Just In
Don't Miss!
- News
2023ರ ಚುನಾವಣೆ; ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದ ಎಚ್ಡಿಕೆ!
- Sports
ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗೋವಿಂದ.. ಗೋವಿಂದ..: ಈ ಸಿನಿಮಾಗಳ ಬಗ್ಗೆ ಜಾಸ್ತಿ ಆಸೆ ಇಟ್ಕೋಬೇಡಿ.!
ಕನ್ನಡ ಚಿತ್ರರಂಗದಲ್ಲಿ ಈಗ ಅದೇನ್ ಆಗಿದೆಯೋ ಏನೋ... ಅದ್ದೂರಿಯಾಗಿ ಶುರುವಾಗುವ ಸಿನಿಮಾಗಳು ಇದ್ದಕ್ಕಿದ್ದ ಹಾಗೆ ಅರ್ಧಕ್ಕೆ ನಿಂತು ಹೋಗುವುದು ಹೆಚ್ಚಾಗುತ್ತಿವೆ.
ಒಂದು ಸಿನಿಮಾ ಶುರುವಾದಾಗಲೇ ಜನ ಆ ಚಿತ್ರವನ್ನು ನೋಡಬೇಕು ಅಂತ ಆಸೆ ಇಟ್ಟುಕೊಂಡಿರುತ್ತಾರೆ. ಇನ್ನೂ ಸೋಷಿಯಲ್ ಮೀಡಿಯಾದಲ್ಲಂತೂ ಅಂತಹ ಸಿನಿಮಾಗಳು ದೊಡ್ಡ ಸುದ್ದಿ ಮಾಡುತ್ತವೆ. ಆದರೆ ಕೊನೆಗೆ ಮಾತ್ರ ಆ ಚಿತ್ರಗಳು ಏನಾಗಿದ್ಯೋ, ಏನೋ ಅಂತಾನೆ ತಿಳಿಯದಾಗುತ್ತದೆ. ಮುಂದೆ ಓದಿ...

'ಭೂಮಿಪುತ್ರ'
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ 20 ತಿಂಗಳ ಸರ್ಕಾರದ ಬಗ್ಗೆ 'ಭೂಮಿಪುತ್ರ' ಸಿನಿಮಾ ಶುರುವಾಗಿತ್ತು. ಅದ್ದೂರಿಯಾಗಿ ಮುಹೂರ್ತ ಮಾಡಿಕೊಂಡ ಈ ಚಿತ್ರದ ಶೂಟಿಂಗ್ ಇನ್ನೂ ಕೂಡ ಶುರುವಾಗಿಲ್ಲ. ಅಲ್ಲದೆ ಈ ಚಿತ್ರ ಮತ್ತೆ ಪ್ರಾರಂಭ ಆಗುವುದು ಕೂಡ ಬಹುತೇಕ ಡೌಟ್ ಎನ್ನಲಾಗುತ್ತದೆ.

ನವೆಂಬರ್ ನಲ್ಲಿ ನಾನು ಅವಳು
ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಅಭಿನಯದ ಮೊದಲ ಚಿತ್ರ 'ನವೆಂಬರ್ ನಲ್ಲಿ ನಾನು ಅವಳು'. ನಾಗಶೇಖರ್ ನಿರ್ದೇಶನದ ಈ ಚಿತ್ರ ಸದ್ಯ ನಿಂತು ಹೋಗಿದೆ ಎನ್ನುವ ಸುದ್ದಿ ಇದೆ. ಅದಕ್ಕೆ ಪುಷ್ಟಿ ನೀಡುವಂತೆ ನಾಗಶೇಖರ್ 'ಸಂಜು ವೆಡ್ಸ್ ಗೀತಾ 2' ಚಿತ್ರ ಮಾಡುತ್ತಿದ್ದಾರೆ.

ಅಮ್ಮ
ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದ ರಾಗಿಣಿ ಅವರ 'ಅಮ್ಮ' ಸಿನಿಮಾ ಕೂಡ ಅರ್ಧಕ್ಕೆ ನಿಂತು ಹೋಗಿದೆ.

