For Quick Alerts
  ALLOW NOTIFICATIONS  
  For Daily Alerts

  ಭಾರತೀಯ ಜನಪ್ರಿಯ ನಟರ ಪಟ್ಟಿಯಲ್ಲಿ ಕನ್ನಡದ ಒಬ್ಬನೇ ನಟ!

  |

  2022ರ ಜುಲೈನಲ್ಲಿ ಯಾವ ನಟರು ಹೆಚ್ಚು ಜನಪ್ರಿಯವಾಗಿದ್ದರು ಎನ್ನುವ ಪಟ್ಟಿ ಹೊರ ಬಿದ್ದಿದೆ. ಪ್ರತಿ ಬಾರಿ ಈ ಕುರಿತಾಗಿ ಓರ್ಮಾಕ್ಸ್ ಸಮೀಕ್ಷೆ ನಡೆಸುತ್ತದೆ. ಈ ವರದಿ ಪ್ರಕಾರ ಭಾರತೀಯ ಅತ್ಯಂತ ಜನಪ್ರಿಯಗೊಂಡ 10 ಸಿನಿಮಾ ನಟರ ಹೆಸರನ್ನು ಬಿಡುಗಡೆ ಮಾಡಿದೆ.

  ಆದರೆ ಈ ಪಟ್ಟಿಯಲ್ಲಿ ಸೌತ್ ನಟರೇ ಹೆಚ್ಚಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಿವುಡ್ ನಟರ ಪೈಕಿ ಕೇವಲ ಒಬ್ಬ ನಟ ಮಾತ್ರವೇ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಾಗಾಗಿ ಬಾಲಿವುಡ್ ಸ್ಟಾರ್ ನಟರು ಎಲ್ಲಿ ಹೋದರು ಎನ್ನವ ಚರ್ಚೆ ಕೂಡ ಹುಟ್ಟಿಕೊಂಡಿದೆ.

  ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

  ಭಾರತದ ಟಾಪ್ 10 ನಟರ ಪಟ್ಟಿಯಲ್ಲಿ ನಟ ವಿಜಯ್ ಅಗ್ರಸ್ಥಾನದಲ್ಲಿದ್ದಾರೆ. ಕೊನೆಯದಾಗಿ ವಿಜಯ್ ನಟನೆಯ ಸಿನಿಮಾ 'ಬೀಸ್ಟ್' ಅಷ್ಟಾಗಿ ಹಿಟ್ ಆಗದಿದ್ದರೂ ಕೂಡ ಅವರ ಬಗೆಗಿನ ಕ್ರೇಜ್ ಮಾತ್ರ ಸ್ವಲ್ಪವೂ ಕಮ್ಮಿ ಆಗಿಲ್ಲ ಎನ್ನುವುದಕ್ಕೆ ಇದುವೇ ಸಾಕ್ಷಿ.

  ಪ್ರಭಾಸ್‌ಗೆ 2ನೇ ಸ್ಥಾನ!

  ಪ್ರಭಾಸ್‌ಗೆ 2ನೇ ಸ್ಥಾನ!

  ಬಾಹುಬಲಿ ಸ್ಟಾರ್ ಪ್ರಭಾಸ್ ಅವರು ಟಾಪ್ 10 ಲಿಸ್ಟ್​ನಲ್ಲಿ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. RRRನಲ್ಲಿ ಮಿಂಚಿದ ನಟ ಜೂನಿಯರ್ ಎನ್​ಟಿಆರ್ ಮೂರನೇ ಸ್ಥಾನದಲ್ಲಿದ್ದಾರೆ. ಈ ನಟರು ಕಡಿಮೆ ಸಿನಿಮಾಗಳನ್ನು ಕೊಟ್ಟಿದ್ದರೂ ಕೂಡ ಜನಪ್ರಿಯತೆಯ ವಿಚಾರದಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಟಾಪ್ 3ಯಲ್ಲಿ ವಿಜಯ್, ಪ್ರಭಾಸ್, ಜೂನಿಯರ್ ಎನ್‌ಟಿಆರ್ ಇದ್ದಾರೆ. ನಾಲ್ಕನೇ ಸ್ಥಾನದಲ್ಲಿ ಪುಷ್ಪ ಮೂಲಕ ಸಖತ್ ಕ್ರೇಜ್ ಸೃಷ್ಟಿಸಿದ ಅಲ್ಲು ಅರ್ಜುನ್ ಇದ್ದಾರೆ.

  ಕನ್ನಡದಿಂದ ನಟ ಯಶ್!

