Don't Miss!
- News
ಅವನಿಗೆ ಪ್ಯಾಂಟ್ ಬಿಚ್ಚಲು ನಾನು ಹೇಳಿದ್ನಾ: ಮಂಚದ ವಿಚಾರ ಕೆಣಕಿದ ಡಿಕೆಶಿ- ಇದಕ್ಕೆ ಜಾರಕಿಹೊಳಿ ಹೇಳಿದ್ದೇನು?
- Sports
ಸಚಿನ್ ತೆಂಡೂಲ್ಕರ್ or ವಿರಾಟ್ ಕೊಹ್ಲಿ: ಭಾರತದ ಈ ದಿಗ್ಗಜರಲ್ಲಿ ಶುಭ್ಮನ್ ಗಿಲ್ ಆಯ್ಕೆ ಯಾರು?
- Technology
Co-Win ಬಗ್ಗೆ ನಿಮಗೆಲ್ಲಾ ಗೊತ್ತು U-WIN ಬಗ್ಗೆ ಗೊತ್ತಾ!: ಇಲ್ಲಿದೆ ಸಂಪೂರ್ಣ ವಿವರ!
- Automobiles
ಬಿಡುಗಡೆಗೆ ಸಜ್ಜಾಗಿರುವ 2023 ಹೋಂಡಾ ಸಿಟಿ ಫೇಸ್ಲಿಫ್ಟ್ನಲ್ಲಿ ಇವೆಲ್ಲವನ್ನು ನಿರೀಕ್ಷಿಸಬಹುದು!
- Finance
ಭಾರೀ ವಂಚನೆಗೆ ಕೈಹಾಕಿತೇ ಅದಾನಿ ಗ್ರೂಪ್: ಏನಿದು ವರದಿ? ಒಂದೇ ದಿನದಲ್ಲಿ ₹ 46,000 ಕೋಟಿ ಕಳೆದುಕೊಂಡಿದ್ದೇಕೆ?
- Lifestyle
ಸಂಪತ್ತು ವೃದ್ಧಿಗಾಗಿ ಮನೆಯಲ್ಲಿ ಸ್ವಸ್ತಿಕ ಚಿಹ್ನೆ ಎಲ್ಲೆಲ್ಲಿ ಇಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮುಂದಿನ 5 ವರ್ಷದಲ್ಲಿ ಹೊಂಬಾಳೆ ಫಿಲ್ಮ್ಸ್ ಸುರಿಯಲಿದೆ 3000 ಕೋಟಿ; ಇಲ್ಲಿದೆ ಚಿತ್ರಗಳ ಪಟ್ಟಿ
ಪುನೀತ್ ರಾಜ್‌ಕುಮಾರ್ ನಟನೆಯ ನಿನ್ನಿಂದಲೇ ಚಿತ್ರದ ಮೂಲಕ ಆರಂಭವಾದ ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಸಂಸ್ಥೆ ನಂತರ ಯಶ್ ನಟನೆಯ ಮಾಸ್ಟರ್ ಪೀಸ್ ಚಿತ್ರವನ್ನು ನಿರ್ಮಿಸಿತ್ತು. ಮತ್ತೊಮ್ಮೆ ಪುನೀತ್ ಅಭಿನಯದ 'ರಾಜಕುಮಾರ' ಚಿತ್ರಕ್ಕೆ ಬಂಡವಾಳ ಹೂಡಿದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರದ ಮೂಲಕ ಚಿನ್ನದ ಬೆಳೆ ತೆಗೆಯಿತು. ಈ ಚಿತ್ರದ ಯಶಸ್ಸಿನ ಮೂಲಕ ಶುರುವಾದ ಹೊಂಬಾಳೆ ಫಿಲ್ಮ್ಸ್‌ನ ಗೆಲುವಿನ ಓಟ ಎಲ್ಲಿಯೂ ನಿಂತಿಲ್ಲ.
ರಾಜಕುಮಾರ ಬಳಿಕ ಕೆಜಿಎಫ್ ಚಾಪ್ಟರ್ 1 ನಿರ್ಮಿಸಿ ಮತ್ತೊಂದು ಇಂಡಸ್ಟ್ರಿ ಹಿಟ್ ದಾಖಲಿಸಿದ ಹೊಂಬಾಳೆ ಫಿಲ್ಮ್ಸ್ ನಂತರ ಹಿಟ್ ಚಿತ್ರ ಯುವರತ್ನವನ್ನೂ ನಿರ್ಮಿಸಿತ್ತು. ಇದರ ಬೆನ್ನಲ್ಲೇ ಕೆಜಿಎಫ್ ಚಾಪ್ಟರ್ 2 ಮೂಲಕ ಸಾವಿರ ಕೋಟಿ ಕ್ಲಬ್ ಸೇರಿದ ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಸಾಕಷ್ಟು ಪ್ರಾಜೆಕ್ಟ್‌ಗಳನ್ನು ಘೋಷಿಸಿದೆ. ಹೌದು, ಕೇವಲ ಕನ್ನಡ ಚಿತ್ರಗಳು ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಮಲಯಾಳಂನ ಚಿತ್ರಗಳಿಗೂ ಬಂಡವಾಳ ಹೂಡಲು ಮುಂದಾಗಿರುವ ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಲು ಸಜ್ಜಾಗಿದೆ.
ಹೀಗೆ ಸಾಲು ಸಾಲು ಚಿತ್ರಗಳನ್ನು ಘೋಷಿಸಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮಾಲೀಕ ವಿಜಯ್ ಕಿರಗಂದೂರು ಹೊಸ ವರ್ಷದ ಪ್ರಯುಕ್ತ ವಿಶೇಷ ಪೋಸ್ಟ್ ಹಂಚಿಕೊಂಡು ಚಿತ್ರ ನಿರ್ಮಾಣಕ್ಕೆಂದು ನಮ್ಮ ಸಂಸ್ಥೆ ಮುಂದಿನ ಐದು ವರ್ಷಗಳಲ್ಲಿ 3000 ಕೋಟಿ ಹೂಡಿಕೆ ಮಾಡಲಿದೆ ಎಂಬ ವಿಷಯವನ್ನು ಸಿನಿ ರಸಿಕರೊಂದಿಗೆ ಹಂಚಿಕೊಂಡರು. ಹೌದು, 2023ರಿಂದ 2027ರವರೆಗೆ ಹೊಂಬಾಳೆ ಫಿಲ್ಮ್ಸ್ ನಿರ್ಮಿಸುವ ಒಟ್ಟು ಚಿತ್ರಗಳ ಮೇಲೆ ಇಷ್ಟು ಹಣವನ್ನು ಸುರಿಯಲಿದ್ದು, ಈ ಅವಧಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..

