ಚುನಾವಣಾ ಕಣಕ್ಕೆ ಸುಮಲತಾ : ಭಾರತಿ ವಿಷ್ಣುವರ್ಧನ್ ಏನಂತಾರೆ?
Recommended Video

ಸಕ್ಕರೆ ನಾಡು ಮಂಡ್ಯ ಈ ಬಾರಿಯ ಚುನಾವಣೆಯ ಕೇಂದ್ರ ಬಿಂದುವಾಗಿದೆ. ರಾಜಕೀಯ ದೃಷ್ಟಿಯಿಂದ ಮಾತ್ರವಲ್ಲದೆ ಸಿನಿಮಾರಂಗ ಕೂಡ ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಮೇಲೆ ಗಮನ ಇಟ್ಟಿದೆ. ಅದಕ್ಕೆ ಕಾರಣ ಮಂಡ್ಯ ಕ್ಷೇತ್ರದ ಸ್ಪರ್ಧಿಗಳು.
ನಟಿ ಸುಮಲತಾ ಅಂಬರೀಶ್ ಹಾಗೂ ನಟ ನಿಖಿಲ್ ಕುಮಾರ್ ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಬಯಕೆ ಹೊಂದಿದ್ದಾರೆ. ಅಂದಹಾಗೆ, ಸುಮಲತಾ ಚುನಾವಣೆ ಸ್ಪರ್ಧೆಯ ಬಗ್ಗೆ ಇದೀಗ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಪ್ರತಿಕ್ರಿಯೆ ನೀಡಿದ್ದಾರೆ.
''ಚುನಾವಣೆಗಳ ಬಗ್ಗೆ ನಮಗೆ ಜಾಸ್ತಿ ಆಸಕ್ತಿ ಇಲ್ಲ. ನಮ್ಮ ಯಜಮಾನರು ಆಗ ಅಂಬರೀಶ್ ಅವರ ಜೊತೆಗೆ ಇದ್ದರು. ಅದು ಬಿಟ್ಟರೆ ನಾವು ಚುನಾವಣೆಗಳಿಂದ ದೂರ.'' ಎಂದು ಭಾರತಿ ವಿಷ್ಣುವರ್ಧನ್ ಹೇಳಿಕೆ ನೀಡಿದ್ದಾರೆ. ಸುದ್ದಿ ವಾಹಿನಿಯೊಂದಕ್ಕೆ ಈ ರೀತಿ ಪ್ರತಿಕ್ರಿಯೆಯನ್ನು ಭಾರತಿ ವಿಷ್ಣುವರ್ಧನ್ ನೀಡಿದ್ದಾರೆ.

ಅಂದಹಾಗೆ, 'ಪುನೀತ್ ರಾಜ್ ಕುಮಾರ್ ನಟನೆಯ ದೊಡ್ಮನೆ ಹುಡ್ಗ' ಸಿನಿಮಾದಲ್ಲಿ ಸುಮಲತಾ ಅಂಬರೀಶ್ ಹಾಗೂ ಭಾರತಿ ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ್ದರು.

ಮತ್ತೊಂದು ಕಡೆ ಸುಮಲತಾ ಹಾಗೂ ನಿಖಿಲ್ ಇಬ್ಬರೂ ಮಂಡ್ಯದಿಂದ ಸ್ಪರ್ಧೆ ಮಾಡಿದರೇ, ಸ್ಯಾಂಡಲ್ ವುಡ್ ನಟರ ಸಾಥ್ ಯಾರ ಕಡೆ ಇರುತ್ತದೆ ಎನ್ನುವ ಪ್ರಶ್ನೆ ಮೂಡಿದೆ.


Click it and Unblock the Notifications











