2023ರ ಮೇವರೆಗೆ 100 ಕೋಟಿ ಗಳಿಕೆ ಮಾಡಿದ ಭಾರತದ 14 ಚಿತ್ರಗಳಿವು; ಕನ್ನಡದಿಂದ ಯಾವ ಚಿತ್ರ?

ಕಳೆದ ವರ್ಷ ಭಾರತದ ಬಹುತೇಕ ಎಲ್ಲಾ ಚಿತ್ರರಂಗದ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದವು. ಅದರಲ್ಲಿಯೂ ಬಾಲಿವುಡ್‌ಗಿಂತ ಸೌತ್ ಇಂಡಿಯನ್ ಚಿತ್ರರಂಗಗಳು ಕಳೆದ ವರ್ಷ ಅಬ್ಬರಿಸಿದ್ದವು. ಕಳೆದ ವರ್ಷ ಮೂವತ್ತಕ್ಕೂ ಹೆಚ್ಚು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಕ್ಲಬ್ ಸೇರಿದ್ದವು.

ಈ ವರ್ಷವೂ ಸಹ ನೂರು ಕೋಟಿ ಗಳಿಸಿ ಚಿತ್ರಗಳು ಅಬ್ಬರಿಸಲು ಶುರು ಮಾಡಿದ್ದು, ಮೇ ತಿಂಗಳಾಂತ್ಯಕ್ಕೆ 14 ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ. ಹೌದು, ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡಿದ್ದ ವಿಜಯ್ ನಟನೆಯ ವಾರಿಸು ಚಿತ್ರ ಈ ವರ್ಷ ಮೊದಲು ನೂರು ಕೋಟಿ ಕ್ಲಬ್ ಸೇರಿದ ಚಿತ್ರ ಎನಿಸಿಕೊಂಡರೆ, ಮೇ ತಿಂಗಳ ಅಂತ್ಯಕ್ಕೆ ತೆಲುಗಿನ ವಿರೂಪಾಕ್ಷ ನೂರು ಕೋಟಿ ಗಳಿಸಿದ ಕೊನೆಯ ಚಿತ್ರ ಎನಿಸಿಕೊಂಡಿದೆ.

List of movies have joined 100 crores in the year 2023 till May

ಹಾಗಿದ್ದರೆ ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಭಾರತದ 14 ಚಿತ್ರಗಳು ಯಾವುವು ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ಈ ವರ್ಷ ಇಲ್ಲಿಯವರೆಗೂ ಸಾವಿರ ಕೋಟಿ ಗಳಿಸಿದ ಏಕೈಕ ಚಿತ್ರ ಎನಿಸಿಕೊಂಡಿರುವ ಬಾಲಿವುಡ್‌ನ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಚಿತ್ರ ನೂರು ಕೋಟಿ ಕ್ಲಬ್ ಸೇರಿದ ಚಿತ್ರಗಳಲ್ಲಿ ಒಂದಾಗಿದೆ.

2. ಕಳೆದ ವರ್ಷ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದ್ದ ತಮಿಳಿನ ಪೊನ್ನಿಯಿನ್ ಸೆಲ್ವನ್ ಚಿತ್ರದ ಮುಂದುವರಿದ ಭಾಗ ಪೊನ್ನಿಯಿನ್ ಸೆಲ್ವನ್ 2 ಚಿತ್ರ ಸಹ ನೂರು ಕೋಟಿ ಕ್ಲಬ್ ಸೇರಿದೆ. ಚಿತ್ರ ಒಟ್ಟಾರೆ 340 ಕೋಟಿ ಕ್ಲಬ್ ಸೇರಿದೆ.

3. ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ವಾರಿಸು ಚಿತ್ರ ಈ ವರ್ಷ ನೂರು ಕೋಟಿ ಕ್ಲಬ್ ಸೇರಿದ ಚಿತ್ರವಾಗಿದೆ. ಚಿತ್ರ ವಿಶ್ವದಾದ್ಯಂತ ಒಟ್ಟು 300 ಕೋಟಿ ಗಳಿಸಿದೆ.

4. ಇನ್ನೂ ಸಹ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಸೆನ್ಸೇಷನಲ್ ಚಿತ್ರ ದ ಕೇರಳ ಸ್ಟೋರಿ ಸಹ ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಗಳಿಸಿದೆ. ಈ ಚಿತ್ರ ಇಲ್ಲಿಯವರೆಗೂ ಒಟ್ಟು 280 ಕೋಟಿ ಗಳಿಸಿದೆ.

5. ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಸಹ ನೂರು ಕೋಟಿಗಿಂತ ಅಧಿಕ ಗಳಿಸಿದೆ. ವಿಶ್ವದಾದ್ಯಂತರ ಒಟ್ಟು 223 ಕೋಟಿ ರೂಪಾಯಿ ಕಲೆಕ್ಷನ್ ಅನ್ನು ಈ ಚಿತ್ರ ಮಾಡಿದೆ.

