For Quick Alerts
  ALLOW NOTIFICATIONS  
  For Daily Alerts

  2022ರ ಅತ್ಯಂತ ಜನಪ್ರಿಯ ಕನ್ನಡದ ನಟಿ ಯಾರು? ರಮ್ಯಾ, ರಶ್ಮಿಕಾ, ರಚಿತಾಗೆ ಯಾವ ಸ್ಥಾನ?

  |

  ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಇದ್ದೇ ಇರುತ್ತೆ. ಅದರಲ್ಲೂ ಬಣ್ಣದ ಲೋಕದಲ್ಲಿ ಕೊಂಚ ಹೆಚ್ಚಾಗಿಯೇ ಇರುತ್ತದೆ. ಸಿನಿಮಾ ತಾರೆಯರಲ್ಲಿ ಮುಂಚೂಣಿಯಲ್ಲಿ ಇರುವವರ ಹೆಸರುಗಳು ಹೆಚ್ಚು ವೇಗವಾಗಿ ಬದಲಾಗುತ್ತಲೇ ಇರುತ್ತೆ. ಇಂದು ಟಾಪ್‌ನಲ್ಲಿ ಇರುವವರು ನಾಳೆ ಇರುವುದಿಲ್ಲ.

  ನಾಯಕ ನಟಿಯರ ವಿಚಾರಕ್ಕೆ ಬಂದರೆ ಅವರ ನಡುವೆಯೂ ಸ್ಪರ್ಧೆ ಇರುತ್ತದೆ. ಸದ್ಯ 2022ರ ಜೂನ್‌ನಲ್ಲಿ ಯಾವ ಕನ್ನಡದ ನಟಿ ಹೆಚ್ಚು ಜನಪ್ರಿಯವಾಗಿದ್ದರು ಎನ್ನುವ ಪಟ್ಟಿ ಹೊರ ಬಿದ್ದಿದೆ. ಪ್ರತಿ ತಿಂಗಳು ಈ ಕುರಿತಾಗಿ ಓರ್ಮಾಕ್ಸ್ ಸಮೀಕ್ಷೆ ನಡೆಸುತ್ತದೆ.

  ಕೆಂಪು ಉಡುಪು ಧರಿಸಿ ಬಂದ ರಶ್ಮಿಕಾ ಮಂದಣ್ಣಗೆ ಮುಜುಗರ: ಅಂಥದ್ದೇನಾಯ್ತು?ಕೆಂಪು ಉಡುಪು ಧರಿಸಿ ಬಂದ ರಶ್ಮಿಕಾ ಮಂದಣ್ಣಗೆ ಮುಜುಗರ: ಅಂಥದ್ದೇನಾಯ್ತು?

  ಈ ವರದಿ ಪ್ರಕಾರ, ಕನ್ನಡದ 5 ನಟಿಯರ ಹೆಸರನ್ನು ಲಿಸ್ಟ್ ಮಾಡಲಾಗಿದೆ. ಇನ್ನು ಇತ್ತೀಚೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯ ಜನಪ್ರಿಯ ನಟಿಯರ ಹೆಸರನ್ನು ಕೂಡ ರಿವೀಲ್ ಮಾಡಲಾಗಿತ್ತು. ಈಗ ಕನ್ನಡದ ನಟಿಯರ ಹೆಸರು ಹೊರ ಬಂದಿದ್ದು, ಯಾರಿಗೆ ಯಾವ ಸ್ಥಾನ ಎನ್ನುವುದನ್ನು ಮುಂದೆ ಓದಿ.

  ಗಾಸಿಪ್ ನಿಜವಾಯ್ತು, ರಶ್ಮಿಕಾ ಮಂದಣ್ಣ ಟೈಗರ್ ಶ್ರಾಫ್ ಜೋಡಿ ಒಂದಾಯ್ತು!ಗಾಸಿಪ್ ನಿಜವಾಯ್ತು, ರಶ್ಮಿಕಾ ಮಂದಣ್ಣ ಟೈಗರ್ ಶ್ರಾಫ್ ಜೋಡಿ ಒಂದಾಯ್ತು!

  ಅಗ್ರಸ್ಥಾನದಲ್ಲಿ ನಟಿ ರಶ್ಮಿಕಾ!

  ಅಗ್ರಸ್ಥಾನದಲ್ಲಿ ನಟಿ ರಶ್ಮಿಕಾ!

  ಈಗ ಎಲ್ಲೆಲ್ಲೂ ನಟಿ ರಶ್ಮಿಕಾ ಮಂದಣ್ಣ ಹವಾ. ಹಾಗಾಗಿ ಈ ಬಾರಿ ಹೆಚ್ಚು ಜನಪ್ರಿಯತೆ ಪಡೆದ ನಟಿಯರ ಸಾಲಿನಲ್ಲಿ ಮೊದಲಿದ್ದಾರೆ. ಕನ್ನಡದ ಜನಪ್ರಿಯ ನಟಿಯರಲ್ಲಿ ರಶ್ಮಿಕಾಗೆ ಅಗ್ರಸ್ಥಾನ ಸಿಕ್ಕಿದೆ. ಕನ್ನಡದಲ್ಲಿ ರಶ್ಮಿಕಾ ಸಿನಿಮಾ ಮಾಡದೇ ಇದ್ದರೂ, ರಶ್ಮಿಕಾ ಮಂದಣ್ಣ ಜನಪ್ರಿಯತೆಯನ್ನು ಪಡೆದಿದ್ದಾರೆ. ಅದಲ್ಲದೆ ತಮಿಳು ಹಾಗೂ ತೆಲುಗಿನಲ್ಲೂ ರಶ್ಮಿಕಾ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ 3 ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ರಶ್ಮಿಕಾ ಹೆಸರಿದೆ.

