twitter
    For Quick Alerts
    ALLOW NOTIFICATIONS  
    For Daily Alerts

    ಈ ವಾರ ರಿಲೀಸ್‌ಗೆ ರೆಡಿಯಾಗಿರೋ ಸೌತ್ ಸಿನಿಮಾಗಳ ಪಟ್ಟಿ ಇಲ್ಲಿದೆ: ಗುರುಶಿಷ್ಯರಿಗೆ ಹೇಗಿದೆ ಕ್ರೇಜ್?

    |

    ಪ್ರತಿವಾರ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತೆ. ಅದರಲ್ಲೂ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಲೇ ಇರುತ್ತೆ. ಪ್ರತಿ ಭಾಷೆಯಲ್ಲೂ ಕಮ್ಮಿ ಅಂದರೂ ಮೂರರಿಂದ ನಾಲ್ಕು ಸಿನಿಮಾಗಳು ರಿಲೀಸ್ ಆಗೋದು ಫಿಕ್ಸ್.

    ಕನ್ನಡ, ತೆಲುಗು, ತಮಿಳು ಸೇರಿದಂತೆ ಮಲಯಾಳಂ ಭಾಷೆಗಳಲ್ಲಿ ಈ ವಾರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಅದರಲ್ಲೂ ಹಬ್ಬ ಹರಿದಿನಗಳು ಬಂತು ಅಂದರೆ, ಥಿಯೇಟರ್‌ಗೆ ಲಗ್ಗೆ ಇಡಬೇಕಿರೋ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತೆ. ಈ ವಾರ ಕೂಡ ಅದೇ ಸ್ಥಿತಿ ನಿರ್ಮಾಣ ಆಗಿದೆ.

    Exclusive: ಉಮಾಪತಿ 'ಕ್ರಾಂತಿ' ಪ್ರಮೋಷನ್: Exclusive: ಉಮಾಪತಿ 'ಕ್ರಾಂತಿ' ಪ್ರಮೋಷನ್: "ನಮ್ಮದು ಸಿನಿಮಾ ಜಾತಿ.. ಇಲ್ಲಿ ಶಾಶ್ವತ ಶತ್ರುಗಳು ಯಾರು ಇಲ್ಲ"

    ಕನ್ನಡದಲ್ಲೂ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ತೆಲುಗಿನಲ್ಲಿ 6 ಸಿನಿಮಾಗಳು, ತಮಿಳಿನಲ್ಲಿ 8 ಸಿನಿಮಾಗಳು ಹಾಗೂ ಮಲಯಾಳಂನಲ್ಲಿ 6 ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಕರ್ನಾಟಕದಲ್ಲಿ ಇಷ್ಟೂ ಸಿನಿಮಾಗಳ ಮಧ್ಯೆ ಶರಣ್ ಅಭಿನಯದ ಗುರುಶಿಷ್ಯರು ಪೈಪೋಟಿ ಮಾಡಲಿದೆ. ಹಾಗಿದ್ರೆ, ಯಾವ್ಯಾವ ಭಾಷೆಯಲ್ಲಿ ಯಾವ್ಯಾವ ಸಿನಿಮಾ ರಿಲೀಸ್ ಆಗುತ್ತಿದೆ? ಕನ್ನಡ ಸಿನಿಮಾಗಳ ನಡುವೆ ಹೇಗಿದೆ ಪೈಪೋಟಿ? ಅನ್ನೋದನ್ನು ತಿಳಿಯಲು ಮುಂದೆ ಓದಿ.

     'ಗುರು ಶಿಷ್ಯರು' ಕ್ರೇಜ್ ಹೇಗಿದೆ?

    'ಗುರು ಶಿಷ್ಯರು' ಕ್ರೇಜ್ ಹೇಗಿದೆ?

