ನೆನಪಿದೆಯಾ ಅನಂತ್ ನಾಗ್, ಅಂಬಿ ಜತೆ ರಜನಿಕಾಂತ್ ನಟಿಸಿದ್ದ ಚಿತ್ರ? 'ಸೂಪರ್‌ಸ್ಟಾರ್' ಕನ್ನಡ ಚಿತ್ರಗಳ ಪಟ್ಟಿ

1950ರ ಡಿಸೆಂಬರ್ 12ರಂದು ಆಗಿನ ಮೈಸೂರು ರಾಜ್ಯದ ಬೆಂಗಳೂರಿನಲ್ಲಿ ಜನಿಸಿದ ಶಿವಾಜಿ ರಾವ್ ಗಾಯಕ್ವಾಡ್ ತಮ್ಮ ಇಪ್ಪತ್ತೈದನೇ ವಯಸ್ಸಿಗೆ ನಾಯಕನಾಗಿ ತಮಿಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. 1975ರಲ್ಲಿ ಬಿಡುಗಡೆಗೊಂಡ ಅಪೂರ್ವ ರಾಗಂಗಳ್ ಎಂಬ ಚಿತ್ರದಲ್ಲಿ ರಜನಿಕಾಂತ್ ಪಾಂಡಿಯನ್ ಎಂಬ ಪಾತ್ರವನ್ನು ನಿರ್ವಹಿಸಿದ್ದರು ಹಾಗೂ ಈ ಚಿತ್ರದಲ್ಲಿ ನಾಯಕನಾಗಿ ಕಮಲ್ ಹಾಸನ್ ನಟಿಸಿದ್ದರು.

ಹೀಗೆ ತಮಿಳು ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ಕನ್ನಡಿಗ ರಜನಿಕಾಂತ್ ಮುಂದಿನ ವರ್ಷವೇ ಅಂದರೆ 1976ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ, ಕಲ್ಯಾಣ್ ಕುಮಾರ್ ನಾಯಕನಾಗಿ ಅಭಿನಯಿಸಿದ್ದ ಕಥಾ ಸಂಗಮ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಚಂದನವನಕ್ಕೂ ಪದಾರ್ಪಣೆ ಮಾಡಿದರು. ಹೀಗೆ ಒಂದು ವರ್ಷದ ಅಂತರದಲ್ಲಿ ತಮಿಳು ಹಾಗೂ ಕನ್ನಡ ಎರಡೂ ಚಿತ್ರರಂಗಕ್ಕೂ ಕಾಲಿಟ್ಟ ರಜನಿಕಾಂತ್ ತೆಲುಗು ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ಹೀಗೆ ತಮಿಳು ಹಾಗೂ ಕನ್ನಡದ ಚಿತ್ರಗಳಲ್ಲಿ ಪುಟ್ಟ ನಟನಾಗಿ ಕಾಲಿಟ್ಟ ರಜನಿಕಾಂತ್ ಈಗ ಇಂಡಿಯನ್ ಸೂಪರ್ ಸ್ಟಾರ್ ಆಗಿ ನಿಂತಿದ್ದಾರೆ. ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದಾದಾ ಸಾಹೇಬ್ ಫಾಲ್ಕೆ ರೀತಿಯ ಅತ್ಯುನ್ನತ ಗೌರವವನ್ನು ಪಡೆದುಕೊಂಡಿರುವ ರಜನಿಕಾಂತ್ ಇಂದಿಗೂ ಸಹ ಬೃಹತ್ ಬೇಡಿಕೆ ಹೊಂದಿರುವಂತಹ ನಟ. ಮೊದಲಿಗೆ ಕೆಲ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ರಜನಿಕಾಂತ್ ನಂತರ ಹೆಚ್ಚಾಗಿ ತಮಿಳು ಚಿತ್ರಗಳಲ್ಲಿಯೇ ನಟಿಸಿದರು. ಹಾಗಿದ್ದರೆ ರಜನಿಕಾಂತ್ ಅಭಿನಯಿಸಿದ ಕನ್ನಡ ಚಿತ್ರಗಳು ಯಾವುವು ಎಂಬುದರ ಕುರಿತಾದ ಪಟ್ಟಿ ಈ ಕೆಳಕಂಡಂತಿದೆ.

