April 2022 Movie Releases: ಏಪ್ರಿಲ್‌ನಲ್ಲಿ ರಿಲೀಸ್ ಆಗಲಿರುವ ಕನ್ನಡ, ತೆಲುಗು ಚಿತ್ರಗಳ ಪಟ್ಟಿ!
ಕೊರೊನಾ ಬಳಿಕ ಸಾಲು, ಸಾಲು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿವೆ. ಭಾರತದಾದ್ಯಂತ ಬಹುತೇಕ ಚಿತ್ರಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳುತ್ತಿವೆ. ಸದ್ಯ ಒಂದಷ್ಟು ದೊಡ್ಡ ಚಿತ್ರಗಳ ರಿಲೀಸ್‌ಗೆ ಮುಂದಾಗಿವೆ. ಹಾಗಾಗಿ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ತಯಾರಿ ಮಾಡಿಕೊಂಡಿವೆ. 'RRR' ಚಿತ್ರದ ರಿಲೀಸ್ ಬಳಿಕ ಸೌತ್‌ನಲ್ಲಿ ಬಹುತೇಕ ಚಿತ್ರಗಳು ರಿಲೀಸ್‌ಗೆ ಪ್ಲ್ಯಾನ್ ಮಾಡಿಕೊಂಡಿವೆ.
ಕನ್ನಡ ಮತ್ತು ತೆಲುಗಿನಲ್ಲಿ ಸಾಲು, ಸಾಲು ಚಿತ್ರಗಳು ತೆರೆಗೆ ಬರುತ್ತಿದೆ. ಏಪ್ರಿಲ್‌ನಲ್ಲಿ 'ಕೆಜಿಎಫ್ 2' ಮತ್ತು 'ಬೀಸ್ಟ್' ಚಿತ್ರ ಬಿಟ್ಟರೆ ಮತ್ಯಾವ ದೊಡ್ಡ ಸಿನಿಮಾ ರಿಲೀಸ್ ಆಗುತ್ತಿಲ್ಲ. ಹಾಗಾಗಿ ಮಿಕ್ಕ ಸಿನಿಮಾಗಳಿಗೆ ಚಿತ್ರಮಂದಿರ ಸಿಗುವುದು ಕಷ್ಟ ಏನು ಆಗುವುದಿಲ್ಲ. ಏಪ್ರಿಲ್ ಆರಂಭ ಮತ್ತು ಅಂತ್ಯದಲ್ಲಿ ಕನ್ನಡ ಒಂದಷ್ಟು ಚಿತ್ರಗಳು ರಿಲೀಸ್ ಆಗುತ್ತಿದೆ. ಅಂತೆಯೇ ತೆಲುಗಿನ 5ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆಗುತ್ತಿವೆ.
ಆದರೆ ಕನ್ನಡದ 'ಕೆಜಿಎಫ್ 2' ತೆಲುಗಿನಲ್ಲೂ ರಿಲೀಸ್ ಆಗುತ್ತಿದೆ. ಹಾಗೆ ವಿಜಯ್ ಅಭಿನಯದ ಬೀಸ್ಟ್ ಚಿತ್ರ ಕೂಡ, ತಮಿಳು ಮತ್ತು ತೆಲುಗಿನಲ್ಲಿ ತೆರೆಕಾಣುತ್ತಿದೆ. ಇವುಗಳ ಜೊತೆಗೆ ಕನ್ನಡದ 'ತ್ರಿಕೋನ', 'ಹೋಮ್ ಮಿನಿಸ್ಟರ್' ಮತ್ತು ತೆಲುಗಿನ 'ಗನಿ', 'ಆಚಾರ್ಯ', 'ಮಿಷನ್ ಇಂಪಾಸಿಬಲ್' ಚಿತ್ರಗಳು ರಿಲೀಸ್ ಆಗುತ್ತಿವೆ ಈ ಬಗ್ಗೆ ಪೂರ್ಣ ಮಾಹಿತಿ ಮುಂದೆ ಓದಿ...