  ಕನ್ನಡದಿಂದ ನಟ ಯಶ್!

  'ಕೆಜಿಎಫ್ 2' ಮೂಲಕ ಹವಾ ಸೃಷ್ಟಿಸಿದ ಯಶ್ 5ನೇ ಸ್ಥಾನದಲ್ಲಿದ್ದಾರೆ. ಟಾಪ್ 10 ನಟರ ಪಟ್ಟಿಯಲ್ಲಿ ಯಶ್ 5ನೇ ಸ್ಥಾನ ಪಡೆದಿದ್ದಾರೆ. ಕನ್ನಡದ ನಟರ ಪೈಕಿ ನಟ ಯಶ್ ಒಬ್ಬರೇ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ನಟ ರಾಮ್ ಚರಣ್ 6ನೇ ಸ್ಥಾನದಲ್ಲಿದ್ದಾರೆ. ರಾಮ್ ಚರಣ್ ಕೂಡ RRR ಸಿನಿಮಾದ ಮೂಲಕ ಜನಮನ ಗೆದ್ದಿದ್ದಾರೆ.

  ನಟ ಅಜಿತ್‌ಗೆ 10ನೇ ಸ್ಥಾನ!

  ನಟ ಅಜಿತ್‌ಗೆ 10ನೇ ಸ್ಥಾನ!

  ಟಾಲಿವುಡ್ ನಟ ಮಹೇಶ್ ಬಾಬು ಅವರು 8ನೇ ಸ್ಥಾನದಲ್ಲಿದ್ದಾರೆ. ಕೆಲವೇ ಕೆಲವು ಸಿನಿಮಾಗಳನ್ನು ಮಾಡಿದರೂ ನಟನ ಪಾಪ್ಯುಲಾರಿಟಿಗೆ ಕಮ್ಮಿ ಆಗಿಲ್ಲ ಎನ್ನುವು ಮತ್ತೆ ಸಾಬೀತಾಗಿದೆ. ಇನ್ನುಳಿದಂತೆ ತಮಿಳು ನಟ ಸೂರ್ಯ ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಸೂರರೈ ಪೊಟ್ರು, ಜೈ ಭೀಮ್​ನಂತಹ ಸಿನಿಮಾಗಳನ್ನು ಮಾಡಿದ ಸೂರ್ಯ ರಾಲೆಕ್ಸ್ ಆಗಿಯೂ ವಿಕ್ರಮ್ ಸಿನಿಮಾದಲ್ಲಿ ಮಿಂಚಿದ್ದಾರೆ. ತಮಿಳು ಅಜಿತ್ ಕುಮಾರ್ ಈ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.

  ಅಕ್ಷಯ್ ಕುಮಾರ್‌ಗೆ ಮಾತ್ರ ಸ್ಥಾನ!

  ಅಕ್ಷಯ್ ಕುಮಾರ್‌ಗೆ ಮಾತ್ರ ಸ್ಥಾನ!

  ಈ ಬಾರಿ ಟಾಪ್ 10 ನಟರ ಲಿಸ್ಟ್​ನಲ್ಲಿ ಸೌತ್ ನಟರೆ ಮಿಂಚಿದ್ದಾರೆ. ಸೌತ್ ಇಂಡಿಯಾದ ಬಹುತೇಕ ಸ್ಟಾರ್ ನಟರ ಹೆಸರು ಈ ಲಿಸ್ಟ್‌ನಲ್ಲಿದೆ. ಆದರೆ ಬಾಲಿವುಡ್ ನಟರ ಸುದ್ದಿಯೇ ಇಲ್ಲ. ಅಕ್ಷಯ್ ಕುಮಾರ್ ಈ ಲಿಸ್ಟ್​ ಸೇರಿಕೊಂಡ ಬಾಲಿವುಡ್​ನ ಏಕೈಕ ನಟ. ಅಕ್ಷಯ್ ಕುಮಾರ್‌ಗೆ 7ನೇ ಸ್ಥಾನ ಸಿಕ್ಕಿದೆ.

  Recommended Video

  Vinay Rajkumar | ನಾನು ಹೆಚ್ಚು ನೋಡಿದ್ದು ನಾನ್ನ ತಾತನ ಸಿನಿಮಾ | Puneeth Rajkumar | Shivanna | Filmibeat
  English summary
  List of Most Popular Indian heroes in 2022, Yash In 5th Place, Only one From Bollywood,
  Wednesday, August 24, 2022, 18:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X