ಇಂದು ಬಿಡುಗಡೆ ಆಗುತ್ತಿರುವ ಸಿನಿಮಾಗಳ ಪಟ್ಟಿ: ನಿಮ್ಮ ಆಯ್ಕೆ ಯಾವುದು?

ಮತ್ತೊಂದು ಶುಕ್ರವಾರ ಬಂದಿದೆ. ಕಳೆದ ಕೆಲವು ಶುಕ್ರವಾರಗಳು ಕನ್ನಡ ಚಿತ್ರರಂಗದ ಪಾಲಿಗೆ ನಿಜಕ್ಕೂ ಶುಭವೇ ಆಗಿದ್ದವು. ಕಳೆದ ಕೆಲ ವಾರಗಳಲ್ಲಿ ಬಿಡುಗಡೆ ಆದ ಸಿನಿಮಾಗಳು ಚೆನ್ನಾಗಿಯೇ ಪ್ರದರ್ಶನ ಕಂಡಿವೆ.

ಆದರೆ ಎಲ್ಲ ಸಿನಿಮಾ ರಂಗಗಳಿಗೂ ಶುಕ್ರವಾರಗಳು ಶುಭವಾಗಿಲ್ಲ. ವಿಶೇಷವಾಗಿ ಬಾಲಿವುಡ್ ಪಾಲಿಗೆ ಶುಕ್ರವಾರಗಳು ಕರಾಳವಾಗಿಬಿಟ್ಟಿವೆ. ಸ್ಟಾರ್ ನಟರ ಸಿನಿಮಾಗಳೇ ಮುಗ್ಗರಿಸಿ-ಮುಗ್ಗರಿಸಿ ಬೀಳುತ್ತಿವೆ. ಹೀಗಿರುವಾಗ ಮತ್ತೊಂದು ಶುಕ್ರವಾರ ಬಂದಿದ್ದು, ನಿರೀಕ್ಷೆಯಂತೆ ಹಲವು ಸಿನಿಮಾಗಳನ್ನು ಹೊತ್ತು ತಂದಿದೆ.

ಕನ್ನಡದ ಎರಡು ಪ್ರಮುಖ ಸಿನಿಮಾಗಳು ಸೇರಿದಂತೆ ವಿವಿಧ ಭಾಷೆಯಲ್ಲಿ ಹಲವು ಮುಖ್ಯ ಸ್ಟಾರ್ ನಟರ ಸಿನಿಮಾಗಳು ಈ ವಾರ ತೆರೆಗೆ ಬಂದಿವೆ. ಈ ವಾರ ಬಿಡುಗಡೆ ಆಗಿರುವ ಸಿನಿಮಾಗಳ ಪಟ್ಟಿ ಇಲ್ಲಿದ್ದು, ನಿಮ್ಮ ಆಯ್ಕೆ ಯಾವುದಾಗಿರಲಿದೆ.

'ಗಾಳಿಪಟ 2' ಇಂದು ಬಿಡುಗಡೆ

'ಗಾಳಿಪಟ 2' ಇಂದು ಬಿಡುಗಡೆ

2008 ರಲ್ಲಿ ಬಿಡುಗಡೆ ಆಗಿದ್ದ ಸೂಪರ್ ಹಿಟ್ ಸಿನಿಮಾ 'ಗಾಳಿಪಟ'ದ ತಂಡ ಮತ್ತೊಮ್ಮೆ ಅದೇ ಮಾದರಿಯ ಸಿನಿಮಾವನ್ನು ಹೊತ್ತು ತಂದಿದೆ ಅದುವೇ 'ಗಾಳಿಪಟ 2'. ಗಣೇಶ್, ದಿಗಂತ್, ಲೂಸಿಯಾ ಪವನ್ ಒಟ್ಟಿಗೆ ಈ ಸಿನಿಮಾದಲ್ಲಿ ನಟಿಸಿದ್ದು, ನಾಯಕಿಯರ ದಂಡೂ ದೊಡ್ಡದೇ ಇದೆ. ಸಿನಿಮಾಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಇಂದು ಬಿಡುಗಡೆ ಆಗಿದೆ.