ಏಪ್ರಿಲ್ 1ಕ್ಕೆ 'ಹೋಮ್ ಮಿನಿಸ್ಟರ್', 'ತ್ರಿಕೋನ'!
ಕೊರೋನಾದಿಮದ ಚಿತ್ರದ ರಿಲೀಸ್ ತಡವಾಗಿದ್ದರಿಂದ ಗ್ಯಾಪ್ ಸಿಕ್ಕರೆ ಸಾಕು, ಸಿನಿಮಾಗಳು ರಿಲೀಸ್ ದಿನಾಂಕವನ್ನು ನಿಗದಿ ಮಾಡಿಕೊಂಡಿವೆ. ನಟ ಉಪೇಂದ್ರ ಅಭಿನಯದ 'ಹೋಮ್ ಮಿನಿಸ್ಟರ್' ಚಿತ್ರ ಇದೇ ಏಪ್ರಿಲ್ 1ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಉಪ್ಪಿ ಮಹಿಳೆಯರ ಜವಾಬ್ದಾರಿ ಏನು? ಎಷ್ಟು ಮುಖ್ಯ ಎನ್ನುವುದನ್ನು ತೋರಿಸಲು ಹೊರಟಿದ್ದಾರೆ. ಇದರ ಜೊತೆಗೆ ಕನ್ನಡದ ಮತ್ತೊಂದು ಚಿತ್ರ 'ತ್ರಿಕೋನ' ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಹಿರಿಯ ನಟಿ ಲಕ್ಷ್ಮಿ, ಸಾಧುಕೋಕಿಲ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಏಪ್ರಿಲ್ 14ಕ್ಕೆ 'ಕೆಜಿಎಫ್ 2', 13ಕ್ಕೆ 'ಬೀಸ್ಟ್' ರಿಲೀಸ್!
ಇನ್ನು ಈ ಚಿತ್ರಗಳ ಬಳಿಕ 'ಕೆಜಿಎಫ್ 2' ಅಬ್ಬರ ಶುರುವಾಗಲಿದೆ. ಏಪ್ರಿಲ್ 14ಕ್ಕೆ 'ಕೆಜಿಎಫ್ 2' ಚಿತ್ರ ತೆರೆಗೆ ಬರಲಿದೆ. ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಇರುವ ಕಾರಣ ಈ ಚಿತ್ರದ ಪ್ರಭಾವ ಅಷ್ಟು ಬೇಗ ಕುಂದುವುದಿಲ್ಲ. ಹಾಗಾಗಿ 'ಕೆಜಿಎಫ್ 2' ಚಿತ್ರ ರಿಲೀಸ್ ಬಳಿಕ ಒಂದು ವಾರ ಗ್ಯಾಪ್ ಇದೆ. ನಂತರ ಏಪ್ರಿಲ್ 29ಕ್ಕೆ ಕನ್ನಡದ 'ಕ್ರಿಟಿಕಲ್ ಕೀರ್ತನೆಗಳು' ಮತ್ತು 'ಮೇಲೊಬ್ಬ ಮಾಯಾವಿ' ಚಿತ್ರಗಳು ರಿಲೀಸ್ ಆಗಲಿವೆ. ಇನ್ನು ತೆಲುಗಿನಲ್ಲಿ 'ಕೆಜಿಎಫ್ 2' ಚಿತ್ರಕ್ಕೂ ಒಂದು ದಿನದ ಮೊದಲು ಏಪ್ರಿಲ್ 13ಕ್ಕೆ 'ಬೀಸ್ಟ್' ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ.

ಏಪ್ರಿಲ್ 1ಕ್ಕೆ ತೆಲುಗಿನಲ್ಲಿ ತಾಪ್ಸಿ ಚಿತ್ರ ರಿಲೀಸ್!
ಇನ್ನು ತೆಲುಗು ಸಿನಿಮಾದ ಬಹುತೇಕ ಚಿತ್ರಗಳ ರಿಲೀಸ್ ದಿನಾಂಕ ಈಗಾಗಲೆ ಪ್ರಕಟ ಆಗಿವೆ. ಏಪ್ರಿಲ್ 1ನೆ ತಾರೀಖು ತಾಪ್ಸಿ ಪನ್ನು ಅಭಿನಯದ 'ಮಿಷನ್ ಇಂಪಾಸಿಬಲ್' ಚಿತ್ರ ತೆರೆಗೆ ಬರ್ತಿದೆ. ಇದರ ಜೊತೆಗೆ ಏಪ್ರಿಲ್ 22ಕ್ಕೆ ವಿಶ್ವಕ್ ಸೆನ್ ಅಭಿನಯದ 'ಅಶೋಕ ವನಂಲೊ ಅರ್ಜುನ ಕಲ್ಯಾಣಂ', 'ಜಯಮ್ಮ ಪಂಚಾಯಿತಿ', 'ಕೃಷ್ಣ ವೃಂಧ ವಿಹರಿ' ಚಿತ್ರಗಳು ರಿಲೀಸ್ ಆಗುತ್ತಿದೆ.
Recommended Video


ಏಪ್ರಿಲ್‌ನ ನಿರೀಕ್ಷಿತ ಚಿತ್ರಗಳಾದ 'ಗನಿ', 29ಕ್ಕೆ 'ಆಚಾರ್ಯ'!
ಇದರ ಜೊತೆಗೆ ಏಪ್ರಿಲ್‌ನಲ್ಲಿ ರಿಲೀಸ್ ಆಗುತ್ತಿರುವ ತೆಲುಗಿನ ಬಹುನಿರೀಕ್ಷಿತ ಚಿತ್ರಗಳು ಅಂದರೆ ವರುಣ್ ತೇಜ್ ಅಭಿನಯದ 'ಗನಿ' ಮತ್ತು ಚಿರಂಜೀವಿ ಹಾಗೂ ರಾಮ್ ಚರಣ್ ಅಭಿನಯದ 'ಆಚಾರ್ಯ'. 'ಗನಿ' ಏಪ್ರಿಲ್ 8ರಂದು ತೆರೆಗೆ ಬರುತ್ತಿದೆ. 'ಆಚಾರ್ಯ' ಚಿತ್ರ ಏಪ್ರಿಲ್ 29ಕ್ಕೆ ರಿಲೀಸ್ ಆಗುತ್ತಿದೆ. ಇವುಗಳನ್ನು ಬಿಟ್ಟು, ಏಪ್ರಿಲ್ 14ಕ್ಕೆ 'ಕೆಜಿಎಫ್ 2' ಮತ್ತು ಏಪ್ರಿಲ್ 13ಕ್ಕೆ 'ಬೀಸ್ಟ್' ಚಿತ್ರಗಳು ಕೂಡ ತೆಲುಗಿಗೆ ಡಬ್ ಅಗಿ ರಿಲೀಸ್ ಆಗುತ್ತಿದೆ.


Click it and Unblock the Notifications