ಕನ್ನಡ ಚಿತ್ರಗಳು
* ಸಂತೋಷ್ ಆನಂದ್‌ರಾಮ್ ನಿರ್ದೇಶನದ, ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್
* ಶ್ರೀ ಮುರಳಿ ನಟನೆಯ ಬಘೀರ
* ಸಂತೋಷ್ ಆನಂದ್‌ರಾಮ್ ಹಾಗೂ ಯುವ ರಾಜ್‌ಕುಮಾರ್ ನಟನೆಯ ಚಿತ್ರ
* ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ 2
* ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 2
* ರಕ್ಷಿತ್ ಶೆಟ್ಟಿ ನಿರ್ದೇಶನದ ರಿಚರ್ಡ್ ಆಂಟೊನಿ

ಮಲಯಾಳಂ
ಪೃಥ್ವಿರಾಜ್ ಸುಕುಮಾರನ್ ನಟನೆ ಹಾಗೂ ನಿರ್ದೇಶನದ 'ಟೈಸನ್' ಎಂಬ ಮಲಯಾಳಂ ಚಿತ್ರವನ್ನು ಘೋಷಿಸುವ ಮೂಲಕ ಮಾಲಿವುಡ್‌ಗೆ ಎಂಟ್ರಿ ಕೊಟ್ಟ ಹೊಂಬಾಳೆ ಫಿಲ್ಮ್ಸ್ ನಿರ್ದೇಶಕ ಪವನ್ ಕುಮಾರ್ ಹಾಗೂ ಫಾಹದ್ ಫಾಸಿಲ್ ನಟನೆಯ 'ಧೂಮಂ' ಎಂಬ ಮಲಯಾಳಂ ಚಿತ್ರಕ್ಕೂ ಬಂಡವಾಳ ಹೂಡಿದೆ. ಸದ್ಯ ಧೂಮಂ ಚಿತ್ರೀಕರಣ ಕೂಡ ಭರದಿಂದ ಸಾಗಿದ್ದು, ಇದು ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ಮಾಡಲಿರುವ ಮೊದಲ ಕನ್ನಡೇತರ ಚಿತ್ರವಾಗುವ ಎಲ್ಲಾ ಸಾಧ್ಯತೆಗಳಿವೆ.

ತಮಿಳು ಹಾಗೂ ತೆಲುಗು
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಕನ್ನಡ ಚಿತ್ರಗಳನ್ನು ಹೊರತುಪಡಿಸಿ ಮೊದಲು ಘೋಷಿಸಿದ್ದು ತೆಲುಗು ಚಿತ್ರವನ್ನು. ಹೌದು, ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಶನ್‌ನ ಸಲಾರ್ ಚಿತ್ರವನ್ನು ಘೋಷಿಸಿದ ಹೊಂಬಾಳೆ ಫಿಲ್ಮ್ಸ್ ಟಾಲಿವುಡ್ ಪ್ರವೇಶ ಮಾಡಿತ್ತು. ಇನ್ನು ಇತ್ತೀಚೆಗಷ್ಟೆ ಕೀರ್ತಿ ಸುರೇಶ್ ನಟನೆಯ 'ರಘು ತಾತ' ಎಂಬ ತಮಿಳು ಚಿತ್ರವನ್ನು ಘೋಷಿಸಿರುವ ಹೊಂಬಾಳೆ ಫಿಲ್ಮ್ಸ್ ಸುಧಾ ಕೊಂಗರ ನಿರ್ದೇಶನದ ಚಿತ್ರವೊಂದಕ್ಕೂ ಬಂಡವಾಳ ಹೂಡಲಿದೆ. ಇಷ್ಟೇ ಅಲ್ಲದೇ ಬಾಲಿವುಡ್ ಚಿತ್ರರಂಗಕ್ಕೂ ಸಹ ಹೊಂಬಾಳೆ ಫಿಲ್ಮ್ಸ್ ಪ್ರವೇಶ ಮಾಡಲಿದೆ.