twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ 3 ಹಾಡಿಗೆ ರಾಜ್ಯ ಪ್ರಶಸ್ತಿ, 1 ರಾಷ್ಟ್ರಪ್ರಶಸ್ತಿ ಪಡೆದಿರುವ ಎಸ್‌ಪಿಬಿ, ಯಾವುದು ಆ ಹಾಡುಗಳು?

    |

    ಸುಮಾರು 16 ಭಾಷೆಗಳು, 40 ಸಾವಿರಕ್ಕೂ ಅಧಿಕ ಹಾಡುಗಳು ಹಾಡಿರುವ ದಿಗ್ಗಜ ಗಾಯಕನಿಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಲಭಿಸಿದೆ. ಎಸ್‌ಪಿಬಿ ಗಾಯನಕ್ಕಾಗಿ ಆರು ರಾಷ್ಟ್ರ ಪ್ರಶಸ್ತಿಗಳು, ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯ ಸರ್ಕಾರಗಳಿಂದ ಒಟ್ಟು ಇಪತ್ಮೂರು ರಾಜ್ಯ ಪ್ರಶಸ್ತಿಗಳು ಬಂದಿವೆ.

    ಬಾರದ ಊರಿಗೆ ಎಸ್ಪಿಬಿ: ಚೆನ್ನೈನಿಂದ ಬೆಂಗಳೂರಿಗೆ ಹಾಡಲು ಬಂದಾಗ ನಡೆದ ಘಟನೆ ಬಾರದ ಊರಿಗೆ ಎಸ್ಪಿಬಿ: ಚೆನ್ನೈನಿಂದ ಬೆಂಗಳೂರಿಗೆ ಹಾಡಲು ಬಂದಾಗ ನಡೆದ ಘಟನೆ

    ಒಂದೇ ದಿನದಲ್ಲಿ ಕನ್ನಡದಲ್ಲಿ 17 ಹಾಡುಗಳು, ಒಂದೇ ದಿನದಲ್ಲಿ ತೆಲುಗು ಹಾಗೂ ತಮಿಳಿನಲ್ಲಿ 19 ಹಾಡುಗಳು, ಒಂದೇ ದಿನದಲ್ಲಿ ಹಿಂದಿಯಲ್ಲಿ 16 ಹಾಡುಗಳು ರೆಕಾರ್ಡ್ ಮಾಡಿದ ಪ್ಲೇ ಬ್ಯಾಕ್ ಸಿಂಗರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ. ಕನ್ನಡದಲ್ಲಿ ಮೂರು ರಾಜ್ಯ ಪ್ರಶಸ್ತಿ ಹಾಗೂ ಕನ್ನಡದ ಹಾಡಿಗಾಗಿ ಒಂದು ರಾಷ್ಟ್ರ ಪ್ರಶಸ್ತಿ ಎಸ್‌ಪಿಬಿಗೆ ಸಿಕ್ಕಿದೆ. ಹಾಗಾದ್ರೆ, ಬಾಲುಗೆ ಪ್ರಶಸ್ತಿ ತಂದು ಕೊಟ್ಟು ಆ ಹಾಡುಗಳು ಯಾವುದು?

    'ಓ ಮಲ್ಲಿಗೆ' ಚಿತ್ರದ ಹಾಡಿಗೆ ಮೊದಲ ರಾಜ್ಯ ಪ್ರಶಸ್ತಿ

    'ಓ ಮಲ್ಲಿಗೆ' ಚಿತ್ರದ ಹಾಡಿಗೆ ಮೊದಲ ರಾಜ್ಯ ಪ್ರಶಸ್ತಿ

    1997ರಲ್ಲಿ ಬಿಡುಗಡೆಯಾಗಿದ್ದ 'ಓ ಮಲ್ಲಿಗೆ' ಚಿತ್ರದ ಹಾಡಿಗಾಗಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ವಿ ಮನೋಹರ್ ಈ ಚಿತ್ರ ನಿರ್ದೇಶಿಸಿ, ಸಂಗೀತ ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಎರಡು ಹಾಡುಗಳನ್ನು ಎಸ್‌ಪಿಬಿ ಹಾಡಿದ್ದರು. 'ಗಿರಿ ಸಿರಿ ಝರಿ ತೊರೆ' ಎಂಬ ಹಾಡಿಗೆ ಪ್ರಶಸ್ತಿ ಸಿಕ್ಕಿತ್ತು.

