2023ರಲ್ಲಿ ಟ್ವಿಟರ್‌ನಲ್ಲಿ ಅತಿಹೆಚ್ಚು ಚರ್ಚಿಸಲ್ಪಟ್ಟ ನಟರಿವರು; ಪಟ್ಟಿಯಲ್ಲಿದ್ದಾರೆ ಸೌತ್‌ನ ನಾಲ್ವರು ನಟರು

ಟ್ವಿಟರ್.. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕ್ರೇಜ್ ಹಾಗೂ ಬಳಕೆದಾರರನ್ನು ಪಡೆದುಕೊಳ್ಳುತ್ತಿರುವ ಸಾಮಾಜಿಕ ಜಾಲತಾಣದ ಪ್ರಮುಖ ವೇದಿಕೆ. ಇತ್ತೀಚಿನ ದಿನಗಳಲ್ಲಿ ಟ್ವಿಟರ್ ಮಾಲೀಕತ್ವದಲ್ಲಿ ಭಾರೀ ಬದಲಾವಣೆಗಳಾಗಿ, ಟ್ವಿಟರ್‌ನ ನೀತಿ, ನಿಯಮಗಳು ದೊಡ್ಡ ಮಟ್ಟದಲ್ಲಿ ಬದಲಾವಣೆಯಾದರೂ ಈ ಅಪ್ಲಿಕೇಶನ್‌ನ ಕ್ರೇಜ್ ಮಾತ್ರ ಸ್ವಲ್ಪವೂ ತಗ್ಗಿಲ್ಲ. ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ.

ಇನ್ನು ಇತರೆ ಸಾಮಾಜಿಕ ಜಾಲತಾಣದ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ ಟ್ವಿಟರ್ ವೇಗವಾಗಿ ಅತಿಹೆಚ್ಚು ನಿಖರವಾಗಿ ಸುದ್ದಿಗಳನ್ನು ತಲುಪಿಸುವ ಕಾರಣದಿಂದ ಈ ಅಪ್ಲಿಕೇಶನ್ ಕಂಡರೆ ನೆಟ್ಟಿಗರಿಗೆ ಬಲು ಇಷ್ಟ. ಸಿನಿಮಾ ಕ್ಷೇತ್ರಕ್ಕೆ ಬಂದರೆ ಅಲ್ಲಿಯೂ ಈ ಟ್ವಿಟರ್ ದೊಡ್ಡ ಮಟ್ಟದಲ್ಲಿಯೇ ತನ್ನ ಪಾಲಿನ ಕೊಡುಗೆಯನ್ನು ನೀಡುತ್ತಿದೆ. ಹೌದು, ಟ್ವಿಟರ್ ಸಿನಿಮಾಗಳ ಪ್ರಚಾರದ ಪ್ರಮುಖ ವೇದಿಕೆಯಾಗಿದೆ.

List of most talked persons on twitter in 2023; 4 cinema stars in the list

ಸಿನಿಮಾವೊಂದು ಸೆಟ್ಟೇರಿದರೆ ಅಥವಾ ಸಿನಿಮಾಗಳ ಕುರಿತು ಯಾವುದೇ ಸುದ್ದಿಗಳು ಹೊರಬಿದ್ದರೆ ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತವೆ. ಈ ರೀತಿ ಟ್ರೆಂಡ್ ಆದರೆ ಸಿನಿಮಾ ಕುರಿತು ಜನರಿಗೆ ಹೈಪ್ ಇದೆ ಎಂಬುದನ್ನು ತೋರಿಸುತ್ತದೆ. ಇನ್ನು ಸ್ಟಾರ್ ನಟರ ವಿಷಯಕ್ಕೆ ಬಂದರೆ ಟ್ವಿಟರ್‌ನಲ್ಲಿ ಅವರ ಬಗ್ಗೆ ಪ್ರತಿದಿನವೂ ಪೋಸ್ಟ್‌ಗಳು ಬರುತ್ತಲೇ ಇರುತ್ತವೆ.

ತಮ್ಮ ನೆಚ್ಚಿನ ಸ್ಟಾರ್ ನಟರ ಚಿತ್ರಗಳ ಅಪ್‌ಡೇಟ್ ಬಂದಾಗ ಅದರದ್ದೇ ಆದ ವಿಶೇಷ ಹ್ಯಾಷ್‌ಟ್ಯಾಗ್ ಮಾಡಿ ಅವುಗಳನ್ನು ಟ್ರೆಂಡ್ ಮಾಡುವ ಅಭಿಮಾನಿಗಳು ಚಿತ್ರದ ಮೇಲೆ ತಮಗಿರುವ ಕ್ರೇಜ್ ಅನ್ನು ತೋರಿಸುತ್ತಾರೆ. ಕೇವಲ ಸಿನಿಮಾಗಳ ಬಗ್ಗೆ ಮಾತ್ರವಲ್ಲದೇ ಸ್ಟಾರ್‌ಗಳ ಏನೇ ಅಪ್‌ಡೇಟ್ ಅಥವಾ ಸುದ್ದಿಗಳಿದ್ದರೂ ಅದು ಟ್ವಿಟರ್‌ನಲ್ಲಿ ಪೋಸ್ಟ್ ಆಗಿರುತ್ತವೆ.

ಈ ರೀತಿಯಾಗಿ ಟ್ವಿಟರ್ ಸಿನಿಮಾ ಮಂದಿಗೆ ದೊಡ್ಡ ವೇದಿಕೆಯಾಗಿದ್ದು, ರಾಜ್ಯವನ್ನೂ ದಾಟಿ ರೀಚ್ ಆಗಲು ಸಹಕಾರಿಯಾಗಿದೆ. ಇನ್ನು ಈ ಟ್ವಿಟರ್‌ನಲ್ಲಿ ಯಾವ ನಟರ ಬಗ್ಗೆ ಕಳೆದ ಇಂತಿಷ್ಟು ದಿನಗಳಲ್ಲಿ ಹೆಚ್ಚು ಚರ್ಚೆಗಳು ನಡೆದಿವೆ ಎಂಬ ಮಾಹಿತಿಯನ್ನು ಅರಿಯಬಹುದಾಗಿದ್ದು, ಈ ವರ್ಷದಲ್ಲಿ ಇಲ್ಲಿಯವರೆಗೂ ಈ ಟ್ವಿಟರ್ ವೇದಿಕೆಯಲ್ಲಿ ಟ್ವೀಟಿಗರು ಯಾರ ಬಗ್ಗೆ ಅತಿಹೆಚ್ಚು ಚರ್ಚಿಸಿದ್ದಾರೆ ಎಂಬ ಪಟ್ಟಿ ಹೊರಬಿದ್ದಿದೆ.

ಇನ್ನು ಈ ವರ್ಷ ಟ್ವಿಟರ್ ವೇದಿಕೆಯಲ್ಲಿ ಅತಿಹೆಚ್ಚು ಚರ್ಚಿಸಲ್ಪಟ್ಟ ಭಾರತೀಯರ ಪಟ್ಟಿ ಬಿಡುಗಡೆಗೊಂಡಿದ್ದು, ಈ ಪಟ್ಟಿಯಲ್ಲಿ ಸಿನಿಮಾದ ನಾಲ್ವರು ಮಾತ್ರ ಸ್ಥಾನ ಗಿಟ್ಟಿಸಿಕೊಂಡಿದ್ದು, ದಕ್ಷಿಣ ಭಾರತದ ಮೂವರು ಮಾತ್ರ ಈ ಪಟ್ಟಿಯಲ್ಲಿದ್ದಾರೆ‌. ಹಾಗಿದ್ದರೆ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಹತ್ತು ಜನರ ಪಟ್ಟಿ ಈ ಕೆಳಕಂಡಂತಿದೆ..

    1. ನರೇಂದ್ರ ಮೋದಿ
    2. ಯೋಗಿ ಆದಿತ್ಯನಾಥ್
    3. ವಿರಾಟ್ ಕೊಹ್ಲಿ
    4. ಶಾರುಖ್ ಖಾನ್
    5. ರಾಹುಲ್ ಗಾಂಧಿ
    6. ರೋಹಿತ್ ಶರ್ಮಾ
    7. ವಿಜಯ್
    8. ಪವನ್ ಕಲ್ಯಾಣ್
    9. ಎಂ ಎಸ್ ಧೋನಿ
    10. ಮಹೇಶ್ ಬಾಬು

ಈ ಮೂಲಕ ಶಾರುಖ್ ಖಾನ್, ವಿಜಯ್, ಪವನ್ ಕಲ್ಯಾಣ್ ಹಾಗೂ ಮಹೇಶ್ ಬಾಬು ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ನಟರೆಂದರೆ, ವಿಜಯ್, ಪವನ್ ಕಲ್ಯಾಣ್ ಹಾಗೂ ಮಹೇಶ್ ಬಾಬು ಪಟ್ಟಿಯಲ್ಲಿರುವ ದಕ್ಷಿಣ ಭಾರತೀಯರಾಗಿದ್ದಾರೆ.

More from Filmibeat

English summary
List of most talked persons on twitter in 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X