ಸುದೀಪ್‌ನಿಂದ ಸರ್ಜಾವರೆಗೆ ದರ್ಶನ್ ವರ್ತನೆಗೆ ಬೇಸತ್ತು ದೂರಾದವರೆಷ್ಟು?
ಸೆಟ್ಟಿನಲ್ಲಿದ್ದಾಗ ದರ್ಶನ್ ದೇವರಂಥ ಮನುಷ್ಯ. ಇಂತಹ ಇನ್ನೊಬ್ಬ ನಟ ಇರುವುದಕ್ಕೆ ಸಾಧ್ಯವೇ ಇಲ್ಲ. ಇದೂವರೆಗೂ ವೇದಿಕೆಗಳ ಮೇಲೆ ಹಿರಿಯ ನಟರಿಗೆ ಗೌರವ ಕೊಡುವುದರಿಂದ ಹಿಡಿದು ಅವರೊಂದಿಗೆ ನಡೆದುಕೊಳ್ಳುವ ರೀತಿ ಎಲ್ಲವೂ ಸರಿಯಾಗಿಯೇ ಇತ್ತು. ಅದಕ್ಕೆ ಅಂತಾನೇ ಚಿತ್ರರಂಗದಲ್ಲಿ ಸ್ನೇಹಿತರು ಕೂಡ ದಂಡಿಯಾಗಿಯೇ ಇದ್ದರು.
ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ದರ್ಶನ್ ಪರ ದೊಡ್ಡ ಸ್ನೇಹ ವರ್ಗವೇ ಇತ್ತು. ಸ್ಯಾಂಡಲ್‌ವುಡ್‌ನ ನಟರೊಂದಿಗೆ, ನಿರ್ದೇಶಕರೊಂದಿಗೆ ದರ್ಶನ್ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಆದರೆ, ಕಳೆದ ಆರೇಳು ವರ್ಷಗಳಲ್ಲಿ ಒಬ್ಬೊಬ್ಬರೇ ಇವರಿಂದ ದೂರವಾಗುತ್ತಾ ಬಂದಿದ್ದರು.

ಸ್ಯಾಂಡಲ್‌ವುಡ್ ನಟರೊಂದಿಗೆ ಮನಸ್ತಾಪ, ಕೆಟ್ಟ ಕೊಳಕಾಗಿ ಬೈಯ್ಯುವುದು, ಹೀಗೆ ದರ್ಶನ್ ವರ್ತನೆಯಿಂದ ಬೇಸತ್ತಿದ್ದರು. ಹಾಗಿದ್ದರೆ, ದರ್ಶನ್‌ನಿಂದ ದೂರ ಉಳಿದವರು ಸ್ಯಾಂಡಲ್‌ವುಡ್ ಸ್ನೇಹಿತರು ಯಾರು? ಅವರೊಂದಿಗೆ ದರ್ಶನ್ ಕಿತ್ತಾಡಿಕೊಂಡಿದ್ದು ಏನಕ್ಕೆ? ಬಹುಕಾಲದ ಸ್ನೇಹಿತರನ್ನೇ ದರ್ಶನ್ ಬಿಟ್ಟುಕೊಟ್ಟಿದ್ದೇಕೆ? ತಿಳಿಯಲು ಮುಂದೆ ಓದಿ.
ಸೃಜನ್ ಲೋಕೇಶ್-ರವಿಚೇತನ್
ದರ್ಶನ್ ಜೊತೆ ಗುರುತಿಸಿಕೊಳ್ಳುತ್ತಿದ್ದ ಸ್ಯಾಂಡಲ್‌ವುಡ್‌ನ ಇಬ್ಬರು ನಟರಲ್ಲಿ ಸೃಜನ್ ಲೋಕೇಶ್ ಹಾಗೂ ರವಿಚೇತನ್ ಪ್ರಮುಖರು. ಯಾವಾಗಲೂ ದರ್ಶನ್ ಜೊತೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಅವರ ಗುಂಪಿನಲ್ಲಿ ಇವರು ಕಾಣಿಸಿಕೊಂಡಿರಲಿಲ್ಲ. ಅದಕ್ಕೇನು ಕಾರಣ ಅನ್ನೋದನ್ನು ರವಿ ಚೇತನ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಕೋವಿಡ್ ಬಳಿಕ ದರ್ಶನ್ ಜೊತೆಗಿದ್ದ ಸಂಗಡಿಗರು ಬದಲಾಗಿದ್ದರು. ಅವರೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತಿದ್ದವರನ್ನೇ ದೂರ ಇಡುವುದಕ್ಕೆ ಶುರು ಮಾಡಿದ್ದರು. ಹೀಗಾಗಿ ರವಿ ಚೇತನ್ ಬೇಸರ ಆಗಿತ್ತು. ಈ ಕಾರಣಕ್ಕೆ ದರ್ಶನ್‌ರಿಂದ ದೂರ ಉಳಿದಿದ್ದಾಗಿ ಹೇಳಿಕೊಂಡಿದ್ದಾರೆ. ದರ್ಶನ್ ಆಪ್ತ ಗೆಳೆಯನಾಗಿದ್ದ ಸೃಜನ್ ಲೋಕೇಶ್ ಕೂಡ ಇಂತಹದ್ದೇ ಕಾರಣದಿಂದ ದೂರ ಉಳಿದಿದ್ದಾರೆ.
ಅರ್ಜುನ್ ಸರ್ಜಾ- ಧ್ರುವ ಸರ್ಜಾ
ಇನ್ನು 'ಪ್ರೇಮಬರಹ' ಸಿನಿಮಾ ರಿಲೀಸ್‌ಗೂ ಮೊದಲು ದರ್ಶನ್ ಹಾಗೂ ಸರ್ಜಾ ಕುಟುಂಬದ ನಡುವೆ ಆತ್ಮೀಯತೆ ಇತ್ತು. ಆದರೆ, ರಿಲೀಸ್ ಬಳಿಕ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ವ್ಯವಹಾರದಲ್ಲಿ ಮೋಸ ಮಾಡಿದ್ದರು. ಇದನ್ನು ಕೇಳುವುದಕ್ಕೆ ದರ್ಶನ್ ಬಳಿ ಅರ್ಜುನ್ ಸರ್ಜಾ ಹೋಗಿದ್ದರು. ಆ ವೇಳೆ ದರ್ಶನ್ ಅವಮಾನ ಮಾಡಿದ್ದರು. ಈ ಕಾರಣಕ್ಕೆ ಅರ್ಜುನ್ ಸರ್ಜ ಹಾಗೂ ಧ್ರುವ ಸರ್ಜಾ ದೂರ ಆದರು ಅಂತ ವರದಿಯಾಗಿತ್ತು.

ಸುದೀಪ್
ಸುದೀಪ್ ಹಾಗೂ ದರ್ಶನ್ ಇಬ್ಬರೂ ಕುಚಿಕುಗಳಂತೆ ಇದ್ದರು. ಆದರೆ, ಸಂದರ್ಶನವೊಂದರಲ್ಲಿ ದರ್ಶನ್ ಅವಕಾಶ ಕೊಡಿಸಿದ್ದೇ ನಾನು ಎಂದಿದ್ದಕ್ಕೆ ಸುದೀಪ್ ಸ್ನೇಹಿತನೇ ಅಲ್ಲ ಎಂದಿದ್ದರು.
ಜಗ್ಗೇಶ್
ದರ್ಶನ್ ಬಗ್ಗೆ ಮಾತಾಡಿರುವ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿತ್ತು. ಆ ಬಳಿಕ ಜಗ್ಗೇಶ್ ಶೂಟಿಂಗ್ ಮಾಡುತ್ತಿದ್ದ 'ತೋತಾಪುರಿ' ಸಿನಿಮಾದ ಸೆಟ್ಟಿಗೆ ಅಭಿಮಾನಿಗಳು ಬಂದು ಗದ್ದಲ ಎಬ್ಬಿಸಿದ್ದರು. ಆ ಘಟನೆ ಬಳಿಕ ದರ್ಶನ್ ಜೊತೆ ಜಗ್ಗೇಶ್ ಕಾಣಿಸಿಕೊಳ್ಳಲಿಲ್ಲ.
ಉಮಾಪತಿ-ಸಂದೇಶ್ ನಾಗರಾಜ್
ಇನ್ನು ದರ್ಶನ್ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿದ್ದ ನಿರ್ಮಾಪಕರಲ್ಲಿ ಉಮಾಪತಿ ಹಾಗೂ ಸಂದೇಶ್ ನಾಗರಾಜ್ ಪ್ರಮುಖರು. ಆದರೆ, ಸಂದೇಶ್ ನಾಗರಾಜ್ ಹೋಟೆಲ್‌ನ ಸಿಬ್ಬಂದಿ ಜೊತೆ ಗಲಾಟೆ ಮಾಡಿಕೊಂಡಿದ್ದರು. ಹೀಗಾಗಿ ದರ್ಶನ್ ಹಾಗೂ ಸಂದೇಶ್ ನಾಗರಾಜ್ ದೂರ ಆಗಿದ್ದರು. ಹಾಗೇ ವ್ಯವಹಾರದಲ್ಲಿ ಉಮಾಪತಿ ಜೊತೆ ದರ್ಶನ್ ಮನಸ್ಸು ಕೆಡಿಸಿಕೊಂಡಿದ್ದರು. ಅಂದಿನಿಂದ ಇಬ್ಬರೂ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ.


Click it and Unblock the Notifications











