For Quick Alerts
  ALLOW NOTIFICATIONS  
  For Daily Alerts

  ಈ ವಾರ ಬಿಡುಗಡೆ ಆಗುತ್ತಿರುವ ಸಿನಿಮಾಗಳ ಸಂಪೂರ್ಣ ಪಟ್ಟಿ ಇಲ್ಲಿದೆ

  |

  ಮತ್ತೊಂದು ಶುಕ್ರವಾರ ಬಂದಿದೆ. ಸಿನಿರಸಿಕರನ್ನು ರಂಜಿಸೋಕೆ ಮತ್ತಷ್ಟು ಸಿನಿಮಾಗಳು ಈ ವಾರ ಪ್ರೇಕ್ಷಕರ ಮುಂದೆ ಬರ್ತಿವೆ. ಕನ್ನಡದ 9, ತೆಲುಗಿನ 8, ತಮಿಳಿನ 7, ಮಲಯಾಳಂ 3, ಹಿಂದಿ 2 ಸಿನಿಮಾಗಳು ಈ ವಾರ ಪ್ರೇಕ್ಷಕರನ್ನು ರಂಜಿಸಲು ಥಿಯೇಟರ್‌ಗೆ ಲಗ್ಗೆ ಇಡುತ್ತಿವೆ.

  ಈಗಾಗಲೇ ಥಿಯೇಟರ್‌ಗಲ್ಲಿ 'ಕಾಂತಾರ', 'ಗಂಧದ ಗುಡಿ' ಸೇರಿದಂತೆ ಸಾಕಷ್ಟು ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅದರ ಜೊತೆಗೆ ಈ ವಾರ ಮತ್ತಷ್ಟು ಸಿನಿಮಾಗಳು ಬೆಳ್ಳಿ ಪರದೆ ಮೇಲೆ ಅಪ್ಪಳಿಸುತ್ತಿವೆ. ಅನುಭವಿ ಕಲಾವಿದರ ಸಿನಿಮಾಗಳ ಜೊತೆ ಹೊಸ ಪ್ರತಿಭೆಗಳು ಅದೃಷ್ಟ ಪರೀಕ್ಷೆ ಇಳಿಯುತ್ತಿದ್ದಾರೆ. ಇಷ್ಟು ದಿನ ಟ್ರೈಲರ್ ಹಾಗೂ ಸಾಂಗ್ಸ್‌ನಿಂದ ಸದ್ದು ಮಾಡುತ್ತಿದ್ದ ಸಿನಿಮಾಗಳು ಈ ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ರಂಜಿಸಲಿವೆ. ಹೊಸ ಸಿನಿಮಾಗಳಿಗಾಗಿ ಸದ್ಯ ಪ್ರದರ್ಶನ ಕಾಣುತ್ತಿರುವ ಒಂದಷ್ಟು ಸಿನಿಮಾಗಳು ಥಿಯೇಟರ್‌ನಿಂದ ಜಾಗ ಖಾಲಿ ಮಾಡಲಿವೆ.

  ನಿರ್ಮಾಪಕರು, ವಿತರಕರಿಗೆ ಹಣದ ಹೊಳೆ ಹರಿಸಿದ 'ಕಾಂತಾರ': ಟಿವಿ ರೈಟ್ಸ್ ಕೊಂಡುಕೊಂಡವರಿಗೆ ನಷ್ಟ ಕಾದಿದ್ಯಾ?ನಿರ್ಮಾಪಕರು, ವಿತರಕರಿಗೆ ಹಣದ ಹೊಳೆ ಹರಿಸಿದ 'ಕಾಂತಾರ': ಟಿವಿ ರೈಟ್ಸ್ ಕೊಂಡುಕೊಂಡವರಿಗೆ ನಷ್ಟ ಕಾದಿದ್ಯಾ?

  ಕನ್ನಡ, ತೆಲುಗು, ತಮಿಳಿನಲ್ಲಿ ಈ ವಾರ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರುತ್ತಿಲ್ಲ. ಬಾಲಿವುಡ್‌ನಲ್ಲಿ ಅಜಯ್‌ ದೇವಗನ್ ಹಾಗೂ ತಬು ನಟನೆಯ 'ದೃಶ್ಯಂ' - 2 ಮಾತ್ರ ಒಂದು ರೇಂಜಿಗೆ ಕುತೂಹಲ ಕೆರಳಿಸಿದೆ. ಕನ್ನಡದ ಮಟ್ಟಿಗೆ ಪ್ರಜ್ವಲ್ ದೇವರಾಜ್ ನಟನೆಯ 'ಅಬ್ಬರ' ಕೊಂಚ ನಿರೀಕ್ಷೆ ಮೂಡಿಸಿದೆ.

  ಕನ್ನಡದಲ್ಲಿ 8 ಚಿತ್ರಗಳು ರಿಲೀಸ್

  ಕನ್ನಡದಲ್ಲಿ 8 ಚಿತ್ರಗಳು ರಿಲೀಸ್

  ಕನ್ನಡದಲ್ಲಿ 'ಆವರ್ಥ', 'ಅಬ್ಬರ', 'ಮಠ', 'ಖಾಸಗಿ ಪುಟಗಳು', 'ಧಮ್', 'ಭಾಗ್ಯವಂತರು', 'ದಿ ಫಿಲ್ಮ್ ಮೇಕರ್', 'ಕುಳ್ಳನ ಹೆಂಡತಿ' ಹೀಗೆ ಒಟ್ಟು 8 ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ರಾಮ್ ನಾರಾಯಣ್ ನಿರ್ದೇಶನದ 'ಅಬ್ಬರ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮಿಂಚಿದ್ದಾರೆ. ರಿವೇಂಜ್‌ ಡ್ರಾಮಾ ಆಗಿರುವ ಈ ಚಿತ್ರದಲ್ಲಿ ಮೂವರು ನಾಯಕಿಯರು ಇದ್ದಾರೆ. ಇನ್ನು ದಿವಂಗತ ನಟ ಶಂಕರ್ ನಾಗ್ ನಟನೆಯ 'ಎಸ್‌. ಪಿ ಸಾಂಗ್ಲಿಯಾನ'- 2 ಸಿನಿಮಾ ರೀ ರಿಲೀಸ್ ಆಗ್ತಿದೆ.

  'ಮಿಸ್ಟರ್ ಮಮ್ಮಿ' ಜೊತೆ 'ದೃಶ್ಯಂ- 2'

  'ಮಿಸ್ಟರ್ ಮಮ್ಮಿ' ಜೊತೆ 'ದೃಶ್ಯಂ- 2'

  ಬಾಲಿವುಡ್‌ನಲ್ಲಿ ಸೂಪರ್ ಹಿಟ್ 'ದೃಶ್ಯಂ' ಸರಣಿ ಸೀಕ್ವೆಲ್ ಈ ವಾರ ತೆರೆಗೆ ಬರ್ತಿದೆ. ಅಜಯ್ ದೇವಗನ್, ತಬು ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಮಲಯಾಳಂನಲ್ಲಿ 'ದೃಶ್ಯಂ' ಸರಣಿ ಸಿನಿಮಾಗಳು ಹಿಟ್ ಆಗಿತ್ತು. ಹಿಂದಿಯಲ್ಲಿ ಮೊದಲ ಭಾಗ 7 ವರ್ಷಗಳ ಹಿಂದೆ ಬಂದಿತ್ತು. ಕನ್ನಡ, ತೆಲುಗಿನಲ್ಲಿ ಸೀಕ್ವೆಲ್ ರಿಲೀಸ್ ಆದರೂ ಅಷ್ಟಾಗಿ ಸದ್ದು ಮಾಡಲಿಲ್ಲ. ಹಿಂದಿಯಲ್ಲಿ ಸಿನಿಮಾ ಸದ್ದು ಮಾಡುತ್ತಾ ಕಾದು ನೋಡಬೇಕು. ಆನ್‌ಲೈನ್‌ನಲ್ಲಿ ಸಿನಿಮಾ ಟಿಕೆಟ್ ಬುಕ್ಕಿಂಗ್ ಚೆನ್ನಾಗಿದೆ. 'ದೃಶ್ಯಂ- 2' ಜೊತೆಗೆ ಕಾಮಿಡಿ ಎಂಟರ್‌ಟೈನರ್‌ 'ಮಿಸ್ಟರ್ ಮಮ್ಮಿ'
  ಸಿನಿಮಾ ಕೂಡ ರಿಲೀಸ್ ಆಗ್ತಿದೆ. ಚಿತ್ರದಲ್ಲಿ ರಿತೇಶ್ ದೇಶ್‌ಮುಖ್ ಹಾಗೂ ಜೆನಿಲಿಯಾ ದಂಪತಿ ನಟಿಸಿದ್ದಾರೆ.

  ತೆಲುಗಿನ 8 ಸಿನಿಮಾಗಳ ರಿಲೀಸ್

  ತೆಲುಗಿನ 8 ಸಿನಿಮಾಗಳ ರಿಲೀಸ್

  ಗಾಲೋಡು, ಮಸೂದ, ಅಲಿಪಿರಿಕಿ ಅಲ್ಲಂಟ ದೂರಂ, ಸೀತಾಪುರಂಲೋ, ಪ್ಲೇ, ಬೆಸ್ಟ್ ಕಪಲ್, ಭಾರತ ಪುತ್ರುಲು, ಬಾದ್‌ಶಾ

  ತಮಿಳು 7, ಮಲಯಾಳಂ 8 ಚಿತ್ರಗಳು

  ತಮಿಳು 7, ಮಲಯಾಳಂ 8 ಚಿತ್ರಗಳು

  ಮಲಯಾಳಂ: 1744 ಅಟ್ಲೊ, ಅದ್ರಿಷ್ಯಂ, ವಿವಾಹ ಆಹ್ವಾನಂ, ಪದಚೊನೆ ಇಂಗಳು ಕಾತೋಲೆ, ಪರ್ಫ್ಯೂಮ್ ಹರ್ ಫ್ರಾಗ್ರೆನ್ಸ್, ಸಿಗ್ನೇಚರ್, ಶೋಲೈ, ಪೈಕಾಪಲ್

  ತಮಿಳು: ಕಳಗ ತಲೈವನ್, ಯುಗಿ, 2323- ದಿ ಬಿಗಿನಿಂಗ್, ನಾನ್ ಮಿರಿಗಮೈ ಮಾರ, ಗೆತ್ತಲು, ಕಾರುತ್ತೀಯನ್ ಕದಲಿ, ಜಿಂಗೀ

  ಇಂಗ್ಲೀಷ್: ಶೀ ಸೆಡ್, ಸ್ಮೈಲ್

  English summary
  List of kannada telugu tamil hindi Movies Releasing on November 18th. including hidni drishyam - 2 and kannada Abbara here is the list of new movies releasing in Thaters this week. know more.
  Thursday, November 17, 2022, 19:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X