ವಿಜಯ ಪ್ರಕಾಶ್ ಎಂಬ ಹೃದಯವಂತ ಹಾಡುಗಾರನ ಜಾದು!

By Naveen

Recommended Video

ವಿಜಯ್ ಪ್ರಕಾಶ್ ಬರ್ತ್ ಡೇ ಸ್ಪೆಷಲ್ : ಅವರ ಕಂಠಸಿರಿಯಲ್ಲಿ ಬಂದ ಹಾಡುಗಳ ಪಟ್ಟಿ | Filmibeat Kannada

ಕನ್ನಡ ಸಿನಿಮಾದ ಹಾಡುಗಳಿಗೆ ಬೇರೆ ಭಾಷೆಯ ದೊಡ್ಡ ಗಾಯಕರನ್ನು ಕರೆಸಿ ಹಾಡಿಸುವ ಸಂಸ್ಕೃತಿ ಅಂದಿಗೂ ಇತ್ತು.. ಇಂದಿಗೂ ಇದೇ. ಅದು ತಪ್ಪಲ್ಲ. ಕೆಲವು ಹಾಡಿಗೆ ಅದೇ ಧ್ವನಿ ಬೇಕಾಗುತ್ತದೆ. ಆದರೆ ಇಂತಹ ಪರಿಸ್ಥಿತಿಯ ನಡುವೆ ಕನ್ನಡದ ಗಾಯಕನೊಬ್ಬ ಭಾರತದ ವಿವಿಧ ಭಾಷೆಗಳಲ್ಲಿ ಹಾಡಿ ಕನ್ನಡದ ಹೆಸರನ್ನು ಎಲ್ಲೆಡೆ ತಲುಪಿಸುತ್ತಿದ್ದಾರೆ. ಅವರು ಬೇರೆ ಯಾರು ಅಲ್ಲ ಗಾಯಕ ವಿಜಯ ಪ್ರಕಾಶ್ ಅಲಿಯಾಸ್ ನಿಮ್ಮ ಪ್ರೀತಿಯ VP.

ಮೈಸೂರಿನ ಹುಡುಗ ವಿಜಯ ಪ್ರಕಾಶ್ ಭಾರತದಾದ್ಯಂತ ತನ್ನ ಧ್ವನಿಯ ಮೂಲಕ ದಿಗ್ವಿಜಯ ಸಾಧಿಸಿದ ಗಾಯಕ. ವಿಜಯ ಪ್ರಕಾಶ್ ಕನ್ನಡಿಗರ ಹೆಮ್ಮೆ. ತಮಿಳು, ತೆಲುಗು, ಮಲೆಯಾಳಂ, ಹಿಂದಿ, ಮರಾಠಿ ಇಷ್ಟೊಂದು ಭಾಷೆಗಳಲ್ಲಿ ಹಾಡುತ್ತಿದ್ದರು ವಿಜಯ ಪ್ರಕಾಶ್ ತಮ್ಮ ಕನ್ನಡಾಭಿಮಾನವನ್ನು ಮರೆತಿಲ್ಲ. ಎಷ್ಟೊ ದೊಡ್ಡ ದೊಡ್ಡ ನಟರ ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಇವರು, ಯಾವುದೋ ಸಣ್ಣ ಸಿನಿಮಾದ ಹಾಡನ್ನು ಅದೇ ಶ್ರದ್ಧೆಯಿಂದ ಹಾಡುತ್ತಾರೆ.

ಅಂದಹಾಗೆ, ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗಾಯಕ ವಿಜಯ ಪ್ರಕಾಶ್ ಅವರ ಕೆರಿಯರ್ ಪ್ರಮುಖ ಹಾಡುಗಳು ಪಟ್ಟಿ ಮುಂದಿದೆ ಓದಿ...

