»   » ಇನ್ನೂ 3 ವರ್ಷ ಯಾವ ನಿರ್ಮಾಪಕರ ಕೈಗೂ ಕೆಚ್ಚೆದೆಯ ಕಿಚ್ಚ ಸುದೀಪ್ ಸಿಗಲ್ಲ..!

ಇನ್ನೂ 3 ವರ್ಷ ಯಾವ ನಿರ್ಮಾಪಕರ ಕೈಗೂ ಕೆಚ್ಚೆದೆಯ ಕಿಚ್ಚ ಸುದೀಪ್ ಸಿಗಲ್ಲ..!

Posted By:
Subscribe to Filmibeat Kannada

ಕನ್ನಡದ ಆರಡಿ ಕಟೌಟ್ ಕಿಚ್ಚ ಸುದೀಪ್ ಇನ್ನೂ 3 ವರ್ಷ ಯಾವ ನಿರ್ಮಾಪಕರ ಕೈಗೂ ಸಿಗೋದಿಲ್ಲ. ಯಾಕಂದ್ರೆ ಸುದೀಪ್ ಅವರ ಡಿಮ್ಯಾಂಡ್ ಈಗ ಆ ಮಟ್ಟಕ್ಕೆ ಏರಿದೆ. ಸ್ಯಾಂಡಲ್ ವುಡ್ ನಿಂದ ಶುರುವಾಗಿ ಈಗ ಹಾಲಿವುಡ್ ವರೆಗೆ ಕಿಚ್ಚನ ಖದರ್ ಮುಟ್ಟಿದೆ.

'ದರ್ಶನ್-ಸುದೀಪ್ ಸಂಬಂಧ ಸರಿಯಿಲ್ಲ' ಎನ್ನುವುದಕ್ಕು ಮುಂಚೆ ಇಲ್ಲಿ ನೋಡಿ

ಸುದೀಪ್ ಅವರ ಮುಂದಿನ ಸಿನಿಮಾಗಳ ಲಿಸ್ಟ್ ದಿನೇ ದಿನೇ ಬೆಳೆಯುತ್ತಲೇ ಇದೆ. ಕನ್ನಡ ಸಿನಿಮಾದ ಜೊತೆ ಜೊತೆಗೆ ಬೇರೆ ಭಾಷೆಗಳ ಹೆಸರುಗಳು ಸುದೀಪ್ ಅವರ ಸಿನಿಮಾಗಳ ಪಟ್ಟಿಯಲ್ಲಿ ಇದೆ. ಸದ್ಯ ಸುದೀಪ್ ಅವರ ಕೈ ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 9 ಸಿನಿಮಾಗಳಿವೆ.

ಅಂದಹಾಗೆ, ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾಗಳು ದೊಡ್ಡ ಲಿಸ್ಟ್ ಇಲ್ಲಿದೆ ಓದಿ...

ದಿ ವಿಲನ್

ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾದ ಚಿತ್ರೀಕರಣ ಸದ್ಯ ಭರ್ಜರಿಯಾಗಿ ನಡೆಯುತ್ತಿದೆ. ಮೊದಲ ಬಾರಿಗೆ ಸಿನಿಮಾದಲ್ಲಿ ಶಿವಣ್ಣ ಮತ್ತು ಸುದೀಪ್ ಒಂದಾಗಿದ್ದು, ಜೋಗಿ ಪ್ರೇಮ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಕೋಟಿಗೊಬ್ಬ 3

'ಕೋಟಿಗೊಬ್ಬ 2' ಯಶಸ್ಸಿನ ಬಳಿಕ ಮತ್ತೆ ಸುದೀಪ್ 'ಕೋಟಿಗೊಬ್ಬ 3' ಸಿನಿಮಾವನ್ನು ಮಾಡಲಿದ್ದು, ಸೂರಪ್ಪ ಬಾಬು ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ

ಸುದೀಪ್ ಸಿನಿಮಾ ಬಗ್ಗೆ 'ರಾಜಕುಮಾರ' ನಿರ್ದೇಶಕ ಸಂತೋಷ್ ಮಾತು!

ಕೃಷ್ಣ ನಿರ್ದೇಶನದ ಸಿನಿಮಾ

'ಹೆಬ್ಬುಲಿ' ಚಿತ್ರದ ನಿರ್ದೇಶಕ ಕೃಷ್ಣ ಜೊತೆ ಸುದೀಪ್ ಮತ್ತೊಂದು ಸಿನಿಮಾ ಮಾಡುತ್ತಿದ್ದು, ಸದ್ಯ ಈ ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ.

