twitter
    For Quick Alerts
    ALLOW NOTIFICATIONS  
    For Daily Alerts

    ಅತಿಹೆಚ್ಚು ಬಾರಿ ಫಿಲ್ಮ್‌ಫೇರ್ ಗೆದ್ದ ಕನ್ನಡ ನಟ ಯಾರು? ಸಮನಾಗಿ ಗೆದ್ದ ಅನಂತ್‌ನಾಗ್, ಅಪ್ಪುಗೆ ದ್ವಿತೀಯ ಸ್ಥಾನ!

    |

    ಭಾನುವಾರ ( ಅಕ್ಟೋಬರ್ 9 ) ಬೆಂಗಳೂರಿನಲ್ಲಿ ಫಿಲ್ಮ್‌ಫೇರ್ ಸೌತ್ ಅವಾರ್ಡ್ಸ್ ಕಾರ್ಯಕ್ರಮ ಜರುಗಿತು. ಇದು 67ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಆಗಿದ್ದು, ಮೊದಲ ಬಾರಿಗೆ 1954ರಲ್ಲಿ ಫಿಲ್ಮ್‌ಫೇರ್ ಅವಾರ್ಡ್ಸ್ ನಡೆದಿತ್ತು. ಮೊದಲಿಗೆ ಎಲ್ಲಾ ಭಾಷೆಗಳಿಗೂ ಇದ್ದ ಈ ಫಿಲ್ಮ್ ಫೇರ್ ಅವಾರ್ಡ್ಸ್ ಅನ್ನು 1963ರಿಂದ ದಕ್ಷಿಣಕ್ಕೆ ಪ್ರತ್ಯೇಕವಾಗಿ ಪ್ರಶಸ್ತಿ ಪ್ರದಾನ ಮಾಡಲು 'ಫಿಲ್ಮ್ ಫೇರ್ ಸೌತ್ ಅವಾರ್ಡ್ಸ್' ಅನ್ನು ಆರಂಭಿಸಲಾಯಿತು.

    1964ರಿಂದ ಕೇವಲ ತಮಿಳು, ತೆಲುಗು, ಬೆಂಗಾಳಿ ಹಾಗೂ ಮರಾಠಿ ಭಾಷೆಯ ಚಿತ್ರಗಳಿಗೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ನೀಡಲಾಗಿತ್ತು. 1963ರಿಂದ ಮಲಯಾಳಂ ಸಿನಿಮಾಗಳಿಗೆ ಹಾಗೂ 1967ರಿಂದ ಕನ್ನಡ ಸಿನಿಮಾಗಳಿಗೆ ಫಿಲ್ಮ್‌ಫೇರ್ ಸೌತ್ ಅವಾರ್ಡ್ಸ್ ಅಡಿಯಲ್ಲಿ ಪ್ರಶಸ್ತಿಯನ್ನು ನೀಡಲು ಆರಂಭಿಸಲಾಯಿತು. ಹೀಗೆ 1967ರಿಂದ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಿಗೆ ಫಿಲ್ಮ್‌ಫೇರ್ ಸೌತ್ ಅವಾರ್ಡ್ಸ್ ಅಡಿಯಲ್ಲಿ ಪ್ರಶಸ್ತಿ ನೀಡಲಾರಂಭಿಸಲಾಗಿದ್ದು, ಎಆರ್ ರೆಹಮಾನ್ 17 ಬಾರಿ ಪ್ರಶಸ್ತಿ ಗೆದ್ದು ಅತಿಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಕಲಾವಿದ ಎನಿಸಿಕೊಂಡಿದ್ದಾರೆ.

    ತಮಿಳಿನ ಕಮಲ್ ಹಾಸನ್ 16 ಬಾರಿ ಹಾಗೂ ಮಲಯಾಳಂನ ಮಮ್ಮೂಟ್ಟಿ 12 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದು, ಅತಿಹೆಚ್ಚು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ ಕಲಾವಿದರು ಎನಿಸಿಕೊಂಡಿದ್ದಾರೆ. ಹೀಗೆ ಅತಿಹೆಚ್ಚು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ತಮಿಳಿನಲ್ಲಿ ಕಮಲ್ ಹಾಸನ್ ಹಾಗೂ ಮಲಯಾಳಂನಲ್ಲಿ ಮಮ್ಮೂಟ್ಟಿ ಪಡೆದಿದ್ದರೆ, ಕನ್ನಡದಲ್ಲಿ ಯಾರು ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲಿದೆ ಓದಿ.