ಮನಮೋಹಕ
ಸಿಂಪಲ್ ಸುನಿ ಮತ್ತು ಶಿವಣ್ಣ ಕಾಂಬಿನೇಶನ್ ನಲ್ಲಿ ಬರಬೇಕಿದ್ದ 'ಮನಮೋಹಕ' ಅನೌನ್ಸ್ ಆಗಿದೆ ಅಷ್ಟೆ. ಆದ್ರೆ, ಇನ್ನೂ ಸೆಟ್ಟೇರಿಲ್ಲ.

ಕಲಿ
ಪ್ರೇಮ್ ನಿರ್ದೇಶನದ 'ಕಲಿ' ಸಿನಿಮಾ ಸಿಕ್ಕಾಪಟ್ಟೆ ಅದ್ದೂರಿಯಾಗಿ ಸೆಟ್ಟೇರಿತ್ತು. ಆದರೆ ಆ ಚಿತ್ರದ ಬದಲು ಪ್ರೇಮ್ 'ದಿ ವಿಲನ್' ಸಿನಿಮಾವನ್ನು ಕೈ ಗೆತ್ತಿಕೊಂಡರು.

ಜೇಮ್ಸ್
'ಬಹದ್ದೂರ್' ಖ್ಯಾತಿಯ ನಿರ್ದೇಶಕ ಚೇತನ್ ಹಾಗೂ ಪುನೀತ್ ರಾಜ್ ಕುಮಾರ್ ಸೇರಿ ಒಂದು ಸಿನಿಮಾ ಮಾಡಬೇಕಿತ್ತು. ಚಿತ್ರಕ್ಕೆ 'ಜೇಮ್ಸ್' ಎನ್ನುವ ಟೈಟಲ್ ಕೂಡ ಫಿಕ್ಸ್ ಆಗಿತ್ತು. ಆದರೆ ಆ ಚಿತ್ರ ಕೂಡ ಈಗ ಸೈಲೆಂಟ್ ಆಗಿದೆ.

ರಣಧೀರ... ಪ್ರೇಮಲೋಕದಲ್ಲಿ
ಇನ್ನೂ ಪುತ್ರ ಮನೋರಂಜನ್ ಗಾಗಿ ರವಿಚಂದ್ರನ್ 'ರಣಧೀರ... ಪ್ರೇಮಲೋಕದಲ್ಲಿ' ಎಂಬ ಸಿನಿಮಾದ ಮುಹೂರ್ತವನ್ನ ಗ್ರ್ಯಾಂಡ್ ಆಗಿ ಮಾಡಿದ್ದರು. ಆದ್ರೆ, ಬಳಿಕ ಆ ಸಿನಿಮಾ ಸೆಟ್ಟೇರಲೇ ಇಲ್ಲ.

ನಮಗಾಗಿ
'ನಿನಗಾಗಿ' ಚಿತ್ರದ ಜೋಡಿ ವಿಜಯ್ ರಾಘವೇಂದ್ರ ಹಾಗೂ ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದ 'ನಮಗಾಗಿ' ಸಿನಿಮಾ ಕೂಡ ಚಿತ್ರೀಕರಣದ ಹಂತದಲ್ಲಿಯೇ ನಿಂತು ಹೋಗಿದೆ.
'ಈ ಗಾಂಧಿನಗರಕ್ಕೆ ಏನಾಗಿದೆ' : ಹೀಗೆ ಆದ್ರೆ ದೇವರೇ ಕಾಪಾಡಬೇಕು.!

ಸೈಲೆಂಟ್ ಸುನೀಲ
ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬರಬೇಕಿದ್ದ 'ಸೈಲೆಂಟ್ ಸುನೀಲ' ಸಿನಿಮಾ ಕೂಡ ಅರ್ಧಕ್ಕೆ ನಿಂತು ಹೋಗಿದೆ.