6. ತೂ ಜೂತಿ ಮೈನ್ ಮಕ್ಕರ್ ಚಿತ್ರ ಸಹ ನೂರು ಕೋಟಿ ಗಳಿಸಿದೆ. ರಣ್‌ಬೀರ್ ಕಪೂರ್ ಹಾಗೂ ಶ್ರಾದ್ಧಾ ಕಪೂರ್ ನಟನೆಯ ಈ ಚಿತ್ರ ಒಟ್ಟಾರೆ 215 ಕೋಟಿ ಗಳಿಸಿದೆ.

7. ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡಿದ್ದ ಮತ್ತೊಂದು ಚಿತ್ರ ತುನಿವು ಚಿತ್ರ ಸಹ ನೂರು ಕೋಟಿ ಕ್ಲಬ್ ಸೇರಿದೆ. ಅಜಿತ್ ನಟನೆಯ ಈ ಚಿತ್ರ ಒಟ್ಟಾರೆ ವಿಶ್ವದಾದ್ಯಂತ 201 ಕೋಟಿ ಗಳಿಸಿದೆ.

8. ತಮಿಳಿನ ವೀರಂ ಚಿತ್ರದ ರಿಮೇಕ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರ ಸಹ ನೂರು ಕೋಟಿಗಿಂತ ಹೆಚ್ಚು ಗಳಿಸಿದೆ.

9. ಮಲಯಾಳಂ ಚಿತ್ರರಂಗದ ನೂತನ ಇಂಡಸ್ಟ್ರಿ ಹಿಟ್ 2018 ಸಹ ನೂರು ಕೋಟಿ ಕ್ಲಬ್ ಸೇರಿದೆ. ಇನ್ನೂ ಪ್ರದರ್ಶನಗೊಳ್ಳುತ್ತಿರುವ ಈ ಚಿತ್ರ ವಿಶ್ವದಾದ್ಯಂತ 168 ಕೋಟಿ ಗಳಿಸಿದೆ.

10. ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಗೊಂಡಿದ್ದ ಮತ್ತೊಂದು ತೆಲುಗು ಚಿತ್ರ ವೀರಸಿಂಹ ರೆಡ್ಡಿ ಸಹ ಈ ಬಾರಿ ನೂರು ಕೋಟಿ ಕ್ಲಬ್ ಸೇರಿದೆ.

11. ನಾನಿ ನಟನೆಯ ತೆಲುಗು ಚಿತ್ರ ದಸರಾ ಸಹ ನೂರು ಕೋಟಿ ಕ್ಲಬ್ ಸೇರಿದೆ. ಒಟ್ಟು 118 ಕೋಟಿಯನ್ನು ಈ ಚಿತ್ರ ಗಳಿಸಿದೆ.

12. ಧನುಷ್ ನಟನೆಯ ತಮಿಳು ಚಿತ್ರ ವಾತಿ ಸಹ ನೂರು ಕೋಟಿ ಗಳಿಸಿದೆ. ತೆಲುಗಿನಲ್ಲಿ ಸರ್ ಎಂಬ ಶೀರ್ಷಿಕೆಯಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡ ಈ ಚಿತ್ರ ತೆಲುಗು ಹಾಗೂ ತಮಿಳು ಎರಡೂ ಅವತರಣಿಕೆ ಸೇರಿ ಒಟ್ಟು 116 ಕೋಟಿ ಕಲೆಕ್ಷನ್ ಮಾಡಿದೆ.

13. ತಮಿಳಿನ ಸೂಪರ್ ಹಿಟ್ ಚಿತ್ರ ಖೈದಿ ರಿಮೇಕ್ ಆಗಿರುವ ಭೋಲಾ ಹಿಂದಿ ಚಿತ್ರ ಸಹ ನೂರು ಕೋಟಿ ಗಳಿಸಿದೆ.

14. ತೆಲುಗಿನ ಹಿಟ್ ಚಿತ್ರ ವಿರೂಪಾಕ್ಷ ಸಹ ನೂರು ಕೋಟಿ ಕ್ಲಬ್ ಸೇರಿದೆ.

ಇನ್ನು ಕನ್ನಡದ ಯಾವ ಚಿತ್ರವೂ ಸಹ ಈ ವರ್ಷ ಇಲ್ಲಿಯವರೆಗೂ ನೂರು ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿಲ್ಲ. ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳು ಯಾವ ರೀತಿಯ ಕಲೆಕ್ಷನ್ ಮಾಡಲಿದೆ ಕಾದು ನೋಡಬೇಕಿದೆ.

More from Filmibeat

English summary
List of movies have joined 100 crores in the year 2023 till May. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X