Lok Sabha Election 2024: ಕನ್ನಡ ತಾರೆಯರು ನಾಳೆ(ಏಪ್ರಿಲ್ 26) ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?

ದೇಶದಲ್ಲಿ ಲೋಕಸಭೆ ಚುನಾವಣೆ ಕಾರುಬಾರು ಜೋರಾಗಿದೆ. ಕರ್ನಾಟಕದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದ್ದು ಬೆಂಗಳೂರು ಸೇರಿದಂತೆ 14 ಕ್ಷೇತ್ರಗಳಲ್ಲಿ ನಾಳೆ(ಏಪ್ರಿಲ್ 26) ಮತದಾನ ಸಂಪೂರ್ಣ ಸಿದ್ಧತೆಯಾಗಿದೆ. ಮೊದಲ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಕರ್ನಾಟಕದಲ್ಲಿ ಮೊದಲ ಹಂತದ ಮತದಾನದ ವೇಳೆ 2,88,19,342 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಕಾಯುತ್ತಿದ್ದಾರೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನಕ್ಕೆ ಸಿಬ್ಬಂದಿ ಕೊನೆ ಹಂತದ ಸಿದ್ಧತೆಯಲ್ಲಿ ತೊಡಗಿದೆ. ಕನ್ನಡ ಸಿನಿಮಾ ತಾರೆಯರು ಸಹ ತಮ್ಮ ಮತ ಚಲಾಯಿಸಲು ಸಿದ್ಧರಾಗಿದ್ದಾರೆ.

Loksabha election 2024 From Darshan to Yash sandalwood celebs Where do Cast Their Votes

ಬೆಂಗಳೂರಿನಲ್ಲೇ ಬಹುತೇಕ ಸೆಲೆಬ್ರೆಟಿಗಳು ವಾಸವಿದ್ದಾರೆ. ಹಾಗಾಗಿ ಸಾಕಷ್ಟು ಜನ ನಾಳೆ ತಮ್ಮ ನಿವಾಸದ ಬಳಿ ಇರುವ ಮತಗಟ್ಟೆಗಳಲ್ಲಿ ಹಕ್ಕು ಚಲಾವಣೆ ಮಾಡಲಿದ್ದಾರೆ. ಸ್ಟಾರ್ ನಟ, ನಟಿಯರು, ತಂತ್ರಜ್ಞರು ಎಲ್ಲೆಲ್ಲಿ ಮತ ಚಲಾಯಿಸುತ್ತಾರೆ ಎನ್ನುವುದನ್ನು ಮುಂದೆ ಓದಿ.

ನಟ ದರ್ಶನ್ ಈ ಬಾರಿ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಮತಬೇಟೆ ನಡೆಸಿದ್ದರು. ನಟ ದರ್ಶನ್ ಹೋದ ಕಡೆಯಲ್ಲೆ ದೊಡ್ಡಮಟ್ಟದಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅಂದಹಾಗೆ ನಟ ದರ್ಶನ್ ಆರ್‌. ಆರ್‌ ನಗರದ ಮೌಂಟ್ ಕಾರ್ಮೆಲ್ ಶಾಲೆ ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದಾರೆ.

Loksabha election 2024 From Darshan to Yash sandalwood celebs Where do Cast Their Votes

ಬಹುಭಾಷಾ ನಟ ಪ್ರಕಾಶ್ ರೈ ಶಾಂತಿನಗರದಲ್ಲಿರುವ ಸೇಂಟ್ ಜೋಸೆಫ್ ಶಾಲೆಯಲ್ಲಿ ಮತ ಚಲಾಯಿಸಲಿದ್ದಾರೆ. ನಟ ಸುದೀಪ್‌ ಪುಟ್ಟೇನಹಳ್ಳಿಯಲ್ಲಿರುವ ಆಕ್ಸ್‌ಫರ್ಡ್‌ ಶಾಲೆಯಲ್ಲಿ ಮತ ಚಲಾವಣೆ ಮಾಡಲಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಕುಟುಂಬ ಸದಸ್ಯರು ರಾಜಾಜಿನಗರದ ಠಾಗೋರ್ ಆಂಗ್ಲಮಾಧ್ಯಮ ಶಾಲೆಯಲ್ಲಿ ವೋಟ್ ಮಾಡುತ್ತಾರೆ.

ರಾಘಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಕುಟುಂಬ ಸದಸ್ಯರು ಸದಾಶಿವನಗರದ ಪೂರ್ಣ ಪ್ರಜ್ಞಾ ಎಜುಕೇಶನ್ ಸ್ಕೂಲ್‌ನಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ. ಹೊಸಕೆರೆಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ವೋಟ್ ಮಾಡಲಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಮತ ಚಲಾಯಿಸಲು ಕತ್ರಿಗುಪ್ಪೆ BTL ವಿದ್ಯಾವಾಹಿನಿ ಶಾಲೆಯ ಮತಗಟ್ಟೆಗೆ ತೆರಳಲಿದ್ದಾರೆ.

ಗೀತಾ ಶಿವರಾಜ್‌ಕುಮಾರ್ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿದಿದ್ದಾರೆ. ಪತ್ನಿ ಪರ ಶಿವಣ್ಣ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದರೆ ದಂಪತಿ ಬೆಂಗಳೂರಿನಲ್ಲಿ ಮತ ಚಲಾಯಿಸಲಿದ್ದಾರೆ. ರಾಚೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಶಿವಣ್ಣ ಹಾಗೂ ಗೀತಾ ದಂಪತಿ ತಮ್ಮ ಹಕ್ಕು ಚಲಾಯಿಸುತ್ತಾರೆ.

ಗಣೇಶ್, ದಿಗಂತ್, ಪ್ರೇಮ್ ದಂಪತಿಗಳು ಆರ್‌ ಆರ್ ನಗರ, ಕುಂದಾಪುರದ ಕೆರಾಡಿ ಶಾಲೆಯಲ್ಲಿ ರಿಷಬ್ ಶೆಟ್ಟಿ, ಉಡುಪಿಯಲ್ಲಿ ರಕ್ಷಿತ್ ಶೆಟ್ಟಿ, ಅರಸೀಕೆರೆಯಲ್ಲಿ ಧನಂಜಯ್ ಮತ ಚಲಾಯಿಸಲಿದ್ದಾರೆ. ಇನ್ನುಳಿದಂತೆ ಯಾರೆಲ್ಲಾ ಎಲ್ಲೆಲ್ಲಿ ಮತ ಚಲಾಯಿಸುತ್ತಾರೆ ನೋಡೋಣ ಬನ್ನಿ.

ಮಾಳವಿಕಾ ಅವಿನಾಶ್: ಆರ್‌ ಆರ್‌​ ನಗರ

ವಸಿಷ್ಠ ಸಿಂಹ: ಆರ್‌ ಆರ್‌​ ನಗರ

ಹರಿಪ್ರಿಯಾ: ಆರ್‌ ಆರ್‌​ ನಗರ

ಅಮೂಲ್ಯ: ಆರ್‌ ಆರ್‌​ ನಗರ

ಅವಿನಾಶ್: ಆರ್‌ ಆರ್‌​ ನಗರ

ಸೃಜನ್ ಲೋಕೇಶ್: ಕತ್ರಿಗುಪ್ಪೆ

ಪೂಜಾ ಗಾಂಧಿ: ಕತ್ರಿಗುಪ್ಪೆ

ದುನಿಯಾ ವಿಜಯ್: ಕತ್ರಿಗುಪ್ಪೆ

ಮೇಘನಾ ರಾಜ್: ಜೆಪಿ ನಗರ

ಸುಂದರ್​ ರಾಜ್: ಜೆಪಿ ನಗರ

ತಾರಾ ಅನುರಾಧ: ಜೆಪಿ ನಗರ

ಸಪ್ತಮಿಗೌಡ: ಜೆಪಿ ನಗರ

ರಮೇಶ್ ಅರವಿಂದ್: ಪದ್ಮನಾಭನಗರ

ಜಗ್ಗೇಶ್: ಮಲ್ಲೇಶ್ವರಂ

ಕೋಮಲ್​: ಮಲ್ಲೇಶ್ವರಂ

ಸುಧಾರಾಣಿ: ಮಲ್ಲೇಶ್ವರಂ

ಬಿ. ಸರೋಜದೇವಿ: ಮಲ್ಲೇಶ್ವರಂ

ಅನಂತ್ ನಾಗ್: ಮಲ್ಲೇಶ್ವರಂ

​ಧ್ರುವ ಸರ್ಜಾ: ತ್ಯಾಗರಾಜನಗರ
(ಕೆಆರ್​.ರೋಡ್​, ಶಾಸ್ತ್ರಿ ನಗರ)

ಶ್ರೀಮುರುಳಿ: ವಸಂತ ನಗರ

ಪ್ರಶಾಂತ್​ ನೀಲ್​: ವಸಂತ ನಗರ

ಪ್ರೇಮ್: ಚಂದ್ರ ಲೇಔಟ್​

ರಕ್ಷಿತಾ ಪ್ರೇಮ್: ಚಂದ್ರ ಲೇಔಟ್​

ಭಾರತಿ ವಿಷ್ಣುವರ್ಧನ್​: ಜಯನಗರ

ಅನಿರುದ್ದ್: ಜಯನಗರ

ರಾಧಿಕಾ ಪಂಡಿತ್: ದೇವಯ್ಯ ಪಾರ್ಕ್ (ಸುಬ್ರಮಣ್ಯನಗರ)

ಚಂದನ್ ಶೆಟ್ಟಿ: ನಾಗರಬಾವಿ

ಸಾಧುಕೋಕಿಲ: ನಾಗರಬಾವಿ

ಶರಣ್: ಹೊಸಕೆರೆಹಳ್ಳಿ

ಶೃತಿ: ಹೊಸಕೆರೆ ಹಳ್ಳಿ

ಅಜೇಯ್ ರಾವ್: ರಾಜಾಜಿನಗರ

ಹರ್ಷಿಕಾ ಪೂಣಚ್ಚ: ಕೆ. ಆರ್​.ಪುರ

ಯೋಗರಾಜ್ ಭಟ್: ಗಿರಿ ನಗರ

ಅರ್ಜುನ್ ಜನ್ಯ: ಹೆಬ್ಬಾಳ

ವಿಜಯ್ ರಾಘವೇಂದ್ರ: ಯಲಹಂಕ

ಮಾಲಾಶ್ರೀ: ಶಿವಾಜಿನಗರ

ರಾಜ್ .ಬಿ.ಶೆಟ್ಟಿ: ಉಡುಪಿ

ನಿಖಿಲ್ ಕುಮಾರಸ್ವಾಮಿ: ಕೇತಮಾರನಹಳ್ಳಿ (ಬಿಡದಿ)

ಆಶಿಕಾ ರಂಗನಾಥ್: ತುಮಕೂರು

ಚಿಕ್ಕಣ್ಣ: ಮೈಸೂರು

ವಿನೋದ್ ರಾಜ್: ಸೋಲದೇವನ ಹಳ್ಳಿ

ದೊಡ್ಡಣ್ಣ: ಬಿದರುಕಲ್ಲು

More from Filmibeat

English summary
Sudeep, Ganesh, Yash, Darshan, upendra and many stars polling booth details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X