»   » ಪ್ರಿಯಾ ಮಾತ್ರವಲ್ಲ.. ಮಲೆಯಾಳಂ ಹುಡುಗಿಯರು ಲಕ್ಕಿನೋ ಲಕ್ಕಿ!

ಪ್ರಿಯಾ ಮಾತ್ರವಲ್ಲ.. ಮಲೆಯಾಳಂ ಹುಡುಗಿಯರು ಲಕ್ಕಿನೋ ಲಕ್ಕಿ!

Posted By:
Subscribe to Filmibeat Kannada
ಪ್ರಿಯಾ ಮಾತ್ರವಲ್ಲ. ಮಲೆಯಾಳಂನ ಬೇರೇ ನಾಯಕಿಯರಿಗೂ ಬಹಳ ಅದೃಷ್ಟವಿದೆ | Filmibeat Kannada

ಪ್ರಿಯಾ ಪ್ರಕಾಶ್ ವಾರಿಯರ್ ಒಂದೇ ದಿನದಲ್ಲಿ ಸೂಪರ್ ಸ್ಟಾರ್ ಮಟ್ಟದ ಜನಪ್ರಿಯತೆ ಗಳಿಸಿದ ನಟಿ. ಮಲೆಯಾಳಂ ಭಾಷೆಯ ಈ ಯುವ ನಟಿ ಮೊದಲ ಸಿನಿಮಾದ ಮೊದಲ ಹಾಡಿನಲ್ಲಿ... ಅದರಲ್ಲಿಯೂ ಆ ಹಾಡಿನ ಸಣ್ಣ ತುಣುಕಿನ ಮೂಲಕ ದೇಶದೆಲ್ಲಡೆ ದೊಡ್ಡ ಕೋಲಾಹಲ ಸೃಷ್ಟಿಸಿದ್ದಾಳೆ.

ಪ್ರಿಯಾ ನೋಡಿ ಅನೇಕರು ಏನ್ ಲಕ್ ಈ ಹುಡುಗಿಗೆ ಎಂದುಕೊಳ್ಳುತ್ತಾರೆ. ಆದರೆ ಅದೇನೋ ಗೊತ್ತಿಲ್ಲ ಮಲೆಯಾಳಂ ನಟಿಯರಿಗೆ ಸಿಕ್ಕಾಪಟ್ಟೆ ಅದೃಷ್ಟ ಇದೆ ಅನಿಸುತ್ತದೆ. ಪ್ರತಿಭೆಯ ಜೊತೆಗೆ ಅದೃಷ್ಟ ಬೇರೆತರೆ ಆ ಕಲಾವಿದರನ್ನು ಯಾರು ಹಿಡಿಯುವುದಕ್ಕೆ ಆಗಲ್ಲ. ಈಗ ಮಲೆಯಾಳಂ ನಟಿಯರ ಪರಿಸ್ಥಿತಿ ಹಾಗೆ ಆಗಿದೆ.

ಅಂದಹಾಗೆ, ಮಲೆಯಾಳಂ ಚಿತ್ರರಂಗದಿಂದ ಬಂದ ಅನೇಕ ನಟಿಯರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮತ್ತು ಬಾಲಿವುಡ್ ನಲ್ಲಿಯೂ ಹೆಸರು ಮಾಡಿದ್ದಾರೆ. ಅಂತಹ ಕೆಲವು ನಟಿಯರ ವಿವರ ಮುಂದಿದೆ ಓದಿ..

ಶೃತಿ ಹರಿಹರನ್ ಎಂಟ್ರಿ ಕೊಟ್ಟಿದ್ದು ಮಾಲಿವುಡ್ ಮೂಲಕ

ಶೃತಿ ಹರಿಹರನ್ ಸದ್ಯ ಕನ್ನಡದಲ್ಲಿ ಸಿಕ್ಕಾಪಟ್ಟೆ ಬಿಜಿ ಇರುವ ನಟಿ. ಒಂದು ಕಡೆ ಕಮರ್ಶಿಯಲ್ ಸಿನಿಮಾಗಳು ಮತ್ತೊಂದು ಕಡೆ ವಿಭಿನ್ನ ಪಾತ್ರದ ಸಿನಿಮಾಗಳು ಎರಡನ್ನು ಮಾಡುತ್ತಿರುವ ಶೃತಿ ದಿನೇ ದಿನೇ ದೊಡ್ಡ ಸ್ಟಾರ್ ಮಟ್ಟಕ್ಕೆ ಬೆಳೆಯುತ್ತಿದ್ದಾರೆ. ಅಂದಹಾಗೆ, 'ಲೂಸಿಯ' ಸಿನಿಮಾದ ಮೂಲಕ ಕನ್ನಡಕ್ಕೆ ಬಂದ ಶೃತಿ ಮೂಲತಃ ಕೇರಳದವರು. ಮೊದಲು ಶೃತಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಮಲೆಯಾಳಂ ನ 'ಸಿನಿಮಾ ಕಂಪನಿ' ಎಂಬ ಚಿತ್ರದ ಮೂಲಕ.

ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ನಟಿಸಿದ ಭಾವನ

ಮಾಲಿವುಡ್ ನಲ್ಲಿ ಅನೇಕ ಸಿನಿಮಾ ಮಾಡಿದ್ದ ಭಾವನ ನಂತರ ಬೇರೆ ಭಾಷೆಗಳಲ್ಲಿ ನಟಿಸು ಅವಕಾಶ ಪಡೆದರು. ತಮಿಳು, ತೆಲುಗು, ಕನ್ನಡ ಹೀಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಅಭಿನಯಿಸಿದ ಖ್ಯಾತಿ ಅವರಿಗಿದೆ. ಸದ್ಯ ಶಿವರಾಜ್ ಕುಮಾರ್ ಅವರ 'ಟಗರು' ಚಿತ್ರಕ್ಕೆ ಸಹ ಭಾವನ ಅವರೇ ನಾಯಕಿ.

ಬಾಲಿವುಡ್ ಚಿತ್ರ ಮಾಡಿದ ಪಾರ್ವತಿ

ನಟಿ ಪಾರ್ವತಿ ಕೂಡ ಮಾಲಿವುಡ್ ಇಂಡಸ್ಟ್ರಿಯ ಮೂಲಕ ಚಿತ್ರರಂಗಕ್ಕೆ ಬಂದವರು. ಆದರೆ ಬಳಿಕ ಕನ್ನಡದಲ್ಲಿ 'ಮಿಲನ' ಸೇರಿದಂತೆ ಕೆಲವು ಹಿಟ್ ಸಿನಿಮಾ ಮಾಡಿದರು. ತಮಿಳಿನಲ್ಲಿ ನಟಿಸಿರು, ಅಷ್ಟೆ ಅಲ್ಲದೆ ಕಳೆದ ವರ್ಷ ಬಾಲಿವುಡ್ ಗೆ ಕೂಡ ಹೋಗಿ ಬಂದರು.

ಅಮಲಾ ಪೌಲ್ ಗೆ ಸಖತ್ ಡಿಮ್ಯಾಂಡ್

'ಹೆಬ್ಬುಲಿ' ಸುಂದರಿ ಅಮಲಾ ಪೌಲ್ ಅವರ ಮೊದಲ ಸಿನಿಮಾ ಕೂಡ ಮಲೆಯಾಳಂ ಭಾಷೆಯ ಚಿತ್ರ. ಆ ನಂತರ ಅಮಲಾ ಕೂಡ ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚು ನಟಿಸಿದರು. ಸದ್ಯಕ್ಕೆ ಅಮಲಾ ಪೌಲ್ ಗೆ ಕಾಲಿವುಡ್ ನಲ್ಲಿ ತುಂಬ ಆಫರ್ ಇವೆ.

