ಬೆಂಗಳೂರಿನಲ್ಲಿ ಬಿಡುಗಡೆ ದಿನ ಅತಿಹೆಚ್ಚು ಶೋ ಪಡೆದುಕೊಂಡ 10 ಚಿತ್ರಗಳು; ಕನ್ನಡದ ಎರಡೇ ಚಿತ್ರಗಳು, ಟಾಪ್ ಸಹ ಅಲ್ಲ!

ಕಳೆದ ವರ್ಷ ಸಿನಿ ರಸಿಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸು ಸಾಧಿಸಿದ್ದ ಚಿತ್ರರಂಗಗಳು ಈ ವರ್ಷದ ಮೊದಲ ಐದು ತಿಂಗಳುಗಳಲ್ಲಿ ಕಳೆದ ವರ್ಷದ ಮಟ್ಟಕ್ಕಲ್ಲದಿದ್ದರೂ ಸಮಾಧಾನಕರವಾದ ಗೆಲುವು ಕಂಡಿವೆ.

ಇನ್ನು ಕೆಲ ಚಿತ್ರರಂಗಗಳು ಸೂಪರ್ ಹಿಟ್ ಎನಿಸಿಕೊಳ್ಳುವಂತಹ ಸಾಲು ಸಾಲು ಚಿತ್ರಗಳನ್ನು ನೀಡಿದ್ದು, ಇನ್ನೂ ಕೆಲ ಚಿತ್ರರಂಗಗಳು ಸಾಮಾನ್ಯ ಫಲಿತಾಂಶ ಗಿಟ್ಟಿಸಿಕೊಂಡ ಚಿತ್ರಗಳನ್ನು ನೀಡಿವೆ. ಇನ್ನು ಬಾಕ್ಸ್ ಆಫೀಸ್ ವಿಚಾರವಾಗಿ ತೆಗೆದುಕೊಂಡರೆ ಬಾಲಿವುಡ್, ಟಾಲಿವುಡ್ ಮುಂಚೂಣಿಯಲ್ಲಿದ್ದು, ಒಳ್ಳೆಯ ಚಿತ್ರಗಳನ್ನು ಗಣನೆಗೆ ತೆಗೆದುಕೊಂಡರೆ ಮಲಯಾಳಂ ಚಿತ್ರರಂಗ ಮೇಲುಗೈ ಸಾಧಿಸಿದೆ.

List of top 10 films which got most shows on release day in Bengaluru in 2023

ಹೀಗೆ ಈ ವರ್ಷದ ಮೊದಲ ಐದು ತಿಂಗಳುಗಳಲ್ಲಿ ವಿವಿಧ ಭಾಷೆಯ ಹಲವಾರು ಚಿತ್ರಗಳು ಬಿಡುಗಡೆಗೊಂಡಿದ್ದು, ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ಪೈಕಿ ಬಹುತೇಕ ಎಲ್ಲಾ ಚಿತ್ರಗಳು ತೆರೆಗೆ ಬಂದಿವೆ. ಇನ್ನು ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳ ಹಾಗೆಯೇ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಚಿತ್ರಗಳೂ ಸಹ ದೊಡ್ಡ ಮಟ್ಟದಲ್ಲಿ ಬಿಡುಗಡೆಗೊಂಡಿವೆ.

ಹೀಗೆ ಈ ವರ್ಷ ಇಲ್ಲಿಯವರೆಗೂ ಬಿಡುಗಡೆಗೊಂಡಿರುವ ಚಿತ್ರಗಳ ಪೈಕಿ ಬೆಂಗಳೂರಿನಲ್ಲಿ ಯಾವ ಚಿತ್ರ ಬಿಡುಗಡೆ ದಿನ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದೆ ಎಂಬ ಪಟ್ಟಿ ಈ ಕೆಳಕಂಡಂತಿದೆ..

1. ಪಠಾಣ್ - 821 ಪ್ರದರ್ಶನಗಳು

2. ವಾರಿಸು - 757 ಪ್ರದರ್ಶನಗಳು

3. ಪೊನ್ನಿಯಿನ್ ಸೆಲ್ವನ್ 2 - 690 ಪ್ರದರ್ಶನಗಳು

4. ಕ್ರಾಂತಿ - 680 ಪ್ರದರ್ಶನಗಳು

5. ಕಬ್ಜ - 597 ಪ್ರದರ್ಶನಗಳು

6. ತುನಿವು - 568 ಪ್ರದರ್ಶನಗಳು

7. ಸ್ಪೈಡರ್ ಮ್ಯಾನ್ - 516 ಪ್ರದರ್ಶನಗಳು

8. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ - 507 ಪ್ರದರ್ಶನಗಳು

9. ತೂ ಜೂತಿ ಮೈನ್ ಮಕ್ಕರ್ - 496 ಪ್ರದರ್ಶನಗಳು

10. ಆಂಟ್‌ಮ್ಯಾನ್ - 407 ಪ್ರದರ್ಶನಗಳು

ಇನ್ನು ಈ ವರ್ಷ ಬಿಡುಗಡೆಗೊಂಡ ಚಿತ್ರಗಳ ಪೈಕಿ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಹತ್ತು ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಚಿತ್ರಗಳು ಮಾತ್ರ ಇದ್ದು, ಉಳಿದೆಲ್ಲಾ ಚಿತ್ರಗಳು ಪರಭಾಷಾ ಚಿತ್ರಗಳಾಗಿವೆ.

ಈ ವರ್ಷ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಸಾವಿರ ಕೋಟಿ ಗಳಿಸಿರುವ ಏಕೈಕ ಚಿತ್ರ ಎನಿಸಿಕೊಂಡಿರುವ ಬಾಲಿವುಡ್‌ನ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಬೆಂಗಳೂರಿನಲ್ಲಿ ಈ ವರ್ಷ ಬಿಡುಗಡೆಯ ದಿನ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರ ಎನಿಸಿಕೊಂಡಿದ್ದರೆ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಗೊಂಡಿದ್ದ ವಿಜಯ್ ನಟನೆಯ ತಮಿಳು ಚಿತ್ರ ವಾರಿಸು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಇನ್ನು ಈ ವರ್ಷ ಮಾರ್ಟಿನ್, ಯುವ, ಸಪ್ತ ಸಾಗರದಾಚೆಯೆಲ್ಲೋ, ಯುಐ, ಕಾಟೇರ, ಸಲಾರ್ ಸೇರಿದಂತೆ ಇನ್ನೂ ಅನೇಕ ಬಿಗ್ ಬಜೆಟ್‌ನ, ದೊಡ್ಡ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರಗಳು ಬಿಡುಗಡೆಯಾಗಲಿದ್ದು, ಈ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.

More from Filmibeat

English summary
List of top 10 films which got most shows on release day in Bengaluru in 2023. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X