For Quick Alerts
  ALLOW NOTIFICATIONS  
  For Daily Alerts

  'ಕುರಿ' ಕಾಲ್ ಶೀಟ್ ಗಾಗಿ ಯಾವ ಮಟ್ಟದ ಡಿಮ್ಯಾಂಡ್ ಇದೆ ನೋಡಿ

  By Naveen
  |

  ಕನ್ನಡ ಚಿತ್ರರಂಗದಲ್ಲಿ ಸದ್ಯ ಹಾಸ್ಯ ಕಲಾವಿದರ ಸಂಖ್ಯೆ ಕಡಮೆ ಇದೆ. ಕೆಲವು ಹಾಸ್ಯ ನಟರು ಹೀರೋ ಆದ ಮೇಲೆ ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ ಹಾಸ್ಯ ಕಲಾವಿದರ ಕೊರತೆಯನ್ನು ನೀಗಿಸುತ್ತಿದ್ದರು. ಈಗ ಕುರಿ ಪ್ರತಾಪ್ ಕೂಡ ಅದೇ ಸಾಲಿಗೆ ಸೇರುತ್ತಿದ್ದಾರೆ.

  ಕುರಿ ಪ್ರತಾಪ್ ಎಂದ ತಕ್ಷಣ 'ಮಜಾ ಟಾಕೀಸ್' ಕಾರ್ಯಕ್ರಮ ನೆನಪಿಗೆ ಬರುತ್ತದೆ. ಆದರೆ ಅದರ ಜೊತೆಗೆ ಕುರಿ ಪ್ರತಾಪ್ ಈಗ ಹೆಚ್ಚು ಸಿನಿಮಾ ಮಾಡುತ್ತಿದ್ದಾರೆ. ಒಂದು ಸಮಯದಲ್ಲಿ ಇವರಿಗೆ ಸಿನಿಮಾ ಅವಕಾಶಗಳೆ ಇರಲಿಲ್ಲ. ಆದರೆ ಈಗ ಕುರಿ ಬೇಡಿಕೆ ಹೆಚ್ಚಾಗಿದೆ. 'ತಾರಕ್' 'ಕನಕ' ರೀತಿಯ ಸ್ಟಾರ್ ಸಿನಿಮಾಗಳಲ್ಲಿ ಕುರಿ ಪ್ರತಾಪ್ ನಟಿಸಿದ್ದಾರೆ. ಇನ್ನು ಕುರಿ ಪ್ರತಾಪ್ ಮುಂದಿನ ಸಿನಿಮಾಗಳ ಲಿಸ್ಟ್ ಕೂಡ ಸಿಕ್ಕಾಪಟ್ಟೆ ದೊಡ್ಡದಿದೆ. ಮುಂದೆ ಓದಿ...

  ಇತ್ತೀಚಿನ ಸಿನಿಮಾಗಳು

  ಇತ್ತೀಚಿನ ಸಿನಿಮಾಗಳು

  ದರ್ಶನ್ ಜೊತೆಗೆ 'ತಾರಕ್' ಸಿನಿಮಾ ಮಾಡಿದ್ದ ಕುರಿ ಪ್ರತಾಪ್ ಇತ್ತೀಚಿಗಷ್ಟೆ 'ಬೃಹಸ್ಪತಿ' ಹಾಗೂ 'ರಾಜು ಕನ್ನಡ ಮೀಡಿಯಾ' ನಲ್ಲಿ ನಟಿಸಿದ್ದರು. ಅದರ ಜೊತೆಗೆ ದುನಿಯಾ ವಿಜಯ್ ಅವರ 'ಕನಕ' ಚಿತ್ರದಲ್ಲಿಯೂ ಕುರಿ ಪ್ರತಾಪ್ ತೆರೆ ಹಂಚಿಕೊಂಡಿದ್ದರು.

  'ದಿ ವಿಲನ್'

  'ದಿ ವಿಲನ್'

  ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ದಿ ವಿಲನ್'ನಲ್ಲಿ ನಾಲ್ಕೈದು ಹಾಸ್ಯ ಕಲಾವಿದರು ಇದ್ದಾರೆ. ಅದರಲ್ಲಿ ಕುರಿ ಪ್ರತಾಪ್ ಕೂಡ ಒಬ್ಬರು. ಈ ಚಿತ್ರವನ್ನು ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ.

