»   » ಲೂಸ್ ಮಾದ ಯೋಗಿ ನಾನ್ ಸ್ಟಾಪ್ ರಗಡ್ ಡಾನ್ಸ್

ಲೂಸ್ ಮಾದ ಯೋಗಿ ನಾನ್ ಸ್ಟಾಪ್ ರಗಡ್ ಡಾನ್ಸ್

Posted By:
Subscribe to Filmibeat Kannada

ಒಂದು ಕಾಲದಲ್ಲಿ ಕನ್ನಡ ಚಿತ್ರರಸಿಕರು ಕಣ್ಣೆವೆ ಮಿಟುಕಿಸದಂತೆ ನೋಡುವಂತೆ ಮಾಡಿದ್ದ ನಟ ವಿನೋದ್ ರಾಜ್. 'ಡಾನ್ಸ್ ಡಾನ್ಸ್ ರಾಜ' ಚಿತ್ರದಲ್ಲಿ ಅವರು ಹಾಕಿದ್ದ ಸ್ಟೈಪ್ಸ್ ಎಂಥವರನ್ನು ಕುಣಿಯುವಂತೆ ಮಾಡಿದ್ದವು. ಬಳಿಕ ಅವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದರೂ ನಿರೀಕ್ಷಿಸಿದ ಮಟ್ಟಕ್ಕೆ ಏರಲಿಲ್ಲ ಎಂಬುದು ದುರಂತ.

ಈಗ ಕಾಲಚಕ್ರ ಸಾಕಷ್ಟು ಹಾದಿಯನ್ನು ಸವೆಸಿದೆ. ಹೊಸ ಹೊಸ ಮುಖಗಳು, ಹೊಸ ಡಾನ್ಸರ್ ಗಳು ಸ್ಯಾಂಡಲ್ ವುಡ್ ನಲ್ಲಿ ಕುಣಿದಿದ್ದಾರೆ, ಕುಣಿಯುತ್ತಿದ್ದಾರೆ. ಸದ್ಯಕ್ಕೆ ತಮ್ಮದೇ ಆದಂತಹ ಡಾನ್ಸಿಂಗ್ ಸ್ಟ್ಟೈಲ್ ಮೂಲಕ ಗಮನಸೆಳೆಯುತ್ತಿರುವ ನಟರ ಒಂದು ಸಣ್ಣ ಪಟ್ಟಿ ಇಲ್ಲಿದೆ. ಒಂದು ಲುಕ್ ಹಾಕಿ.

ಈಗ ರಿಲೀಸ್ ಗೆ ರೆಡಿಯಾಗಿರೋ 'ಕಾಲಭೈರವ' ಸಿನಿಮಾದಲ್ಲಿ ಯೋಗಿ ಕಮಾಲ್ ಮಾಡಿದ್ದಾರೆ. ಮೂವತ್ತು ಸೆಕೆಂಡುಗಳ ಒನ್ ಟೇಕ್ ಡಾನ್ಸ್ ಮಾಡಿ ತಾನೊಬ್ಬ ಅದ್ಭುತ ಡಾನ್ಸರ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಅರ್ಧ ನಿಮಿಷದ ಡಾನ್ಸನ್ನು ಒಂದೇ ಟೇಕ್ ನಲ್ಲಿ ಮಾಡೋದು ಅಂದ್ರೆ ಸುಮ್ನೇನಾ.

ಯೋಗಿ ಡಾನ್ಸ್ ಗೆ ಡಾನ್ಸ್ ಮಾಸ್ಟರ್ ಕಂಗಾಲು

ಯೋಗಿ ಡಾನ್ಸ್ ನೋಡಿ ಡಾನ್ಸ್ ಮಾಸ್ಟರ್ ಶಹಬ್ಬಾಸ್ ಅಂದಿದ್ದಾರೆ. ಯೋಗಿಯ ಜೊತೆಗೆ ಸ್ಯಾಂಡಲ್ ವುಡ್ ನ ಟಾಪ್ ಡಾನ್ಸರ್ ಗಳನ್ನೊಮ್ಮೆ ನೋಡ್ತಾ ಹೋಗೋಣ...

ಶಿವಣ್ಣ ಡಾನ್ಸ್ ಗೆ ನಿಂತ್ರೆ ಯಂಗ್ ಸ್ಟಾರ್ ಗಳೂ ದಂಗು

ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ, ನಾಟ್ಯ ಸಾರ್ವಭೌಮ ಅಂತಾನೇ ಕರೆಸಿಕೊಳ್ಳೋ ಶಿವಣ್ಣ ಡಾನ್ಸ್ ಮಾಡೋಕೆ ನಿಂತ್ರೆ ಇವತ್ತಿನ ಯಂಗ್ ಸ್ಟಾರ್ ಗಳೂ ಒಂದು ಕ್ಷಣ ದಂಗಾಗಿಬಿಡ್ತಾರೆ

ಕನ್ನಡದ ಮತ್ತೊಬ್ಬ ಅದ್ಭುತ ಡಾನ್ಸರ್ ಅಂದ್ರೆ

ಕನ್ನಡದ ಮತ್ತೊಬ್ಬ ಅದ್ಭುತ ಡಾನ್ಸರ್ ಅಂದ್ರೆ ಪವರ್ ಸ್ಟಾರ್ ಪುನೀತ್. ಸ್ಟೈಲಿಷ್ ಡಾನ್ಸ್ ನಲ್ಲಿ ಮಿಂಚೋ ಪುನೀತ್ ಅಣ್ಣ ಶಿವಣ್ಣನಷ್ಟೇ ಟ್ಯಾಲೆಂಟೆಡ್ ಡಾನ್ಸರ್.

ರಾಕಿಂಗ್ ಸ್ಟಾರ್ ಯಶ್ ಅಬ್ಬರದ ಡಾನ್ಸ್

ರಾಕಿಂಗ್ ಸ್ಟಾರ್ ಯಶ್ ಗೆ ಡಾನ್ಸ್ ಅಂದ್ರೆ ಫೇವರೀಟ್. ಫಾಸ್ಟ್ ಬೀಟ್ ಡಾನ್ಸ್ ನಲ್ಲಿ ಯಶ್ ಹಾಕೋ ಸ್ಟೆಪ್ ಗಳು ಯಂಗ್ ಸ್ಟಾರ್ಸ್ ಗಳಿಗೆ ಅಚ್ಚುಮೆಚ್ಚು.

ಅದ್ಧೂರಿ ಹುಡುಗನ ಸೂಪರ್ ಡಾನ್ಸ್

ಇತ್ತೀಚೆಗೆ ಬಂದ ಅದ್ಧೂರಿ ಹುಡುಗ ಧ್ರುವ ಸರ್ಜಾ ಕೂಡ ಸೂಪರ್ ಡಾನ್ಸರ್. ಮೊದಲ ಸಿನಿಮಾ ಅದ್ಧೂರಿಯಲ್ಲೇ ತಾನೊಬ್ಬ ಒಳ್ಳಯ ಡಾನ್ಸರ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ ಧ್ರುವ.

English summary
Loose Mada Yogesh performs 30 seconds non stop ragad dance in his upcoming film Kalabhairava. He performs it in a singal take directed by Shivaprabhu. Jassie Gift is music composer, Nageshwara Rao is cameraman, Akshay is editor. Here is the Sandalwood top dancing stars.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada