200 ಕೋಟಿ ಗಳಿಸಲು 2 ದಿನ ತೆಗೆದುಕೊಂಡ ಆದಿಪುರುಷ್; ಮೊದಲ ದಿನವೇ 200 ಕೋಟಿ ಗಳಿಸಿದ್ದು ಈ 2 ಚಿತ್ರಗಳು ಮಾತ್ರ!
ಮೊನ್ನೆಯಷ್ಟೇ ತೆಲುಗು ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ನಿರ್ದೇಶಕ ಓಂ ರಾವತ್ ಕಾಂಬಿನೇಶನ್‌ನ ಆದಿಪುರುಷ್ ಚಿತ್ರ ಬಿಡುಗಡೆಗೊಂಡಿದೆ. ಚಿತ್ರ ಬಿಡುಗಡೆಗೂ ಮುನ್ನವೇ ತನ್ನ ಟೀಸರ್‌ನಿಂದಾಗಿ ಪಡೆದುಕೊಂಡಿದ್ದಂತಹ ನೆಗೆಟಿವ್ ವಿಮರ್ಶೆಯನ್ನೇ ಬಿಡುಗಡೆಯ ನಂತರವೂ ಸಹ ಪಡೆದುಕೊಂಡಿದೆ.
ಪ್ರಭಾಸ್ ಅಭಿಮಾನಿಗಳು ಮಾತ್ರ ಚಿತ್ರವನ್ನು ಸೂಪರ್ ಎಂದು ಮೆಚ್ಚಿಕೊಂಡಿದ್ದರೆ ಸಾಮಾನ್ಯ ಸಿನಿ ರಸಿಕರು ಚಿತ್ರವನ್ನು ಒಮ್ಮೆ ನೋಡಬಹುದು, ಅಷ್ಟಕ್ಕಷ್ಟೇ, ಚೆನ್ನಾಗಿಲ್ಲ ಎಂಬ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಹೀಗೆ ಆದಿಪುರುಷ್ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲಾರಂಭಿಸಿದ್ದು, ನಿರೀಕ್ಷಿಸಿದ್ದ ಗೆಲುವನ್ನು ಪಡೆದುಕೊಳ್ಳುವಲ್ಲಿ ಚಿತ್ರ ವಿಫಲವಾಗಿದೆ ಎಂದೇ ಹೇಳಬಹುದು. ಈ ಮೂಲಕ ಬಾಹುಬಲಿ ಚಿತ್ರ ಸರಣಿಯ ದಿಗ್ವಿಜಯದ ಬಳಿಕ ಬಂದ ಸಾಹೋ ಹಾಗೂ ರಾಧೆ ಶ್ಯಾಮ್ ರೀತಿಯೇ ಆದಿಪುರುಷ್ ಸಹ ಸಂಪೂರ್ಣ ಗೆಲುವನ್ನು ಕಾಣಲಾಗದೇ ಸೋತಿದೆ ಎಂದು ಹೇಳಬಹುದಾಗಿದೆ.
ಇನ್ನು ಕಲೆಕ್ಷನ್ ವಿಚಾರಕ್ಕೆ ಬಂದರೆ ಸಮಾಧಾನಕರ ಗಳಿಕೆಯನ್ನು ಚಿತ್ರ ಮಾಡಿದೆ. ಚಿತ್ರತಂಡ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ ಚಿತ್ರ ಮೊದಲ ದಿನ ವಿಶ್ವದಾದ್ಯಂತ 140 ಕೋಟಿ ಗಳಿಸಿದ್ದರೆ, ಎರಡನೇ ದಿನ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ಗಳಿಸಿದೆ.
ಈ ಮೂಲಕ ಚಿತ್ರ ಮೊದಲ ಎರಡು ದಿನಗಳಲ್ಲಿ ವಿಶ್ವದಾದ್ಯಂತ ಒಟ್ಟು 240 ಕೋಟಿ ಗಳಿಕೆ ಮಾಡಿದ್ದು, 2 ದಿನಗಳಲ್ಲಿ 200 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ವೇಗವಾಗಿ 200 ಕೋಟಿ ಕ್ಲಬ್ ಸೇರಿದ ಭಾರತದ ಸಿನಿಮಾಗಳ ಪಟ್ಟಿಯಲ್ಲಿ ಆದಿಪುರುಷ್ ಐದನೇ ಸ್ಥಾನಕ್ಕೇರಿದೆ. ಹಾಗಿದ್ದರೆ ಅತಿ ವೇಗವಾಗಿ 200 ಕೋಟಿ ಕ್ಲಬ್ ಸೇರಿದ ಭಾರತದ ಸಿನಿಮಾಗಳ ಪಟ್ಟಿ ಹೇಗಿದೆ, ಯಾವ ಚಿತ್ರ ವೇಗವಾಗಿ 200 ಕೋಟಿ ಗಳಿಸಿತು ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಆರ್ ಆರ್ ಆರ್ - ಬಿಡುಗಡೆಯಾದ ದಿನವೇ 200 ಕೋಟಿ ಕ್ಲಬ್ ಸೇರಿತ್ತು.
2. ಬಾಹುಬಲಿ ದ ಕನ್ಕ್ಲೂಷನ್ - ಬಿಡುಗಡೆಯಾದ ದಿನವೇ 200 ಕೋಟಿ ಕ್ಲಬ್ ಸೇರಿತ್ತು.
3. ಕೆಜಿಎಫ್ ಚಾಪ್ಟರ್ 2 - ಬಿಡುಗಡೆಯಾದ ಎರಡನೇ ದಿನಕ್ಕೆ 200 ಕೋಟಿ ಕ್ಲಬ್ ಸೇರಿತ್ತು.
4. ಆದಿಪುರುಷ್ - ಬಿಡುಗಡೆಯಾದ ಎರಡನೇ ದಿನಕ್ಕೆ 200 ಕೋಟಿ ಕ್ಲಬ್ ಸೇರಿತ್ತು.
5. ಸಾಹೋ - ಬಿಡುಗಡೆಯಾದ ಎರಡನೇ ದಿನಕ್ಕೆ 200 ಕೋಟಿ ಕ್ಲಬ್ ಸೇರಿತ್ತು.
ಹೀಗೆ ಆದಿಪುರುಷ್ ಎರಡೇ ದಿನಕ್ಕೆ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಕ್ಲಬ್ ಸೇರಿದ್ದು, ಈ ಮೂಲಕ ಈ ಸಾಧನೆಯ ಟಾಪ್ 5 ಪಟ್ಟಿಯಲ್ಲಿನ ಮೂರು ಚಿತ್ರಗಳು ಪ್ರಭಾಸ್ ನಟನೆಯ ಸಿನಿಮಾಗಳೇ ಆಗಿವೆ.
ಇನ್ನು ಇದು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಆದಿಪುರುಷ್ ಎರಡು ದಿನಕ್ಕೆ 240 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದು, ಕರ್ನಾಟಕದಲ್ಲಿ ಎರಡು ದಿನಕ್ಕೆ 14.32 ಕೋಟಿ ಗಳಿಸಿದೆ. ಮೊದಲ ದಿನ 8.17 ಕೋಟಿ ಗಳಿಸಿದ್ದ ಆದಿಪುರುಷ್ ಎರಡನೇ ದಿನ 6.15 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.


Click it and Unblock the Notifications