    ಈಗಾಗ್ಲೇ ಕನ್ನಡದಲ್ಲಿ 'ಗುರುಶಿಷ್ಯರು' ಇತಿಹಾಸವನ್ನು ಸೃಷ್ಟಿಸಿದೆ. 'ಗುರುಶಿಷ್ಯರು' ಅಂದರೆ, ಹಳೆಯ ಸಿನಿಮಾನೇ ನೆನಪಾಗುತ್ತೆ. ಬಹಳ ವರ್ಷಗಳ ಬಳಿಕ ಈಗ ಮತ್ತೊಮ್ಮೆ ಇದೇ ಟೈಟಲ್ ಅನ್ನು ಇಟ್ಕೊಂಡು 'ಗುರುಶಿಷ್ಯರು' ಸಿನಿಮಾ ರಿಲೀಸ್ ಆಗುತ್ತಿದೆ. ಶರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸೆಪ್ಟೆಂಬರ್ 23ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ. ಗ್ರಾಮೀಣ ಕ್ರೀಡೆ ಖೋ ಖೋವನ್ನು ಆಧರಿಸಿ ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಅಲ್ಲದೆ ಗುರು ಮತ್ತು ಶಿಷ್ಯಂದಿರ ನಡುವಿನ ಸಂಬಂಧದ ಬಗ್ಗೆನೂ ಕಥೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶರಣ್ ಇಲ್ಲಿ ಪಿಟಿ ಮಾಸ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

    'ಮಾದೇವ'ನ ಅಂಗಳಕ್ಕೆ ಖಡಕ್​ ವಿಲನ್: ಮರಿ ಟೈಗರ್​ ಎದುರು ಕಿಟ್ಟಿ ಘರ್ಜನೆ'ಮಾದೇವ'ನ ಅಂಗಳಕ್ಕೆ ಖಡಕ್​ ವಿಲನ್: ಮರಿ ಟೈಗರ್​ ಎದುರು ಕಿಟ್ಟಿ ಘರ್ಜನೆ

     ಕನ್ನಡದಲ್ಲಿ ಒಟ್ಟು 4 ಸಿನಿಮಾ ರಿಲೀಸ್

    ಕನ್ನಡದಲ್ಲಿ ಒಟ್ಟು 4 ಸಿನಿಮಾ ರಿಲೀಸ್

    'ಗುರುಶಿಷ್ಯ'ರೊಂದಿಗೆ ಕನ್ನಡದಲ್ಲಿ ಇನ್ನೂ ಮೂರು ಸಿನಿಮಾಗಳು ರಿಲೀಸ್ ಆಗುತ್ತಿವೆ. ಸ್ಟಾರ್ ನಟ ಶರಣ್ ಸಿನಿಮಾ ಸಹಜವಾಗಿಯೇ ಹೈಲೈಟ್ ಆಗಿದೆ. ಸಿನಿಮಾ ತಂಡ ಕೂಡ ಭರ್ಜರಿಯಾಗಿಯೇ ಪ್ರಚಾರವನ್ನು ಆರಂಭಿಸಿದೆ. ಇದರೊಂದಿಗೆ 'ಸ್ವಚ್ಚ ಕರ್ನಾಟಕ', 'ರಾಜ ರಾಣಿ ರೋರರ್ ರಾಕೆಟ್' ಹಾಗೂ 'ಧಮ್' ಅನ್ನೋ ಕನ್ನಡ ಸಿನಿಮಾಗಳೂ ಕೂಡ ಬಿಡುಗಡೆಗೆ ಸಜ್ಜಾಗಿ ನಿಂತಿವೆ. ದಸಾರ ಹಬ್ಬಕ್ಕೂ ಒಂದು ವಾರಕ್ಕೂ ಮುನ್ನ ಸಿನಿಮಾ ರಿಲೀಸ್ ಆಗುತ್ತಿದ್ದು ಪ್ರತಿಕ್ರಿಯೆ ಹೇಗಿರುತ್ತೆ? ಅನ್ನೋ ಕುತೂಹಲವಿದೆ.

