»   » ಹೊಸ 'ಝಂಡಾ' ಹಿಡಿದ ಲೂಸ್ ಮಾದ ಯೋಗಿ

ಹೊಸ 'ಝಂಡಾ' ಹಿಡಿದ ಲೂಸ್ ಮಾದ ಯೋಗಿ

By: ಜೀವನರಸಿಕ
Subscribe to Filmibeat Kannada

ಲೂಸ್ ಮಾದ ಯೋಗಿ ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಸಿನಿಮಾ ಸೋಲಲಿ, ಗೆಲ್ಲಲಿ ಮತ್ತೊಂದು ಸಿನಿಮಾಗೆ ರೆಡಿಯಾಗ್ತಿರ್ತಾರೆ. ಈಗ ಯೋಗಿ 'ಝಂಡಾ' ಅನ್ನೋ ಮತ್ತೊಂದು ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ.

ತೆಲುಗು, ತಮಿಳಿನಲ್ಲಿ ಕೆಲಸ ಮಾಡಿರೋ ಛಲಪತಿ ಅನ್ನೋ ನಿರ್ದೇಶಕರು ಯೋಗಿಗೆ ಆಕ್ಷನ್ ಕಟ್ ಹೇಳ್ತಿದ್ದು 'ಝಂಡಾ' ಅನ್ನೋ ಚಿತ್ರದಲ್ಲಿ ಯೋಗಿ ದತ್ತು ಪುತ್ರನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.


ಸೆಂಟಿಮೆಂಟ್ ಪಾತ್ರಗಳಲ್ಲಿ ಮಿಂಚೋ ಯೋಗಿ ಎರಡನೇ ಸಿನಿಮಾ ಅಂಬಾರಿಯಲ್ಲೇ ಸೆಂಟಿಮೆಂಟ್ ಸ್ಟಾರ್, ಕನ್ನಡದ ಧನುಷ್ ಅನ್ನಿಸಿಕೊಂಡಿದ್ರು. ಯೋಗಿ ಸಕ್ಸಸ್ ಪಡ್ಕೊಂಡಿದ್ದು ಕೂಡ ಸೆಂಟಿಮೆಂಟ್ ಪಾತ್ರಗಳಲ್ಲೇ.

ಇತ್ತೀಚೆಗೆ ಯೋಗಿ ಕಂಪ್ಲೀಟ್ ಸೆಂಟಿಮೆಂಟ್ ಪಾತ್ರ ಮಾಡಿರ್ಲಿಲ್ಲ. ಹಾಗೇ ಸಕ್ಸಸ್ಸನ್ನೂ ಕಂಡಿಲ್ಲ. ಈಗ ಕುಟುಂಬದ ದತ್ತುಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಿನಿಮಾದಲ್ಲಿ 'ಪಾಪ'ದ ಪುತ್ರನ ಪಾತ್ರ ಮಾಡಲಿದ್ದಾರೆ.

ಯೋಗಿ ಅಭಿಮಾನಿಗಳು ಮತ್ತೊಮ್ಮೆ ಅಂಬಾರಿಯಂತಹಾ ಸಿನಿಮಾಗೆ ನಿರೀಕ್ಷೆ ಇಟ್ಟುಕೊಳ್ಳಬಹುದು ಅನ್ನೋದು ಯೋಗಿಯ ಮನಸಿನ್ಯಾಗಿನ ಮಾತು. ಇದರರ್ಥ ಯೋಗಿ ಕಣ್ಣೀರು ಹಾಕಿದ್ರೆ ಸಿನಿಮಾ ಪ್ರೊಡ್ಯೂಸರ್ ಕಣ್ಣೀರು ಹಾಕ್ಬೇಕಿಲ್ಲ ಅಂತಾನಾ, ಇದ್ರೂ ಇರ್ಬಹುದು.

'ಜಿಂಕೆಮರಿ' ಬಳಿಕ ಯೋಗೇಶ್ ಪ್ರೇಕ್ಷಕರ ಮುಂದೆ ಬಂದಿಲ್ಲ. ಬ್ರೇಕ್ ನಿರೀಕ್ಷೆಯಲ್ಲಿರುವ ಯೋಗಿ ಈ ಬಾರಿ ಸೆಂಟಿಮೆಂಟ್ ಚಿತ್ರದ ಮೂಲಕ ಪ್ರೇಕ್ಷಕರ ಹೃದಯಕ್ಕೆ ಕೈ ಹಾಕಲು ಹೊರಟಿದ್ದಾರೆ.

English summary
Loose Mada Yogesh new film titled as Jhanda. This time Telugu and Tamil director Chalapathi being directed by the film. This is time Yogi back with sentiment role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada