ಅತ್ತ '2.O' - 'ಜೀರೋ' ಪೈಪೋಟಿ : ಇತ್ತ ಉಪ್ಪಿ - ಡಾಲಿ ಲವ್ವಿ ಡವ್ವಿ
ಪ್ರತಿ ದಿನ ಎಷ್ಟೋ ಸಿನಿಮಾದ ಹಾಡುಗಳು, ಟ್ರೇಲರ್ ಗಳು, ಟೀಸರ್ ಗಳು ಯೂ ಟ್ಯೂಬ್ ಅಂಗಳಕ್ಕೆ ಬರುತ್ತದೆ. ಅದೇ ರೀತಿ ಸದ್ಯ ಕೆಲವು ಸಿನಿಮಾಗಳ ವಿಡಿಯೋಗಳು ಯೂ ಟ್ಯೂಬ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ.
ಉಪೇಂದ್ರ ನಟನೆಯ 'ಹೋಮ್ ಮಿನಿಸ್ಟರ್' ಸಿನಿಮಾ ಒಂದು ಹಾಡು ಬಿಡುಗಡೆಯಾಗಿದೆ. 'ಭೈರವ ಗೀತಾ' ಸಿನಿಮಾ ಟ್ರೇಲರ್ ಟ್ರೆಂಡಿಂಗ್ ನಲ್ಲಿದೆ. ಟಾಲಿವುಡ್ ನ ಬಿಗ್ ಸಿನಿಮಾ 'ಆರ್ ಆರ್ ಆರ್' ಲಾಂಚ್ ಟೀಸರ್ ಹೊರಬಂದಿದೆ.
ಇವುಗಳ ಜೊತೆಗೆ ರಜನಿಯ '2.O' ಹಾಗೂ ಶಾರೂಖ್ ಖಾನ್ ಅವರ 'ಜೀರೋ' ಟ್ರೇಲರ್ ಗಳ ನಡುವೆ ಪೈಪೋಟಿ ನಡೆಯುತ್ತಿದೆ. ಅಂದಹಾಗೆ, ಸದ್ಯ ಯೂ ಟ್ಯೂಬ್ ನಲ್ಲಿ ಗಮನ ಸೆಳೆಯುತ್ತಿರುವ ವಿಡಿಯೋ ಜಲಕ್ ಮುಂದಿದೆ ನೋಡಿ..
'ಹೋಮ್ ಮಿನಿಸ್ಟರ್' ಹಾಡು
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಹೋಮ್ ಮಿನಿಸ್ಟರ್' ಸಿನಿಮಾ ಹಾಡು ಬಿಡುಗಡೆಯಾಗಿದೆ. 'ಸುಮ್ಮನೆ ಬೀಸೊ..' ಎಂಬ ಈ ಹಾಡನ್ನು ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಚಿತ್ರದಲ್ಲಿ ವೇದಿಕಾ ನಾಯಕಿ ಆಗಿದ್ದಾರೆ. ಉಳಿದಂತೆ, ಬಾಲ ನಟಿ ಆದ್ಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಭೈರವ ಗೀತಾ' ಟ್ರೇಲರ್ ಟ್ರೆಂಡಿಂಗ್
ಕಳೆದ ಎರಡು ದಿನಗಳ ಹಿಂದೆ ರಿಲೀಸ್ ಆಗಿದ್ದ 'ಭೈರವ ಗೀತಾ' ಟ್ರೇಲರ್ ಸದ್ಯ ಯೂ ಟ್ಯೂಬ್ ನಲ್ಲಿ 17ನೇ ಟ್ರೆಂಡಿಂಗ್ ವಿಡಿಯೋ ಆಗಿದೆ. ಧನಂಜಯ್ ಹಾಗೂ ಇರಾ ಮೋರ್ ಚಿತ್ರದಲ್ಲಿ ನಟಿಸಿದ್ದಾರೆ. ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ಬರುತ್ತಿದೆ. ಚಿತ್ರ ಬಿಡುಗಡೆಯ ದಿನಾಂಕ ನವೆಂಬರ್ 22ಕ್ಕೆ ಫಿಕ್ಸ್ ಆಗಿದೆ.
'ಆರ್ ಆರ್ ಆರ್' ಲಾಂಚ್ ಟೀಸರ್
ಟಾಲಿವುಡ್ ಚಿತ್ರರಂಗ ಈ ವರ್ಷದ ಮಹಾ ಸಿನಿಮಾ 'ಆರ್ ಆರ್ ಆರ್' ಲಾಂಚ್ ಟೀಸರ್ ಬಿಡುಗಡೆಯಾಗಿದೆ. ಸಿನಿಮಾ ಶುರುವಾಗುವ ಮುಂಚೆಯೇ ಈ ಸಣ್ಣ ಟೀಸರ್ ಟ್ರೆಂಡಿಂಗ್ ನಲ್ಲಿ ಇದೆ. ರಾಜಮೌಳಿ ನಿರ್ದೇಶನದ ಮುಂದಿನ ಸಿನಿಮಾ ಇದಾಗಿದ್ದು, ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ನಂಬರ್ ಒನ್ ಸ್ಥಾನದಲ್ಲಿ '2.O'
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ '2.O' ಸಿನಿಮಾ ಟ್ರೇಲರ್ ಧೂಳೆಬಿಸುತ್ತಿದೆ. ಈ ಚಿತ್ರದ ಟ್ರೇಲರ್ ಕಳೆದ ಶನಿವಾರ ಬಿಡುಗಡೆಯಾಗಿದ್ದು, ಸದ್ಯ ನಂಬರ್ ಒನ್ ಟ್ರೆಂಡಿಂಗ್ ವಿಡಿಯೋವಾಗಿದೆ. ಶಂಕರ್ ಅವರ ಮತ್ತೊಂದು ಮಹತ್ವಾಕಾಂಕ್ಷೆಯ ಸಿನಿಮಾ ಇದಾಗಿದೆ. ಈ ಚಿತ್ರ ನವೆಂಬರ್ 29ಕ್ಕೆ ಬಿಡುಗಡೆಯಾಗುತ್ತಿದೆ.
ಎರಡನೇ ಸ್ಥಾನದಲ್ಲಿ 'ಜೀರೋ'
ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಹುಟ್ಟುಹಬ್ಬದ ವಿಶೇಷವಾಗಿ ಬಂದ 'ಜೀರೋ' ಚಿತ್ರದ ಟ್ರೇಲರ್ ಈ ಯೂ ಟ್ಯೂಬ್ ನಲ್ಲಿ ಎರಡನೇ ಟ್ರೆಂಡಿಂಗ್ ನಲ್ಲಿದೆ. ಮುಖ್ಯವಾಗಿ ಸಿನಿಮಾದಲ್ಲಿ ಶಾರೂಖ್ ಖಾನ್ ಹಾಗೂ ಅನುಷ್ಕಾ ಶರ್ಮಾ ಅವರ ಪಾತ್ರಗಳು ಗಮನ ಸೆಳೆಯುತ್ತದೆ. ಕುಬ್ಜನ ಪಾತ್ರದಲ್ಲಿ ಶಾರೂಖ್ ನಟನೆ ಅದ್ಬುತ, ಅಂಗವಿಕಲ ವಿಜ್ಞಾನಿ ಪಾತ್ರದಲ್ಲಿ ಅನುಷ್ಕಾ ನಟನೆ ಅತ್ಯದ್ಬುತ.


Click it and Unblock the Notifications