    ಅತಿಹೆಚ್ಚು ಬಾರಿ ಫಿಲ್ಮ್‌ಫೇರ್ ಪಡೆದ ಕನ್ನಡ ನಟರು

    ಅತಿಹೆಚ್ಚು ಬಾರಿ ಫಿಲ್ಮ್‌ಫೇರ್ ಪಡೆದ ಕನ್ನಡ ನಟರು

    1. ವರನಟ ಡಾ. ರಾಜ್‌ಕುಮಾರ್ - 8 ಬಾರಿ

    2. ಅನಂತ್‌ನಾಗ್ ಹಾಗೂ ಪುನೀತ್ ರಾಜ್‌ಕುಮಾರ್ - 6 ಬಾರಿ

    3. ಶಿವರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ - 4 ಬಾರಿ

    4. ಕಿಚ್ಚ ಸುದೀಪ್ - 3 ಬಾರಿ

    5. ಲೋಕೇಶ್, ಗಣೇಶ್, ರಮೇಶ್ ಅರವಿಂದ್, ನೆನಪಿರಲಿ ಪ್ರೇಮ್ ಹಾಗೂ ಯಶ್ - 2 ಬಾರಿ

    ಅತಿಹೆಚ್ಚು ಬಾರಿ ಪ್ರಶಸ್ತಿ ಗೆದ್ದದ್ದು ರಾಜ್!

    ಅತಿಹೆಚ್ಚು ಬಾರಿ ಪ್ರಶಸ್ತಿ ಗೆದ್ದದ್ದು ರಾಜ್!

    ಕನ್ನಡದ ಪರ ಅತಿಹೆಚ್ಚು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ ನಟ ಎಂಬ ದಾಖಲೆ ಹೊಂದಿರುವುದು ಡಾ. ರಾಜ್‌ಕುಮಾರ್. ಅಣ್ಣಾವ್ರು ಇಲ್ಲಿಯವರೆಗೂ ಒಟ್ಟು 8 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆಯುವುದರ ಮೂಲಕ ಈ ದಾಖಲೆಯನ್ನು ಬರೆದಿದ್ದಾರೆ. ರಾಜ್‌ಕುಮಾರ್ ಪ್ರಶಸ್ತಿಯನ್ನು ಗೆದ್ದಿರುವುದು ಈ ಚಿತ್ರಗಳ ಅಭಿನಯಕ್ಕಾಗಿ: ಗಂಧದ ಗುಡಿ, ಮಯೂರ, ಶಂಕರ್ ಗುರು, ಕೆರಳಿದ ಸಿಂಹ, ಶ್ರಾವಣ ಬಂತು, ಅದೇ ಕಣ್ಣು, ಭಾಗ್ಯದ ಲಕ್ಷ್ಮಿ ಬಾರಮ್ಮ ಮತ್ತು ಆಕಸ್ಮಿಕ.

    ಪುನೀತ್ ರಾಜ್‌ಕುಮಾರ್, ಅನಂತ್‌ನಾಗ್ ಆರು ಬಾರಿ

    ಪುನೀತ್ ರಾಜ್‌ಕುಮಾರ್, ಅನಂತ್‌ನಾಗ್ ಆರು ಬಾರಿ

    ಅನಂತ್‌ನಾಗ್ ಆರು ಬಾರಿ ಫಿಲ್ಮ್‌ಫೇರ್ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಪಡೆದಿದ್ದರೆ, ಪುನೀತ್ ರಾಜ್‌ಕುಮಾರ್ ಐದು ಬಾರಿ ಅತ್ಯುತ್ತಮ ನಟ ಹಾಗೂ ಒಂದು ಬಾರಿ ಫಿಲ್ಮ್‌ಫೇರ್ ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪುನೀತ್‌ ರಾಜ್‌ಕುಮಾರ್ ಬೆಟ್ಟದ ಹೂವು, ಅರಸು, ಹುಡುಗರು, ರಣವಿಕ್ರಮ ಹಾಗೂ ರಾಜಕುಮಾರ ಚಿತ್ರಗಳಿಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ ಹಾಗೂ ಈ ವರ್ಷ ಜೀವಮಾನ ಶ್ರೇಷ್ಟ ಸಾಧನೆ ಪ್ರಶಸ್ತಿ ಪಡೆದಿದ್ದಾರೆ. ಈ ಮೂಲಕ ಅಪ್ಪು ಹಾಗೂ ಅನಂತ್‌ನಾಗ್ ಆರು ಬಾರಿ ಫಿಲ್ಮ್‌ಫೇರ್ ಗೆಲ್ಲುವ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ.

    English summary
    Dr Rajkumar holds the most time filmfare award winner record in sandalwood. Read on
    Tuesday, October 11, 2022, 13:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X