Don't Miss!
- Technology
ಒನ್ಪ್ಲಸ್ ನಾರ್ಡ್ ಸ್ಮಾರ್ಟ್ವಾಚ್ ಬೆಲೆ ಇಳಿಕೆ; ಅಗ್ಗದ ದರದಲ್ಲಿ ನಿಮ್ಮ 'ಕೈ'ಗೆ!
- Lifestyle
Shani Asta 2023 : ಶನಿ ಅಸ್ತ 2023: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹಾಗೂ ಪರಿಹಾರ
- News
₹50 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ: ಮೂರೇ ದಿನಕ್ಕೆ ಕಳಪೆ ಕಾಮಗಾರಿ ಬಯಲು
- Sports
Axar Patel Marriage: ಚಿತ್ರಗಳು: ಮೇಹಾ ಪಟೇಲ್ ಕೈಹಿಡಿದ ಭಾರತೀಯ ಕ್ರಿಕೆಟಿಗ ಅಕ್ಷರ್ ಪಟೇಲ್
- Finance
ಹಿಂಡೆನ್ಬರ್ಗ್ ವರದಿ ಎಫೆಕ್ಟ್: ಅದಾನಿ ಸ್ಟಾಕ್ ಶೇ.20ರಷ್ಟು ಕುಸಿತ!
- Automobiles
ಭಾರತದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಲು ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರಲ್ಲಿ ವಿಶ್ವದಾದ್ಯಂತ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ 10 ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಏಕೈಕ ಚಿತ್ರ!
ಸದ್ಯ ನಾವೀಗ 2022ರ ಡಿಸೆಂಬರ್ ತಿಂಗಳಿನಲ್ಲಿದ್ದು ಈ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಕೌಂಟ್‌ಡೌನ್ ಶುರುವಾಗಿದೆ. ಇನ್ನು 2022 ಸಿನಿಮಾ ಕ್ಷೇತ್ರಕ್ಕೆ ಮತ್ತೊಂದು ಸಾಮಾನ್ಯ ವರ್ಷವಾಗಿರದೇ ಗೋಲ್ಡನ್ ಇಯರ್ ಆಗಿ ಗುರುತಿಸಿಕೊಳ್ಳಲಿದೆ ಎಂದರೆ ತಪ್ಪಾಗಲಾರದು. ಹೌದು, ಕಳೆದೆರಡು ವರ್ಷಗಳಲ್ಲಿ ವಿಶ್ವದಾದ್ಯಂತ ಕೊರೊನಾ ಕಂಟಕ ಎದುರಾಗಿದ್ದ ಕಾರಣ ಹಲವು ತಿಂಗಳುಗಳ ಕಾಲ ಚಿತ್ರಮಂದಿರಗಳು ಮುಚ್ಚಿ ಅದೆಷ್ಟೋ ಚಿತ್ರಗಳು ನಷ್ಟ ಅನುಭವಿಸಿದ್ದವು ಹಾಗೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಭಾಗ್ಯ ಸಿಗದ ಹಲವು ಚಿತ್ರಗಳು ನೇರ ಓಟಿಟಿಯಲ್ಲಿ ಪ್ರದರ್ಶನಗೊಂಡಿದ್ದವು.
ಆದರೆ ಈ ವರ್ಷ ಹಾಗಾಗಲಿಲ್ಲ. ವರ್ಷದ ಮೊದಲ ತಿಂಗಳಿನಿಂದ ಕೊನೆಯವರೆಗೂ ಯಾವುದೇ ಲಾಕ್‌ಡೌನ್ ಭೀತಿ ಇಲ್ಲದೇ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಿವೆ. ಅನೇಕ ಚಿತ್ರಗಳು ಚಿತ್ರಮಂದಿರಗಳಲ್ಲಿ ತೆರೆಕಂಡು ಸಿನಿ ರಸಿಕರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿವೆ. ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರ ಜೇಬು ತುಂಬಿದೆ. ಹೀಗಾಗಿಯೇ ಈ ವರ್ಷವನ್ನು ಗೋಲ್ಡನ್ ಎಂದು ಕರೆಯಬಹುದಾಗಿದೆ.
ಹೀಗೆ ಚಲನಚಿತ್ರರಂಗಕ್ಕೆ ಲಕ್ಕಿ ಇಯರ್ ಆಗಿರುವ ಈ ವರ್ಷ ಅನೇಕ ಚಿತ್ರಗಳು ಅಬ್ಬರಿಸಿವೆ. ತಮ್ಮ ಕಂಟೆಂಟ್‌ಗಳಿಂದಾಗಿ ಚರ್ಚೆಗೆ ಒಳಪಟ್ಟಿವೆ. ಹೀಗೆ ಸಾಕಷ್ಟು ಸದ್ದು ಮಾಡಿದ ಈ ವರ್ಷದ ಚಿತ್ರಗಳ ಬಗ್ಗೆ ತಿಳಿದುಕೊಳ್ಳಲು ಸಿನಿ ಪ್ರಿಯರು ಅಂತರ್ಜಾಲದಲ್ಲಿ ಹುಡುಕಾಡಿದ್ದಾರೆ. ಈ ರೀತಿ 2022ರಲ್ಲಿ ನೆಟ್ಟಿಗರು ವಿಶ್ವದಾದ್ಯಂತ ಅತಿಹೆಚ್ಚಾಗಿ ಹುಡುಕಲ್ಪಟ್ಟ ಹತ್ತು ಚಿತ್ರಗಳ ಪಟ್ಟಿಯನ್ನು ಗೂಗಲ್ ಬಿಡುಗಡೆಗೊಳಿಸಿದ್ದು ಈ ಪಟ್ಟಿಯಲ್ಲಿ ಕನ್ನಡದ ಒಂದು ಚಿತ್ರ ಸ್ಥಾನ ಗಿಟ್ಟಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ..

