬಾಸಿಡರ್', 'ಲಾಂಗ್ ಡ್ರೈವ್' ಸಿನಿಮಾಗಳು ಕೂಡ ಈ ವಾರ ಕನ್ನಡ ಪ್ರೇಕ್ಷಕರನ್ನು ರಂಜಿಸಲು ಬರ್ತಿವೆ.

ಅನಿತಾ ಭಟ್ 'ಬೆಂಗಳೂರು 69'
ಶಫಿ, ಪವನ್ ಶೆಟ್ಟಿ, ಅನಿತಾ ಭಟ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ 'ಬೆಂಗಳೂರು 69' ಸಿನಿಮಾ ಕೂಡ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಚಿತ್ರದಲ್ಲಿ ನಟಿ ಅನಿತಾ ಭಟ್ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಇದರ ಜತೆಗೆ 'ಉತ್ತಮರು' ಹಾಗೂ 'ಒಂದಾನೊಂದು ಕಾಲದಲ್ಲಿ' ಎನ್ನುವ ಮತ್ತೆರಡು ಸಿನಿಮಾಗಳು ಕೂಡ ತೆರೆಗಪ್ಪಳಿಸುತ್ತಿದೆ. ಒಟ್ನಲ್ಲಿ ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಭರಾಟೆ ಜೋರಾಗಿದೆ. ಇದರ ಜೊತೆಗೆ ರಕ್ಷಿತ್ ಶೆಟ್ಟಿ ನಟನೆಯ ತಮಿಳು ಸಿನಿಮಾ 'ವಸಂತ ಕೋಕಿಲ' ಕನ್ನಡಕ್ಕೆ ಡಬ್ ಆಗಿ ಬರ್ತಿದೆ.

'ಲೈಫು ಇಷ್ಟೇನೆ' ರೀ ರಿಲೀಸ್
ಹೌದು 10 ಹೊಸ ಸಿನಿಮಾಗಳ ಜೊತೆಗೆ ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ 'ಲೈಫು ಇಷ್ಟೇನೆ' ಕೂಡ ರೀ ರಿಲೀಸ್ ಆಗ್ತಿದೆ. ದಿಗಂತ್, ಸಂಯುಕ್ತಾ ಹೊರನಾಡ್, ಸಿಂಧು ಲೋಕನಾಥ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. 10 ವರ್ಷಗಳ ಹಿಂದೆ ರಿಲೀಸ್ ಆಗಿ ಆವರೇಜ್ ಎನ್ನಿಸಿಕೊಂಡಿದ್ದ ಸಿನಿಮಾ ಮತ್ತೆ ಪ್ರೇಕ್ಷಕರು ಮುಂದೆ ಬರ್ತಿದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು ಸೇರಿದಂತೆ ಹಲವಡೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ.


Click it and Unblock the Notifications











