ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಸ್ಯಾಂಡಲ್ ವುಡ್ ನಾಯಕಿಯರು

ಇವತ್ತು ಮಹಿಳಾದಿನಾಚರಣೆ. ಈ ದಿನ ಕನ್ನಡದ ಎಲ್ಲಾ ನಟಿಮಣಿಯರಿಗೂ ಮಹಿಳಾ ಪ್ರಧಾನ ಸಿನಿಮಾಗಳ ಬಗ್ಗೆ ಬರೆದ ಈ ಲೇಖಕನದ ಮೂಲಕ ಶುಭಾಷಯವನ್ನು ತಿಳಿಸುತ್ತಿದ್ದೇವೆ.

ಸ್ಯಾಂಡಲ್ ವುಡ್ ನಲ್ಲಿ ಮಹಿಳಾ ಪ್ರಧಾನಚಿತ್ರಗಳ ಕೊರತೆ ಇದೆ ಎಂಬ ಕೊರಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಹೆಚ್ಚಾಗುತ್ತಿವೆ. ಕೆಲವು ವರ್ಷಗಳ ಹಿಂದೆ ಕೇವಲ ಬಾಲಿವುಡ್ ನಲ್ಲಿ ಮಾತ್ರ ಹೆಚ್ಚು ಮಹಿಳಾ ಪ್ರಧಾನ ಚಿತ್ರಗಳು ತೆರೆಕಾಣುತ್ತಿದ್ದವು. ಆದರೆ ಈಗ ಹಾಗಿಲ್ಲ, ಸ್ಯಾಂಡಲ್ ವುಡ್ ನಲ್ಲೂ ಮಹಿಳಾ ಪ್ರಧಾನ ಚಿತ್ರಗಳು ತೆರೆಗೆ ಬರುತ್ತಿವೆ.

ಮಹಿಳೆಯರ ಯಶೋಗಾಥೆಯನ್ನು ಸಾರುವಂತಹ ಚಿತ್ರಗಳು, ಮಹಿಳಾ ಸಾಧನೆ, ಮಹಿಳೆಯರ ಮೇಲಾಗುವ ದೌರ್ಜನ್ಯ ಹೀಗೆ ಅನೇಕ ವಿಷಯಗಳ ಬಗ್ಗೆ ಸಾಕಷ್ಟು ಸಿನಿಮಾಗಳು ಕನ್ನಡದಲ್ಲು ತೆರೆಕಂಡಿವೆ. ಅಲ್ಲದೆ ಇನ್ನೂ ಹಲವು ಚಿತ್ರಗಳು ರಿಲೀಸ್ ಗೆ ಸಿದ್ಧವಾಗಿವೆ. ಕನ್ನಡದ ಅನೇಕ ದೊಡ್ಡ ನಟಿಮಣಿಯರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಂಡು ಮಹಿಳಾ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಪ್ರಿಯಾಂಕಾ ಉಪೇಂದ್ರ, ಹರಿಪ್ರಿಯಾ, ರಚಿತಾ ರಾಮ್, ರಾಧಿಕಾ ಕುಮಾರಸ್ವಾಮಿ, ರಾಗಿಣಿ ದ್ವಿವೇದಿ ಇನ್ನೂ ಅನೇಕ ಕನ್ನಡದ ಟಾಪ್ ನಟಿಯರು ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಸಾಕಷ್ಟು ಚಿತ್ರಗಳು ರಿಲೀಸ್ ಆಗಿವೆ. ಇನ್ನೂ ಸಾಲು ಸಾಲು ಮಹಿಳಾ ಪ್ರಧಾನ ಚಿತ್ರಗಳು ತೆರೆಗೆ ಬರಲು ಸಿದ್ಧವಾಗುತ್ತಿವೆ. ಹಾಗಾದರೆ, ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಗೆ ರೆಡಿಯಾಗುತ್ತಿರುವ ಮಹಿಳಾ ಪ್ರಧಾನ ಚಿತ್ರಗಳು ಯಾವುವು ಗೊತ್ತಾ? ಮುಂದೆ ಓದಿ..

ಏಪ್ರಿಲ್ ಡಿಸೋಜ ಪಾತ್ರದಲ್ಲಿ ರಚಿತಾ

ಏಪ್ರಿಲ್ ಡಿಸೋಜ ಪಾತ್ರದಲ್ಲಿ ರಚಿತಾ

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರ 'ಏಪ್ರಿಲ್'. ಇದು ಥ್ರಿಲ್ಲಿಂಗ್ ಅಂಶಗಳನ್ನು ಒಳಗೊಂಡಿರುವ ಸಿನಿಮಾವಾಗಿದ್ದು, ಚಿತ್ರದಲ್ಲಿ ರಚಿತಾ ಏಪ್ರಿಲ್ ಡಿಸೋಜ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ ರಚಿತಾ ರಾಮ್, ಮೊದಲ ಬಾರಿಗೆ 'ಏಪ್ರಿಲ್' ಚಿತ್ರದ ಮೂಲಕ ಮಹಿಳಾ ಪ್ರಧಾನ ಚಿತ್ರಕ್ಕೆ ಬಣ್ಣಹಚ್ಚುತಿದ್ದಾರೆ. 'ಏಪ್ರಿಲ್' ಒಂದು ನೈಜ ಘಟನೆ ಆಧಾರಿತ ಸಿನಿಮಾ. ಚಿತ್ರಕ್ಕೆ ಸತ್ಯ ರಾಯಲ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಬಟರ್ ಫ್ಲೈ ಆದ ಪಾರುಲ್

ಬಟರ್ ಫ್ಲೈ ಆದ ಪಾರುಲ್

ಕನ್ನಡದ 'ಬಟರ್ ಫ್ಲೈ' ಬಾಲಿವುಡ್ ನ ಸೂಪರ್ ಹಿಟ್ 'ಕ್ವೀನ್' ಚಿತ್ರದ ರಿಮೇಕ್. ಬಾಲಿವುಡ್ ನಲ್ಲಿ ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು. ಅದೇ ಪಾತ್ರವನ್ನು ಕನ್ನಡದಲ್ಲಿ ಪಾರುಲ್ ಯಾದವ್ ಮಾಡಿದ್ದಾರೆ. ಹಳ್ಳಿಯ ಹುಡುಗಿಯೊಬ್ಬಳು ಹೇಗೆ ಒಂಟಿಯಾಗಿ ಜೀವನ ಮಾಡುತ್ತಾಳೆ ಎನ್ನುವ ಕತೆ ಇರುವ ಸಿನಿಮಾ 'ಬಟರ್ ಫ್ಲೈ'. ಚಿತ್ರಕ್ಕೆ ಸ್ಯಾಂಡಲ್ ವುಡ್ ನಟ ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರೆ

ಹೌರಾ ಬ್ರಿಡ್ಜ್ ನಲ್ಲಿ ಪ್ರಿಯಾಂಕಾ ಉಪೇಂದ್ರ

ಹೌರಾ ಬ್ರಿಡ್ಜ್ ನಲ್ಲಿ ಪ್ರಿಯಾಂಕಾ ಉಪೇಂದ್ರ

'ಹೌರಾ ಬ್ರಿಡ್ಜ್' ಪ್ರಿಯಾಂಕಾ ಉಪೇಂದ್ರ ನಾಯಕಿಯಾಗಿ ಕಾಣಿಸಿಕೊಂಡಿರುವ ಸಿನಿಮಾ. 'ಹೌರಾ ಬ್ರಿಡ್ಜ್' ಕೂಡ ಮಹಿಳಾ ಪ್ರಧಾನ ಸಿನಿಮಾ. ಹಲವು ನೈಜ ಘಟನೆಗಳನ್ನೆ ಇಟ್ಟುಕೊಂಡು ಮಾಡಿರುವ ಸಿನಿಮಾ. ವಿಶೇಷ ಅಂದರೆ, ಈ ಸಿನಿಮಾದ ಬಹುತೇಕ ಭಾಗ ಉತ್ತರ ಭಾರತದಲ್ಲೇ ಚಿತ್ರೀಕರಣವಾಗಿದೆ. ಅದರಲ್ಲೂ ಕೊಲ್ಕತ್ತಾದ 'ಹೌರಾ ಬ್ರಿಡ್ಜ್' ಸುತ್ತಮುತ್ತನೆ ಕತೆ ಸಾಗುತ್ತದೆ. ಚಿತ್ರಕ್ಕೆ ಲೋಹಿತ್ ಎಂ ಆಕ್ಷನ್ ಕಟ್ ಹೇಳಿದ್ದಾರೆ. ಈ ಮೊದಲು ಲೋಹಿತ್ ಪ್ರಿಯಾಂಕಾ ಅವರಿಗೆ 'ಮಮ್ಮಿ ಸೇವ್ ಮಿ' ಸಿನಿಮಾ ಮಾಡಿದ್ದರು.