  2ನೇ ಸ್ಥಾನದಲ್ಲಿ ರಚಿತಾ ರಾಮ್‌!

  2ನೇ ಸ್ಥಾನದಲ್ಲಿ ರಚಿತಾ ರಾಮ್‌!

  ಸದ್ಯ ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಾ ಸುದ್ದಿಯಲ್ಲಿ ಇದ್ದಾರೆ ನಟಿ ರಚಿತಾ ರಾಮ್‌. ಈಕೆ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ. ಈಗ ಹೆಚ್ಚು ಜನಪ್ರಿಯ ಪಡೆದ ಕನ್ನಡ ನಟಿಯರಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದರು. ಕಿರುತೆರೆಯಿಂದ ಬಣ್ಣದ ಬದುಕಿನ ಜರ್ನಿ ಆರಂಭಿಸಿದ ನಟಿ ರಚಿತಾ ರಾಮ್‌ 'ಬುಲ್ ಬುಲ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿ ಆಗಿ ಬಣ್ಣ ಹಚ್ಚಿದ್ದಾರೆ. ಕನ್ನಡದ ಬಹುತೇಕ ಎಲ್ಲಾ ಸ್ಟಾರ್‌ ನಟರ ಜೊತೆಗೆ ರಚಿತಾ ರಾಮ್‌ ತೆರೆ ಹಂಚಿಕೊಂಡಿದ್ದಾರೆ. ಕನ್ನಡ ಸ್ಟಾರ್ ನಟಿಯಾಗಿ ರಚಿತಾ ರಾಮ್ ಮಿಂಚುತ್ತಿದ್ದಾರೆ.

  ರಾಧಿಕಾ ಪಂಡಿತ್‌ಗೆ 3ನೇ ಸ್ಥಾನ!

  ರಾಧಿಕಾ ಪಂಡಿತ್‌ಗೆ 3ನೇ ಸ್ಥಾನ!

  ನಟಿ ರಾಧಿಕಾ ಪಂಡಿತ್‌ ಈ ಜೂನ್‌ನಲ್ಲಿ ಜನಪ್ರಿಯತೆ ಪಡೆದ ನಟಿಯರ ಸಾಲಿನಲ್ಲಿ 3ನೇ ಸ್ಥಾನದಲ್ಲಿ ಇದ್ದಾರೆ. ಅಷ್ಟಕ್ಕೂ ರಾಧಿಕಾ ಪಂಡಿತ್‌ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲ. 'ಆದಿಲಕ್ಷ್ಮಿ ಪುರಾಣ' ಸಿನಿಮಾದ ಬಳಿಕ ರಾಧಿಕಾ ಯಾವುದೇ ಸಿನಿಮಾದಲ್ಲೂ ಅಭಿನಯಿಸಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಸದ್ಯ ಮಕ್ಕಳ ಜೊತೆಗೆ ಕಾಲ ಕಳೆಯುತ್ತಿರುವ ರಾಧಿಕಾ ಆದಷ್ಟು ಬೇಗ ಮತ್ತೆ ಸಿನಿಮಾ ಮಾಡಲಿ ಎನ್ನುವುದು ಅಭಿಮಾನಿಗಳ ಆಶಯ.

  ನಟಿ ರಮ್ಯಾಗೆ 4ನೇ ಸ್ಥಾನ!

  ನಟಿ ರಮ್ಯಾಗೆ 4ನೇ ಸ್ಥಾನ!

  ವಿಶೇಷ ಅಂದರೆ ನಟಿ ರಮ್ಯಾ ಕೂಡ ಈ ಸಾಲಿನಲ್ಲಿ ಇದ್ದಾರೆ. ರಮ್ಯಾ ಸಿನಿಮಾಗಳನ್ನು ಮಾಡುತ್ತಿಲ್ಲ ಆದರೆ ಇತ್ತೀಚೆಗೆ ಹೆಚ್ಚಾಗಿ ಸಿನಿಮಾಗೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ. ಈ ಪಟ್ಟಿಯಲ್ಲಿ ನಟಿ ರಮ್ಯಾಗೆ 4ನೇ ಸಿಕ್ಕಿದೆ. ಇನ್ನುಳಿದಂತೆ 5ನೇ ಸ್ಥಾನದಲ್ಲಿ ನಟಿ ಆಶಿಕಾ ರಂಗನಾಥ್ ಇದ್ದಾರೆ. ಆಶಿಕಾ ರಂಗನಾಥ್ ಕೂಡ ಕ್ನನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಜೊತೆಗೆ ತಮಿಳಿಗೂ ಎಂಟ್ರಿ ಕೊಡ್ತಿದ್ದಾರೆ.

  Recommended Video

  ಬಿಗ್ ಬಾಸ್ ಒಂದು ಸೀಸನ್ ಗೆ ಎಷ್ಟು ಹಣ ತೆಗೆದುಕೊಳ್ತಾರೆ ಕಿಚ್ಚ ಸುದೀಪ್ ? | Bigg Boss season 9 | KicchaSudeep
  English summary
  List Of Most Popular Kannada Actress In June 2022, Rashmika Mandanna Is In Every List, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X