  'ಪ್ರೇಮ ಬರಹ'

  'ಪ್ರೇಮ ಬರಹ'

  ಅರ್ಜುನ್ ಸರ್ಜಾ ಅವರ 'ಪ್ರೇಮ ಬರಹ' ಸಿನಿಮಾದಲ್ಲಿಯೂ ಕುರಿ ಪ್ರತಾಪ್ ಕಾಮಿಡಿ ಇರಲಿದೆ. ಇದು ಅರ್ಜುನ್ ಸರ್ಜಾ ಅವರ ಮಗಳ ಮೊದಲ ಕನ್ನಡ ಸಿನಿಮಾ. ಈ ಚಿತ್ರ ಫೆಬ್ರವರಿ 9ಕ್ಕೆ ರಿಲೀಸ್ ಆಗಲಿದೆ.

  'ರಾಂಬೊ 2'

  'ರಾಂಬೊ 2'

  ಶರಣ್ ನಟನೆಯ 'ರಾಂಬೋ 2' ಸಿನಿಮಾದಲ್ಲಿಯೂ ಕುರಿ ಪ್ರತಾಪ್ ನಟಿಸಿದ್ದಾರೆ. ಇದೊಂದು ಪಕ್ಕಾ ಕಾಮಿಡಿ ಸಿನಿಮಾವಾಗಿದೆ. ಈ ಚಿತ್ರದ ಹೊಸ ಹಾಡಿನ ಟೀಸರ್ ಫೆಬ್ರವರಿ 6ಕ್ಕೆ ರಿಲೀಸ್ ಆಗಲಿದೆ.

  'ಎಂ ಎಲ್ ಎ'

  'ಎಂ ಎಲ್ ಎ'

  'ಬಿಗ್ ಬಾಸ್' ಖ್ಯಾತಿಯ ಪ್ರಥಮ್ ನಟನೆಯ 'ಎಂ ಎಲ್ ಎ' ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ಕುರಿ ಪ್ರತಾಪ್ ನಟಿಸಿದ್ದಾರೆ.

  'ಮಿಸ್ಟರ್ ಜೈ'

  'ಮಿಸ್ಟರ್ ಜೈ'

  ಕುರಿ ಪ್ರತಾಪ್ ಮತ್ತು 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ನಯನ ಕಾಂಬಿನೇಶನ್ ನಲ್ಲಿ ಒಂದು ಸಿನಿಮಾ ಬರುತ್ತಿದೆ. ಈ ಚಿತ್ರಕ್ಕೆ 'ಮಿಸ್ಟರ್ ಜೈ' ಎನ್ನುವ ಹೆಸರು ಇಡಾಗಿದೆ.

  ಉಳಿದ ಸಿನಿಮಾಗಳು

  ಉಳಿದ ಸಿನಿಮಾಗಳು

  ವಿಜಯ್ ರಾಘವೇಂದ್ರ ಅವರ 'ರಾಜ ಲವ್ಸ್ ರಾಧೆ', 'ಲಕ್ನೋ' ಮತ್ತು 'ಬಿಲ್ ಗೇಟ್ಸ್‌' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕುರಿ ಪ್ರತಾಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಳ ಚಿತ್ರೀಕರಣ ಸದ್ಯ ನಡೆಯುತ್ತಿದೆ.

  ಮಜಾ ಟಾಕೀಸ್ ಸೂಪರ್ ಸೀಸನ್ ಮೊದಲ ಅತಿಥಿ ಇವರುಮಜಾ ಟಾಕೀಸ್ ಸೂಪರ್ ಸೀಸನ್ ಮೊದಲ ಅತಿಥಿ ಇವರು

  ಮತ್ತೆ 'ಮಜಾ ಟಾಕೀಸ್'

  ಮತ್ತೆ 'ಮಜಾ ಟಾಕೀಸ್'

  ಕುರಿ ಪ್ರತಾಪ್ ಅವರ 'ಮಜಾ ಟಾಕೀಸ್' ಕಾರ್ಯಕ್ರಮ ಮತ್ತೆ ಶುರು ಆಗಲಿದೆ. ಫೆಬ್ರವರಿ 8 ರಿಂದ ಪ್ರತಿ ಗುರುವಾರ ಮತ್ತು ಶುಕ್ರವಾರ ಕಾರ್ಯಕ್ರಮ ಪ್ರಸಾರ ಆಗಲಿದೆ.

  English summary
  'Maja Talkies' fame comedy actor Kuri Prathap in demand. List of Kuri Prathap's upcoming kannada movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X