ಕಳೆದ 6 ತಿಂಗಳಲ್ಲಿ ಟ್ವಿಟರ್‌ನಲ್ಲಿ ಅತಿಹೆಚ್ಚು ಕ್ರೇಜ್ ಹೊಂದಿರುವ 10 ಸೌತ್ ನಟರು; ಕನ್ನಡದಿಂದ ಒಬ್ಬರೇ!
ಟ್ವಿಟರ್.. ಇತ್ತೀಚೆಗಿನ ದಿನಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಸಾಮಾಜಿಕ ಜಾಲತಾಣದ ಈ ವೇದಿಕೆ ಜತೆಗೆ ಇನ್ನೂ ಹೆಚ್ಚಿನ ಜನರಿಗೆ ರೀಚ್ ಆಗಿದೆ. ಹೌದು, ಟ್ವಿಟರ್ ದಿನದಿಂದ ದಿನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಮನರಂಜನಾ ಕ್ಷೇತ್ರದ ಚರ್ಚೆಗಳು ಈ ಅಪ್ಲಿಕೇಶನ್‌ನಲ್ಲಿ ತುಸು ಹೆಚ್ಚೇ ನಡೆಯಲಿದ್ದು, ಸಿನಿ ರಸಿಕರು ಟ್ವಿಟರ್‌ನತ್ತ ಹೆಚ್ಚಾಗಿ ಮುಖ ಮಾಡುತ್ತಿದ್ದಾರೆ.
ಉಳಿದ ಸಾಮಾಜಿಕ ಜಾಲತಾಣದ ವೇದಿಕೆಗಳಿಗೆ ಹೋಲಿಸಿದರೆ ಟ್ವಿಟರ್‌ನಲ್ಲಿ ತುಸು ಬೇಗನೆ ಸುದ್ದಿಗಳು ಲಭಿಸಲಿದ್ದು, ಬೇರೆ ವೇದಿಕೆಗಳಿಗೆ ಹೋಲಿಸಿದರೆ ಟ್ವಿಟರ್‌ನಲ್ಲಿ ಸಿಗುವ ಫೋಟೊ ಹಾಗೂ ವಿಡಿಯೊಗಳ ಗುಣಮಟ್ಟವೂ ಸಹ ಉನ್ನತ ಮಟ್ಟದಲ್ಲಿರುತ್ತದೆ. ಹೀಗೆ ಬಳಕೆದಾರರಿಗೆ ಇಷ್ಟವಾಗುವಂತಹ ಅಂಶಗಳನ್ನು ಹೆಚ್ಚಾಗಿ ಹೊಂದಿರುವ ಟ್ವಿಟರ್ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ.

ಇನ್ನು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಎಂಬ ಪ್ರತ್ಯೇಕ ವಿಭಾಗ ಇರುವುದರಿಂದ ಚಿತ್ರ ಪ್ರೇಮಿಗಳು ತಮ್ಮ ನೆಚ್ಚಿನ ನಟರ ಚಿತ್ರಗಳು ಬಿಡುಗಡೆಯಾದಾಗ, ಹಾಡುಗಳು ಬಿಡುಗಡೆಯಾದಾಗ ಹಾಗೂ ವಿಶೇಷವಾಗಿ ಹುಟ್ಟುಹಬ್ಬ ನಡೆದಾಗ ಆ ಹೆಸರುಗಳಲ್ಲಿ ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡುವುದಕ್ಕೆ ಟ್ವಿಟರ್ ಉತ್ತಮ ಜಾಗ ಕೂಡ ಹೌದು. ಹೀಗಾಗಿ ಟ್ವಿಟರ್‌ನಲ್ಲಿ ಸೌತ್ ಸ್ಟಾರ್ ನಟರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾತೆಗಳನ್ನು ತೆರೆದು ತಮ್ಮ ನಟರ ಬಗ್ಗೆ ದಿನನಿತ್ಯ ಟ್ವೀಟ್ ಮಾಡುತ್ತಲೇ ಇರುತ್ತಾರೆ.
ಹಾಗಿದ್ದರೆ ಕಳೆದ ಆರು ತಿಂಗಳಿನಲ್ಲಿ ಟ್ವಿಟರ್‌ನಲ್ಲಿ ಸೌತ್ ಇಂಡಿಯಾದ ಯಾವ ನಟರ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆದಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

1. ದಳಪತಿ ವಿಜಯ್ ಅವರ ಬಗ್ಗೆ ಕಳೆದ ಆರು ತಿಂಗಳಿನಲ್ಲಿ 7.7 ಮಿಲಿಯನ್ ಟ್ವೀಟ್ಸ್ ದಾಖಲಾಗಿವೆ.
2. ತೆಲುಗು ನಟ ಜೂನಿಯರ್ ಎನ್‌ಟಿಆರ್ ಬಗ್ಗೆ 6.1 ಮಿಲಿಯನ್ ಟ್ವೀಟ್ಸ್ ದಾಖಲಾಗಿವೆ.
3. ತಮಿಳು ನಟ ಅಜಿತ್ ಕುಮಾರ್ ಬಗ್ಗೆ 5.8 ಮಿಲಿಯನ್ ಟ್ವೀಟ್ಸ್ ದಾಖಲಾಗಿವೆ.
4. ಪವನ್ ಕಲ್ಯಾಣ್ ಬಗ್ಗೆ 5.5 ಮಿಲಿಯನ್ ಟ್ವೀಟ್ ದಾಖಲಾಗಿವೆ.
5. ತಮಿಳು ನಟ ಸೂರ್ಯ 5.1 ಮಿಲಿಯನ್ ಟ್ವೀಟ್ಸ್ ದಾಖಲಾಗಿವೆ.
6. ರಾಮ್ ಚರಣ್ ಕುರಿತು 5 ಮಿಲಿಯನ್ ಟ್ವೀಟ್ಸ್ ದಾಖಲಾಗಿವೆ.
7. ಪ್ರಭಾಸ್ ಕುರಿತು 4.7 ಮಿಲಿಯನ್ ಟ್ವೀಟ್ಸ್ ದಾಖಲಾಗಿವೆ.
8. ಮಹೇಶ್ ಬಾಬು ಕುರಿತು 4.2 ಮಿಲಿಯನ್ ಟ್ವೀಟ್ಸ್ ದಾಖಲಾಗಿವೆ.
9. ಕನ್ನಡದ ನಟ ಯಶ್ ಬಗ್ಗೆ 3.9 ಮಿಲಿಯನ್ ಟ್ವೀಟ್ಸ್ ಹರಿದುಬಂದಿವೆ.
10. ಅಲ್ಲು ಅರ್ಜುನ್ ಬಗ್ಗೆ 3.8 ಮಿಲಿಯನ್ ಟ್ವೀಟ್ಸ್ ಬಂದಿವೆ.
ಕಳೆದ ಆರು ತಿಂಗಳಿನಲ್ಲಿ ವಿಜಯ್ ಕುರಿತಾಗಿ ಹೆಚ್ಚು ಟ್ವೀಟ್ ದಾಖಲಾಗಲು ಕಾರಣ ವಾರಿಸು ಸಿನಿಮಾ. ಹೌದು, ವಾರಿಸು ಚಿತ್ರದ ಹಾಡುಗಳು, ಟ್ರೈಲರ್ ಹಾಗೂ ಚಿತ್ರ ಕಳೆದ ಆರು ತಿಂಗಳ ಅವಧಿಯಲ್ಲಿಯೇ ಬಿಡುಗಡೆಯಾಗಿದ್ದವು. ಉಳಿದಂತೆ ಎರಡನೇ ಸ್ಥಾನಕ್ಕೆ ಜೂನಿಯರ್ ಎನ್‌ಟಿಆರ್ ಏರಲು ಕಾರಣ ಆರ್ ಆರ್ ಆರ್ ಸಿನಿಮಾ. ಈ ಸಿನಿಮಾ ಆಸ್ಕರ್‌ಗೆ ಪ್ರವೇಶಿಸಿದ್ದು ಹಾಗೂ ಜಪಾನ್‌ನಲ್ಲಿ ಚಿತ್ರ ಬಿಡುಗಡೆಯಾದದ್ದು ಇದಕ್ಕೆ ಕಾರಣವಾಗಿದೆ.
ಇನ್ನುಳಿದಂತೆ ಅಜಿತ್ ನಟನೆಯ ತುನಿವು ಚಿತ್ರ ಬಿಡುಗಡೆಯಾದದ್ದು ಆ ನಟ ಮೂರನೇ ಸ್ಥಾನದಲ್ಲಿ ಇರುವುದಕ್ಕೆ ಕಾರಣ ಎನ್ನಬಹುದು ಹಾಗೂ ರಾಮ್ ಚರಣ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಇರಲೂ ಸಹ ಆರ್ ಆರ್ ಆರ್ ಕಾರಣವಾಗಿದೆ. ಇನ್ನು ಪವನ್ ಕಲ್ಯಾಣ್, ಸೂರ್ಯ, ಪ್ರಭಾಸ್, ಮಹೇಶ್ ಬಾಬು, ಯಶ್ ಹಾಗೂ ಅಲ್ಲು ಅರ್ಜುನ್ ಅವರ ಯಾವ ಚಿತ್ರಗಳು ಬಿಡುಗಡೆಯಾಗದಿದ್ದರೂ ಸಹ ಈ ನಟರು ದೊಡ್ಡ ಮಟ್ಟದಲ್ಲಿಯೇ ಟ್ವಿಟರ್‌ನಲ್ಲಿ ಚರ್ಚೆಗೆ ಒಳಪಟ್ಟಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಕನ್ನಡದ ಏಕೈಕ ನಟ ಎನಿಸಿಕೊಂಡಿದ್ದು, ಯಾವ ಚಿತ್ರವೂ ಇರದಿದ್ದರೂ ಯಶ್ ಇಷ್ಟರ ಮಟ್ಟಕ್ಕೆ ಟ್ವಿಟರ್‌ನಲ್ಲಿ ಚರ್ಚೆಗೆ ಒಳಗಾಗಿರುವುದು ಯಶ್ ಗಳಿಸಿರುವ ಜನಪ್ರಿಯತೆಗೆ ಹಿಡಿದಿರುವ ಕೈಗನ್ನಡಿಯಾಗಿದೆ.


Click it and Unblock the Notifications