ರಜನಿಕಾಂತ್ ಅಭಿನಯದ ಕನ್ನಡ ಚಿತ್ರಗಳ ಪಟ್ಟಿ

ರಜನಿಕಾಂತ್ ಅಭಿನಯದ ಕನ್ನಡ ಚಿತ್ರಗಳ ಪಟ್ಟಿ

1. ಕಥಾಸಂಗಮ - 1976

2. ಬಾಳು ಜೇನು - 1976

3. ಒಂದು ಪ್ರೇಮದ ಕಥೆ - 1977

4. ಸಹೋದರರ ಸವಾಲ್ - 1977

5. ಕುಂಕುಮ ರಕ್ಷೆ - 1977

6. ಗಲಾಟೆ ಸಂಸಾರ - 1977

7. ಕಿಲಾಡಿ ಕಿಟ್ಟು - 1978

8. ಮಾತು ತಪ್ಪದ ಮಗ - 1978

9. ತಪ್ಪಿದ ತಾಳ - 1978

10. ಪ್ರಿಯಾ - 1979

11. ಗರ್ಜನೆ - 1981

ವಿಷ್ಣು, ಅಂಬರೀಶ್ ಹಾಗೂ ಅನಂತ್‌ನಾಗ್ ಜತೆ ನಟನೆ

ವಿಷ್ಣು, ಅಂಬರೀಶ್ ಹಾಗೂ ಅನಂತ್‌ನಾಗ್ ಜತೆ ನಟನೆ

ರಜನಿಕಾಂತ್ ಒಟ್ಟಾರೆ ಹನ್ನೊಂದು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ರಜನಿಕಾಂತ್ ವಿಷ್ಣುವರ್ಧನ್, ಅಂಬರೀಶ್ ಹಾಗೂ ಅನಂತ್‌ನಾಗ್ ರೀತಿಯ ಕನ್ನಡದ ದಿಗ್ಗಜ ನಟರ ಜತೆ ತೆರೆ ಹಂಚಿಕೊಂಡರು. ವಿಷ್ಣುವರ್ಧನ್ ಜತೆ ಒಟ್ಟು ಮೂರು ಚಿತ್ರಗಳಲ್ಲಿ ನಟಿಸಿದ್ದ ರಜನಿಕಾಂತ್ ಅಂಬರೀಶ್ ಜತೆ 1979ರಲ್ಲಿ ಪ್ರಿಯಾ ಎಂಬ ಚಿತ್ರದಲ್ಲಿ ನಟಿಸಿದ್ದರು. ಇದು ತಮಿಳು ಹಾಗೂ ಕನ್ನಡ ದ್ವಿಭಾಷಾ ಚಿತ್ರವಾಗಿತ್ತು. 1978ರಲ್ಲಿ ತೆರೆ ಕಂಡಿದ್ದ ಮಾತು ತಪ್ಪದ ಮಗ ಎಂಬ ಚಿತ್ರದಲ್ಲಿ ರಜನಿಕಾಂತ್ ಹಾಗೂ ಅನಂತ್ ನಾಗ್ ಒಟ್ಟಿಗೆ ನಟಿಸಿದ್ದರು. ಅನಂತ್ ನಾಗ್ ನಾಯಕನಾಗಿ ಹಾಗೂ ರಜನಿಕಾಂತ್ ಖಳನಾಯಕನಾಗಿ ಕಾಣಿಸಿಕೊಂಡಿದ್ದರು.

ವಿ‍ಷ್ಣುವರ್ಧನ್ - ರಜನಿಕಾಂತ್ ಫೇಮಸ್ ಕೊಂಬೊ

ವಿ‍ಷ್ಣುವರ್ಧನ್ - ರಜನಿಕಾಂತ್ ಫೇಮಸ್ ಕೊಂಬೊ

ಇನ್ನು ರಜನಿಕಾಂತ್ ಹೆಚ್ಚಾಗಿ ತೆರೆ ಹಂಚಿಕೊಂಡಿರುವ ಕನ್ನಡದ ನಟನೆಂದರೆ ಅದು ಸಾಹಸಸಿಂಹ ವಿ‍ಷ್ಣುವರ್ಧನ್. 1977ರಲ್ಲಿ ತೆರೆಕಂಡ ಸಹೋದರರ ಸವಾಲ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ರಜನಿಕಾಂತ್ ಹಾಗೂ ವಿಷ್ಣುವರ್ಧನ್ ಅದೇ ವರ್ಷ ಬಿಡುಗಡೆಗೊಂಡ ಗಲಾಟೆ ಸಂಸಾರ ಹಾಗೂ 1978ರಲ್ಲಿ ಬಿಡುಗಡೆಗೊಂಡ ಕಿಲಾಡಿ ಕಿಟ್ಟು ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು.

More from Filmibeat

English summary
List of Rajinikanth Kannada movies: Did you know Rajinikanth and Ambareesh once shared screen? Know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X