ವಿಶ್ವದಾದ್ಯಂತ ಅತಿಹೆಚ್ಚು ಹುಡುಕಲ್ಪಟ್ಟ ಚಿತ್ರಗಳು
ವಿಶ್ವದಾದ್ಯಂತ 2022ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಾಡಿದ ಚಿತ್ರಗಳ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ..
1. ಥಾರ್: ಲವ್ ಅಂಡ್ ಥಂಡರ್
2. ಬ್ಲಾಕ್ ಆಡಂ
3. ಟಾಪ್ ಗನ್: ಮ್ಯಾವೆರಿಕ್
4. ದಿ ಬ್ಯಾಟ್‌ಮನ್
5. ಎನ್‌ಕ್ಯಾಂಟೊ
6. ಬ್ರಹ್ಮಾಸ್ತ್ರ
7. ಜುರಾಸಿಕ್ ವರ್ಲ್ಡ್ ಡೊಮಿನಿಯನ್
8. ಕೆಜಿಎಫ್ ಚಾಪ್ಟರ್ 2
9. ಅನ್‌ಚಾರ್ಟೆಡ್
10. ಮೊರ್ಬಿಯಸ್

ಕನ್ನಡದ ಏಕೈಕ ಚಿತ್ರ ಕೆಜಿಎಫ್ ಚಾಪ್ಟರ್ 2
ಇನ್ನು ವಿಶ್ವದಾದ್ಯಂತ 2022ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಟಾಪ್ ಹತ್ತು ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಕನ್ನಡದ ಏಕೈಕ ಚಿತ್ರ ಎಂಬ ಹೆಗ್ಗಳಿಕೆಗೆ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಕೆಜಿಎಫ್ ಚಾಪ್ಟರ್ 2 ಪಾತ್ರವಾಗಿರುವುದು ಹೆಮ್ಮೆಯ ವಿಷಯವೇ ಸರಿ. ಕೇವಲ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದ ಪಟ್ಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಸ್ಥಾನ ಪಡೆದಿರುವುದು ಚಿತ್ರದ ಬಗ್ಗೆ ವಿಶ್ವ ಮಟ್ಟದಲ್ಲಿ ಇದ್ದ ಕ್ರೇಜ್ ಅನ್ನು ತೋರಿಸುತ್ತದೆ.

ಭಾರತದಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಚಿತ್ರಗಳು
ಇನ್ನು ಭಾರತದಲ್ಲಿ 2022ರಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಾಡಿದ ಚಿತ್ರಗಳ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ..
1. ಬ್ರಹ್ಮಾಸ್ತ್ರ - ಪಾರ್ಟ್ 1 ಶಿವ
2. ಕೆಜಿಎಫ್ ಚಾಪ್ಟರ್ 2
3. ದಿ ಕಾಶ್ಮೀರ್ ಫೈಲ್ಸ್
4. ಆರ್ ಆರ್ ಆರ್
5. ಕಾಂತಾರ
6. ಪುಷ್ಪ - ದಿ ರೈಸ್
7. ವಿಕ್ರಮ್
8. ಲಾಲ್ ಸಿಂಗ್ ಛಡ್ಡಾ
9. ದೃಶ್ಯಂ 2
10. ಥೋರ್: ಲವ್ ಅಂಡ್ ಥಂಡರ್