ಕವಿತೆ..ಕವಿತೆ.. (ಗಾಳಿಪಟ)

ಕವಿತೆ..ಕವಿತೆ.. (ಗಾಳಿಪಟ)

ಗಣೇಶ್ ನಟನೆಯ 'ಗಾಳಿಪಟ' ಸಿನಿಮಾದ 'ಕವಿತೆ..ಕವಿತೆ..' ಹಾಡು ಕನ್ನಡದಲ್ಲಿ ವಿಜಯ ಪ್ರಕಾಶ್ ಹಾಡಿದ ಮೊದಲ ಚಿತ್ರಗೀತೆಯಾಗಿದೆ. ವಿ.ಹರಿಕೃಷ್ಣ ಸಂಗೀತ ಹೃದಯ ಶಿವ ಸಾಹಿತ್ಯದ ಹಾಡಿನ ಮೂಲಕ ಮೊದಲ ಬಾರಿಗೆ ವಿಜಯ ಪ್ರಕಾಶ್ ಕನ್ನಡದ ಚಿತ್ರಗೀತೆ ಹಾಡಿದರು.

ತರ ತರ ಹಿಡಿಸಿದೆ.. (ಕೆಂಪೇಗೌಡ)

ತರ ತರ ಹಿಡಿಸಿದೆ.. (ಕೆಂಪೇಗೌಡ)

ಸುದೀಪ್ ಅವರಿಗೆ ವಿಜಯ್ ಪ್ರಕಾಶ್ ಧ್ವನಿ ಸಖತ್ ಸೂಟ್ ಆಗುತ್ತದೆ. ಅದೇ ಕಾರಣಕ್ಕೆ ಸುದೀಪ್ ಅವರ ಸಿನಿಮಾದ ಒಂದು ಹಾಡನ್ನಾದರೂ ವಿಜಯ ಪ್ರಕಾಶ್ ಹಾಡುತ್ತಾರೆ. ಅಂದಹಾಗೆ, ಮೊದಲ ಬಾರಿಗೆ ವಿಜಯ ಪ್ರಕಾಶ್ ಸುದೀಪ್ ಅವರಿಗೆ ಹಾಡಿದ್ದು, 'ಕೆಂಪೇಗೌಡ' ಸಿನಿಮಾದಲ್ಲಿ ಈ ಚಿತ್ರದ 'ತರ ತರ ಹಿಡಿಸಿದೆ..' ಹಾಡಿನ ಮೂಲಕ ಇಬ್ಬರ ಕಾಂಬಿನೇಶನ್ ಶುರು ಆಯ್ತು.

ಖಾಲಿ ಕ್ವಾಟ್ರು.. (ವಿಕ್ಟರಿ)

ಖಾಲಿ ಕ್ವಾಟ್ರು.. (ವಿಕ್ಟರಿ)

'ವಿಕ್ಟರಿ' ಸಿನಿಮಾದ 'ಖಾಲಿ ಕ್ವಾಟ್ರು..' ಹಾಡು ಕುಡುಕರ ರಾಷ್ಟ್ರಗೀತೆ ಅಂತನೇ ಫೇಮಸ್ ಆಗಿದೆ. ಅರ್ಜುನ್ ಜನ್ಯ ಸಂಗೀತ, ಯೋಗರಾಜ್ ಭಟ್ಟರ ಪದಗಳಿಗೆ ವಿಜಯ್ ಪ್ರಕಾಶ್ ಜೀವ ತುಂಬಿದ್ದಾರೆ. ವಿಜಯ ಪ್ರಕಾಶ್ ಅವರ ಕೆರಿಯರ್ ನಲ್ಲಿ ಬಂದ ಸೂಪರ್ ಹಿಟ್ ಹಾಡುಗಳಲ್ಲಿ ಈ ಹಾಡು ಪ್ರಮುಖವಾಗಿದೆ.

'ಗಾಟಿಯ ಇಳಿದು..' (ಉಳಿದವರು ಕಂಡಂತೆ)

'ಗಾಟಿಯ ಇಳಿದು..' (ಉಳಿದವರು ಕಂಡಂತೆ)

ವಿಜಯ್ ಪ್ರಕಾಶ್ ಹಾಡುಗಾರಿಕೆಯ ಮತ್ತೊಂದು ಶಕ್ತಿಯನ್ನು ತೋರಿಸಿದ ಹಾಡು 'ಉಳಿದವರು ಕಂಡಂತೆ' ಸಿನಿಮಾದ

'ಗಾಟಿಯ ಇಳಿದು..' ಹಾಡು. ಅಜನೀಶ್ ಲೋಕನಾಥ್ ಸಂಗೀತದಲ್ಲಿ ಮೂಡಿ ಬಂದ ಈ ಹಾಡಿಗೆ ವಿಜಯ ಪ್ರಕಾಶ್ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

'ಅಧ್ಯಕ್ಷ' ಸಿನಿಮಾದ ಹಾಡುಗಳು

'ಅಧ್ಯಕ್ಷ' ಸಿನಿಮಾದ ಹಾಡುಗಳು

ಶರಣ್ ಅವರ ಅನೇಕ ಚಿತ್ರಗಳಿಗೆ ವಿಜಯ ಪ್ರಕಾಶ್ ಹಾಡಿದ್ದಾರೆ. ಅವುಗಳ ಪೈಕಿ 'ಅಧ್ಯಕ್ಷ' ಸಿನಿಮಾದ 'ಫೋನು ಇಲ್ಲ..' ಮತ್ತು 'ಓಪನ್ ಹೇರು ಬಿಟ್ಕೋಂಡು..' ದೊಡ್ಡ ಸಕ್ಸಸ್ ಪಡೆದ ಹಾಡುಗಳಾಗಿವೆ.

'ಸಾಲುತ್ತಿಲ್ಲವೇ..' (ಕೋಟಿಗೊಬ್ಬ 2)

'ಸಾಲುತ್ತಿಲ್ಲವೇ..' (ಕೋಟಿಗೊಬ್ಬ 2)

'ಕೋಟಿಗೊಬ್ಬ 2' ಸಿನಿಮಾದ 'ಸಾಲುತ್ತಿಲ್ಲವೇ..' ಹಾಡು ಕೂಡ ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಹೊರ ಬಂದ ಬೆಸ್ಟ್ ಹಾಡುಗಳಲ್ಲಿ ಒಂದು. ವಿ.ನಾಗೇಂದ್ರ ಪ್ರಕಾಶ್ ಬರೆದ ಅದ್ಭುತ ಸಾಹಿತ್ಯವನ್ನು ವಿಜಯ ಪ್ರಕಾಶ್ ಅಷ್ಟೇ ಅದ್ಭುತವಾಗಿ ಹಾಡಿದ್ದಾರೆ.

'ಬೆಳಗೆದ್ದು..' (ಕಿರಿಕ್ ಪಾರ್ಟಿ)

'ಬೆಳಗೆದ್ದು..' (ಕಿರಿಕ್ ಪಾರ್ಟಿ)

ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಿರುವ ಹಾಡು 'ಕಿರಿಕ್ ಪಾರ್ಟಿ'

ಸಿನಿಮಾ 'ಬೆಳಗೆದ್ದು..' ಹಾಡು. ಈ ಹಾಡು ಯಾವ ಮಟ್ಟಿಗೆ ಪಾಪ್ಯುಲರ್ ಅಂದರೆ ಸಣ್ಣ ಮಕ್ಕಳಿನಿಂದ ಹಿಡಿದು ದೊಡ್ಡವರು ಕೂಡ ಹಾಡನ್ನು ಇಷ್ಟ ಪಟ್ಟಿದ್ದಾರೆ. ಈ ಹಾಡಿಗೆ ಕೂಡ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಈ ಹಾಡಿಗೆ ವಿಜಯ ಪ್ರಕಾಶ್ ಫಿಲ್ಮ್ ಫೇರ್ ಮತ್ತು ಐಫಾ ಪ್ರಶಸ್ತಿ ಪಡೆದಿದ್ದಾರೆ.

'ನಮ್ಮೂರಲ್ಲಿ ಚಳಿಗಾಲದಲ್ಲಿ..' (ಬ್ಯೂಟಿಫುಲ್ ಮನಸುಗಳು)

'ನಮ್ಮೂರಲ್ಲಿ ಚಳಿಗಾಲದಲ್ಲಿ..' (ಬ್ಯೂಟಿಫುಲ್ ಮನಸುಗಳು)

'ಬ್ಯೂಟಿಫುಲ್ ಮನಸುಗಳು' ಸಿನಿಮಾದ 'ನಮ್ಮೂರಲ್ಲಿ ಚಳಿಗಾಲದಲ್ಲಿ..' ಹಾಡಿಗೆ ವಿಜಯ ಪ್ರಕಾಶ್ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ಮದನ್ ಬೆಳ್ಳಿಸಾಲು ಬರೆದಿದ್ದಾರೆ. 'ವೆನಿಲಾ' ಸಿನಿಮಾದ 'ಅವರಿಸು ಬಾ..' ಹಾಡಿನಲ್ಲಿಯೂ ಸಹ ಮದನ್ ಬೆಳ್ಳಿಸಾಲು ಮತ್ತು ವಿಜಯ ಪ್ರಕಾಶ್ ಜೋಡಿ ಮುಂದುವರೆದಿದೆ.

'ಗೊಂಬೆ ಹೇಳುತೈತೆ..' (ರಾಜಕುಮಾರ)

'ಗೊಂಬೆ ಹೇಳುತೈತೆ..' (ರಾಜಕುಮಾರ)

'ಗೊಂಬೆ ಹೇಳುತೈತೆ..' ಹಾಡು ಕನ್ನಡಿಗರ ಉಸಿರಿನಲ್ಲಿ ಬೆರೆತ ಹಾಡು. ಈ ಹಾಡು ವಿಜಯ ಪ್ರಕಾಶ್ ಅವರಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿದೆ. ಪುನೀತ್ ಅಭಿಮಾನಿಗಳು ಎಂದಿಗೂ ಮರೆಯದ ಹಾಡು ಇದಾಗಿದೆ. ಹರಿಕೃಷ್ಣ ಸಂಗೀತದಲ್ಲಿ ವಿಜಯ ಪ್ರಕಾಶ್ ಹಾಡಿದ್ದಾರೆ.

'ಒಂದನೊಂದು ಊರಲ್ಲಿ..' (ಬಂಗಾರ S/O ಬಂಗಾರದ ಮನುಷ್ಯ)

'ಒಂದನೊಂದು ಊರಲ್ಲಿ..' (ಬಂಗಾರ S/O ಬಂಗಾರದ ಮನುಷ್ಯ)

ಶಿವರಾಜ್ ಕುಮಾರ್ ಅವರ 'ಬಂಗಾರ S/O ಬಂಗಾರದ ಮನುಷ್ಯ' ಸಿನಿಮಾದ ಅಮೋಘ ಹಾಡು 'ಒಂದನೊಂದು ಊರಲ್ಲಿ..' ಹಾಡಿಗೆ ಸಹ ಧ್ವನಿ ನೀಡಿದ್ದು ವಿಜಯ ಪ್ರಕಾಶ್ ಅವರೇ. ಅಂದಹಾಗೆ, ಈ ಹಾಡು ಸಹ ಚಿತ್ರ ಪ್ರೇಮಿಗಳ ಮನ ಗೆದ್ದಿದೆ.

ಉಳಿದ ಭಾಷೆಗಳಲ್ಲಿ

ಉಳಿದ ಭಾಷೆಗಳಲ್ಲಿ

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲೆಯಾಳಂ, ಹಿಂದಿ ಭಾಷೆಯ ಅನೇಕ ಸೂಪರ್ ಹಾಡುಗಳನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಅಲ್ಲದೆ ಮುಖ್ಯವಾಗಿ ಆಸ್ಕರ್ ಪ್ರಶಸ್ತಿ ಪಡೆದ 'ಜೈ ಹೋ..' ಹಾಡಿಗೆ ವಿಜಯ ಪ್ರಕಾಶ್ ಧ್ವನಿ ನೀಡಿದ್ದು, ಇದು ಇಡೀ ಕನ್ನಡಿಗರಿಗೆ ಹೆಮ್ಮೆಯ ವಿಷಯ.

More from Filmibeat

English summary
List of singer Vijay Prakash's popular kannada movie songs. Vijay Prakash is Indian singer he has given his voice for kannada, hindi, tamil, telugu, malayalam songs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X