Loksabha Election 2024 ; ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾದ ಕನ್ನಡ ಚಿತ್ರರಂಗ..!

By ಫಿಲ್ಮಿಬೀಟ್ ಡೆಸ್ಕ್

ಲೋಕಸಭೆ ಚುನಾವಣೆ ಮೊದಲನೇ ಹಂತದ ಮತದಾನ ಕರ್ನಾಟಕದಲ್ಲಿ ಇಂದು ಆರಂಭವಾಗಿದೆ. ಕರ್ನಾಟಕದ 28 ಲೋಕಸಭೆ ಕ್ಷೇತ್ರಗಳ ಪೈಕಿ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನದಲ್ಲಿ ಕನ್ನಡ ಚಿತ್ರರಂಗದ ತಾರೆಯರು ಉತ್ಸಾಹದಿಂದ ಭಾಗಿಯಾಗಿದ್ದಾರೆ. ಮತದಾನ ಮಾಡಿದ್ದಾರೆ.

ಬೆಳ್ಳಿಗ್ಗೆಯೇ ತಮ್ಮ ಪತ್ನಿ ಶಿಲ್ಪಾ ಅವರ ಜೊತೆ ಆರ್.ಆರ್ ನಗರದ ಬೂತ್ ಗೆ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಮತದಾನ ಮಾಡಿದರು. ಈ ಮೂಲಕ ಮಾದರಿಯಾದರು.ಆ ನಂತರ ಮಾತನಾಡಿದ ಗಣಪ, ತಪ್ಪದೇ ಎಲ್ಲರೂ ಮತದಾನದಲ್ಲಿ ಭಾಗಿಯಾಗಿ ಎಂದರು.ನಾನು ಬೆಳಿಗ್ಗೆ ಯಾಕೆ ಬಂದೆ ಅಂದರೆ, ತನ್ನ ನೋಡಿ ನನ್ನ ಅಭಿಮಾನಿಗಳು, ಅನುಯಾಯಿಗಳು ಬಂದು ಮತ ಚಲಾಯಿಸಲು ಬರಲಿ ಎನ್ನುವ ಕಾರಣಕ್ಕೆ. ವೋಟ್ ಮಾಡಿಲ್ಲ ಅನ್ನೋದಕ್ಕಿಂತ ವೋಟ್ ಮಾಡಿದೆ ಅನ್ನೋದಕ್ಕೆ ಬೆಲೆ ಜಾಸ್ತಿ. ಹೀಗಾಗಿ ಯುವ ಪೀಳಿಗೆ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿ' ಎಂದು ಗೋಲ್ಡನ್ ಸ್ಟಾರ್ ಗಣೇಶ್ ಮನವಿ ಮಾಡಿದರು.

lok-sabha-elections-2024-sandalwood-celebrities-cast-their-vote

ಇನ್ನೂ ಗಣೇಶ್ ಅವರ ನಿವಾಸದ ಬಳಿಯೇ ಇರುವ ಅಮೂಲ್ಯ ತಮ್ಮ ಪತಿ ಜಗದೀಶ್ ಜೊತೆ ಬಂದು ಹಕ್ಕು ಚಲಾಯಿಸಿದರು. ಆರ್.ಆರ್ ನಗರ ಮತ ಕೇಂದ್ರಕ್ಕೆ ಬಂದ ಅಮೂಲ್ಯ, ಬೆಳ್ಳಿಗ್ಗೆಯೇ ಇಷ್ಟು ಜನ ನೋಡಿ ಖುಷಿಯಾಯ್ತು ಅಂದರು.

ಮಕ್ಕಳಿರೋದ್ರಿಂದ ರಿಕ್ವೆಸ್ಟ್ ಮಾಡಿದೆ, ಬೇಗ ಬಿಟ್ರು. ಆದ್ರೂ ಅರ್ಧ ಗಂಟೆ ಇದ್ದೆ. ಇದು ನಮ್ಮ ಹಕ್ಕು. ನಾವು ವೋಟ್ ಮಾಡಲೇಬೇಕು. ಸಮಯ ವ್ಯರ್ಥ ಮಾಡದೆ, ವೋಟ್ ಮಾಡಬೇಕು. ಈ ಬಾರಿ ಹೆಚ್ಚು ಮತದಾನ ಆಗುತ್ತೆ ಅಂದ್ಕೊಂಡಿದ್ದೇನೆ ಎಂದರು.

lok-sabha-elections-2024-sandalwood-celebrities-cast-their-vote

ಕಾಂತಾರದ ಕಿನ್ನರಿ ಸಪ್ತಮಿ ಗೌಡ, ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ ಗೆ ಆಗಮಿಸಿ ಮತದಾನ ಮಾಡಿದರು. ನನ್ನ ಹಕ್ಕು ಚಲಾಯಿಸಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಎಲ್ಲರ ಕರ್ತವ್ಯ ಎಂದರು

ಹೊಸಕೆರೆಹಳ್ಳಿಯಲ್ಲಿ ಸಿಲ್ಲಿ ಲಲ್ಲಿ ಖ್ಯಾತಿಯ ರವಿಶಂಕರ್ ತಮ್ಮ ಪತ್ನಿ ಸಂಗೀತಾ ಗುರುರಾಜ್ ಜೊತೆ ಬಂದು ವೋಟ್‌ ,ಮಾಡಿದರು. ʻಇದು ಖುಷಿಗಿಂತ ಹೆಚ್ಚಾಗಿ ಇದು ನಮ್ಮ ಕರ್ತವ್ಯ. 140 ಕೋಟಿ ಜನರನ್ನ ಕಾಯೋ ನಾಯಕನ ಆಯ್ಕೆ ಮಾಡೋ ದಿನ. ಯಾರಿಗೆ ವೋಟ್ ಮಾಡಬೇಕು, ಯಾಕೆ ಮಾಡಬೇಕು ಎನ್ನುವುದನ್ನು ನಿರ್ಧಾರ ಮಾಡಿಕೊಂಡು ಬನ್ನಿ.ಮತ ಗಟ್ಟಗೆ ಬಂದು ಕನ್ ಪ್ಯೂಸ್ ಆಗಬೇಡಿ ಎಂದರು.

lok-sabha-elections-2024-sandalwood-celebrities-cast-their-vote

ಪ್ರಕಾಶ್ ರಾಜ್ ಕೂಡ ತಮ್ಮ ಮತವನ್ನ ಚಲಾಯಿಸಿದರು. ನನ್ನ ಮತ ನನ್ನ ಹಕ್ಕಿಗಾಗಿ, ನನ್ನನ್ನು ಪ್ರತಿನಿಧಿಸುವವರನ್ನು ಆಯ್ಕೆ ಮಾಡುವ ನನ್ನ ಶಕ್ತಿಗಾಗಿ ಎಂದ ಪ್ರಕಾಶ್ ರಾಜ್, ಸಂಸತ್ತಿನಲ್ಲಿ ನನ್ನ ಧ್ವನಿ ಯಾರು ಎಂದು ಆಯ್ಕೆ ಮಾಡುವುದು... ನೀವು ನಂಬಿದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯ ಎಂದರು. ನಾನು ನಂಬಿದ ಅಭ್ಯರ್ಥಿಗೆ ನಾನು ಮತ ಹಾಕಿದ್ದೇನೆ ಅವರು ತಂದ ಪ್ರಣಾಳಿಕೆಗೆ ಮತ್ತು ಬದಲಾವಣೆಗಾಗಿ ಮತ ಹಾಕಿದ್ದೇನೆ ಎಂದರು. ವೋಟ್‌ ಮಾಡುವುದು ಬಹಳ ಮುಖ್ಯ. ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಂದು ವೋಟ್‌ ಮಾಡಿ ಬದಲಾವಣೆ ತನ್ನಿ ಎಂದು ಮನವಿ ಮಾಡಿದರು.

ಉತ್ತರಕಾಂಡ ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಡಾಲಿ ಧನಂಜಯ್ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದರು. ಇನ್ನೂ ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಮನೆಗೆ ಮರಳಿದ ಶ್ರೀಮುರಳಿ ಮತದಾನ ನಮ್ಮ ಹಕ್ಕು ಮತ ಚಲಾಯಿಸಿದ್ದೇವೆ. ನಮ್ಮ ಬೂತ್ ಅಲ್ಲಿ ತುಂಬಾ ಜನ ಇದ್ರು, ನೋಡಿ ತುಂಬಾ ಖುಷಿ ಆಯ್ತು ಎಂದರು. ಹಿರಿಯ ನಾಗರೀಕರು ಬರ್ತಾ ಇದ್ದಾರೆ. ಪ್ರಜಾಪ್ರಭುತ್ವ ನಾವು ಆಯ್ಕೆ ಮಾಡಿಕೊಳ್ಳೋದು. ಯೂತ್ ಇನ್ನೂ ಬರ್ತಿಲ್ಲ ಅಂತಾ ಅಂದರೆ ಏನು ಹೇಳಬೇಕು ಎಂದು ಪ್ರಶ್ನಿಸಿದರು. ಇಂತಹ ಜವಾಬ್ದಾರಿ ಮೆರೆಯಬಾರದು. ಇಲ್ಲೇನೂ ಎಕ್ಸಾಂ ಬರೆಸಲ್ಲ ಬಂದು ಮತದಾನ ಮಾಡಿ. ನಿಮಗೆ ಬೇಕಾದ ನಾಯಕನನ್ನ ಆಯ್ಕೆ ಮಾಡಿಕೊಳ್ಳಿ. ಯಾರು ಯಾರು ಓಟ್ ಮಾಡಿಲ್ಲ ಅವರಿಗೆ ಏನು ಹೇಳಬೇಕು ಹೇಳಿದರು ಶ್ರೀಮುರಳಿ.

More from Filmibeat

English summary
Lok Sabha Elections 2024 ; Golden Star Ganesh And Many Others From Kannada Film Industry Cast Their Vote
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X