For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್ ತಿಂಗಳು ಬಿಡುಗಡೆಯಾಗಲಿರುವ ಕನ್ನಡ ಚಿತ್ರಗಳ ಪಟ್ಟಿ ಇಲ್ಲಿದೆ; ಒಂದೇ ಒಂದು ಸ್ಟಾರ್ ಸಿನಿಮಾ!

  |

  2022 ಕನ್ನಡ ಚಿತ್ರರಂಗದ ವರ್ಷ ಎಂದರೆ ತಪ್ಪಾಗಲಾರದು. ಈ ವರ್ಷ ಕನ್ನಡ ಚಿತ್ರರಂಗದಿಂದ ಐದು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ್ದು, ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ ಅತಿಹೆಚ್ಚು ಸಕ್ಸಸ್ ಹಾಗೂ ರೀಚ್ ಪಡೆದ ಚಿತ್ರಗಳು ಕನ್ನಡ ಚಿತ್ರರಂಗದ್ದೇ ಆಗಿವೆ. ಸ್ಟಾರ್ ನಟರ ಚಿತ್ರಗಳು ಮಾತ್ರವಲ್ಲದೇ ಯುವ ನಟರ ಚಿತ್ರಗಳೂ ಸಹ ಈ ವರ್ಷ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಲ್ಲಿ ಯಶಸ್ವಿಯಾಗಿವೆ.

  ಇನ್ನು ಸ್ಟಾರ್ ನಟರ ಚಿತ್ರಗಳಾದ ಜೇಮ್ಸ್, ವಿಕ್ರಾಂತ್ ರೋಣ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದವು. ಅದರಲ್ಲಿಯೂ ಕೆಜಿಎಫ್ ಚಾಪ್ಟರ್ 2 ಬರೋಬ್ಬರಿ 1250 ಕೋಟಿ ಕಲೆಕ್ಷನ್ ಮಾಡಿ ಇಡೀ ಭಾರತ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತು. ಇನ್ನು ಈ ರೀತಿಯ ಯಶಸ್ಸನ್ನು ಕನ್ನಡದ ಮತ್ತೊಂದು ಚಿತ್ರ ಕಾಂತಾರ ಕೂಡ ಕಂಡಿದೆ.

  16 ಕೋಟಿ ವೆಚ್ಚದಲ್ಲಿ ತಯಾರಾಗಿ ಬರೋಬ್ಬರಿ 400 ಕೋಟಿ ಗಳಿಕೆ ಮಾಡಿದ ಕಾಂತಾರ ಚಿತ್ರ ಈ ವರ್ಷ ಅತಿಹೆಚ್ಚು ಪ್ರಶಂಸೆ ಗಿಟ್ಟಿಸಿಕೊಂಡ ಹಾಗೂ ಚರ್ಚೆಗೆ ಒಳಪಟ್ಟ ಚಿತ್ರವೂ ಆಗಿದೆ. ಇನ್ನು ಗಂಧದಗುಡಿ ಹೊರತುಪಡಿಸಿ ಕಾಂತಾರ ನಂತರ ಬಿಡುಗಡೆಗೊಂಡ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಗೆಲ್ಲಲೇ ಇಲ್ಲ ಎನ್ನಬಹುದು. ಅದರಲ್ಲಿಯೂ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡ ಕನ್ನಡದ ಯಾವ ಚಿತ್ರಗಳೂ ಬಾಕ್ಸ್ ಆಫೀಸ್‌ನಲ್ಲಿ ಚಮತ್ಕಾರ ಮಾಡಲೇ ಇಲ್ಲ. ಹೀಗೆ ನವೆಂಬರ್ ತಿಂಗಳಿನಲ್ಲಿ ಹೆಚ್ಚು ಸದ್ದು ಮಾಡದ ಕನ್ನಡ ಚಿತ್ರರಂಗ ವರ್ಷದ ಅಂತಿಮ ತಿಂಗಳಾದ ಡಿಸೆಂಬರ್‌ನಲ್ಲಿ ಸದ್ದು ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಅಂದಹಾಗೆ ಡಿಸೆಂಬರ್ ತಿಂಗಳಿನಲ್ಲಿ ಶಿವ ರಾಜ್‌ಕುಮಾರ್ ಅಭಿನಯದ ವೇದಾ ಚಿತ್ರವನ್ನು ಹೊರತುಪಡಿಸಿ ಇನ್ಯಾವುದೇ ಸ್ಟಾರ್ ಚಿತ್ರಗಳು ತೆರೆಗೆ ಬರುತ್ತಿಲ್ಲ.

  ಡಿಸೆಂಬರ್ ಮೊದಲ ವಾರ ಬಿಡುಗಡೆಯಾಗುವ ಚಿತ್ರಗಳು

  ಡಿಸೆಂಬರ್ ಮೊದಲ ವಾರ ಬಿಡುಗಡೆಯಾಗುವ ಚಿತ್ರಗಳು

  ಡಿಸೆಂಬರ್ ತಿಂಗಳ ಮೊದಲ ಶುಕ್ರವಾರದಂದು ದಿಗಂತ್ ಅಭಿನಯದ 'ತಿಮ್ಮಯ್ಯ ಅಂಡ್ ತಿಮ್ಮಯ್ಯ', ಗುಳ್ಟೂ ಖ್ಯಾತಿಯ ನವೀನ್ ಶಂಕರ್ ಅಭಿನಯದ 'ಧರಣಿ ಮಂಡಲ ಮಧ್ಯದೊಳಗೆ', 'ಸೆಕೆಂಡ್ ಲೈಫ್' ಹಾಗೂ 'ಫ್ಲಾಟ್ ನಂಬರ್ ನೈನ್' ಚಿತ್ರಗಳು ಬಿಡುಗಡೆಗೊಳ್ಳಲಿವೆ. ಇನ್ನು ಈ ನಾಲ್ಕು ಚಿತ್ರಗಳ ಪೈಕಿ ಯಾವ ಚಿತ್ರಗಳೂ ಸಹ ದೊಡ್ಡ ಪ್ರಚಾರ ಮಾಡದಿದ್ದು, ಚಿತ್ರಮಂದಿರಗಳಲ್ಲಿ ಯಾವ ರೀತಿ ಪ್ರದರ್ಶನವಾಗಲಿವೆಯೋ ಕಾದು ನೋಡಬೇಕಿದೆ.

  ಎರಡನೇ ಶುಕ್ರವಾರ ತೆರೆಕಾಣುವ ಚಿತ್ರಗಳು

  ಎರಡನೇ ಶುಕ್ರವಾರ ತೆರೆಕಾಣುವ ಚಿತ್ರಗಳು

  2022ರ ಡಿಸೆಂಬರ್ ತಿಂಗಳ ಎರಡನೇ ಶುಕ್ರವಾರ ಅಂದರೆ 09ನೇ ತಾರೀಖಿನಂದು ಕನ್ನಡದ ಒಟ್ಟು ನಾಲ್ಕು ಚಿತ್ರಗಳು ಬಿಡುಗಡೆಗೆ ತಯಾರಾಗಿವೆ. ವಿಜಯ್ ಸಂಕೇಶ್ವರ್ ಅವರ ಬಯೋಪಿಕ್ ಆಗಿರುವ 'ವಿಜಯಾನಂದ', ರತ್ನನ್ ಪ್ರಪಂಚ ಖ್ಯಾತಿಯ ಪ್ರಮೋದ್ ಅಭಿನಯದ 'ಬಾಂಡ್ ರವಿ', 'ಡಿಆರ್ 56' ಹಾಗೂ 'ಹೊಸ ದಿನಚರಿ' ಈ ಚಿತ್ರಗಳು ಡಿಸೆಂಬರ್‌ನ ಎರಡನೇ ವಾರ ತೆರೆಗೆ ಬರಲಿವೆ.

  ಮೂರನೇ ವಾರ ಬಿಡುಗಡೆಯಾಗಲಿರುವ ಚಿತ್ರಗಳು

  ಮೂರನೇ ವಾರ ಬಿಡುಗಡೆಯಾಗಲಿರುವ ಚಿತ್ರಗಳು

  ಡಿಸೆಂಬರ್ 16ರ ಶುಕ್ರವಾರದಂದು ಕನ್ನಡದ ಒಟ್ಟು ಮೂರು ಚಿತ್ರಗಳು ಬಿಡುಗಡೆಗೊಳ್ಳಲಿವೆ. ಈ ಪೈಕಿ ಎರಡು ಕನ್ನಡದ ಚಿತ್ರಗಳಾದರೆ, ಇನ್ನೊಂದು ಡಬ್ಬಿಂಗ್ ಚಿತ್ರವಾಗಿದೆ. ಈ ದಿನದಂದು 'ಅವತಾರ್ - ದಿ ವೇ ಆಫ್ ವಾಟರ್', 'ಯು ಟರ್ನ್ 2' ಹಾಗೂ 'ಶಂಭೋ ಶಿವ ಶಂಕರ' ಚಿತ್ರಗಳು ತೆರೆಗೆ ಬರಲಿವೆ.

  ನಾಲ್ಕನೇ ವಾರ ಬಿಡುಗಡೆಯಾಗುವ ಚಿತ್ರಗಳು

  ನಾಲ್ಕನೇ ವಾರ ಬಿಡುಗಡೆಯಾಗುವ ಚಿತ್ರಗಳು

  ಇನ್ನು ಡಿಸೆಂಬರ್ ತಿಂಗಳ ನಾಲ್ಕನೇ ವಾರದಂದು ಅಂದರೆ ಡಿಸೆಂಬರ್ 23ರ ಶುಕ್ರವಾರದಂದು ಕನ್ನಡದ ಕೇವಲ ಎರಡು ಚಿತ್ರಗಳು ಬಿಡುಗಡೆಗೊಳ್ಳಲಿವೆ. ಶಿವ ರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬಿನೇಶನ್‌ನ ನಾಲ್ಕನೇ ಚಿತ್ರವಾದ 'ವೇದಾ' ಹಾಗೂ 'ಅಂಬುಜಾ' ಎಂಬ ಚಿತ್ರಗಳು ತೆರೆಗೆ ಬರಲಿವೆ.

  ಐದನೇ ವಾರ

  ಐದನೇ ವಾರ

  ಈ ವರ್ಷದ ಅಂತಿಮ ತಿಂಗಳ ಅಂತಿಮ ಶುಕ್ರವಾರದಂದು ಡಾಲಿ ಧನಂಜಯ್ ಅಭಿನಯದ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಹಾಗೂ ಯೋಗರಾಜ್ ಭಟ್ ನಿರ್ಮಾಣದ 'ಪದವಿ ಪೂರ್ವ' ಚಿತ್ರಗಳೆರಡು ತೆರೆಗೆ ಬರಲಿವೆ.

  English summary
  List of Kannada movies which are releasing on December 2022. Take a look
  Thursday, December 1, 2022, 16:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X