For Quick Alerts
  ALLOW NOTIFICATIONS  
  For Daily Alerts

  'ಲಂಬೋದರ' ಟ್ರೈಲರ್: ವಿದೇಶಿ ವ್ಯಾಮೋಹ ಮತ್ತು ಸ್ವದೇಶಿ ಪ್ರೀತಿ

  |

  ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಅಭಿನಯದ 'ಲಂಡನ್ ನಲ್ಲಿ ಲಂಬೋದರ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇಷ್ಟು ದಿನ ಹಾಡು ಹಾಗೂ ಟೀಸರ್ ಮೂಲಕ ಗಮನ ಸೆಳೆದಿದ್ದ ಲಂಬೋದರ ಈಗ ಟ್ರೈಲರ್ ರಿಲೀಸ್ ಮಾಡಿ, ಚಿತ್ರದ ವಿಶೇಷತೆಗಳನ್ನ ಬಿಟ್ಟುಕೊಟ್ಟಿದ್ದಾನೆ.

  ಶೀರ್ಷಿಕೆಗೆ ತಕ್ಕ ಹಾಗೆ ನಾಯಕ ಲಂಬೋದರನಿಗೆ ಲಂಡನ್ ವ್ಯಾಮೋಹ. ಲಂಡನ್ ಗೆ ಹೋಗಿ ಅಲ್ಲೇ ನೆಲೆ ನಿಲ್ಲಬೇಕು ಎಂಬ ಕನಸು. ಈ ಕಡೆ ನಟಿ ಶ್ರುತಿ ಪ್ರಕಾಶ್ ಗೆ ಕನ್ನಡ ಹುಡುಗನನ್ನೇ ಮದುವೆ ಆಗ್ತೀನಿ ಎಂಬ ಛಲ. ಇವರಿಬ್ಬರ ಕನಸು ಈಡೇರುತ್ತಾ ಇಲ್ಲವಾ ಎಂಬುದು ಚಿತ್ರದ ಕಥೆ.

  'ಲಂಡನ್ ಲಂಬೋದರ'ನಿಗೆ ಜೊತೆಯಾದ ರಿಷಬ್ ಶೆಟ್ಟಿ'ಲಂಡನ್ ಲಂಬೋದರ'ನಿಗೆ ಜೊತೆಯಾದ ರಿಷಬ್ ಶೆಟ್ಟಿ

  ಈಗ ಬಿಡುಗಡೆಯಾಗಿರುವ ಟ್ರೈಲರ್ ಚೆನ್ನಾಗಿದೆ. ಸಿನಿಮಾನೂ ಮನರಂಜನೆಯಿಂದ ಕೂಡಿರುತ್ತೆ ಎಂಬ ಭರವಸೆ ನೀಡಿದೆ. ಇನ್ನುಳಿದಂತೆ ಶ್ರುತಿ ಅವರ ಮೊದಲ ಸಿನಿಮಾ ಇದಾಗಿರುವುದರಿಂದ ಸಹಜವಾಗಿ ನಿರೀಕ್ಷೆ ಇದೆ.

  ನಟ, ನಿರ್ದೇಶಕರ ರಿಷಬ್ ಶೆಟ್ಟಿ ಈ ಚಿತ್ರದ ಟ್ರೈಲರ್ ರಿಲೀಸ್ ಮಾಡಿದ್ದು, ರಾಜ್ ಸೂರ್ಯ ಲಂಡನ್ ನಲ್ಲಿ ಲಂಬೋದರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಮುಖ ಪಾತ್ರದಲ್ಲಿ ಸಂಪತ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಪ್ರಣವ್ ಅಯ್ಯಂಗರ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದಾರೆ. ಇದೇ ತಿಂಗಳು ಮಾರ್ಚ್ 29 ರಂದು ಸಿನಿಮಾ ರಿಲೀಸ್ ಆಗಲಿದೆ.

  English summary
  Kannada actor, director Rishab shetty released londonalli lambodhara trailer. the movie will release on march 29th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X