    'ಸೃಷ್ಟಿ' ಚಿತ್ರದ ಹಾಡಿಗಾಗಿ ಎರಡನೇ ಸಲ

    'ಸೃಷ್ಟಿ' ಚಿತ್ರದ ಹಾಡಿಗಾಗಿ ಎರಡನೇ ಸಲ

    ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಎರಡನೇ ಸಲ ರಾಜ್ಯ ಪ್ರಶಸ್ತಿ ಸಿಕ್ಕಿದ್ದು 2004-05ನೇ ಸಾಲಿನಲ್ಲಿ. ಸೃಷ್ಟಿ ಎಂಬ ಚಿತ್ರದ 'ಹೃದಯದ ತುಂಬಾ....' ಹಾಡಿಗಾಗಿ ಬಾಲು ಅವರಿಗೆ ಅತ್ಯುತ್ತುಮ ಹಿನ್ನೆಲೆ ಗಾಯಕ ರಾಜ್ಯ ಪ್ರಶಸ್ತಿ ಲಭಿಸಿತ್ತು.

    ದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಬಗ್ಗೆ ನೀವು ತಿಳಿಯಬೇಕಾದ ಆಸಕ್ತಿಕರ ಅಂಶಗಳುದಿಗ್ಗಜ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಬಗ್ಗೆ ನೀವು ತಿಳಿಯಬೇಕಾದ ಆಸಕ್ತಿಕರ ಅಂಶಗಳು

    ಮೂರನೇ ರಾಜ್ಯ ಪ್ರಶಸ್ತಿ ಯಾವಾಗ?

    ಮೂರನೇ ರಾಜ್ಯ ಪ್ರಶಸ್ತಿ ಯಾವಾಗ?

    2007-08ನೇ ಸಾಲಿನಲ್ಲಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮೂರನೇ ಸಲ ರಾಜ್ಯ ಪ್ರಶಸ್ತಿ ದೊರೆಯಿತು. ಸಂತೋಷ್ ರೈ ಪತಾಜೆ ನಿರ್ದೇಶನದ ಸವಿ ಸವಿ ನೆನಪು ಚಿತ್ರದ 'ನೆನೆಪು ನೆನೆಪು.....' ಹಾಡಿಗಾಗಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆರ್ ಆರ್ ಪಟ್ನಾಯಕ್ ಸಂಗೀತ ನೀಡಿದ್ದರು. ಲವ್ಲಿಸ್ಟಾರ್ ಪ್ರೇಮ್ ನಾಯಕರಾಗಿದ್ದರು.

    Recommended Video

    SP Balasubramanyam : ದೇಶ ಕಂಡ ಅದ್ಬುತ ಗಾಯಕ ಇನ್ನಿಲ್ಲ | Filmibeat Kannada
    ಒಂದೇ ಒಂದು ರಾಷ್ಟ್ರ ಪ್ರಶಸ್ತಿ

    ಒಂದೇ ಒಂದು ರಾಷ್ಟ್ರ ಪ್ರಶಸ್ತಿ

    'ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ' ಚಿತ್ರದ ಹಾಡಿಗಾಗಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಕನ್ನಡ ಹಾಡಿಗಾಗಿ ಎಸ್‌ಪಿಬಿ ಅವರಿಗೆ ಸಿಕ್ಕಿರುವ ಒಂದೇ ಒಂದು ರಾಷ್ಟ್ರ ಪ್ರಶಸ್ತಿ ಇದಾಗಿದೆ. 1995ರಲ್ಲಿ ತೆರೆಕಂಡಿದ್ದ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದರು.

    English summary
    SP Balasubrahmanyam received three karnataka state award and one national award for kannada playback singing in his career.
    Saturday, September 26, 2020, 12:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X