»   » ಅಬ್ಬಾ.. ಜುಲೈನಲ್ಲಿ ರಿಲೀಸ್ ಆದ ಕನ್ನಡ ಸಿನಿಮಾಗಳ ಸಂಖ್ಯೆ ಇಷ್ಟೊಂದಾ!

ಅಬ್ಬಾ.. ಜುಲೈನಲ್ಲಿ ರಿಲೀಸ್ ಆದ ಕನ್ನಡ ಸಿನಿಮಾಗಳ ಸಂಖ್ಯೆ ಇಷ್ಟೊಂದಾ!

Posted By:
Subscribe to Filmibeat Kannada

ಕನ್ನಡದಲ್ಲಿ ಈಗ ಸಿನಿಮಾಗಳ ಸಂಖ್ಯೆ ಜಾಸ್ತಿಯಾಗಿದೆ. ಅದರಲ್ಲಿಯೂ ಜುಲೈ ತಿಂಗಳಿನಲ್ಲಿ ರಿಲೀಸ್ ಆದ ಸಿನಿಮಾಗಳ ಸಂಖ್ಯೆ ಕೇಳಿದರೆ ಸಿನಿಮಾ ಪ್ರಿಯರಿಗೆ ಸುಸ್ತಾಗಿ ಹೋಗುತ್ತದೆ. ಜುಲೈ ತಿಂಗಳಿನ 31 ದಿನಗಳಲ್ಲಿ ಕನ್ನಡದಲ್ಲಿ 20 ಸಿನಿಮಾಗಳು ರಿಲೀಸ್ ಆಗಿದೆ.

ಪ್ರತಿ ವಾರ ಐದು..ಆರು.. ಏಳು ಸಿನಿಮಾಗಳು ಬಿಡುಗಡೆಯಾಗಿದ್ದು, ಒಂದೇ ಒಂದು ತಿಂಗಳಿಗೆ ಬರೋಬ್ಬರಿ 20 ಸಿನಿಮಾಗಳು ಚಿತ್ರಮಂದಿರಕ್ಕೆ ಕಾಲಿಟ್ಟಿದ್ದವು. ಈ 20 ಸಿನಿಮಾಗಳ ಪೈಕಿ ಬಹುಪಾಲು ಚಿತ್ರಗಳು ಚಿತ್ರಮಂದಿರ ಸಮಸ್ಯೆಯಿಂದ ಬಂದ ವೇಗದಲ್ಲಿ ಮಾಯ ಆಗಿವೆ. ಅಂದಹಾಗೆ, ಜುಲೈ ತಿಂಗಳಲ್ಲಿ ಬಿಡುಗಡೆಯಾದ ಕನ್ನಡ ಸಿನಿಮಾಗಳ ಲೆಕ್ಕಾಚಾರ ಇಲ್ಲಿದೆ ಓದಿ...

ಮೊದಲ ವಾರ 4 ಸಿನಿಮಾಗಳು

ಜುಲೈ ತಿಂಗಳ ಮೊದಲ ಶುಭ ಶುಕ್ರವಾರದಲ್ಲಿ ಕನ್ನಡದ ನಾಲ್ಕು ಸಿನಿಮಾಗಳು ರಿಲೀಸ್ ಆಗಿದ್ದವು. ಈ ಪೈಕಿ 'ಒಂದು ಮೊಟ್ಟೆಯ ಕಥೆ' ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ

ಎರಡನೇ ವಾರ 5 ಸಿನಿಮಾಗಳು

ಜುಲೈ ತಿಂಗಳ ಎರಡನೇ ವಾರದಲ್ಲಿ ಒಟ್ಟು 5 ಸಿನಿಮಾಗಳು ಬಿಡುಗಡೆಯಾದವು. ಐದು ಸಿನಿಮಾಗಳಲ್ಲಿ '2' (ದಂಡುಪಾಳ್ಯ 2) ಸಿನಿಮಾ ಮಾತ್ರ ಇನ್ನೂ ಚಿತ್ರಮಂದಿರದಲ್ಲಿದೆ.

ಮೂರನೇ ವಾರ 7 ಸಿನಿಮಾಗಳು

ಬರೋಬ್ಬರಿ 7 ಸಿನಿಮಾಗಳು ಜುಲೈ ತಿಂಗಳ ಮೂರನೇ ವಾರದಲ್ಲಿ ಬಿಡುಗಡೆಯಾಗಿದೆ. ಇವುಗಳಲ್ಲಿ 'ಧೈರ್ಯಂ', 'ಆಪರೇಷನ್ ಅಲಮೇಲಮ್ಮ', ಮತ್ತು 'ದಾದಾ ಇಸ್ ಬ್ಯಾಕ್' ಸಿನಿಮಾಗಳಿಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು.

ಚಿತ್ರ ವಿಮರ್ಶೆ : ಸಾಮಾನ್ಯ ಹುಡುಗನ ಅಸಾಮಾನ್ಯ ಸಾಹಸ

ನಾಲ್ಕನೇ ವಾರ 4 ಸಿನಿಮಾಗಳು

ಜುಲೈ ತಿಂಗಳ ಕೊನೆಯ ವಾರದಲ್ಲಿ ಒಟ್ಟು ನಾಲ್ಕು ಸಿನಿಮಾಗಳು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ. ಇವುಗಳ ಪೈಕಿ ಅರ್ಜುನ್ ಸರ್ಜಾ ಅವರ 150ನೇ ಸಿನಿಮಾ 'ವಿಸ್ಮಯ' ಕೂಡ ಒಂದು.

ವಿಮರ್ಶೆ: 'ವಿಸ್ಮಯ'ಕಾರಿ ಥ್ರಿಲ್ಲಿಂಗ್ ಕ್ರೈಂ ಸ್ಟೋರಿ

Students Movie Releasing This Week | Filmibeat Kannada

ದೊಡ್ಡ ಪೈಪೋಟಿ

ಒಂದು ತಿಂಗಳಿಗೆ ಬರೋಬ್ಬರಿ 20 ಸಿನಿಮಾಗಳು ಬಿಡುಗಡೆಯಾಗಿದ್ದರಿಂದ ಸಾಮಾನ್ಯವಾಗಿಯೇ ಚಿತ್ರಮಂದಿರ ಸಮಸ್ಯೆ ಉಂಟಾಯಿತು. ಸಿನಿಮಾಗಳ ನಡುವೆ ಪೈಪೋಟಿ ಹೆಚ್ಚಾಗಿತ್ತು. 20 ಸಿನಿಮಾಗಳಲ್ಲಿ ನಾಲ್ಕೈದು ಚಿತ್ರಗಳನ್ನು ಮಾತ್ರ ಜನ ನೋಡಿ ಇಷ್ಟಪಟ್ಟರು.

'ಅಲಮೇಲಮ್ಮ' ವಿಮರ್ಶೆ: ಸಿಂಪಲ್ಲಾಗ್ ಒಂದು 'ಕಿಡ್ನಾಪ್' ಸ್ಟೋರಿ

English summary
List of kannada movies released in July 2017
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada