ಮೊದಲ ವಾರದಲ್ಲಿ ಏಳು ಕನ್ನಡ ಸಿನಿಮಾ ರಿಲೀಸ್, ಯಾವುವು?
ಲಾಕ್‌ಡೌನ್ ಆದ್ಮೇಲೆ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ಸಿಕ್ಕಿದೆ. ನಿರೀಕ್ಷೆಯಂತೆ ಮೊದಲ ವಾರದಲ್ಲಿ ಯಾವುದೇ ಹೊಸ ಸಿನಿಮಾ ಬಿಡುಗಡೆಯಾಗಿಲ್ಲ. ಈಗಾಗಲೇ ತೆರೆಕಂಡಿದ್ದ ಹಳೆಯ ಚಿತ್ರಗಳು ಮತ್ತೆ ಚಿತ್ರಮಂದಿರಕ್ಕೆ ಬಂದಿದೆ.
ಮೊದಲ ವಾರ ಕನ್ನಡದಲ್ಲಿ ಏಳು ಸಿನಿಮಾಗಳು ಥಿಯೇಟರ್‌ಗೆ ಬಂದಿವೆ. ಅಕ್ಟೋಬರ್ 15 ರಂದು ನಾಲ್ಕು ಸಿನಿಮಾ ಮತ್ತು ಅಕ್ಟೋಬರ್ 16 ರಂದು ಮೂರು ಸಿನಿಮಾ ಬಿಡುಗಡೆಯಾಗಿದೆ.
ಯಾವುದು ಏಳು ಸಿನಿಮಾ ಎಂದು ಅನೇಕರಿಗೆ ತಿಳಿದಿಲ್ಲ. ಲಾಕ್‌ಡೌನ್ ಆದ್ಮೇಲೆ ಮೊದಲ ವಾರ ಜನರ ಮುಂದೆ ಬಂದಿರುವ ಏಳು ಚಿತ್ರಗಳ ವಿವರ ಇಲ್ಲಿದೆ.
* ಅಕ್ಟೋಬರ್ 15 ರಂದು ರಿಲೀಸ್ ಆದ ಚಿತ್ರಗಳು
- ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸೂರತ್ಕಲ್'
- ಪುನೀತ್ ರಾಜ್ ಕುಮಾರ್ ನಿರ್ಮಾಣದ 'ಮಾಯಾಬಜಾರ್'
- 'ಕಾಣದಂತೆ ಮಾಯವಾದನು'
- '3ರ್ಡ್ ಕ್ಲಾಸ್' ಎಂಬ ಹೊಸಬರ ಚಿತ್ರ

* ಅಕ್ಟೋಬರ್ 16 ರಂದು ರಿಲೀಸ್ ಆದ ಚಿತ್ರಗಳು
- ಚಿರಂಜೀವಿ ಸರ್ಜಾ ನಟಿಸಿ ಕೊನೆಯದಾಗಿ ಬಿಡುಗಡೆಯಾಗಿದ್ದ ಚಿತ್ರ ಶಿವಾರ್ಜುನ
- 5 ಅಡಿ 7 ಅಂಗುಲ
- ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ನಿರ್ಮಾಣದ 'ಲವ್ ಮಾಕ್ಟೈಲ್'
ಈ ಏಳು ಚಿತ್ರಗಳು ಮೊದಲ ವಾರ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ. ಎರಡನೇ ವಾರಕ್ಕೆ ಈಗಾಗಲೇ ನಾಲ್ಕೈದು ಚಿತ್ರಗಳು ಸಜ್ಜಾಗಿ ನಿಂತಿದೆ.


Click it and Unblock the Notifications











