ಈ ಶುಕ್ರವಾರ ಬಿಡುಗಡೆ ಆಗುತ್ತಿರುವ ಸಿನಿಮಾಗಳಿವು: ನಿಮ್ಮ ಆಯ್ಕೆ ಯಾವುದು?

ಮತ್ತೊಂದು ಶುಕ್ರವಾರ ಸಿನಿ ಪ್ರೇಮಿಗಳಿಗಾಗಿ ಬಂದಿದೆ. ಹಲವಾರು ಸಿನಿಮಾಗಳನ್ನು ಹೊತ್ತು ತಂದಿದೆ. ಕನ್ನಡದಲ್ಲಿ ಸತತವಾಗಿ ಸಿನಿಮಾಗಳು ಹಿಟ್ ಆಗುತ್ತಿದ್ದು, ಈ ಶುಕ್ರವಾರ ಮತ್ತೊಂದು ಹಿಟ್ ಬರಲಿದೆಯೇ ಎಂಬ ನಿರೀಕ್ಷೆ ಗಾಂಧಿ ನಗರದ ಮಂದಿಗೆ.

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿನ ಕೆಲವು ಸ್ಟಾರ್ ನಟ-ನಟಿಯರ ಕೆಲವು ಉತ್ತಮ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿವೆ. ಹಲವು ಭಾಷೆಗಳ ಸಹಬಾಳ್ವೆಯಿರುವ ಬೆಂಗಳೂರಿನಲ್ಲಿ ವಿವಿಧ ಭಾಷೆಯ ಸಿನಿಮಾಗಳು ಶುಕ್ರವಾರದಂದು ಬಿಡುಗಡೆ ಆಗುವುದು ಸಾಮಾನ್ಯ. ಈ ಬಾರಿಯೂ ಅದು ಮುಂದುವರೆದಿದೆ.

ಕನ್ನಡದಲ್ಲಿ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಇಂದು ತೆರೆಗೆ ಬರುತ್ತಿಲ್ಲವಾದರೂ ಹೊಸಬರ ಕೆಲವು ಸಿನಿಮಾಗಳು ತೆರೆಗೆ ಬರುತ್ತಿವೆ. ಹಿಂದಿಯಲ್ಲಿ ಸ್ಟಾರ್ ಸಿನಿಮಾ ಒಂದು ತೆರೆಗೆ ಬರುತ್ತಿದೆ. ಯಾವ ಯಾವ ಮುಖ್ಯ ಸಿನಿಮಾಗಳು ಇಂದು ಬಿಡುಗಡೆ ಆಗುತ್ತಿವೆ ಇಲ್ಲಿದೆ ಪಟ್ಟಿ.

ರಾಜ್‌ಕುಮಾರ್ ಮೊಮ್ಮಗ, ರಾಮ್‌ಕುಮಾರ್ ಪುತ್ರ ಧೀರೇನ್ ರಾಮ್‌ಕುಮಾರ್ ನಟಿಸಿರುವ 'ಶಿವ 143' ಇಂದು ತೆರೆಗೆ ಬರುತ್ತಿದೆ. ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ. ಸಿನಿಮಾದಲ್ಲಿ ಮಾನ್ವಿತಾ ನಾಯಕಿಯಾಗಿದ್ದು, ಹಾಟ್‌ ಆಗಿ ಈ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಅನಿಲ್ ಕುಮಾರ್ ಟಿಎನ್ ನಿರ್ದೇಶನ ಮಾಡಿದ್ದಾರೆ, ನಿರ್ಮಾಣ ಮಾಡಿರುವುದು ಜಯಣ್ಣ-ಭೋಗೇಂದ್ರ. ಸಂಗೀತ ಅರ್ಜುನ್ ಜನ್ಯ.

ರಾಷ್ಟ್ರಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ

ರಾಷ್ಟ್ರಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ

ರಾಷ್ಟ್ರಪ್ರಶಸ್ತಿ ವಿಜೇತ ಡೊಳ್ಳು ಸಿನಿಮಾ ಸಹ ಇಂದು ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದು, ಪವನ್ ಒಡೆಯರ್ ನಿರ್ಮಾಣ ಮಾಡಿದ್ದಾರೆ. ಜನಪದ ಕಲೆ ಡೊಳ್ಳುವನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿದ ಸಿನಿಮಾ ಇದಾಗಿದೆ. ಮಾಹಿತಿ ಕಣಜ ವಿಕಿಪೀಡಿಯಾ ಹೆಸರಲ್ಲಿ ತಂಡವೊಂದು ಕನ್ನಡ ಸಿನಿಮಾ ನಿರ್ಮಿಸಿದ್ದು ಆ ಸಿನಿಮಾ ಇಂದು (ಆಗಸ್ಟ್ 26) ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಸೋಮು ಹೊಯ್ಸಳ ನಿರ್ದೇಶನ ಮಾಡಿದ್ದಾರೆ.

ಅರ್ಜುನ್ ರಮೇಶ್ ನಟನೆಯ ಕೌಟಿಲ್ಯ ಸಿನಿಮಾ

ಅರ್ಜುನ್ ರಮೇಶ್ ನಟನೆಯ ಕೌಟಿಲ್ಯ ಸಿನಿಮಾ

ಒಟಿಟಿ ಬಿಗ್‌ಬಾಸ್ ಮನೆಯಿಂದ ಹೊರಬಂದ ಅರ್ಜುನ್ ರಮೇಶ್ ನಟಿಸಿರುವ 'ಕೌಟಿಲ್ಯ' ಸಿನಿಮಾ ಸಹ ಇಂದು ಬಿಡುಗಡೆ ಆಗುತ್ತಿದೆ. ಇದರ ಜೊತೆಗೆ 'ಪವಾಡ ಪುರುಷ ಅಲ್ಲಿಪುರ ಶ್ರೀ ಮಹದೇವ ತಾತ' ಹೆಸರಿನ ಪೌರಾಣಿಕ ಕತೆಯುಳ್ಳ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ. ಇವುಗಳ ಜೊತೆಗೆ 'ವಿಕ್ರಾಂತ್ ರೋಣ', 'ಗಾಳಿಪಟ', 'ಲವ್ 360' ಸಿನಿಮಾಗಳು ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿವೆ.

ಹಿಂದಿಯ ಕೇವಲ ಒಂದು ಸಿನಿಮಾ

ಹಿಂದಿಯ ಕೇವಲ ಒಂದು ಸಿನಿಮಾ

ಹಿಂದಿಯ ಕೇವಲ ಒಂದು ಸಿನಿಮಾ ಅಷ್ಟೆ ಈ ವಾರ ಬಿಡುಗಡೆ ಆಗುತ್ತಿದೆ. ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ ಸಿದ್ಧಿಕಿ ನಿರ್ಮಿಸಿರುವ 'ಹೋಲಿ ಕವ್' ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಸೇರಿದ ಹಸುವೊಂದು ಕಾಣೆಯಾಗುವುದು ಹಾಗೂ ಅದರ ಹುಡುಕಾಟದಲ್ಲಿ ಆತ ಸಿಲುಕುವ ಭಿನ್ನ ಭಿನ್ನ ಸಮಸ್ಯೆಗಳು, ಸಂದರ್ಭಗಳ ಕುರಿತಾಗಿ ಈ ಸಿನಿಮಾ ಇದೆ. ಸಿನಿಮಾದಲ್ಲಿ ನವಾಜುದ್ದೀನ್ ಸಿದ್ಧಿಕಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕ ಪಾತ್ರದಲ್ಲಿ ಸಂಜಯ್ ಮಿಶ್ರಾ ನಟಿಸಿದ್ದಾರೆ.

ತೆಲುಗಿನಲ್ಲಿ 'ಲೈಗರ್' ಮಾತ್ರ

ತೆಲುಗಿನಲ್ಲಿ 'ಲೈಗರ್' ಮಾತ್ರ

ನಿನ್ನೆ (ಆಗಸ್ಟ್ 25) 'ಲೈಗರ್' ಸಿನಿಮಾ ಸಿನಿಮಾ ಬಿಡುಗಡೆ ಆಗಿದೆ ಬಿಟ್ಟರೆ, ಅದರ ಹೊರತಾಗಿ ಇನ್ನಾವ ಮುಖ್ಯ ತೆಲುಗು ಸಿನಿಮಾಗಳು ಈ ವಾರ ಬಿಡುಗಡೆ ಆಗಿಲ್ಲ. ಇಂದು 'ಭಲಾ ಚೋರ ಭಲಾ' ಹಾಗೂ ಹೊಸಬರ 'ಪಿಕೆ' ಸಿನಿಮಾಗಳು ಬಿಡುಗಡೆ ಆಗಿದೆ. 'ಲೈಗರ್' ಸಿನಿಮಾಕ್ಕಾಗಿ ಬೇರೆ ಸಿನಿಮಾಗಳು ಸ್ಥಳ ಬಿಟ್ಟುಕೊಟ್ಟರು ಆದರೆ ಸಿನಿಮಾ ಅಟ್ಟರ್ ಪ್ಲಾಪ್ ಆಗಿದೆ.

ತಮಿಳಿನಲ್ಲಿ ಯಾವ ಸಿನಿಮಾಗಳಿವೆ?

ತಮಿಳಿನಲ್ಲಿ ಯಾವ ಸಿನಿಮಾಗಳಿವೆ?

ತಮಿಳಿನಲ್ಲಿ ಮಿಸ್ಟ್ರಿ ಥ್ರಿಲ್ಲರ್ ಸಿನಿಮಾ 'ಡೈರಿ' ಇಂದು ಬಿಡುಗಡೆ ಆಗಿದೆ. ಈ ಸಿನಿಮಾದ ಹೊರತಾಗಿ ಇನ್ನಾವ ಹೊಸ ಸಿನಿಮಾ ತಮಿಳಿನಲ್ಲಿ ಬಿಡುಗಡೆ ಆಗಿಲ್ಲ. ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ತಮಿಳಿಗೆ ಡಬ್ ಆಗಿ ಚೆನ್ನೈ ಸೇರಿದಂತೆ ಇನ್ನು ಕೆಲವು ಪ್ರದೇಶಗಳಲ್ಲಿ ಬಿಡುಗಡೆ ಆಗಿದೆ. ಅದರ ಹೊರತಾಗಿ ಈ ಹಿಂದಿನ ವಾರ ಬಿಡುಗಡೆ ಆದ ಸಿನಿಮಾಗಳೇ ಇನ್ನೂ ಓಡುತ್ತಿವೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ನಟನೆಯ 'ತೀರ್ಪು' ಸಿನಿಮಾ ನಿನ್ನೆ (ಆಗಸ್ಟ್ 25) ರಂದು ಬಿಡುಗಡೆ ಆಗಿದೆ.

More from Filmibeat

English summary
List of movies which releasing on this Friday that is August 26. Not many star movies are releasing this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X