ರವಿಚಂದ್ರನ್ ಬ್ರ್ಯಾಂಡಿನ 'ರವಿ ಬೋಪಣ್ಣ' ಸಿನಿಮಾ

ರವಿಚಂದ್ರನ್ ಬ್ರ್ಯಾಂಡಿನ 'ರವಿ ಬೋಪಣ್ಣ' ಸಿನಿಮಾ

'ರವಿ ಬೋಪಣ್ಣ' ರವಿಚಂದ್ರನ್ ಬ್ರ್ಯಾಂಡಿನ ಸಿನಿಮಾ ಎಂಬುದು ಅದರ ಟ್ರೈಲರ್‌ನಲ್ಲಿಯೇ ಗೊತ್ತಾಗಿದೆ. ಬರೋಬ್ಬರಿ ಏಳು ನಿಮಿಷದ ಟ್ರೈಲರ್ ಅನ್ನು ರವಿಚಂದ್ರನ್ ಬಿಡುಗಡೆ ಮಾಡಿದ್ದರು. ವಿಭಿನ್ನ ಗೆಟಪ್‌ನಲ್ಲಿ ರವಿಚಂದ್ರನ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ರವಿಚಂದ್ರನ್ ಬಹು ನಿರೀಕ್ಷೆ ಇರಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ರವಿಚಂದ್ರನ್ ಅವರೇ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ನಟ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತೆಲುಗಿನಲ್ಲಿ ನಿತಿನ್ v/s ನಿಖಿಲ್

ತೆಲುಗಿನಲ್ಲಿ ನಿತಿನ್ v/s ನಿಖಿಲ್

ತೆಲುಗಿನಲ್ಲಿ ಇಂದು ಮುಖ್ಯ ಸಿನಿಮಾಗಳು ಬಿಡುಗಡೆ ಆಗಿವೆ. ನಟ ನಿತಿನ್ ನಟನೆಯ 'ಮಚ್ಚರ್ಲ ನಿಯೋಜಕವರ್ಗಂ' ಸಿನಿಮಾ ಬಿಡುಗಡೆ ಆಗಿದೆ ಈ ಸಿನಿಮಾದಲ್ಲಿ ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ನಟಿಸಿದ್ದಾರೆ. ಸಿನಿಮಾದಲ್ಲಿ 'ಜಯಂ' ಸಿನಿಮಾದ 'ರಾನು ರಾನಂಟುಂದಿ' ಹಾಡಿನ ರೀಮಿಕ್ಸ್ ಬಳಸಿಕೊಂಡಿರುವುದು ವಿಶೇಷ. ಇನ್ನು ನಿಖಿಲ್ ಸಿದ್ಧಾರ್ಥ್ ನಟನೆಯ 'ಕಾರ್ತಿಕೇಯ 2' ಸಿನಿಮಾ ಸಹ ಇಂದೇ ಬಿಡುಗಡೆ ಆಗಿದೆ. ಸೂಪರ್ ಹಿಟ್ ಸಿನಿಮಾ 'ಕಾರ್ತಿಕೇಯ'ದ ರೀಮೇಕ್ ಈ ಸಿನಿಮಾ ಆಗಿದೆ. ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ನಾಯಕಿ.

