ಹೀರೋ ಮಾತ್ರವಲ್ಲ ಇವರು ಮಲ್ಟಿ ಟ್ಯಾಲೆಂಟೆಡ್ ಸ್ಟಾರ್ ಗಳು!
Recommended Video

ಕನ್ನಡದ ಸ್ಟಾರ್ ನಟರು ಈಗ ಬರಿ ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಹೀರೋ ಆಗಿದ್ದರೂ ಒಂದು ಸಿನಿಮಾದ ಉಳಿದ ವಿಭಾಗಳಲ್ಲಿ ಕೂಡ ಕೆಲಸ ಮಾಡಿ ಗೆಲ್ಲುತ್ತಿದ್ದಾರೆ.
ಸ್ಯಾಂಡಲ್ ವುಡ್ ಸ್ಟಾರ್ ನಟರಾದ ರವಿಚಂದ್ರನ್, ಉಪೇಂದ್ರ, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ ಎಲ್ಲರೂ ಈಗ ಸಿನಿಮಾ ನಿರ್ಮಾಪಕ, ನಿರ್ದೇಶಕರಾಗಿಯೂ ಕೂಡ ಯಶಸ್ಸು ಗಳಿಸುತ್ತಿದ್ದಾರೆ. ನಾಯಕರಾಗಿ ಎಷ್ಟೇ ಬಿಜಿ ಇದ್ದಾರು ಈ ನಟರು ಸಿನಿಮಾ ಮೇಕಿಂಗ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಬಹುತೇಕ ನಟರು ಈಗ ಬರಿ ನಟನೆ ಮಾತ್ರವಲ್ಲದೆ ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಾರೆ. ಮುಂದೆ ಓದಿ...

ನಿರ್ದೇಶಕ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ನಟನಾಗುವುದಕ್ಕಿಂತ ಮುಂಚೆ ಒಬ್ಬ ನಿರ್ದೇಶಕ. ನಿರ್ದೇಶಕನಾಗಿ ಹೆಸರು ಮಾಡಿದ ಮೇಲೆ ಉಪೇಂದ್ರ ಹೀರೋ ಆದರು. ಸಿನಿಮಾ ನಿರ್ದೇಶನ, ನಿರ್ಮಾಣ, ಗಾಯನ, ಸಂಭಾಷಣೆ, ಸಾಹಿತ್ಯ ಹೀಗೆ ಎಲ್ಲ ವಿಭಾಗಳಲ್ಲಿಯೂ ಉಪ್ಪಿ ಕೆಲಸ ಮಾಡಿದ್ದಾರೆ.

ಮಲ್ಟಿ ಟ್ಯಾಲೆಂಟೆಡ್ ರವಿಚಂದ್ರನ್
ಕನಸುಗಾರ ರವಿಚಂದ್ರನ್ ಒಬ್ಬ ನಟ ಎನ್ನುವುದಕ್ಕಿಂತ ಒಬ್ಬ ಸಿನಿಮಾ ಪ್ರೇಮಿ. ಚಿತ್ರರಂಗದ ಎಲ್ಲ ವಿಭಾಗದಲ್ಲಿ ಗುರುತಿಸಿಕೊಂಡಿರುವ ರವಿಚಂದ್ರನ್ ನಟ, ನಿರ್ದೇಶಕ, ನಿರ್ಮಾಪಕ, ಗೀತರಚನೆಕಾರ, ಸಂಭಾಷಣೆಕಾರ, ಸಂಗೀತ ನಿರ್ದೇಶಕ ಎಲ್ಲವೂ ಹೌದು.

ಡೈರೆಕ್ಟರ್ ಸುದೀಪ್
ಕಿಚ್ಚ ಸುದೀಪ್ ಕೂಡ ಒಬ್ಬ ನಿರ್ದೇಶಕನಾಗಿದ್ದಾರೆ. 'ಮೈ ಆಟ್ರೋಗ್ರಾಫ್' ಮೂಲಕ ಸುದೀಪ್ ಸಿನಿಮಾ ನಿರ್ದೇಶನದ ಪಯಣ ಶುರುವಾಗಿದೆ. ಅದರ ನಂತರ 'ನಂ 73 ಶಾಂತಿ ನಿವಾಸ', 'ಜಸ್ಟ್ ಮಾತ್ ಮಾತಲ್ಲಿ', 'ಕೆಂಪೇಗೌಡ', 'ಮಾಣಿಕ್ಯ' ಸಿನಿಮಾವನ್ನು ಸುದೀಪ್ ಡೈರೆಕ್ಟ್ ಮಾಡಿದ್ದಾರೆ. ಅದರ ಜೊತೆಗೆ ತಮ್ಮ 'ಕಿಚ್ಚ ಕ್ರಿಯೇಷನ್ಸ್' ಮೂಲಕ ಸುದೀಪ್ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

ನಿರ್ಮಾಪಕ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ 'ತೂಗುದೀಪ ಪ್ರೊಡಕ್ಷನ್ಸ್' ನಲ್ಲಿ ಈಗಾಗಲೇ ಅನೇಕ ಸಿನಿಮಾಗಳನ್ನು ನಿರ್ಮಾಣ ಮತ್ತು ವಿತರಣೆ ಮಾಡಿದ್ದಾರೆ.

ಸಿಂಗರ್, ಪ್ರೊಡ್ಯುಸರ್ ಪುನೀತ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟ ಮಾತ್ರವಲ್ಲದೆ ಒಳ್ಳೆಯ ಗಾಯಕ. ಜೊತೆಗೆ ಈಗ ಪುನೀತ್ ತಮ್ಮ ಪಿ.ಆರ್.ಕೆ ಪ್ರೊಡಕ್ಷನ್ಸ್ ಆಡಿಯಲ್ಲಿ ಸಿನಿಮಾಗಳಿಗೆ ಬಂಡವಾಳ ಹಾಕುತ್ತಿದ್ದಾರೆ.

ಬಹುಮುಖ ಪ್ರತಿಭೆ ರಕ್ಷಿತ್ ಶೆಟ್ಟಿ
ನಟ ರಕ್ಷಿತ್ ಶೆಟ್ಟಿ ನಟನಾಗಿ ಚಿತ್ರರಂಗಕ್ಕೆ ಬಂದರು. ಆದರೆ ಈಗ ರಕ್ಷಿತ್ ನಟನೆ ಜೊತೆಗೆ ತನ್ನೊಬ್ಬ ಒಳ್ಳೆಯ ಫಿಲ್ಮ್ ಮೇಕರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ರಕ್ಷಿತ್ ಈಗ ಹೊಸ ಹೊಸ ರೀತಿಯ ಕಥೆಗಳ ಸಿನಿಮಾಗಳನ್ನು ನಿರ್ದೇಶನ, ನಿರ್ಮಾಣ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.

ಕಿರುತೆರೆಯಲ್ಲಿ ಶಿವಣ್ಣ
ನಟ ಶಿವರಾಜ್ ಕುಮಾರ್ ಕೂಡ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಬಿಡುವೆ ಇಲ್ಲದೆ ಸಿನಿಮಾಗಳಲ್ಲಿ ನಟಿಸುವ ಶಿವಣ್ಣ ಈಗ ತಮ್ಮ 'ಶ್ರೀ ಮುತ್ತು ಸಿನಿ ಸರ್ವಿಸ್' ಬ್ಯಾನರ್ ನಲ್ಲಿ ಕಿರುತೆರೆಯ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