ಭೈರಾದೇವಿ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ

ಭೈರಾದೇವಿ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ

ವರ್ಷಗಳ ನಂತರ ರಾಧಿಕಾ ಕುಮಾರಸ್ವಾಮಿ ಮತ್ತೆ ಬಣ್ಣ ಹಚ್ಚುತ್ತಿರುವ ಸಿನಿಮಾ. 'ಭೈರಾದೇವಿ'ಯ ಮೂಲಕ ರಾಧಿಕಾ ಕುಮಾರಸ್ವಾಮಿ ದೇವಿಯ ನಾನಾ ಅವತಾರಗಳಲ್ಲಿ ಮಿಂಚಲಿದ್ದಾರೆ. 'ಭೈರಾದೇವಿ' ದುಷ್ಟರನ್ನು ಹೇಗೆ ಶಿಕ್ಷಿಸುತ್ತಾಳೆ ಎನ್ನುವ ಸಾರಾಂಶ ಹೊಂದಿರುವ ಸಿನಿಮಾ. 'ಭೈರಾದೇವಿ' ಶ್ರೀಜಯ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ.

ಪಾರ್ವತಮ್ಮನ ಮಗಳಾಗಿ ಹರಿಪ್ರಿಯಾ

ಪಾರ್ವತಮ್ಮನ ಮಗಳಾಗಿ ಹರಿಪ್ರಿಯಾ

'ಡಾಟರ್ ಆಫ್ ಪಾರ್ವತಮ್ಮ' ನಟಿ ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಸಿನಿಮಾ. ವಿಶೇಷತೆ ಅಂದರೆ ಇಲ್ಲಿ ಹರಿಪ್ರಿಯಾ ಜೊತೆಗೆ ಹಿರಿಯ ನಟಿ ಸುಮಲತಾ ಕೂಡ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ ತನಿಖಾಧಿಕಾರಿ ವೈದೇಹಿ ಪಾತ್ರದಲ್ಲಿ ಕಾಣಿಸಿಕೊಂಡರೆ ಅಮ್ಮನ ಪಾತ್ರದಲ್ಲಿ ಪಾರ್ವತಮ್ಮ ಆಗಿ ಸುಮಲತಾ ಮಿಂಚಿದ್ದಾರೆ. ತಾಯಿ ಮತ್ತು ಮಗಳ ಬಾಂಧವ್ಯದ ನಡುವೆ ಹೆಣೆದಿರುವ ಕಥೆಯಲ್ಲಿ ಮಹಿಳಾ ಜೀವನದ ಸಾಹಗಾಥೆಯು ಇದೆ.

ಸೂಜಿದಾರದಲ್ಲಿ ಹರಿಪ್ರಿಯಾ ಸವಾಲಿನ ಪಾತ್ರ

ಸೂಜಿದಾರದಲ್ಲಿ ಹರಿಪ್ರಿಯಾ ಸವಾಲಿನ ಪಾತ್ರ

'ಡಾಟರ್ ಆಫ್ ಪಾರ್ವತಮ್ಮ' ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹರಿಪ್ರಿಯಾ 'ಸೂಜಿದಾರ' ಚಿತ್ರದ ಮೂಲಕ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಪದ್ಮಶ್ರೀ ಎನ್ನುವ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. 'ಸೂಜಿದಾರ' ಚಿತ್ರಕ್ಕೆ ಮೌನೇಶ್ ಬಡಿಗೇರ್ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
List of women-centric movies which are ready to releasing in Kannada, top actress in kannada showing interest to act in female centric movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X