twitter
    For Quick Alerts
    ALLOW NOTIFICATIONS  
    For Daily Alerts

    ರಾಜಕೀಯ ಮುಗ್ಧ ಮಕ್ಕಳ ಮನಸ್ಸಿನಲ್ಲಿ ವಿಷ ಬಿತ್ತುತ್ತಿದೆ: ಹಿಜಾಬ್ ಪ್ರಕರಣಕ್ಕೆ ಸುಮಲತಾ ಪ್ರತಿಕ್ರಿಯೆ

    |

    ಕರ್ನಾಟಕ ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಯಲ್ಲಿದೆ. ಬೇಡದ ವಿಷಯಕ್ಕೆ ವಿಶ್ವದಾದ್ಯಂತ ಕರ್ನಾಟಕವನ್ನು ಚರ್ಚೆಗೀಡು ಮಾಡುವಂತೆ ಮಾಡಿದೆ. ಅದಕ್ಕೆ ಕಾರಣ ಮತ್ತೀನೇನು ಅಲ್ಲ 'ವಸ್ತ್ರ ರಾಜಕಾರಣ'. ಈ ದೇಶದಲ್ಲಿ ಯಾವೆಲ್ಲಾ ವಿಷಯಗಳನ್ನು ಇಟ್ಟುಕೊಂಡು, ಯಾರನ್ನು ಬಳಸಿಕೊಂಡು ರಾಜಕೀಯ ಮಾಡಬೇಕು ಅನ್ನುವುದು ಚೆನ್ನಾಗಿ ಗೊತ್ತಿದೆ. ಅದರ ಭಾಗವೇ ಈ ಕೆಲಸಕ್ಕೆ ಬಾರದ ಹಿಜಾಬ್ Vs ಕೇಸರಿ ಶಾಲು. ಈ ಪ್ರಕರಣ ತಾರಕ್ಕೇರಿದೆ. ಸ್ಥಳೀಯ ಮಟ್ಟದಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ವರೆಗೂ ಈ ಹಿಜಾಬ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲಾಗುತ್ತಿದೆ.

    ಹಿಜಾಬ್ ಪ್ರಕರಣ ಕರ್ನಾಟಕ ರಾಜ್ಯದಲ್ಲಿ ಶಾಂತಿ ಕದಡಿದೆ. ಎರಡು ಧರ್ಮಗಳ ನಡುವೆ ವಿಷ ಬೀಜವನ್ನು ಬಿತ್ತಿದೆ. ರಾಜಕೀಯ ದಾಳಕ್ಕೆ ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ. ಕೆಲವು ದಿನಗಳಿಂದ ಹೊತ್ತಿ ಉರಿಯುತ್ತಿರುವ ಈ ಹಿಜಾಬ್ ಪ್ರಕರಣದ ಬಗ್ಗೆ ನವದೆಹಲಿಯಲ್ಲಿ ಮಂಡ್ಯ ಲೋಕಸಭೆಯ ಸದಸ್ಯೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಸುಮಲತಾ ಏನು ಹೇಳಿದ್ದಾರೆ? ತಿಳಿದುಕೊಳ್ಳಲು ಮುಂದೆ ಓದಿ.

    ಮುಗ್ಧ ಮಕ್ಕಳಲ್ಲಿ ರಾಜಕೀಯ ವಿಷ

    ಮುಗ್ಧ ಮಕ್ಕಳಲ್ಲಿ ರಾಜಕೀಯ ವಿಷ

    ಹಿಜಾಬ್ ಪ್ರಕರಣ ದಿನದಿಂದ ದಿನಕ್ಕೆ ಚರ್ಚೆಯಾಗುತ್ತಿದೆ. ಪ್ರತಿಭಟನೆಯಿಂದ ಆರಂಭವಾಗಿದ್ದ ಈ ಪ್ರಕರಣ ಈಗ ಹಿಂಸಾಚಾರಕ್ಕೆ ತಿರುಗಿದೆ. ಒಂದು ನಗರದಿಂದ ಆರಂಭ ಆಗಿದ್ದು, ಇಡೀ ದೇಶದೆಲ್ಲಡೆ ಹರಡುತ್ತಿದೆ. ಕೆಲವೇ ದಿನಗಳಲ್ಲಿ ಇಷ್ಟೊಂದು ವ್ಯಪಕವಾಗಿ ಹರಡುತ್ತಿರುವ ಹಿಜಾಬ್ ಪ್ರಕರಣದ ಬಗ್ಗೆ ಮಂಡ್ಯ ಸಂಸದೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಸುಮಲತಾ ಮುಗ್ಧ ಮಕ್ಕಳಲ್ಲಿ ರಾಜಕೀಯ ವಿಷ ಬಿತ್ತಲಾಗುತ್ತಿದೆ ಎಂದು ಹೇಳಿದ್ದಾರೆ.

    ಹಿಜಾಬ್ ಪ್ರಕರಣದಲ್ಲಿ ರಾಜಕೀಯ

    ಹಿಜಾಬ್ ಪ್ರಕರಣದಲ್ಲಿ ರಾಜಕೀಯ

    ಸುಮಲತಾ ಎಎನ್‌ಐಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಹಿಜಾಬ್ ಪ್ರಕರಣ ಆರಂಭ ಆಗಲು ರಾಜಕೀಯದ ಪಾತ್ರ ಬಹಳ ದೊಡ್ಡದಿದೆ ಎಂದು ಹೇಳಿದ್ದಾರೆ. "ಈ ಪ್ರಕರಣದಲ್ಲಿ ರಾಜಕೀಯ ಪ್ರಮುಖ ಪಾತ್ರ ವಹಿಸಿದೆ ಎಂದು ಅನಿಸುತ್ತಿದೆ. ಮುಗ್ಧ ಮಕ್ಕಳಲ್ಲಿ ವಿಷ ಬಿತ್ತಲು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ನನಗೆ ಈ ಪ್ರಕರಣದಲ್ಲಿ ಬಹಳಷ್ಟು ರಾಜಕೀಯವಿರುವುದು ಎದ್ದು ಕಾಣುತ್ತಿದೆ. " ಎಂದು ಯಾವುದೇ ರಾಜಕೀಯ ಪಕ್ಷದ ಕಡೆ ಬೊಟ್ಟು ಮಾಡದೆ ಪ್ರತಿಕ್ರಿಯೆ ನೀಡಿದ್ದಾರೆ.

    ಪ್ರಿಯಾಂಕಾ ಗಾಂಧಿ ಬಗ್ಗೆ ಸುಮಲತಾ ಹೇಳಿದ್ದೇನು

    ಹಿಜಾಬ್ ಪ್ರಕರಣ ತಾರಕಕ್ಕೇರುತ್ತಿದ್ದಂತೆ ಪ್ರಿಯಾಂಕಾ ಗಾಂಧಿ ತಮಗೆ ಬೇಕಾದ ವಸ್ತ್ರ ತೊಡುವುದು ನಮ್ಮ ಹಕ್ಕು ಎಂದು ಹೇಳಿದ್ದರು. ಈ ಹೇಳಿಕೆಗೂ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ. "ನಾವೇನು ಧರಿಸಬೇಕು ಅನ್ನುವುದು ನಮ್ಮ ಹಕ್ಕು. ಇದು ಖಂಡಿತವಾಗಿಯೂ ಒಪ್ಪುವಂತಹದ್ದೇ. ಆದರೆ, ನೀವು ಬಿಕಿನಿಯನ್ನು ಬೀಚ್ ಅಥವಾ ಸ್ವಿಮ್ಮಿಂಗ್ ಪೂಲ್‌ನಲ್ಲಿ ಧರಿಸುತ್ತೀರ. ಅದನ್ನು ಸ್ಕೂಲ್‌ನಲ್ಲಿ ಬಳಸಲು ಸಾಧ್ಯವಿಲ್ಲ ಅಲ್ಲವೇ. ನೀವು ಕೆಲಸ ಮಾಡುವ ಜಾಗದಲ್ಲಿ ಜೀನ್ಸ್ ಬಳಸಲು ಸಾಧ್ಯವಿಲ್ಲ. ಅಲ್ಲಿ ನೀವು ಕಂಪನಿ ಏನು ಹೇಳುತ್ತದೆಯೋ ಅದನ್ನು ಧರಿಸಬೇಕಾಗುತ್ತೆ. " ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನೆಗೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.

    ಮಕ್ಕಳ ಭವಿಷ್ಯದ ಜೊತೆ ಕಾಣದ ಕೈಗಳಿಂದ ಆಟ

    ಮಕ್ಕಳ ಭವಿಷ್ಯದ ಜೊತೆ ಕಾಣದ ಕೈಗಳಿಂದ ಆಟ

    "ಕೆಲವು ಸ್ಥಳಗಳಲ್ಲಿ ಕೆಲವು ಕೋಡ್‌ಗಳಿವೆ. ಶಾಲೆ ಹಾಗೂ ಸ್ಕೂಲ್‌ಗಳಲ್ಲಿ ಕೆಲವು ನಿಯಮಗಳನ್ನು ಮೊದಲಿಂದಲೂ ಇದೆ. ಅದನ್ನು ಪ್ರಶ್ನಿಸುವುದು ಈಗ ಯಾಕೆ ಆಗುತ್ತಿದೆ? ನನಗೆ ಕಾಡುವ ಪ್ರಶ್ನೆ ಏನಂದರೆ, ಇಷ್ಟು ದಿನ ತೊಂದರೆ ಆಗದೆ ಇರುವುದು ಈಗ ಯಾಕೆ ಆಗುತ್ತಿದೆ. ಚುನಾವಣೆ ಸಮಯದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿವೆ. ಈ ಆಟವನ್ನು ಆಡುತ್ತಿರುವವರು ಯಾರು? ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟ ಆಡುತ್ತಿರುವವರು ಯಾರು? ಇದು ನಿಜಕ್ಕೂ ಬೇಸರದ ಸಂಗತಿ." ಎಂದು ಸುಮಲತಾ ತಿಳಿಸಿದ್ದಾರೆ.

    English summary
    Lok Sabha MP from Mandya Sumalatha Ambareesh reaction on hijab row in Karnataka. A lot of politics is being played to poison young, innocent & impressionable minds here says Sumalatha.
    Thursday, February 10, 2022, 9:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X