     6 ಟಾಲಿವುಡ್‌ ಸಿನಿಮಾ ರಿಲೀಸ್

    6 ಟಾಲಿವುಡ್‌ ಸಿನಿಮಾ ರಿಲೀಸ್

    ಕನ್ನಡದಲ್ಲಿ ನಾಲ್ಕು ಸಿನಿಮಾಗಳು ರಿಲೀಸ್ ಆಗಿದ್ದರೆ, ತೆಲುಗಿನಲ್ಲಿ 6 ಸಿನಿಮಾಗಳು ರಿಲೀಸ್ ಆಗುತ್ತಿವೆ. 'ಪಗ ಪಗ ಪಗ' ಈ ಸಿನಿಮಾ ಸೆಪ್ಟೆಂಬರ್ 22ಕ್ಕೆ ಬಿಡುಗಡೆಯಾಗುತ್ತಿದೆ. 'ಕೃಷ್ಣ ವೃಂಧ ವಿಹಾರಿ', 'ದೊಂಗಲುನ್ನಾರು ಜಾಗೃತ', 'ಅಲ್ಲುರಿ', 'ಸರವಂ ಸಿದ್ಧಂ', 'ಗುರುತುಂದಾ ಸೀತಾಕಾಲಂ', ಸಿನಿಮಾಗಳಉ ಸೆಪ್ಟೆಂಬರ್ 23ರಂದು ಆಂಧ್ರ ಹಾಗೂ ತೆಲಂಗಾಣದಲ್ಲಿ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

    'ಅಭಿಮಾನಿದೇವೋಭವ' ಎಂದ ಉಪೇಂದ್ರ ಅಭಿಮಾನಿಗಳ ಕ್ಷಮೆ ಕೇಳಿದ್ಯಾಕೆ?'ಅಭಿಮಾನಿದೇವೋಭವ' ಎಂದ ಉಪೇಂದ್ರ ಅಭಿಮಾನಿಗಳ ಕ್ಷಮೆ ಕೇಳಿದ್ಯಾಕೆ?

     ತಮಿಳು, ತೆಲುಗಿನಲ್ಲೂ ಸಿನಿಮಾ ರಿಲೀಸ್

    ತಮಿಳು, ತೆಲುಗಿನಲ್ಲೂ ಸಿನಿಮಾ ರಿಲೀಸ್

    ತಮಿಳಿನಲ್ಲಿ ಸುಮಾರು 8 ಸಿನಿಮಾಗಳು ರಿಲೀಸ್ ಆಗುತ್ತಿವೆ. ಇವುಗಳಲ್ಲಿ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದ ತೆಲುಗು ಸಿನಿಮಾ 'ಕಾರ್ತಿಕೇಯ 2' ಕೂಡ ತಮಿಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಇದು ಬಿಟ್ಟರೆ ಉಳಿದಿದ್ದೆಲ್ಲಾ ಚಿಕ್ಕ ಪುಟ್ಟ ಸಿನಿಮಾಗಳೇ. ಹಾಗೇ ಮಲಯಾಳಂನಲ್ಲೂ 6 ಸಿನಿಮಾ ರಿಲೀಸ್ ಆಗಲಿದ್ದು, 'ಚಟ್ಟಂಬಿ', 'ವೆಲ್ಲಾರಿ ಪಟ್ಟಣಂ', 'ಒರ್ಮಕಲಿಲ್', 'ಕೊಶಿಚ್ಯಂಟೆ ಪರಂಬು', 'ಕರ್ಮಸಾಗರಂ' ಜೊತೆ 'ಕಾರ್ತಿಕೇಯ 2' ಮಲಯಾಳಂ ಡಬ್ಬಿಂಗ್ ಸಿನಿಮಾ ಬಿಡುಗಡೆಯಾಗುತ್ತಿದೆ.

    English summary
    List Of South Indian Movies Releasing On September 23rd Sharan Starrer Gurushishyaru Lead Movie, Know More.
    Monday, September 19, 2022, 16:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X