"ಬೇರೆ ಭಾಷೆ ಮಾತನಾಡಿದ್ರೆ ಹೊಡೀಬೇಕು ಅಂತ ಕೋಪ ಬರುತ್ತೆ" ಎಂದಿದ್ದ ಯೋಗಿ ಈಗ ಮಾಡಿದ್ದೇನು?

ನಟ ಲೂಸ್ ಮಾದ ಯೋಗಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲೇ ತಮಿಳು ಮಾತನಾಡಿ ಭಾರೀ ಟ್ರೋಲ್‌ಗೆ ಗುರಿಯಾಗಿದ್ದಾರೆ. ಕನ್ನಡಿಗರು ನಟ ಯೋಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ರೋಸಿ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಯೋಗಿ ತಮಿಳಿನಲ್ಲಿ ಮಾತನಾಡಿರುವುದು ಹಲವರ ಬೇಸರಕ್ಕೆ ಕಾರಣವಾಗಿದೆ.

ಯೋಗಿ ನಟನೆಯ 50ನೇ ಸಿನಿಮಾ 'ರೋಸಿ'. ಶೂನ್ಯ ನಿರ್ದೇಶನದ ಈ ಚಿತ್ರದಲ್ಲಿ ಯೋಗಿ ರೋಸಿ ಭಾಯ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ತಮಿಳು ಡ್ಯಾನ್ಸ್ ಮಾಸ್ಟರ್ ಸ್ಯಾಂಡಿ ಕೂಡ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಅವರ ಪಾತ್ರದ ಲುಕ್ ರಿವೀಲ್ ಆಗಿತ್ತು. ಭರದಿಂದ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಮುಂದಿನ ವರ್ಷ 'ರೋಸಿ' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

Yogi-tamil-speech-his-old-video-about-kannada-goes-viral

ಬೆಂಗಳೂರಿನ ಕೋರಮಂಗಲ ಬಳಿಯ ವಿವೇಕ್‌ ನಗರದಲ್ಲಿ 'ರೋಸಿ' ಚಿತ್ರದ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ಮಾತನಾಡಿದ ಯೋಗಿ ತಮ್ಮ ಭಾಷಣದ ನಡುವೆ ತಮಿಳಿನಲ್ಲಿ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಅದೂ ಕೂಡ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಿ ತಮಿಳಿನಲ್ಲಿ ಮಾತನಾಡುವ ಅಗತ್ಯ ಏನಿತ್ತು? ಎಂದು ಕೆಲವರು ಕೇಳುತ್ತಿದ್ದಾರೆ. ಯೋಗಿ ಸಿನಿಮಾಗಳನ್ನು ನಾವು ನೋಡುವುದಿಲ್ಲ. ಯೋಗಿ ತಕ್ಕ ಪಾಠ ಕಲಿಸಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯೋಗಿ ತಮಿಳಿನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಮತ್ತೊಂದು ವಿಡಿಯೋ ಭಾರೀ ಸದ್ದು ಮಾಡ್ತಿದೆ. ಇದೇ ಯೋಗಿ ಕನ್ನಡದ ಭಾಷೆಯ ಹಾಗೂ ಪರಭಾಷೆ ಮಾತನಾಡುವವರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ವಿಡಿಯೋ ಅದು. 'ಲಂಕೆ' ಸಿನಿಮಾ ಸುದ್ದಿಗೋಷ್ಠಿಯಲ್ಲಿ ಯೋಗಿ ಮಾತನಾಡಿದ್ದ ಮಾತುಗಳು ಈಗ ವೈರಲ್ ಆಗ್ತಿದೆ.

'ಲಂಕೆ' ಚಿತ್ರದಲ್ಲಿ ಸುಚೇಂದ್ರ ಪ್ರಸಾದ್ ಜೊತೆ ಯೋಗಿ ನಟಿಸಿದ್ದರು. ಸುಚೇಂದ್ರ ಪ್ರಸಾದ್ ಅವರ ಕನ್ನಡ ಮಾತು, ಕನ್ನಡ ಪ್ರೀತಿಯ ಬಗ್ಗೆ ಮಾತನಾಡುತ್ತ ಯೋಗಿ ಕನ್ನಡಾಭಿಮಾನದ ಮಾತುಗಳನ್ನಾಡಿದ್ದರು. "ಇವತ್ತಿನ ಜನರೇಷನ್‌ಗೆ ಕನ್ನಡ ಭಾಷೆಯ ಬಗ್ಗೆ ಹೆಚ್ಚು ಗೊತ್ತಿರಲ್ಲ. ನಮ್ಮ ಭಾಷೆನ ಬಿಟ್ಟು ಇನ್ನೊಂದು ಭಾಷೆ ಮಾತನಾಡೋದು ಇತ್ತೀಚಿಗೆ ಜಾಸ್ತಿ ಆಗುತ್ತಿದೆ. ಅದು ಕಮ್ಮಿ ಆಗಬೇಕು"

"ಕನ್ನಡ ಮಾತನಾಡಿದ್ರೆ ಅವಮಾನ ಎನ್ನುವಂತಾಗಿಬಿಟ್ಟಿದೆ. ಬೇರೆ ಭಾಷೆ ಮಾತನಾಡಿದ್ರೆ ನಮಗೆ ಮರ್ಯಾದೆ ಕೊಡ್ತಾರೆ ಎನ್ನುವಂತಾಗಿದೆ. ಅಂತ ಜಾಗದಲ್ಲಿ ಹೊಡೆಯಬೇಕು ಎನ್ನುವಷ್ಟು ಕೋಪ ಬರುತ್ತೆ. ಎಲ್ಲರಿಗೂ ಅದೇ ಹೇಳುವುದು. ದಯವಿಟ್ಟು ಎಲ್ಲರೂ ಕನ್ನಡ ಮಾತಾಡಿ. ನಮ್ಮ ಭಾಷೆ ಅದು, ಅದನ್ನು ಬಿಟ್ಟುಕೊಟ್ಟರೆ ಬೇರೆಯವರಿಗೆ ಕೆಟ್ಟ ರೀತಿಯಲ್ಲಿ ಕಾಣುತ್ತದೆ" ಎಂದಿದ್ದರು.

ಅಂದು ಈ ರೀತಿ ಮಾತನಾಡಿದ್ದ ಇದೇ ಯೋಗಿ ಈಗ ತಮಿಳು ಮಾತನಾಡಿದ್ದು ಎಷ್ಟು ಸರಿ. ತಮಿಳು ಭಾಷಿಕರು ಇದ್ದರು ಅಂದ ಮಾತ್ರಕ್ಕೆ ಕರ್ನಾಟಕದಲ್ಲಿ ತಮಿಳು ಭಾಷಣ ಮಾಡುವ ಅಗತ್ಯ ಏನಿತ್ತು? ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ನವರಂಗ್ ಥಿಯೇಟರ್‌ನಲ್ಲಿ ಕೆಲ ದಿನಗಳ ಹಿಂದೆ 'ರೋಸಿ' ಸಿನಿಮಾ ಮುಹೂರ್ತ ನಡೆದಿತ್ತು. ಅದೇ ದಿನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ರಿವೀಲ್ ಆಗಿತ್ತು. ದೊಡ್ಡ ಬಳೆ ರೀತಿಯ ಮೂಗತಿ ಧರಿಸಿ, ಸಿಗರೇಟ್‌ ಸೇದುತ್ತಾ, ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಯೋಗಿ ಫಸ್ಟ್ ಲುಕ್ ವೈರಲ್ ಆಗಿತ್ತು. ಇನ್ನು 'ಲಿಯೋ' ಚಿತ್ರದಲ್ಲಿ ನಟಿಸಿದ್ದ ಸ್ಯಾಂಡಿ ಚಿತ್ರದ ಭಾಗವಾಗುತ್ತಿರುವುದು ವಿಶೇಷ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ರೋಸಿ' ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ 49 ಸಿನಿಮಾಗಳನ್ನು ಪೂರೈಸಿರುವ ಯೋಗಿ 50ನೇ ಸಿನಿಮಾ ಇದು. ಡಿ. ವೈ ರಾಜೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. 'ಹೆಡ್‌ಬುಷ್' ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕ ತಂಡವೇ 'ರೋಜಿ' ಚಿತ್ರಕ್ಕೂ ಕೆಲಸ ಮಾಡ್ತಿದೆ.

More from Filmibeat

English summary
Loose Maada Yogi's Old Video Criticising the use of other languages Goes Viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X