For Quick Alerts
  ALLOW NOTIFICATIONS  
  For Daily Alerts

  ಅಬ್ಬಾ! ಶಿವಣ್ಣನ ಮುಂದಿನ ಸಿನಿಮಾಗಳ ಲಿಸ್ಟ್ ನೋಡಿದ್ರೆ ಸುಸ್ತಾಗುತ್ತೆ.!

  By Naveen
  |

  ಶಿವರಾಜ್ ಕುಮಾರ್..... ಯಾವಾಗಲೂ ಸಿನಿಮಾ.. ಸಿನಿಮಾ.. ಸಿನಿಮಾ... ಅಂತ ಕನವರಿಸುವ ನಟ. ಚಿತ್ರರಂಗಕ್ಕೆ ಬಂದು 30 ವರ್ಷಗಳಾದರೂ, 115ಕ್ಕೂ ಹೆಚ್ಚು ಸಿನಿಮಾ ಮಾಡಿದರೂ, ಶಿವಣ್ಣನಿಗೆ ಇನ್ನೂ ಒಂದು ನಿಮಿಷ ಸುಸ್ತಾಗಿಲ್ಲ. ಅದೇ ಎನರ್ಜಿಯನ್ನು ಇಂದಿಗೂ ಶಿವಣ್ಣ ಉಳಿಸಿಕೊಂಡಿದ್ದಾರೆ.

  ಶಿವಣ್ಣನಿಗೆ ಕೆಲಸದ ಮೇಲೆ ಇರುವ ಆಸಕ್ತಿ, ಅವರ ಡೆಡಿಕೇಶನ್ ಎಲ್ಲರಿಗೂ ಸ್ಫೂರ್ತಿ. ಇನ್ನೂ ಶಿವಣ್ಣನ ಮುಂದಿನ ಸಿನಿಮಾಗಳ ಲಿಸ್ಟ್ ನೋಡಿದರೆ ಅವರ ಸಿನಿಮಾ ಪ್ರೇಮ ಎಂಥದ್ದು ಅಂತ ತಿಳಿಯುತ್ತದೆ.

  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶಿವಣ್ಣ ಅವರ ಮುಂದಿನ ಸಿನಿಮಾಗಳ ಪಟ್ಟಿ ಇಲ್ಲಿದೆ ಓದಿ...

  'ಮಾಸ್ ಲೀಡರ್' ಮತ್ತು 'ಟಗರು'

  'ಮಾಸ್ ಲೀಡರ್' ಮತ್ತು 'ಟಗರು'

  ಶಿವಣ್ಣ ಅಭಿನಯದಲ್ಲಿ ಸದ್ಯ ರಿಲೀಸ್ ಆಗುವ ಸಿನಿಮಾಗಳ ಪೈಕಿ 'ಮಾಸ್ ಲೀಡರ್' ಮತ್ತು 'ಟಗರು' ಪ್ರಮುಖವಾಗಿರುವಂಥದ್ದು. 'ಟಗರು' ಚಿತ್ರಕ್ಕೆ ಸೂರಿ ಆಕ್ಷನ್ ಕಟ್ ಹೇಳಿದ್ದಾರೆ.

  'ದಿ ವಿಲನ್'

  'ದಿ ವಿಲನ್'

  ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ 'ದಿ ವಿಲನ್'. ಈ ಚಿತ್ರದಲ್ಲಿ ಮೊದಲ ಬಾರಿಗೆ ಶಿವಣ್ಣ ಮತ್ತು ಸುದೀಪ್ ಒಟ್ಟಿಗೆ ನಟಿಸುತ್ತಿದ್ದಾರೆ.

  'ಖದರ್'

  'ಖದರ್'

  ಟೈಟಲ್ ಮೂಲಕವೇ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ 'ಖದರ್'. 'ಖದರ್' ಸಿನಿಮಾದ ಒಂದು ಪೋಸ್ಟರ್ ಈ ಹಿಂದೆ ರಿಲೀಸ್ ಆಗಿ ದೊಡ್ಡ ಮಟ್ಟದ ಸದ್ದು ಮಾಡಿತ್ತು.

   'ಸಾಯಿ ಪ್ರಕಾಶ್' ಸಿನಿಮಾ

  'ಸಾಯಿ ಪ್ರಕಾಶ್' ಸಿನಿಮಾ

  ಶಿವಣ್ಣನಿಗೆ 'ತವರಿಗೆ ಬಾ ತಂಗಿ' ಸೇರಿದಂತೆ ಕೆಲ ಸಿನಿಮಾ ಮಾಡಿದ್ದ ನಿರ್ದೇಶಕ ಓಂ ಸಾಯಿ ಪ್ರಕಾಶ್ ಮುಂದೆ ಶಿವಣ್ಣ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ.

  'ಬಾದ್ ‍ಷಾ'

  'ಬಾದ್ ‍ಷಾ'

  'ಮೈಲಾರಿ' ಚಿತ್ರದ ನಂತರ ಮತ್ತೆ ಶಿವಣ್ಣ ಹಾಗೂ ಆರ್. ಚಂದ್ರು ಮಾಡುತ್ತಿರುವ ಸಿನಿಮಾ 'ಬಾದ್ ‍ಷಾ'.

  'ಈಸೂರು ದಂಗೆ'

  'ಈಸೂರು ದಂಗೆ'

  'ಈಸೂರು ದಂಗೆ' ಘಟನೆಯ ಮೇಲೆ ಶಿವಣ್ಣ ಸಿನಿಮಾ ಮಾಡುತ್ತಿದ್ದು ಈ ಚಿತ್ರ ಶಿವಣ್ಣ ಸಿನಿಮಾಗಳ ಪೈಕಿ ವಿಭಿನ್ನವಾಗಿರುವಂಥದ್ದು.

  ಮಫ್ತಿ

  ಮಫ್ತಿ

  'ಮಫ್ತಿ' ಸಿನಿಮಾದಲ್ಲಿ ಶಿವಣ್ಣ ಒಂದು ಪ್ರಮುಖ ಪಾತ್ರವನ್ನು ಮಾಡುತ್ತಿದ್ದಾರೆ. ಶ್ರೀಮುರಳಿ ನಟನೆಯ ಈ ಚಿತ್ರದ ವಿಶೇಷ ಟೀಸರ್ ಶಿವಣ್ಣ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿದೆ.

  'ರಣರಂಗ'

  'ರಣರಂಗ'

  'ರಾಜಕುಮಾರ' ನಂತರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಶಿವಣ್ಣನಿಗೆ ಸಿನಿಮಾ ಮಾಡಲಿದ್ದು, ಚಿತ್ರದ ಟೈಟಲ್ 'ರಣರಂಗ' ಅಂತ ಫಿಕ್ಸ್ ಆಗಿದೆ.

  'ಶಿವಲಿಂಗ 2'

  'ಶಿವಲಿಂಗ 2'

  'ಶಿವಲಿಂಗ' ಚಿತ್ರದ ಸಮಯದಲ್ಲಿ ಶಿವಣ್ಣ ನಿರ್ದೇಶಕ ಪಿ.ವಾಸು ಅವರ ಜೊತೆ 'ಶಿವಲಿಂಗ 2' ಅಥವಾ 'ರಾಬಿನ್ ವುಡ್' ಎಂಬ ಸಿನಿಮಾ ಮಾಡುವುದಾಗಿ ಹೇಳಿದ್ದರು.

  'ಅಪ್ಪಣ್ಣ' ಮತ್ತು 'ಮನಮೋಹಕ'

  'ಅಪ್ಪಣ್ಣ' ಮತ್ತು 'ಮನಮೋಹಕ'

  ಸಿಂಪಲ್ ಸುನಿ ನಿರ್ದೇಶನದಲ್ಲಿ 'ಮನಮೋಹಕ' ಎಂಬ ಸಿನಿಮಾ ಬರಲಿದೆ ಎಂಬ ಸುದ್ದಿ ಹಿಂದೆಯಿಂದ ಇದೆ. ಜೊತೆಗೆ 'ಅಪ್ಪಣ್ಣ' ಎಂಬ ಹೆಸರಿನಲ್ಲಿ ಒಂದು ಚಿತ್ರ ಮಾಡುವ ಬಯಕೆಯನ್ನು ಶಿವಣ್ಣ ಈ ಹಿಂದೆ ವ್ಯಕ್ತ ಪಡಿಸಿದ್ದರು. ಇನ್ನೂ ಇಷ್ಟು ಚಿತ್ರಗಳನ್ನು ಹೊರತು ಪಡಿಸಿ ಇನ್ನು ಕೆಲ ನಿರ್ದೇಶಕರ ಸಿನಿಮಾಗಳು ಮಾತುಕತೆಯ ಹಂತದಲ್ಲಿದೆ.

  English summary
  List Of Upcoming Movies Of Shiva Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X