ಖುಷಿ ಕೊಡ್ತಿದೆ ಲಂಡನ್ ಲಂಬೋದರನ 'ಟೇಕ್ ಆಫ್' ಹಾಡು

ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಅಭಿನಯದ ಚೊಚ್ಚಲ ಸಿನಿಮಾ 'ಲಂಡನ್ ನಲ್ಲಿ ಲಂಬೋದರ' ಹಲವು ವಿಷ್ಯಗಳಿಗೆ ವಿಶೇಷವೆನಿಸಿಕೊಂಡಿದೆ. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿ ಸಂಗೀತ ಪ್ರಿಯರನ್ನ ಮತ್ತಷ್ಟು ಖುಷಿ ಪಡಿಸುತ್ತಿದೆ.

ಹೌದು, ಲಂಡನ್ ನಲ್ಲಿ ಲಂಬೋದರ ಚಿತ್ರದ 'ಟೇಕ್ ಆಫ್ ಆಗಿ ಲೈಫ್ ಬಂದಿದೆ.....' ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಕೇಳುಗರಿಗೆ ಹೊಸದೊಂದು ಫೀಲ್ ಕೊಡ್ತಿದೆ.

ಪ್ರಣವ್ ಅಯ್ಯಂಗರ್ ಸಾಹಿತ್ಯ ರಚಿಸಿ, ತಾವೇ ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿಗೆ ಜೀವ ತುಂಬಿರುವುದು ರಿನೋಶ್ ಜಾರ್ಜ್ ಮತ್ತು ಈಶಾ ಸುಚಿ. ಇವರಿಬ್ಬರ ಮುದ್ದಾದ ಧ್ವನಿ ಈ ಹಾಡಿನ ಚೆಲುವು ಹೆಚ್ಚಿಸಿದೆ.

ಶ್ರುತಿ ಪ್ರಕಾಶ್ ಮತ್ತು ಸಂತೋಷ್ ಇಬ್ಬರ ಜೋಡಿ ಕೂಡ ಈ ಲಿರಿಕಲ್ ವಿಡಿಯೋಗೆ ತುಂಬಾ ಚೆನ್ನಾಗಿ ಸಾಥ್ ನೀಡಿದೆ. ಇನ್ನುಳಿದಂತೆ ರಾಜ್ ಸೂರ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಲಂಡನ್ ಸ್ಕ್ರೀನ್ಸ್ ಸಂಸ್ಥೆಯಡಿ ಲಂಡನ್​ನಲ್ಲಿ ಅನಿವಾಸಿ ಭಾರತೀಯ ಸ್ನೇಹಿತರೆಲ್ಲ ಸೇರಿ ಚಿತ್ರ ನಿರ್ಮಾಣ ಮಾಡಿದ್ದಾರೆ.

londonalli lambodhara first song take off

ಸ್ಯಾಂಡಲ್ ವುಡ್ ನಲ್ಲಿ ಈಗತಾನೆ ಟೇಕ್ ಆಫ್ ಆಗಿರುವ ಲಂಡನ್ ನಲ್ಲಿ ಲಂಬೋದರ ಚಿತ್ರದ ಮೇಲೆ ಹೊಸದೊಂದು ಭರವಸೆ ಹುಟ್ಟಿಕೊಂಡಿದೆ. ಸದ್ಯಕ್ಕೆ ಹಾಡುಗಳ ಸಂಭ್ರಮದಲ್ಲಿರುವ ಸಿನಿಮಾ ಆದಷ್ಟೂ ಬೇಗ ತೆರೆಗೆ ಬರಲಿದೆ.

More from Filmibeat

English summary
Bigg boss fame shruthi prakash's londonalli lambodhara movie team released first lyrical video song. music by pranav iyenger.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X