ನಟ ಕಾರ್ತಿಯ ಹೊಸ ಸಿನಿಮಾ ಬಿಡುಗಡೆ

ನಟ ಕಾರ್ತಿಯ ಹೊಸ ಸಿನಿಮಾ ಬಿಡುಗಡೆ

ತಮಿಳಿನಲ್ಲಿ ಸ್ಟಾರ್ ನಟ ಕಾರ್ತಿ ನಟನೆಯ 'ವಿರುಮಾನ್' ಸಿನಿಮಾ ಬಿಡುಗಡೆ ಆಗಿದೆ. ಪಕ್ಕಾ ಹಳ್ಳಿ ಮಾಸ್ ಹೀರೋ ಆಗಿ ಕಾರ್ತಿ ನಟಿಸಿರುವ ಈ ಸಿನಿಮಾದಲ್ಲಿ ಪ್ರಕಾಶ್ ರೈ ವಿಲನ್. ಸಿನಿಮಾದ ಟ್ರೈಲರ್ ಈಗಾಗಲೇ ಗಮನ ಸೆಳೆದಿದೆ. ಇದರ ಹೊರತಾಗಿ 'ಕಡಮಾಯಿ ಸೇಯಿ', ಮಹಿಳಾ ಪ್ರಧಾನ ಸಿನಿಮಾ 'ಕಟ್ಟಂ ಸೊಲ್ಲದು' , ಭಿನ್ನ ಕತೆಯುಳ್ಳ 'ನಾ ತಾನ್ ಕೇಸ್ ಕೊಡು' ಸಿನಿಮಾಗಳು ತೆರೆಗೆ ಬಂದಿವೆ.

ಹಿಂದಿಯಲ್ಲಿ ಆಮಿರ್ ಖಾನ್ v/s ಅಕ್ಷಯ್ ಕುಮಾರ್

ಹಿಂದಿಯಲ್ಲಿ ಆಮಿರ್ ಖಾನ್ v/s ಅಕ್ಷಯ್ ಕುಮಾರ್

ಹಿಂದಿಯಲ್ಲಿ ಇಬ್ಬರು ಸೂಪರ್ ಸ್ಟಾರ್‌ ನಟರ ಸಿನಿಮಾಗಳು ಈವಾರ ಬಿಡುಗಡೆ ಆಗಿವೆ. ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಹಾಗೂ ಅಕ್ಷಯ್ ಕುಮಾರ್ ನಟನೆಯ 'ರಕ್ಷಾ ಬಂಧನ್' ಸಿನಿಮಾ ಒಟ್ಟಿಗೆ ಆಗಸ್ಟ್ 11 ರಂದು ಬಿಡುಗಡೆ ಆಗಿವೆ. ಎರಡೂ ಸಿನಿಮಾಗಳಿಗೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಬ್ಬರು ಸ್ಟಾರ್ ಸಿನಿಮಾಗಳು ಎದುರು ಬದುರಾಗಿರುವುದರಿಂದ ಯಾವ ಸಿನಿಮಾ ಗೆಲ್ಲುತ್ತದೆ ಎಂಬ ಕುತೂಹಲ ಇಮ್ಮಿಡಿಸಿದೆ.

ಮಲಯಾಳಂನಲ್ಲಿ ಎರಡು ಸಿನಿಮಾ

ಮಲಯಾಳಂನಲ್ಲಿ ಎರಡು ಸಿನಿಮಾ

ಟೊವಿನೋ ಥಾಮಸ್ ನಟನೆಯ ಯೂತ್‌ಫುಲ್ ಎಂಟರ್ಟೈನರ್ ಸಿನಿಮಾ 'ತಲ್ಲುಮಾಲ' ಇಂದು ಬಿಡುಗಡೆ ಆಗಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಭಿನ್ನವಾದ ಯೂತ್‌ಫುಲ್ ಸಿನಿಮಾ ಇದಾಗಿದೆಯೆಂದು ಟ್ರೈಲರ್ ಸಾರಿ ಹೇಳುತ್ತಿದೆ. ನಟ ಸುರೇಶ್ ಗೋಪಿ ನಟನೆಯ ಮರ್ಡರ್ ಮಿಸ್ಟರಿ ಕತೆಯುಳ್ಳ 'ಪಾಪ್ಪನ್' ಸಿನಿಮಾ ಸಹ ಇಂದೇ ಬಿಡುಗಡೆ ಆಗಿದೆ. ಸೈಕೋ ಪಾತ್ ಕಿಲ್ಲರ್ ಒಬ್ಬನನ್ನು ಪೊಲೀಸರು ಬೆನ್ನಟ್ಟುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

More from Filmibeat

English summary
Here is the list of movies which is releasing this week from August 11. Two Kannada, Two Bollywood movies, Two Telugu movies releasing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X