ಯುಟ್ಯೂಬ್‌ನಲ್ಲಿ ಅತಿಹೆಚ್ಚು 1 ಮಿಲಿಯನ್ ಲೈಕ್ಸ್ ವಿಡಿಯೊ ಹೊಂದಿರುವ 10 ನಟರ ಪಟ್ಟಿಯಲ್ಲಿ ಕನ್ನಡದ ಒಬ್ಬನೇ ನಟ!
ಯುಟ್ಯೂಬ್.. ಇತ್ತೀಚೆಗಿನ ದಿನಗಳಲ್ಲಿ ಈ ಅಪ್ಲಿಕೇಶನ್ ಉಪಯೋಗಿಸದ ಮೊಬೈಲ್ ಬಳಕೆದಾರರೇ ಇಲ್ಲ ಎನ್ನಬಹುದು. ಪ್ರತಿ ದಿನವೂ ಈ ಅಪ್ಲಿಕೇಶನ್ ಬಳಸುವಂತಹ ಸಂದರ್ಭ ಬಂದು ಒದಗುವುದು ಕಾಮನ್. ಇನ್ನು ಯುಟ್ಯೂಬ್ ಸುದ್ದಿಗಳಿಗಿಂತ ಮನರಂಜನೆಯ ಕಂಟೆಂಟ್‌ಗಳನ್ನೇ ಹೊಂದಿದೆ ಎಂದರೆ ತಪ್ಪಾಗಲಾರದು. ಈ ಹಿಂದೆ ಯುಟ್ಯೂಬ್ ಎಂದರೆ ಸಿನಿಮಾದ ಹಾಡುಗಳು ಹಾಗೂ ಸಿನಿಮಾಗಳನ್ನು ವೀಕ್ಷಿಸಬಹುದಾದ ವೇದಿಕೆ ಎಂದೇ ಗುರುತಿಸಿಕೊಂಡಿತ್ತು.
ಹೌದು, ಈ ಹಿಂದಿನಿಂದಲೂ ಚಿತ್ರತಂಡಗಳು ತಮ್ಮ ಚಿತ್ರದ ಹಾಡುಗಳು, ಟೀಸರ್, ಟ್ರೈಲರ್ ಹಾಗೂ ವಿಡಿಯೊ ಸಾಂಗ್‌ಗಳನ್ನು ಇದೇ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡುತ್ತಾ ಬಂದಿವೆ. ಪ್ರತಿಯೊಬ್ಬರ ಮೊಬೈಲ್‌ನಲ್ಲೂ ಈ ಅಪ್ಲಿಕೇಶನ್ ಇರುವ ಕಾರಣ ಸುಲಭವಾಗಿ ಸಿನಿ ರಸಿಕರನ್ನು ತಮ್ಮ ವಿಡಿಯೊಗಳು ತಲುಪಲಿವೆ ಎಂಬುದು ಸಿನಿ ಮಂದಿಯ ಲೆಕ್ಕಾಚಾರ. ಇನ್ನು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗುವ ವಿಡಿಯೊಗಳ ವಿಚಾರವಾಗಿಯೂ ಸಹ ಫ್ಯಾನ್ ವಾರ್ ನಡೆಯುತ್ತವೆ.

ಹೌದು, ಒಬ್ಬ ನಟನ ಚಿತ್ರದ ಹಾಡು ಬಿಡುಗಡೆಯಾಗಿ ನಿರ್ಮಿಸಿದ ದಾಖಲೆ ಸಂಖ್ಯೆಯ ವ್ಯೂಸ್ ಅನ್ನು ಪಡೆದುಕೊಂಡರೆ, ಆ ದಾಖಲೆಯನ್ನು ಬೇರೆ ನಟರ ಅಭಿಮಾನಿಗಳು ಮುರಿದು ಹಾಕಬೇಕು ಎಂಬ ಉದ್ದೇಶವನ್ನು ಹೊಂದಿರುತ್ತಾರೆ. ಇನ್ನು ಕೇವಲ ವ್ಯೂಸ್ ವಿಚಾರವಾಗಿ ಮಾತ್ರವಲ್ಲದೇ ಲೈಕ್ಸ್ ವಿಚಾರವಾಗಿಯೂ ಸಹ ಫ್ಯಾನ್ ವಾರ್ ಉಂಟಾಗುವುದು ಸಹಜ.
ಇನ್ನು ವಿಡಿಯೊಗಳು ಒಂದು ಮಿಲಿಯನ್ ಲೈಕ್ಸ್ ಪಡೆದುಕೊಳ್ಳುವುದು ಈ ಲೆಕ್ಕಾಚಾರದಲ್ಲಿ ಅತಿಮುಖ್ಯವಾದ ಅಂಶವಾಗಿದ್ದು, ವಿಡಿಯೊವೊಂದು ಒಂದು ಮಿಲಿಯನ್ ಲೈಕ್ಸ್ ಪಡೆಯುವುದು ಸಾಧನೆಯೇ ಸರಿ. ಹಲವು ನಟರ ಚಿತ್ರಗಳ ಸುಮಾರು ವಿಡಿಯೊಗಳು ಒಂದು ಮಿಲಿಯನ್‌ಗಿಂತಲೂ ಹೆಚ್ಚು ಲೈಕ್ಸ್ ಪಡೆದುಕೊಂಡಿರುವ ಹಲವಾರು ಉದಾಹರಣೆಗಳಿವೆ.
ಹಾಗಿದ್ದರೆ ದಕ್ಷಿಣ ಭಾರತದ ಯಾವ ನಟರು ಯುಟ್ಯೂಬ್‌ನಲ್ಲಿ ಅತಿಹೆಚ್ಚು ಒಂದು ಮಿಲಿಯನ್ ಲೈಕ್ಸ್ ಪಡೆದುಕೊಂಡಿರುವ ವಿಡಿಯೊಗಳನ್ನು ಹೊಂದಿದ್ದಾರೆ ಎಂಬುದರ ಟಾಪ್ 10 ಪಟ್ಟಿ ಈ ಕೆಳಕಂಡಂತಿದೆ..

1. ತಮಿಳು ನಟ ದಳಪತಿ ವಿಜಯ್ ಅವರ 45 ವಿಡಿಯೊಗಳು ಯುಟ್ಯೂಬ್‌ನಲ್ಲಿ ಒಂದು ಮಿಲಿಯನ್‌ಗಿಂತ ಅಧಿಕ ಲೈಕ್ಸ್ ಪಡೆದುಕೊಂಡಿವೆ.
2. ತೆಲುಗು ನಟ ಅಲ್ಲು ಅರ್ಜುನ್ ಅವರ 37 ವಿಡಿಯೊಗಳು ಯುಟ್ಯೂಬ್‌ನಲ್ಲಿ ಒಂದು ಮಿಲಿಯನ್‌ಗಿಂತ ಅಧಿಕ ಲೈಕ್ಸ್ ಪಡೆದುಕೊಂಡಿವೆ.
3. ಪ್ರಭಾಸ್ ನಟಿಸಿರುವ 28 ವಿಡಿಯೊಗಳು ಒಂದು ಮಿಲಿಯನ್‌ಗಿಂತ ಹೆಚ್ಚಿನ ಲೈಕ್ಸ್ ಅನ್ನು ಪಡೆದುಕೊಂಡಿವೆ.
4. ರಾಕಿಂಗ್ ಸ್ಟಾರ್ ಯಶ್ ಅವರ 21 ವಿಡಿಯೊಗಳು ಯುಟ್ಯೂಬ್‌ನಲ್ಲಿ ಒಂದು ಮಿಲಿಯನ್‌ಗಿಂತ ಹೆಚ್ಚು ಲೈಕ್ಸ್ ಹೊಂದಿವೆ.
5. ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ 13 ವಿಡಿಯೊಗಳು ಯುಟ್ಯೂಬ್‌ನಲ್ಲಿ ಒಂದು ಮಿಲಿಯನ್‌ಗಿಂತ ಹೆಚ್ಚು ಮೆಚ್ಚುಗೆ ಪಡೆದುಕೊಂಡಿವೆ.
6. ಅಜಿತ್ ಕುಮಾರ್ ನಟನೆಯ 11 ವಿಡಿಯೊಗಳು ಒಂದು ಮಿಲಿಯನ್‌ಗಿಂತ ಹೆಚ್ಚು ಯುಟ್ಯೂಬ್ ಲೈಕ್ಸ್ ಪಡೆದುಕೊಂಡಿವೆ.
7. ಜೂನಿಯರ್ ಎನ್‌ಟಿಆರ್ ನಟನೆಯ 10 ವಿಡಿಯೊಗಳು ಒಂದು ಮಿಲಿಯನ್‌ಗಿಂತ ಹೆಚ್ಚು ಯುಟ್ಯೂಬ್ ಲೈಕ್ಸ್ ಪಡೆದುಕೊಂಡಿವೆ.
8. ರಾಮ್ ಚರಣ್ ಅವರ 9 ವಿಡಿಯೊಗಳು ಒಂದು ಮಿಲಿಯನ್‌ಗಿಂತ ಹೆಚ್ಚು ಯುಟ್ಯೂಬ್ ಲೈಕ್ಸ್ ಪಡೆದುಕೊಂಡಿವೆ.
9. ಮಹೇಶ್ ಬಾಬು ಅವರ 7 ವಿಡಿಯೊಗಳು ಯುಟ್ಯೂಬ್‌ನಲ್ಲಿ ಒಂದು ಮಿಲಿಯನ್‌ಗಿಂತ ಹೆಚ್ಚು ಲೈಕ್ಸ್ ಪಡೆದುಕೊಂಡಿವೆ.
10. ಧನುಷ್ ನಟನೆಯ 6 ವಿಡಿಯೊಗಳು ಒಂದು ಮಿಲಿಯನ್‌ಗಿಂತ ಹೆಚ್ಚಿನ ಯುಟ್ಯೂಬ್ ಲೈಕ್ಸ್ ಪಡೆದುಕೊಂಡಿವೆ.


Click it and Unblock the Notifications











