For Quick Alerts
  ALLOW NOTIFICATIONS  
  For Daily Alerts

  ಬಿಡುವಿಲ್ಲದ ದುಡಿಮೆಯಿಂದ ದಣಿದಿದೀದೇಹ: ಕಿಚ್ಚ ಸುದೀಪ್

  By Harshitha
  |

  ''ನಿದ್ದೆ ಇಲ್ಲದೆ ಕೆಲಸ ಮಾಡುತ್ತಿದ್ದೇನೆ. ಶೂಟಿಂಗ್ ಗ್ಯಾಪ್ ನಲ್ಲಿ 'ಬಿಗ್ ಬಾಸ್' ಶೋ ಮಾಡುತ್ತಿದೆ. ರಾತ್ರಿ ಪೂರಾ ಜಾಗರಣೆ ಮಾಡ್ಬೇಕಾದಂತಹ ಪರಿಸ್ಥಿತಿ ನನ್ನದು.!'' - ಹೀಗಂತ ಹಿಂದೊಮ್ಮೆ 'ಬಿಗ್ ಬಾಸ್' ತಂಡ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಬಾಯ್ಬಿಟ್ಟಿದ್ದರು.

  ಹಾಗೆ ನಿದ್ದೆ ಇಲ್ಲದೆ, ತಿಂಡಿ ಊಟ ಸರಿಯಾಗಿ ಮಾಡದೆ, ಸದಾ ಕೆಲಸ ಕೆಲಸ ಅಂತ ಒಂದ್ಕಡೆ ಸಿ.ಸಿ.ಎಲ್, ಇನ್ನೊಂದ್ಕಡೆ ಸಿನಿಮಾ ಶೂಟಿಂಗ್, ಪ್ರಮೋಷನ್, ಮತ್ತೊಂದ್ಕಡೆ ರಿಯಾಲಿಟಿ ಶೋ...ಹೀಗೆ ಬಿಜಿ ಲೈಫ್ ನಲ್ಲಿ ಮುಳುಗಿದ್ದ ಪರಿಣಾಮ ಕಿಚ್ಚ ಸುದೀಪ್ ದಣಿದಿದ್ದಾರೆ. [ನಿಮಗ್ಯಾರಿಗೂ ಗೊತ್ತಿಲ್ಲದ 'ಬಿಗ್ ಬಾಸ್' ಸುದೀಪ್.!]

  ಅಸಿಡಿಟಿ ಸಮಸ್ಯೆ ಬಿಗಿಡಾಯಿಸಿರುವುದರಿಂದ ಕಿಚ್ಚ ಸುದೀಪ್ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನುರಿತ ವೈದ್ಯರು ಸುದೀಪ್ ಗೆ ಸೂಕ್ತ ಚಿಕಿತ್ಸೆ ನೀಡಿದ ಬಳಿಕ, ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

  ಅಭಿಮಾನಿಗಳು ಆತಂಕಕ್ಕೀಡಾಗಬಾರದೆಂಬ ದೃಷ್ಟಿಯಿಂದ ಟ್ವಿಟ್ಟರ್ ಮೂಲಕ ಸುದೀಪ್ ಸಂದೇಶ ನೀಡಿದ್ದಾರೆ.

  ''ಸತತ ಕೆಲಸದಲ್ಲೇ ತಲ್ಲೀನವಾಗಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿದೆ. ಕೊಂಚ ರೆಸ್ಟ್ ಬೇಕಾಗಿದೆ. ಬಹುಬೇಗ ಗುಣಮುಖವಾಗುತ್ತೇನೆ. ಮಾಧ್ಯಮ ಮಿತ್ರರ ಕಳಕಳಿಗೆ ನನ್ನ ಧನ್ಯವಾದಗಳು'' ಅಂತ ಸುದೀಪ್ ಟ್ವೀಟ್ ಮಾಡಿದ್ದಾರೆ. ['ಹೆಬ್ಬುಲಿ' ಸುದೀಪ್ ಗೆ ಅನಾರೋಗ್ಯ: ಅಪೋಲೋ ಆಸ್ಪತ್ರೆಗೆ ದಾಖಲು]

  ಸುದೀಪ್ ಅನಾರೋಗ್ಯದಿಂದಾಗಿ 'ಹೆಬ್ಬುಲಿ' ಚಿತ್ರದ ಚಿತ್ರೀಕರಣ ನಿಂತಿದೆ. ಇತ್ತ ನಂದಕಿಶೋರ್ ನಿರ್ದೇಶನದ 'ಮುಕುಂದ ಮುರಾರಿ' ಚಿತ್ರ ಕೂಡ ಶೂಟಿಂಗ್ ಹಂತದಲ್ಲಿದೆ. ಕನ್ನಡ ಹಾಗೂ ತಮಿಳಿನಲ್ಲಿ ರೆಡಿಯಾಗಿರುವ 'ಕೋಟಿಗೊಬ್ಬ-2' ಮಾತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ.

  English summary
  Kannada Actor Kiccha Sudeep has taken his twitter account to react about his ill health. Sudeep was admitted to Apollo Hospital, Bengaluru due to Acidity Problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X