ಸ್ಟಾರ್ ಸಿನಿಮಾದಲ್ಲಿ ಸ್ನೇಹ

ಸೌತ್ ಇಂಡಿಯಾದ ಟಾಪ್ ನಟಿ ಸ್ನೇಹ ಕೆರಿಯರ್ ಶುರು ಮಾಡಿದ್ದು ಮಲೆಯಾಳಂ ಚಿತ್ರದ ಮೂಲಕ. ಸ್ನೇಹ ದಕ್ಷಿಣ ಭಾರತದ ಸಾಕಷ್ಟು ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ'ದಲ್ಲಿಯೂ ಸ್ನೇಹ ನಟಿಸುತ್ತಿದ್ದಾರೆ.

ಭಾಮಾ ಪ್ರಬುದ್ಧ ನಟನೆ

ನಟಿ ಭಾಮಾ ಕೂಡ ಮಲೆಯಾಳಂ ಚಿತ್ರದಿಂದ ಸಿನಿಮಾರಂಗಕ್ಕೆ ಪರಿಚಯ ಆದರು. ಕನ್ನಡದಲ್ಲಿ ಕಳೆದ ವರ್ಷ ಭಾಮಾ 'ರಾಗ' ಸಿನಿಮಾ ಮಾಡಿದ್ದು ಅವರಲ್ಲಿ ಕುರುಡಿಯ ಪಾತ್ರವನ್ನು ಅದ್ಬುತವಾಗಿ ನಿರ್ವಹಿಸಿದ್ದರು.

ಸಾಯಿ ಪಲ್ಲವಿ ಅಂದರೆ ಎಲ್ಲರಿಗೂ ಇಷ್ಟ

ಮಲೆಯಾಳಂ ಭಾಷೆಯಿಂದ ಚಿತ್ರರಂಗಕ್ಕೆ ಬರದಿದ್ದರೂ ಸಹ ಸಾಯಿ ಪಲ್ಲವಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು ಮಾಲಿವುಡ್ ನ ಸೂಪರ್ ಹಿಟ್ ಸಿನಿಮಾ 'ಪ್ರೇಮಂ' ಮೂಲಕ. ಆ ಚಿತ್ರದ ನಂತರ ಸಾಯಿ ಪಲ್ಲವಿಗೆ ಸಖತ್ ಕ್ರೇಜ್ ಶುರುವಾಯಿತು. ಸಾಯಿ ಪಲ್ಲವಿಗೆ 'ಪ್ರೇಮಂ' ಜೀವ ಕೊಟ್ಟ ಸಿನಿಮಾ.

ನ್ಯಾಷನಲ್ ಕ್ರಶ್ ಪ್ರಿಯಾ ವಾರಿಯರ್ ಗೆ ತುಂಬಿ ತುಳುಕುತ್ತಿವೆ ಅವಕಾಶಗಳು.!

ಪ್ರಿಯಾ ಪ್ರಕಾಶ್ ವಾರಿಯರ್ ಸಿನಿಮಾ ಅವಕಾಶ

ಈ ನಟಿಯರ ರೀತಿಗಿಂತ ಜಾಸ್ತಿ ಈಗ ಪ್ರಿಯಾ ಪ್ರಕಾಶ್ ವಾರಿಯರ್ ಸದ್ದು ಮಾಡಿದ್ದಾರೆ. ವಿಶೇಷ ಅಂದರೆ ಪ್ರಿಯಾ ಕೂಡ ಮಲೆಯಾಳಂ ಚಲುವೆ. ಪ್ರಿಯಾ ಪ್ರಕಾಶ್ ವಾರಿಯರ್ ಕ್ರೇಜ್ ನೋಡಿ ಅನೇಕ ನಿರ್ಮಾಪಕರು ಅವರಿಗೆ ಸಿನಿಮಾ ಅವಕಾಶಕ್ಕಾಗಿ ಸಂಪರ್ಕ ಮಾಡಿದ್ದಾರೆ.

English summary
List of malayalam movie actress who made big name in other film industry.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X