'ಥಗ್ಸ್ ಆಫ್ ಮಾಲ್ಗುಡಿ'

ರಕ್ಷಿತ್ ಶೆಟ್ಟಿ ನಿರ್ದೇಶನದ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾದಲ್ಲಿ ಸುದೀಪ್ ನಟಿಸುತ್ತಿದ್ದು, ಈ ವರ್ಷದ ಕೊನೆ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಈ ಚಿತ್ರ ಸೆಟ್ಟೇರಬಹುದು.

'ದಿ ವಿಲನ್' ರಿಮೇಕ್: ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಕನ್ನಡದ ಹೆಬ್ಬುಲಿ ಸುದೀಪ್!

ಹೊಂಬಾಳೆ ಪ್ರೊಡಕ್ಷನ್

'ರಾಜಕುಮಾರ' ಸಿನಿಮಾದ ದೊಡ್ಡ ಗೆಲುವಿನ ನಂತರ ಹೊಂಬಾಳೆ ಪ್ರೊಡಕ್ಷನ್ ನಿರ್ಮಾಪಕ ವಿಜಯ್ ಅವರು ಸುದೀಪ್ ರೊಂದಿಗೆ ಒಂದು ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ.

'ದಿ ವಿಲನ್' ರಿಮೇಕ್

ಮಲೆಯಾಳಂ ನಲ್ಲಿಯೂ 'ದಿ ವಿಲನ್' ಸಿನಿಮಾ ರಿಮೇಕ್ ಆಗಲಿದೆ ಎಂಬ ಸುದ್ದಿ ಹೆಚ್ಚಾಗಿದೆ. ಈ ಚಿತ್ರದ ಮೂಲಕ ಕಿಚ್ಚ ಸುದೀಪ್ ಮಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ.

ಸುದೀಪ್ ಹೊಸ ಸಿನಿಮಾ ಬಗ್ಗೆ ಗಾಂಧಿನಗರದಿಂದ ಬಂದ ಬ್ರೇಕಿಂಗ್ ನ್ಯೂಸ್

ರಿಷಬ್ ಶೆಟ್ಟಿ

ನಿರ್ದೇಶಕ ರಿಷಬ್ ಶೆಟ್ಟಿ ಜೊತೆ ಸುದೀಪ್ ಒಂದು ಸಿನಿಮಾ ಮಾಡ್ತಾರೆ ಅಂತ ಈ ಹಿಂದೆ ಸುದ್ದಿ ಆಗಿತ್ತು.

ಹಾಲಿವುಡ್ - ಬಾಲಿವುಡ್

ಈ ಸಿನಿಮಾಗಳ ಜೊತೆ ಸುದೀಪ್ ಹಾಲಿವುಡ್ ನಲ್ಲಿ ಒಂದು ಸಿನಿಮಾ ಮಾಡಲಿದ್ದಾರೆ. ಅದರ ಜೊತೆಗೆ ಬಾಲಿವುಡ್ ನ 'ಟೈಗರ್ ಜಿಂದಾ ಹೈ' ಚಿತ್ರದ ಒಂದು ಪಾತ್ರದಲ್ಲಿ ಸುದೀಪ್ ನಟಿಸುವ ಸಾಧ್ಯತೆ ಇದೆ.

'ಸುದೀಪ್ ಸರ್ ಈ ತಂಗಿ ಜೀವ ಉಳಿಸಿ': ಬದುಕಿಗಾಗಿ ಚೈತ್ರಾ ಕೂಗು

ಮೂರು ವರ್ಷ ಬ್ಯುಸಿ

ಸಾಮಾನ್ಯವಾಗಿ ಒಂದು ವರ್ಷಕ್ಕೆ ಸುದೀಪ್ ಅವರ 2 ಸಿನಿಮಾಗಳು ರಿಲೀಸ್ ಆಗುತ್ತದೆ. ಸುದೀಪ್ ಅವರ ಕೈನಲ್ಲಿ ಸದ್ಯ 9 ಸಿನಿಮಾಗಳಿದ್ದು, ಏನೇ ಆದರೂ ಸುದೀಪ್ ಕನಿಷ್ಠ 3 ವರ್ಷ ಫುಲ್ ಬ್ಯುಸಿ ಇದ್ದಾರೆ.

English summary
List of upcoming movies of Kiccha Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada