ಗುರುಕಿರಣ್ ಬಗ್ಗೆ ಈ ಒಂದು ವಿಷ್ಯ ಅನೇಕರಿಗೆ ತಿಳಿದಿಲ್ಲ

By Naveen

Recommended Video

ಗುರುಕಿರಣ್ ಬಗ್ಗೆ ಈ ಒಂದು ವಿಷ್ಯ ಅನೇಕರಿಗೆ ತಿಳಿದಿಲ್ಲ | Filmibeat Kannada

ಸಂಗೀತ ನಿರ್ದೇಶಕ ಗುರುಕಿರಣ್ ಈಗ ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸಿದ್ದಾರೆ. ನೂರು ಸೂಪರ್ ಹಿಟ್ ಹಾಡುಗಳನ್ನು ನೀಡಿ ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.

ಇದೆಲ್ಲದರ ನಡುವೆ ಗುರುಕಿರಣ್ ಅವರ ಬಗ್ಗೆ ಒಂದು ವಿಷಯ ಅನೇಕರಿಗೆ ತಿಳಿದಿಲ್ಲ. ಅದೇನೆಂದರೆ ಗುರುಕಿರಣ್ ಮ್ಯೂಸಿಕ್ ಜೊತೆಗೆ ಹಾಡುಗಳನ್ನು ಕೂಡ ಬರೆದಿದ್ದಾರೆ. ಕನ್ನಡದ ಇತ್ತೀಚಿಗಿನ ಸಂಗೀತ ನಿರ್ದೇಶಕರ ಪೈಕಿ ಹಂಸಲೇಖ ಹೊರತು ಪಡಿಸಿ ಸಂಗೀತದ ಜೊತೆಗೆ ಸಾಹಿತ್ಯವನ್ನು ಬರೆಯುವ ಮ್ಯೂಸಿಕ್ ಡೈರೆಕ್ಟರ್ ತೀರ ಕಡಿಮೆ. ಹರಿಕೃಷ್ಣ, ಅರ್ಜುನ್ ಜನ್ಯ ಸೇರಿದಂತೆ ಇತ್ತೀಚಿಗಿನ ಸಂಗೀತ ನಿರ್ದೇಶಕರು ತಮ್ಮ ಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ. ಆದರೆ ಸಾಹಿತ್ಯ ಬರೆದಿಲ್ಲ.

ಇನ್ನು 20 ವರ್ಷ ಪೂರೈಸಿರುವ ಸಂಗೀತ ನಿರ್ದೇಶಕ ಗುರುಕಿರಣ್ ತಮ್ಮ ಸಿನಿ ಜರ್ನಿಯಲ್ಲಿ ಬರೆದ ಕೆಲವು ಪ್ರಮುಖ ಹಾಡುಗಳು ಮುಂದಿದೆ ಓದಿ...

'ಉಪೇಂದ್ರ' ಚಿತ್ರದಿಂದ

'ಉಪೇಂದ್ರ' ಚಿತ್ರದಿಂದ

'ಎ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕನಾಗಿ ಚಿತ್ರರಂಗಕ್ಕೆ ಬಂದ ಗುರುಕಿರಣ್ ತಮ್ಮ ಎರಡನೇ ಸಿನಿಮಾ 'ಉಪೇಂದ್ರ' ಮೂಲಕ ಚಿತ್ರ ಸಾಹಿತಿ ಕೂಡ ಆದರು. ಈ ಚಿತ್ರದ 'ಟು ಥೌಸೆಂಡ್..' ಎಂಬ ಜನಪ್ರಿಯ ಹಾಡನ್ನು ಗುರುಕಿರಣ್ ಅವರೇ ಬರೆದಿದ್ದರು.

'ಬಂಡಲ್ ಬಡಾಯಿ ಮಾದೇವ..'

'ಬಂಡಲ್ ಬಡಾಯಿ ಮಾದೇವ..'

ವಿಷ್ಣುವರ್ಧನ್ ನಟನೆಯ 'ಏಕದಂತ' ಸಿನಿಮಾದ 'ಬಂಡಲ್ ಬಡಾಯಿ ಮಾದೇವ..' ಹಾಡಿನ್ನು ಕೂಡ ಗುರುಕಿರಣ್ ಬರೆದಿದ್ದಾರೆ. ವಿಶೇಷ ಅಂದರೆ ಈ ಹಾಡಿನಲ್ಲಿ ಅವರು ಕೂಡ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

'ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು..'

'ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು..'

ಶಿವರಾಜ್ ಕುಮಾರ್ ಅವರ 'ಮೈಲಾರಿ' ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದ ಗುರುಕಿರಣ್ ಅದರೊಂದಿಗೆ 'ಕೆಟ್ಟೋದ್ರಪ್ಪೋ ಪ್ಯಾಟೆ ಹುಡ್ಗೀರು..' ಹಾಡಿಗೆ ಸಾಹಿತ್ಯ ಒದಗಿಸಿದ್ದರು. ಆರ್.ಚಂದ್ರು ಚಿತ್ರವನ್ನು ನಿರ್ದೇಶನ ಮಾಡಿದ್ದರು.

'ಅಪ್ಪು ಪಪ್ಪು ಎನ್ನುತ್ತಾನೋ...'

'ಅಪ್ಪು ಪಪ್ಪು ಎನ್ನುತ್ತಾನೋ...'

ಶಿವಣ್ಣ ಮತ್ತು ರಾಗಿಣಿ ಜೋಡಿಯ 'ಶಿವ' ಸಿನಿಮಾದಲ್ಲಿ 'ಅಪ್ಪು ಪಪ್ಪು ಎನ್ನುತ್ತಾನೋ...' ಎಂಬ ಐಟಂ ಸಾಂಗ್ ಇದೆ. ಈ ಹಾಡನ್ನು ಸಹ ಗುರುಕಿರಣ್ ಬರೆದಿದ್ದಾರೆ.

'ಈ ಹುಡುಗಿರೆಲ್ಲ ಹಿಂಗೆ..'

'ಈ ಹುಡುಗಿರೆಲ್ಲ ಹಿಂಗೆ..'

ಉಪೇಂದ್ರ ಅವರ 'ಓಂಕಾರ' ಸಿನಿಮಾದ ಫೇಮಸ್ ಹಾಡು 'ಈ ಹುಡುಗಿರೆಲ್ಲ ಹಿಂಗೆ..' ಹಾಡಿನಲ್ಲಿ ಗುರುಕಿರಣ್ ಸಾಹಿತ್ಯ ಇದೆ.

'ಸ್ಪೆಷಲ್ ಆಗಿ ಆರ್ಡರ್ ಕೊಟ್ಟೆ..'

'ಸ್ಪೆಷಲ್ ಆಗಿ ಆರ್ಡರ್ ಕೊಟ್ಟೆ..'

ಆರ್.ಚಂದ್ರು ಮತ್ತು ಉಪೇಂದ್ರ ಕಾಂಬಿನೇಶನ್ ನಲ್ಲಿ ಬಂದ 'ಬ್ರಹ್ಮ' ಸಿನಿಮಾದ 'ಸ್ಪೆಷಲ್ ಆಗಿ ಆರ್ಡರ್ ಕೊಟ್ಟೆ..' ಹಾಡನ್ನು ಬರೆದಿರುವುದು ಕೂಡ ಗುರುಕಿರಣ್.

ಅನೇಕ ಹಾಡಿನ ಮೊದಲ ಸಾಲು

ಅನೇಕ ಹಾಡಿನ ಮೊದಲ ಸಾಲು

ಈ ಹಾಡುಗಳ ಜೊತೆಗೆ ಅನೇಕ ಹಾಡುಗಳ ಮೊದಲ ಸಾಲನ್ನು ಮ್ಯೂಸಿಕ್ ಮಾಡುವಾಗಲೇ ಗುರುಕಿರಣ್ ಕಟ್ಟುತ್ತಿದ್ದರಂತೆ. ಅದರಲ್ಲಿ 'ಈ ಟಚ್ ಅಲ್ಲಿ ಏನೋ ಇದೆ..' ಹಾಡು ಕೂಡ ಒಂದು.

ಗುರುಕಿರಣ್ ಸಂದರ್ಶನ

ಗುರುಕಿರಣ್ ಸಂದರ್ಶನ

20 ವರ್ಷವನ್ನು ಚಿತ್ರರಂಗದಲ್ಲಿ ಪೂರೈಸಿರುವ ಹಿನ್ನಲೆಯಲ್ಲಿ ಗುರುಕಿರಣ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಸಂದರ್ಶನ ನೀಡಿದ್ದಾರೆ. ಆ ಪೂರ್ಣ ಸಂದರ್ಶನ ಓದಲು ಈ ಲಿಂಕ್ ಕ್ಲಿಕ್ಕಿಸಿ.

More from Filmibeat

English summary
List of songs written by kannada music director Gurukiran. Gurukiran has given music to more than 90 movies among them A, Upendra, Kariya, Jogi are super hit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X