For Quick Alerts
  ALLOW NOTIFICATIONS  
  For Daily Alerts

  ಹುಡುಗರ ಸಾಮರ್ಥ್ಯ ಮ್ಯಾಗಿಯಂತೆ 2 ನಿಮಿಷ ಎಂದಿದ್ದ ನಟಿಗೆ ಡಾಲಿ ಧನಂಜಯ ಸವಾಲ್!

  |

  ಸಿನಿರಸಿಕರ ನೆಚ್ಚಿನ ದಿನವಾದ ಮಗದೊಂದು ಶುಕ್ರವಾರ ಬಂದಿದೆ. ನಾಳೆ ಶುಕ್ರವಾರ ( ಸೆಪ್ಟೆಂಬರ್ 16 ) ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಹಲವಾರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಎಲ್ಲಾ ಯೋಜನೆಯ ಪ್ರಕಾರವೇ ನಡೆದಿದ್ದರೆ ನಾಳೆಯ ದಿನ ರಾಷ್ಟ್ರೀಯ ಸಿನಿಮಾ ದಿನವಾಗಬೇಕಿತ್ತು ಹಾಗೂ ಈ ದಿನದಂದು ದೇಶದಲ್ಲಿನ ಎಲ್ಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಕೇವಲ 75 ರೂಪಾಯಿಗಳು ಇರಬೇಕಿತ್ತು.

  ಆದರೆ ಹಿಂದಿ ಸಿನಿಮಾ ಬ್ರಹ್ಮಾಸ್ತ್ರ ಉತ್ತಮ ಕಲೆಕ್ಷನ್ ಮಾಡುತ್ತಿರುವ ಕಾರಣ ಅದರ ಕಲೆಕ್ಷನ್ ತಗ್ಗಬಾರದೆಂಬ ಕಾರಣಕ್ಕೆ ಈ ವಿಶೇಷ ದಿನವನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಇನ್ನು ಈ ದಿನದಂದು ಕನ್ನಡ ಹಾಗೂ ತೆಲುಗು ಚಿತ್ರರಂಗಗಳ ಹಲವಾರು ಚಿತ್ರಗಳು ಬಿಡುಗಡೆಯಾಗುತ್ತಿದ್ದು ಈ ಚಿತ್ರಗಳು ಸಹ ಈ ಯೋಜನೆ ಮುಂದೂಡಿಕೆಯಾಗಿರುವುದರಿಂದ ಒಳ್ಳೆಯ ಕಲೆಕ್ಷನ್ ಮಾಡಬಹುದು ಎಂಬ ನಿಟ್ಟುಸಿರು ಬಿಟ್ಟಿವೆ.

  ಹುಡುಗರ ಸಾಮರ್ಥ್ಯವನ್ನು ಮ್ಯಾಗಿಗೆ ಹೊಲಿಸಿದ್ದ ನಟಿ ರೆಜಿನಾ ಕ್ಯಾಸಂಡ್ರ ಅಭಿನಯದ ಸಿನಿಮಾ ಕೂಡ ಇದೇ ದಿನ ಬಿಡುಗಡೆಯಾಗುತ್ತಿದ್ದು, ಸೆಪ್ಟೆಂಬರ್ 16ರ ಶುಕ್ರವಾರದಂದು ಯಾವ ಯಾವ ಸಿನಿಮಾಗಳು ತೆರೆಗೆ ಬರಲಿವೆ ಎಂಬುದರ ಕುರಿತ ಪಟ್ಟಿ ಕೆಳಕಂಡಂತಿದೆ.

  ರೆಜಿನಾ ಕ್ಯಾಸೆಂಡ್ರಗೆ ಡಾಲಿ ಧನಂಜಯ್ ಸವಾಲ್

  ರೆಜಿನಾ ಕ್ಯಾಸೆಂಡ್ರಗೆ ಡಾಲಿ ಧನಂಜಯ್ ಸವಾಲ್

  ರೆಜಿನಾ ಕ್ಯಾಸೆಂಡ್ರ ತನ್ನ ಅಭಿನಯದ ಶಾಕಿನಿ ಡಾಕಿನಿ ಚಿತ್ರದ ಪ್ರಮೋಷನ್ ವೇಳೆ 'ಮ್ಯಾಗಿ ಹಾಗೂ ಹುಡುಗರ ಸಾಮರ್ಥ್ಯ ಎರಡೂ ಕೂಡ ಒಂದೇ ಎರಡೂ ಸಹ ಎರಡೇ ನಿಮಿಷ' ಎಂಬ ಹೇಳಿಕೆಯನ್ನು ನೀಡಿ ವಿವಾದಕ್ಕೆ ಕಾರಣರಾಗಿದ್ದರು ಹಾಗೂ ಈ ಕುರಿತು ಸಾಕಷ್ಟು ವ್ಯಂಗ್ಯಗಳು ಕೂಡ ವ್ಯಕ್ತವಾಗಿದ್ದವು. ರೆಜಿನಾ ಅಭಿನಯದ ಈ ಶಾಕಿನಿ ಡಾಕಿನಿ ಚಿತ್ರ ನಾಳೆ ಬಿಡುಗಡೆಯಾಗಲಿದ್ದು, ಈ ಚಿತ್ರದ ಎದುರು ಕನ್ನಡದ ಪೈಕಿ ಡಾಲಿ ಧನಂಜಯ್ ಅಭಿನಯದ ದೊಡ್ಡ ಚಿತ್ರ ಮಾನ್ಸೂನ್ ರಾಗ ಬಿಡುಗಡೆಯಾಗುತ್ತಿದೆ. ಹೀಗಾಗಿ ಶಾಕಿನಿ ಡಾಕಿನಿಗೆ ಮಾನ್ಸೂನ್ ರಾಗ ಸವಾಲಾಗಿ ಪರಿಣಮಿಸಿದೆ. ಶಾಕಿನಿ ಡಾಕಿನಿ ಬೆಂಗಳೂರಿನಲ್ಲಿ ಅರವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದ್ದು, ಕನ್ನಡದ ಚಿತ್ರವಾದ ಮಾನ್ಸೂನ್ ರಾಗ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಈ 2 ಚಿತ್ರಗಳ ಪೈಕಿ ಯಾವ ಚಿತ್ರ ಉತ್ತಮ ಪ್ರದರ್ಶನವನ್ನು ಕಂಡು ನಂತರದ ದಿನಗಳಲ್ಲಿ ತನ್ನ ಚಿತ್ರಮಂದಿರಗಳನ್ನು ಉಳಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಮಾನ್ಸೂನ್ ರಾಗ ಸವಾಲನ್ನು ಶಾಕಿನಿ ಡಾಕಿನಿ ಎದುರಿಸಿ ನಿಲ್ಲುತ್ತಾ ಎಂಬ ಪ್ರಶ್ನೆ ಮೂಡಿದೆ.

  ಸೆಪ್ಟೆಂಬರ್ 16ಕ್ಕೆ ತೆರೆ ಕಾಣುವ ಕನ್ನಡ ಚಿತ್ರಗಳ ಪಟ್ಟಿ

  ಸೆಪ್ಟೆಂಬರ್ 16ಕ್ಕೆ ತೆರೆ ಕಾಣುವ ಕನ್ನಡ ಚಿತ್ರಗಳ ಪಟ್ಟಿ

  • ಮಾನ್ಸೂನ್ ರಾಗ

  • ಪಂಪ

  • ಮರ್ದಿನಿ

  • ಕಪಾಲ

  • ರಿಯಾ

  ತೆಲುಗು ಚಿತ್ರಗಳು

  ತೆಲುಗು ಚಿತ್ರಗಳು

  • ಶಾಕಿನಿ ಡಾಕಿನಿ

  • ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ

  • K3, ಕೋಟಿಕೊಕ್ಕಡು

  • ನೇನು ಮೀಕು ಬಾಗಾ ಕಾವಾಲ್ಸಿನವಾಡಿನಿ

  • ಸಕಲ ಗುಣಾಭಿರಾಮ

  ತಮಿಳು & ಮಲಯಾಳಂ ಚಿತ್ರಗಳು

  ತಮಿಳು & ಮಲಯಾಳಂ ಚಿತ್ರಗಳು

  • ಸಿನಮ್ ( ತಮಿಳು, ಮಲಯಾಳಂ )

  • ಕೊತ್ತು ( ಮಲಯಾಳಂ )

  • ಕಿಂಗ್ ಫಿಷ್ ( ಮಲಯಾಳಂ )

  • ವಿಸುಧಾ ಮೆಜೊ

  English summary
  List of South Indian movies releasing on September 16; Dhananjaya challenges Regina Cassandra. Take a look.
  Thursday, September 15, 2022, 18:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X