For Quick Alerts
  ALLOW NOTIFICATIONS  
  For Daily Alerts

  ನಿಖಿಲ್, ಸುಮಲತಾ, ರೈ ಮಾತ್ರವಲ್ಲ 10ಕ್ಕೂ ಹೆಚ್ಚು ಸಿನಿಸ್ಟಾರ್ಸ್ ಭವಿಷ್ಯ ಏನಾಗುತ್ತೆ?

  |

  ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸಿನಿಮಾ ತಾರೆಯರು ಸದ್ದು ಕೂಡ ಸ್ವಲ್ಪ ಜೋರಾಗಿಯೇ ಇದೆ. ಕರ್ನಾಟಕದಿಂದ ನಿಖಿಲ್ ಕುಮಾರ್, ಸುಮಲತಾ, ಪ್ರಕಾಶ್ ರೈ ಅಖಾಡದಲ್ಲಿದ್ದರೇ ಬೇರೆ ರಾಜ್ಯಗಳಲ್ಲೂ ಹಲವು ಚಿತ್ರರಂಗದವರು ಸ್ಪರ್ಧಿಸಿದ್ದಾರೆ. ಅವರ ಹಣೆಬರಹವೂ ನಾಳೆ ನಿರ್ಧಾರವಾಗಲಿದೆ.

  ಮಂಡ್ಯದಲ್ಲಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರ ಎದುರು ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ ಅಖಾಡದಲ್ಲಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಿಂದ ಪ್ರಕಾಶ್ ರೈ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.

  ಮಂಡ್ಯ ಫಲಿತಾಂಶ ಉಲ್ಟಾ ಆದ್ರೆ ಜೋಡೆತ್ತುಗಳಿಗೆ ಈ ಟೀಕೆಗಳು ತಪ್ಪಿದ್ದಲ್ಲ.!

  ಉಳಿದಂತೆ ಬೇರೆ ಯಾರೆಲ್ಲ ಸಿನಿಮಾ ಇಂಡಸ್ಟ್ರಿಯವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಮಥುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹೇಮಾ ಮಾಲಿನಿ ಸ್ಪರ್ಧಿಸಿದ್ದಾರೆ. ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಲ್ಲಿ ಜಯಪ್ರದಾ ಬಿಜೆಪಿ ಅಭ್ಯರ್ಥಿಯಾಗಿ ನಿಂತಿದ್ದಾರೆ.

  ಎಕ್ಸಿಟ್ ಪೋಲ್ ಬಗ್ಗೆ ನಿಖಿಲ್ ಕುಮಾರ್ ಮೊದಲ ಪ್ರತಿಕ್ರಿಯೆ

  ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಹಿರಿಯ ನಟ ಶತ್ರುಜ್ಞ ಸಿನ್ಹಾ ಸ್ಪರ್ಧಿಸಿದ್ದರೇ, ಅವರ ಪತ್ನಿ ಪೂನಂ ಸಿನ್ಹಾ ಸಮಾಜವಾದಿ ಪಕ್ಷದಿಂದ ಅಖಾಡಕ್ಕೆ ಇಳಿದಿದ್ದಾರೆ. ಬೋಜ್ ಪುರಿ ನಟ ರವಿ ಕಿಶನ್ ಗೋರಖ್ ಫುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ.

  ಮಂಡ್ಯದಲ್ಲಿ ಸುಮಲತಾ ಗೆದ್ದರೇ ಜೋಡೆತ್ತುಗಳಿಗಾಗುವ ಅನುಕೂಲವೇನು?

  ದೆಹಲಿಯಲ್ಲಿ ಮನೋಜ್ ತಿವಾರಿ ಸ್ಪರ್ಧಿಸಿದ್ದಾರೆ. ಮುಂಬೈನಲ್ಲಿ ನಟಿ ಉರ್ಮಿಳಾ ನಿಂತಿದ್ದಾರೆ. ಗಾಯಕ ಬಾಬು ಸುಪ್ರಿಯೋ ಅಸ್ನೋಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾದ್ದರೇ ಅವರ ಎದುರು ನಟಿ ಮೂನ್ ಮೂನ್ ಸೇನ್ ಅಖಾಡದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್, ಸ್ಮೃತಿ ಇರಾನಿ ಅವರ ಭವಿಷ್ಯವೂ ನಾಳೆ ನಿರ್ಧಾರವಾಗಲಿದೆ.

  ಇವರ ಜೊತೆಯಲ್ಲಿ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪವನ್ ಕಲ್ಯಾಣ್, ಬಾಲಕೃಷ್ಣ, ರೋಜಾ ಅವರಿಗೂ ನಾಳೆ ಮಹತ್ವದ ದಿನವಾಗಲಿದೆ.

  English summary
  Lok sabha election 2019 result: meet to film actors who contest in lok sabha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X