For Quick Alerts
  ALLOW NOTIFICATIONS  
  For Daily Alerts

  ಕನ್ನಡದಲ್ಲಿ ಈ ವಾರ ನಾಲ್ಕು ಹೊಸ ಸಿನಿಮಾಗಳು ಬಿಡುಗಡೆ

  |

  ಲಾಕ್‌ಡೌನ್‌ ಬಳಿಕ ಕನ್ನಡ ಚಿತ್ರರಂಗ ನಿಧಾನವಾಗಿ ಯಥಾಸ್ಥಿತಿಗೆ ಮರಳುತ್ತಿದೆ. ವಾರದಿಂದ ವಾರಕ್ಕೆ ಹೊಸ ಸಿನಿಮಾಗಳ ಬಿಡುಗಡೆ ಸಂಖ್ಯೆಯೂ ದೊಡ್ಡದಾಗುತ್ತಿದೆ. ಸದ್ಯಕ್ಕೆ ಬಿಗ್ ಸ್ಟಾರ್ ನಟರ ಚಿತ್ರಗಳು ಥಿಯೇಟರ್‌ಗೆ ಬರಲು ಧೈರ್ಯ ಮಾಡಿಲ್ಲವಾದರೂ, ಹೊಸಬರು ಸಿನಿಮಾಗಳು ಜನರ ಮುಂದೆ ಬರ್ತಿದೆ.

  ಈ ವಾರ ನಾಲ್ಕು ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆಯಿಟ್ಟಿದೆ. ಕಿಲಾಡಿಗಳು, ನಾನೊಂಥರ, ಆರ್ ಎಚ್ 100 ಹಾಗೂ ತನಿಖೆ ಎಂಬ ವಿಭಿನ್ನ ಚಿತ್ರಗಳು ಈ ವಾರ ಗಾಂಧಿನಗರಕ್ಕೆ ಬಂದಿದೆ.

  ಹೊಸಬರ 'ತನಿಖೆ'ಗೆ ಸಾಥ್ ನೀಡಿದ ಶಿವರಾಜ್ ಕುಮಾರ್

  'ನಾನೊಂಥರ' ಸಿನಿಮಾಗೆ ರಮೇಶ್ ಕಗ್ಗಲು ನಿರ್ದೇಶನ ಮಾಡಿದ್ದು, ತಾರಕ್ ವಿ ಶೇಖರಪ್ಪ ನಾಯಕರಾಗಿದ್ದಾರೆ. ಹಿರಿಯ ನಟ ದೇವರಾಜ್ ಸಹ ಪ್ರಮುಖ ಪಾತ್ರ ಮಾಡಿದ್ದಾರೆ.

  ಎಂಸಿ ಮಹೇಶ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿರುವ ಸಿನಿಮಾ ಆರ್ ಎಚ್ 100 ಈ ವಾರ ತೆರೆಕಾಣುತ್ತಿದೆ. ಹರ್ಷ, ಗಣೇಶ್, ಚಿತ್ರ ಹಾಗೂ ಕಾವ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  ಜಿ ಎಸ್ ಕಲಿಗೌಡ ನಿರ್ದೇಶನ ಮಾಡಿರುವ 'ತನಿಖೆ' ಚಿತ್ರ ಈ ಚಿತ್ರ ವಾರ ಬಿಡುಗಡೆಯಾಗುತ್ತಿದೆ. ಕೆ ಬಸವರಾಜ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಕೆ ಎಮ್ ಚೇತನ್ ಬಾಬು ಸಂಗೀತವಿರುವ 'ತನಿಖೆ' ಸಿನಿಮಾಗೆ ಶ್ಯಾಮ್ ಸಿಂದನೂರು ಛಾಯಾಗ್ರಹಣ ಮಾಡಿದ್ದಾರೆ.

  ಕರ್ನಾಟಕದಿಂದ ಹೊರಗೆ ಜಾಲಿ ರೈಡ್ ಹೊರಟ ದರ್ಶನ್ ಅಂಡ್ ಗ್ರೂಪ್ | Darshan Bike Ride | Filmibeat Kannada

  ಈ ಚಿತ್ರಗಳ ಜೊತೆಗೆ ಕಿಲಾಡಿಗಳು ಎಂಬ ಸಿನಿಮಾನೂ ಪ್ರೇಕ್ಷಕರೆದುರು ಬರ್ತಿದೆ.

  English summary
  Kiladigalu, Nanothara, RH100 and Tanike movies releasing this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X