»   » 'ಕಾಮಿಡಿ ಕಿಲಾಡಿ' ಲೋಕೇಶ್ ಗೆ ಸಿಕ್ತು ಗೋಲ್ಡನ್ ಚಾನ್ಸ್.! ಏನದು.?

'ಕಾಮಿಡಿ ಕಿಲಾಡಿ' ಲೋಕೇಶ್ ಗೆ ಸಿಕ್ತು ಗೋಲ್ಡನ್ ಚಾನ್ಸ್.! ಏನದು.?

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ ಜನಪ್ರಿಯ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಬೇಜಾನ್ ಕಚಗುಳಿ ಇಟ್ಟ ಲೋಕೇಶ್ ಕುಮಾರ್ ನಿಮಗೆ ನೆನಪಿದ್ದಾರಾ.? ತಕ್ಷಣಕ್ಕೆ ಜ್ಞಾಪಕ ಬರ್ತಿಲ್ಲ ಅಂದ್ರೆ ಒಮ್ಮೆ 'ಡಿ.ಕೆ.ಪ್ರೇಮ್'ರವರನ್ನ ನೆನಪಿಸಿಕೊಳ್ಳಿ.... 'ಕಾಮಿಡಿ ಕಿಲಾಡಿಗಳು' ವೇದಿಕೆ ಮೇಲೆ 'ಜೋಗಿ' ಪ್ರೇಮ್ ರವರನ್ನ ಅನುಕರಣೆ ಮಾಡಿದ ಲೋಕೇಶ್ ಕುಮಾರ್ ರವರನ್ನ ಯಾರೂ ಮರೆಯೋಕೆ ಸಾಧ್ಯವೇ ಇಲ್ಲ.['ಕಾಮಿಡಿ ಕಿಲಾಡಿಗಳು' ಗೆಲ್ಲದಿದ್ದರೂ, ಬದುಕಿನ ಬಂಡಿಯಲ್ಲಿ ಲೋಕೇಶ್ ಅಪ್ರತಿಮ 'ಸಾಧಕ']

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಗೆಲ್ಲಲಿಲ್ಲ ಅಂದರೂ, ಸ್ಯಾಂಡಲ್ ವುಡ್ ನಲ್ಲಿ ಲೋಕೇಶ್ ಕುಮಾರ್ ರವರಿಗೆ ಬೇಡಿಕೆ ಕಮ್ಮಿ ಇಲ್ಲ. ಒಂದಲ್ಲೊಂದು ಅವಕಾಶಗಳು ಲೋಕೇಶ್ ಕುಮಾರ್ ರವರನ್ನ ಹುಡುಕ್ಕೊಂಡು ಬರ್ತಿವೆ. ಆ ಪೈಕಿ ಲೋಕೇಶ್ ರವರಿಗೆ ಸಿಕ್ಕಿರುವ ಗೋಲ್ಡನ್ ಚಾನ್ಸ್ ಇದು.!

ಯಾವುದು ಆ ಗೋಲ್ಡನ್ ಚಾನ್ಸ್.?

ಸ್ಯಾಂಡಲ್ ವುಡ್ ನಲ್ಲಿ ತಯಾರಾಗುತ್ತಿರುವ ಮಲ್ಟಿ ಸ್ಟಾರರ್.. ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುವ ಸುವರ್ಣಾವಕಾಶ ಲೋಕೇಶ್ ಕುಮಾರ್ ರವರಿಗೆ ಲಭಿಸಿದೆ. ಆ ಚಿತ್ರ ಯಾವುದು ಗೊತ್ತಾ.?

ಯಾವುದು ಆ ಚಿತ್ರ.?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯಿಸುತ್ತಿರುವ 'ಜೋಗಿ' ಪ್ರೇಮ್ ಆಕ್ಷನ್ ಕಟ್ ಹೇಳುತ್ತಿರುವ 'ದಿ ವಿಲನ್' ಚಿತ್ರದಲ್ಲಿ ನಟಿಸುವ ಗೋಲ್ಡನ್ ಚಾನ್ಸ್ ಲೋಕೇಶ್ ಕುಮಾರ್ ರವರಿಗೆ ಒಲಿದು ಬಂದಿದೆ.['ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡು.!]

'ದಿ ವಿಲನ್' ಚಿತ್ರದಲ್ಲಿ ಲೋಕೇಶ್ ಪಾತ್ರವೇನು.?

'ದಿ ವಿಲನ್' ಚಿತ್ರದಲ್ಲಿ ಖಾಕಿ ತೊಡಲಿದ್ದಾರೆ 'ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್. ಅರ್ಥಾತ್ ಪೊಲೀಸ್ ಪಾತ್ರದಲ್ಲಿ ಲೋಕೇಶ್ ಕಾಣಿಸಿಕೊಳ್ಳಲಿದ್ದಾರೆ.['ಕಾಮಿಡಿ ಕಿಲಾಡಿ' ಲೋಕೇಶ್ ಬಗ್ಗೆ ನಿಮಗೆಲ್ಲಾ ಗೊತ್ತಿಲ್ಲದ ಸತ್ಯ ಸಂಗತಿ ಇಲ್ಲಿದೆ]

ಕಾಮಿಡಿ ಕಚಗುಳಿ ಇಡುವುದಿಲ್ಲವೇ.?

ಪೊಲೀಸ್ ಪಾತ್ರದಲ್ಲಿ ಲೋಕೇಶ್ ಕಾಣಿಸಿಕೊಳ್ಳುತ್ತಾರೆ ಅಂದಾಕ್ಷಣ ಅವರಿಗೆ ಸೀರಿಯಸ್ ಪಾತ್ರ ಸಿಕ್ಕಿದೆ ಅಂತಲ್ಲ. ಖಾಕಿ ಧರಿಸಿದ್ದರೂ, ನಗೆಹೊನಲನ್ನ ಲೋಕೇಶ್ ಹರಿಸಲಿದ್ದಾರೆ.

ಹರ್ಷ ವ್ಯಕ್ತಪಡಿಸುತ್ತಾರೆ ಲೋಕೇಶ್

''ದಿ ವಿಲನ್' ಚಿತ್ರದಲ್ಲಿ ನಟಿಸುವ ಚಾನ್ಸ್ ಸಿಕ್ಕಿದೆ. ಇದಕ್ಕಿಂತ ಖುಷಿ ಇನ್ನೇನು ಬೇಕು.?'' ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಲೋಕೇಶ್ ಕುಮಾರ್.

'ಕಾಮಿಡಿ ಕಿಲಾಡಿಗಳು' ಮುಗಿದ ನಂತರ ಲೈಫ್ ಸೂಪರ್

''ಕಾಮಿಡಿ ಕಿಲಾಡಿಗಳು' ಮುಗಿದ ಬಳಿಕ ಲೈಫ್ ಸೂಪರ್ ಆಗಿದೆ. ಸುಮಾರು ಆಫರ್ಸ್ ಬರುತ್ತಿವೆ. ಎಲ್ಲೇ ಹೋದರೂ ಜನ ಗುರುತಿಸುತ್ತಾರೆ'' ಎನ್ನುತ್ತಾರೆ ಲೋಕೇಶ್ ಕುಮಾರ್.

ಚಿತ್ರರಂಗಕ್ಕೆ ಲೋಕೇಶ್ ಹೊಸಬರಲ್ಲ.!

ಐದಾರು ವರ್ಷಗಳ ಹಿಂದೆಯೇ 'ಜನವರಿ 1' ಎಂಬ ಚಿತ್ರದಲ್ಲಿ ಹೀರೋ ಆಗಿ ಲೋಕೇಶ್ ಕುಮಾರ್ ಅಭಿನಯಿಸಿದ್ದರು. 'ಲೂಸ್ ಗಳು' ಸಿನಿಮಾದಲ್ಲೂ ಕಾಮಿಡಿ ಪಾತ್ರದಲ್ಲಿ ಮಿಂಚಿದ್ದರು. ಕಸ್ತೂರಿ ವಾಹಿನಿಯ 'ಹೀರೋ ನಂಬರ್ 1' ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ದ ಲೋಕೇಶ್, 'ಪಡುವಾರಳ್ಳಿ ಪಡ್ಡೆಗಳು' ಸೀರಿಯಲ್ ನಲ್ಲಿ ನಟಿಸಿದ್ದರು. ಈಗ 'ದಿ ವಿಲನ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

English summary
Lokesh Kumar of 'Comedy Khiladigalu' fame has got an opportunity to act in Shiva Rajkumar, Sudeep starrer 'The Villain'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada